ಕಾಡು ಬಂತು ನಾಡಿಗೆ…


Team Udayavani, Sep 29, 2018, 12:02 PM IST

566.jpg

ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ದೊಡ್ಡ ಮಗ್ಗೆಯವರಾದ ರಂಗಸ್ವಾಮಿ, ಬಯಲು ನಾಡಿನಲ್ಲಿ ನಿತ್ಯ ಹರಿದ್ವರ್ಣ ಕಾಡನ್ನು ಸೃಷ್ಟಿಸಿದ್ದಾರೆ. ಐದುನೂರು ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ ತದ್ರೂಪಿ ಕಾಡು ಬೆಳೆಸಿದ್ದಾರೆ. ಕೃಷಿ ಸಾಧಕ ಎನ್ನಿಸಿಕೊಂಡಿರುವ ಇವರು ನೂರು ಎಕರೆ ಪ್ರದೇಶದಲ್ಲಿ 60,000 ಅಡಿಕೆ ಮರ, 2000 ತೆಂಗು ಸೇರಿದಂತೆ ಬಹುಬೆಳೆಯ ಕೃಷಿ ಮಾಡಿ ಎಲ್ಲದರಲ್ಲೂ ಯಶಸ್ಸು ಕಂಡಿದ್ದಾರೆ. 

ಮಳೆಯ ಕಾಡುಗಳು ಕಣ್ಮರೆಯಾಗುತ್ತಿವೆ. ಮೋಡಗಳನ್ನು ತಡೆದು ಮಳೆ ಸುರಿಸಬೇಕಿದ್ದ ಮರಗಳನ್ನು ಕಡಿದು ಬಯಲುಮಾಡಿದ ಪರಿಣಾಮ, ಪದೆ ಪದೇ ಭೀಕರ ಬರಗಾಲ ಎದುರಾಗಿ, ನಿಂತನೆಲ ಬೆಂಕಿಯ ಚೆಂಡಂತಾದ ಅನುಭವ.  ಬಿಸಿ ಪ್ರಳಯದ ಬಗ್ಗೆ ವಿಜಾnನಿಗಳು ಎಚ್ಚರಿಸುತ್ತಲೇ ಬಂದಿದ್ದಾರೆ. ಅರಣ್ಯಗಳನ್ನು ಹೇರಳವಾಗಿ ಬೆಳೆಸಬೇಕು ಎಂದು ತಜ್ಞರು ಹೇಳುತ್ತಾರೆ. ಆಹಾರದ ಅಭಾವ ಒಂದೆಡೆ. ಅರಣ್ಯಗಳನ್ನು ಬೆಳೆಸಲೇಬೇಕಾದ ಅನಿವಾರ್ಯತೆ ಮತ್ತೂಂದೆಡೆ.ಇಂತಹ ಅಡಕತ್ತರಿಯ ನಡುವೆ ಬದುಕು ಸಿಲುಕಿದೆ. ಇಂತಹ ಸವಾಲನ್ನು ಎದುರಿಸಿ, ಬಯಲು ಪ್ರದೇಶದಲ್ಲಿ ಬೃಹತ್‌ ಕಾಡು ಬೆಳೆಸಿ ಅನ್ನದ ಬಟ್ಟಲಾಗಿಸಿದ ಸಾಧಕ, ದೊಡ್ಡಮಗ್ಗೆಯ ಎಂ.ಸಿ.ರಂಗ ಸ್ವಾಮಿ.

ಹಾಸನ ಜಿಲ್ಲೆ ಅರಕಲಗೂಡು ತಾಲೂಕು ದೊಡ್ಡಮಗ್ಗೆ ಎಂಬ ಬಯಲು ನಾಡಿನಲ್ಲಿ ಅವರು ಸೃಷ್ಟಿಸಿದ ಹಸಿರು ಕಾನನ ನಿತ್ಯಹರಿದ್ವರ್ಣ ಕಾಡನ್ನು ನೆನಪಿಸುತ್ತದೆ. ಮೈಸೂರು ಮಹಾರಾಜ ಕಾಲೇಜಿನಲ್ಲಿ(1978-79) ಬಿಎ ಪದವಿ ವ್ಯಾಸಂಗ ಮಾಡುತ್ತಿರುವಾಗಲೇ ಕೃಷಿ ಮಾಡಬೇಕೆಂಬ ಕನಸು ಕಂಡ ರಂಗಸ್ವಾಮಿ ಐದುನೂರು ಎಕರೆ ಪ್ರದೇಶದಲ್ಲಿ ತದ್ರೂಪಿ ಕಾಡು ಬೆಳೆಸಿದ್ದಾರೆ. 

 “ಓದುವಾಗಲೇ ತಾನೊಬ್ಬ ದೊಡ್ಡ ಕೃಷಿಕನಾಗಬೇಕು. ತಮ್ಮಂದಿರ ಉನ್ನತ ವ್ಯಾಸಂಗಕ್ಕೆ ನೆರವಾಗಬೇಕು ಎಂದುಕೊಂಡಿದ್ದೆ.ಅದನ್ನು ಸಾಕಾರಮಾಡಿಕೊಂಡ ತೃಪ್ತಿ ನನ್ನದು’ ಎಂದು ಹೇಳುವಾಗ ರಂಗಸ್ವಾಮಿ ಅಂದುಕೊಂಡದ್ದನ್ನು ಸಾಧಿಸುವ ಛಲಗಾರನಂತೆ ಕಾಣುತ್ತಾರೆ.

ಎಂ.ಜೆ.ತಿಮ್ಮೇಗೌಡ ಮತ್ತು ಲಕ್ಷಮ್ಮ ದಂಪತಿಯ ನಾಲ್ವರು ಪುತ್ರರಲ್ಲಿ ರಂಗಸ್ವಾಮಿ ಹಿರಿಯ. ಒಬ್ಬ ಸಹೋದರ ಮೈಸೂರಿನ ಜಿಲ್ಲಾಧಿಕಾರಿಯಾಗಿ ನಿವೃತ್ತರಾಗಿರುವ ಡಾ.ರಾಮೇಗೌಡ. ಮತ್ತಿಬ್ಬರು ಕೃಷ್ಣೇಗೌಡ, ನಾಗರಾಜು ಎಂಬ ಸಹೋದರರು ವ್ಯವಹಾರ ನೋಡಿಕೊಳ್ಳುತ್ತಾರೆ.

ರಂಗಸ್ವಾಮಿ ನೈಸರ್ಗಿಕ ಕೃಷಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ.  ನೂರು ಎಕರೆ ಪ್ರದೇಶದಲ್ಲಿ ಅರವತ್ತು ಸಾವಿರ ಅಡಿಕೆಮರ, 2000 ತೆಂಗು, ಐವತ್ತು ಎಕರೆಯಲ್ಲಿ ತಾಳೆ,ಮೂವತ್ತೆ„ದು ಎಕರೆಯಲ್ಲಿ ಏಲಕ್ಕಿ, ನೂರ ಐವತ್ತು ಎಕರೆಯಲ್ಲಿ ನಲವತ್ತು ಸಾವಿರ ಶ್ರೀಗಂಧ, ಇನ್ನೂರು ಎಕರೆಯಲ್ಲಿ ಐವತ್ತು ಸಾವಿರ ಹೆಬ್ಬೇವು, ಹತ್ತು ಸಾವಿರಕ್ಕೂ ಹೆಚ್ಚು ತೇಗ, ಮೆಣಸು,ಅಗರ್‌ ವುಡ್‌, ಲವಂಗ. ಜಾಯಿಕಾಯಿ, ಮಾವು, ಸಪೋಟ, ಮೂಸಂಬಿ, ನಿಂಬೆ,ಹಲಸು, ನೇರಳೆ, ಚಕ್ಕೆ ಹೀಗೆ ಹತ್ತು ಹಲವು ಬಗೆಯ ಸಾಂಬಾರ್‌ ಮತ್ತು ಹಣ್ಣಿನ ಗಿಡಗಳು ಈ ತದ್ರೂಪಿ ಕಾಡಿನಲ್ಲಿವೆ.

ಗಿಡಮರಗಳಿಗೆ ಹನಿ ನೀರಾವರಿ, ಸ್ಪಿಂಕ್ಲರ್‌ ವಿಧಾನದಲ್ಲಿ ನೀರು ಕೊಡಲಾಗುತ್ತದೆ.ಅದಕ್ಕಾಗಿ ಅಲ್ಲಲ್ಲಿ ಬೈಹತ್‌ ಜನರೇಟರ್‌ ಇವೆ.ವಿದ್ಯುತ್‌ಗಾಗಿ ಪ್ರತ್ಯೇಕ ಎಂಯು ಸ್ಟೇಷನ್‌ ಮಾಡಿಕೊಂಡು ಎಕ್ಸ್‌ಪ್ರೆಸ್‌ ಲೇನ್‌ ಮೂಲಕ ಸಫ‌ರೇಟ್‌ ಫೀಡರ್‌ ವ್ಯವಸ್ಥೆಮಾಡಿಕೊಳ್ಳಲಾಗಿದೆ. ಪ್ರತಿದಿನ ಇನ್ನೂರಕ್ಕೂ ಹೆಚ್ಚು ಕಾರ್ಮಿಕರು ಕೆಲಸಮಾಡುತ್ತಾರೆ. ಹಣವಿದ್ದವರು ಹಸಿರು ಪ್ರೀತಿಗೆ ಒಲಿದರೆ ಬೆಂಗಾಡಿನಲ್ಲೂ ಸಹ್ಯಾದ್ರಿಯನ್ನೇ ಸೃಷ್ಟಿಸಬಹುದು ಎನ್ನುವುದಕ್ಕೆ ರಂಗಸ್ವಾಮಿ ಸಾಕ್ಷಿ$ಯಾಗಿದ್ದಾರೆ.

ಇದಕ್ಕಾಗಿ ಅವರಿಗೆ ಕರ್ನಾಟಕ ಪಶುವೈದ್ಯಕೀಯ,ಪಶು ಮತ್ತು ಮೀನುಗಾರಿಕೆ ವಿಜಾnನಗಳ ವಿಶ್ವ ವಿದ್ಯಾನಿಲಯ 2009ರಲ್ಲಿ ನಡೆದ ಜಾನುವಾರು,ಕುಕ್ಕುಟ,ಮತ್ಸ್ಯಮೇಳದಲ್ಲಿ ಕೃಷಿ ಸಾಧನೆ ಗುರುತಿಸಿ ಅಭಿನಂಧಿಸಿದೆ.2011 ರಲ್ಲಿ ನ್ಯಾಷನಲ್‌ ಡೈರಿ ಫಾರ¾ರ್‌ ಆವಾರ್ಡ್‌, ಎರಡು ಬಾರಿ ಕೇಂದ್ರ ತಂಬಾಕು ಮಂಡಳಿ ರಂಗಸ್ವಾಮಿ ಅವರನ್ನು ಗೌರವಿಸಿದೆ. ಬೆಂಗಳೂರಿನ ಫ‌ಲದಾ ಆಗ್ಯಾìನಿಕ್‌ ಸಂಸ್ಥೆಯವರು ಏಲಕ್ಕಿ ತೋಟಕ್ಕೆ ಸಾವಯವ ದೃಢೀಕರಣ ನೀಡಿದ್ದಾರೆ.

ಮನುಷ್ಯನ ಹಸ್ತಕ್ಷೇಪವಿಲ್ಲದೆ ನೈಸರ್ಗಿಕ ಕಾಡೊಂದು ಸೃಷ್ಟಿಯಾಗಲು ಕನಿಷ್ಠ 50 ರಿಂದ 100 ವರ್ಷಬೇಕು. ಅನಲಾಗ್‌ ಫಾರೆಸ್ಟ್‌ ಎಂದು ಕರೆಯುವ ತದ್ರೂಪಿ ಕಾಡು ಸೃಷ್ಟಿಯಾಗಲು ಐದಾರು ವರ್ಷಗಳು ಸಾಕು.ಅಂತಹ ಒಂದು ವಿಸ್ಮಯ ಇಲ್ಲಿ ಸಾಕಾರಗೊಂಡಿದೆ.

ತದ್ರೂಪಿ ಕಾಡು 
ಅನಲಾಗ್‌ ಫಾರೆಸ್ಟ್‌ ಅಂದರೆ ಕಾಡುತೋಟ. ಶ್ರೀಲಂಕಾ ದೇಶದ ತೋಟಗಾರಿಕೆಯಲ್ಲಿ ಕಳೆದ ಎರಡು ದಶಕಗಳಿಂದ ಸಾಕಾರಗೊಂಡಿರುವ ಹೊಸ ಕಲ್ಪನೆ. ಜಗತ್ತಿನಾದ್ಯಂತ ಹೆಸರು ಮಾಡಿದೆ. ಕಾಡು ಉಳಿಯಬೇಕು ,ಕೃಷಿಯೂ ಗೆಲ್ಲಬೇಕು ಎನ್ನುವುದು ನಿಸರ್ಗ ಸಂಧಾನ. ಮಣ್ಣಿನ ಜೀವಂತಿಕೆ ಕಾಪಾಡಿಕೊಳ್ಳುವುದರ ಜೊತೆಗೆ ಜೀವ ವೈವಿಧ್ಯಗಳಿಗೂ ಬದುಕಲು ಬಿಡುವುದು. ಬೆಂಗಾಡಿನಲ್ಲಿ ಹಸಿರು ಸಿರಿ ಬೆಳೆಸಬೇಕು. ಶ್ರೀಲಂಕಾದ 22 ಹಳ್ಳಿಯ ರೈತರು 600 ಎಕರೆಯಲ್ಲಿ ಈ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ.

ತಂಬಾಕು ಬಿಟ್ಟು ಮರ ಬೆಳೆಸಿದರು 
1995 ರಲ್ಲಿ 150 ಎಕರೆ ಪ್ರದೇಶದಲ್ಲಿ ಎಂಭತ್ತು ಸಾವಿರ ಕೆಜಿ ತಂಬಾಕು ಬೆಳೆದು ಸಾಧನೆ ಮಾಡಿದ್ದರು ರಂಗಸ್ವಾಮಿ. ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ ಮರಸುಡುವುದು ಸಾಕು ಎಂದು ತೀಮಾರ್ನಿಸಿ ಸಾವಿರ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟರು. ಸಸಿನೆಟ್ಟ ಮೂರ್‍ನಾಲ್ಕು ವರ್ಷ ಅವುಗಳನ್ನು ಕಾಪಾಡಿಕೊಂಡರೆ ನಂತರ ಅವು ಹೆಮ್ಮರಗಳಾಗಿ ಬೆಳೆಯುತ್ತವೆ. ಅವೇ ಆದಾಯದ ಮೂಲಗಳಾಗುತ್ತವೆ. ನಮ್ಮ ಒಂದೊಂದು ಟೀಕ್‌ ಮರ ಈಗ 50 ಸಾವಿರ ರೂ.ಬೆಲೆಬಾಳುತ್ತದೆ. ಇದರೊಂದಿಗೆ ಪಶುಸಂಗೋಪನೆ ಮಾಡಿಕೊಂಡರೆ ಒಂದು ಸಣ್ಣ ಕುಟುಂಬ ನೆಮ್ಮದಿಯಾಗಿ ಬದುಕಬಹುದು.ಈಗ ಆಳು ಕಾಳಿನ ಸಮಸ್ಯೆ ಇರುವುದರಿಂದ ಮರ ಬೆಳೆಸುವುದೊಂದೇ ನಮ್ಮಗಿರುವ ಪರ್ಯಾಯ ಮಾರ್ಗ ಎನ್ನುತ್ತಾರೆ ರಂಗಸ್ವಾಮಿ.

ಕಲ್ಲುಗಣಿ ಮಾಡುತ್ತಿರುವ ಪ್ರದೇಶದ ಸುತ್ತಮತ್ತಲಿನ ರೈತರ ಜಮೀನು ಖರೀದಿಸಿರುವ ರಂಗಸ್ವಾಮಿ ಅದನ್ನು ಸಂಪೂರ್ಣ ಗ್ರೀನ್‌ ಬೆಲ್ಟ್ಆಗಿ ಪರಿವರ್ತಿಸಿದ್ದಾರೆ. ಜಮೀನು ಖರೀದಿಸುವ ರೈತರ ಪುನರ್ವಸತಿಗೂ ವ್ಯವಸ್ಥೆಮಾಡಿ, ಅಂತಹ ರೈತರಿಗೆ ಪರ್ಯಾಯವಾಗಿ ಪ್ರತಿ ಎಕರೆಗೆ ಬದಲಾಗಿ ಬೇರೆ ಕಡೆ ಎರಡು, ಮೂರು ಎಕರೆ ಜಮೀನನ್ನು ಕೊಟ್ಟಿದ್ದಾರೆ. ಕಲ್ಲು ಗಣಿ ಸುತ್ತ ಈಗ ಎರಡೇ ವರ್ಷದಲ್ಲಿ ದೊಡ್ಡ ಕಾಡೊಂದು ತಲೆ ಎತ್ತಿ ನಿಂತಿದೆ.

ಅರಣ್ಯ ಇಲಾಖೆಯವರನ್ನ ನಂಬಿ ಸುಮ್ಮನ್ನೆ ನಾವು ಕೂರಬಾರದು.ಯಾವುದೆ ಪ್ರಚಾರವನ್ನೂ ಬಯಸುವುದು ಬೇಡ.ನಮ್ಮಷ್ಟಕ್ಕೆ ನಾವು ಗಿಡಮರಗಳನ್ನು ಬೆಳೆಸುತ್ತಾ ಹೋಗಬೇಕು. ಇದಕ್ಕಾಗಿ ಹಳಬರನ್ನು ನಂಬಿ ಕುಳಿತುಕೊಳ್ಳಬಾರದು, ಹೊಸತಲೆಮಾರಿನ ವಿದ್ಯಾವಂತ ಯುವಕರಿಗೆ ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವುದನ್ನು ನಾವು ಕಲಿಸಬೇಕು. ಕಾಡು ಬೆಳೆದರೆ ನಾಡು ಬೆಳೆಯುತ್ತದೆ ಎನ್ನುವುದು ರಂಗಸ್ವಾಮಿಯವರ ಅನುಭವದ ಮಾತು.

ಮಾರುಕಟ್ಟೆಗೆ ಹೋಗುವುದಿಲ್ಲ
 ಇಷ್ಟೊಂದು ಬೃಹತ್‌ ಪ್ರಮಾಣದಲ್ಲಿ ಮೆಣಸು, ಏಲಕ್ಕಿ, ಕೋಕೋ,ಅಡಿಕೆ,ತೆಂಗು, ಕಾಫಿ ಮತ್ತಿತರ ಬೆಳೆಗಳನ್ನು ಬೆಳೆಯುವ ರಂಗಸ್ವಾಮಿ ಎಂದೂ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವುದಿಲ್ಲ.

ಅಡಿಕೆ, ತೆಂಗು,ಮೆಣಸು ಮತ್ತಿತರ ಗಿಡಗಳನ್ನು ತಾವೇ ಸ್ವತಃ ನರ್ಸರಿ ಮಾಡಿಕೊಳ್ಳುವ ಇವರು ಅಪರೂಪದ ಗಿಡಗಳನ್ನು ಮಾತ್ರ ಹೊರಗಿನಿಂದ ತರುತ್ತಾರೆ.ಐದುನೂರು ಎಕರೆ ಪ್ರದೇಶವನ್ನು ಜೀಪಿನಲ್ಲಿ ಸುತ್ತಾಡುತ್ತಾ ಪ್ರತಿ ಗಿಡಮರಗಳ ಬಗ್ಗೆಯೂ ಅಕ್ಕರೆಯಿಂದ ವಿವರಣೆ ನೀಡಿದ ರಂಗಸ್ವಾಮಿ ಅವರ ಕೃಷಿ ಪ್ರೀತಿ ತದ್ರೂಪಿ ಕಾಡು ಬಿಟ್ಟು ಹೊರಬಂದರೂ ಕಾಡುತ್ತಲೆ ಇದೆ. ಆಸಕ್ತರು ರಂಗಸ್ವಾಮಿ ಅವರನ್ನು 9980126555 ಸಂಪರ್ಕಿಸಬಹುದು.

ಗಂಧದ ಗುಡಿಯ ಒಡೆಯ!
 ರಂಗಸ್ವಾಮಿ ಅವರು ನೂರ ಐವತ್ತು ಎಕರೆ ಪ್ರದೇಶದಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆದಿದ್ದಾರೆ.ಕಳೆದ ಆರು ವರ್ಷಗಳಿಂದ ಗಂಧದ ಸಸಿಗಳನ್ನು ಹಾಕುತ್ತಲೇ ಬರುತ್ತಿದ್ದಾರೆ.ರೈತರ ಸ್ಥಿತಿ ಸುಧಾರಿಸಬೇಕಾದರೆ ಹೆಚ್ಚು ಆರ್ಥಿಕ ಮೌಲ್ಯವಿರುವ ಗಿಡಮರಗಳನ್ನು ಬೆಳೆಸಬೇಕು ಎನ್ನುತ್ತಾರೆ ರಂಗಸ್ವಾಮಿ.  ಶ್ರೀಗಂಧದ ಜೊತೆಗೆ ಹೆಬ್ಬೇವು,ಸಿಲ್ವರ್‌,ರಕ್ತ ಚಂದನ ಮತ್ತು ಹಣ್ಣಿನ ಗಿಡಗಳನ್ನು ಬೆಳೆಯಲಾಗಿದೆ.

ಶ್ರೀಗಂಧ ಒಂದು ಪರಾವಲಂಭಿ ಗಿಡ ಆದ್ದರಿಂದ ಅದರ ಜೊತೆಗೆ ಬೇರೆ ಬೇರೆ ಹತ್ತು ಹನ್ನೆರಡು ಬಗೆಯ ಮರಗಿಡಗಳನ್ನು ಬೆಳೆಸಬೇಕಾಗುತ್ತದೆ.ಸಾಮಾನ್ಯವಾಗಿ ಒಂದು ಎಕರೆಯಲ್ಲಿ 300 ಶ್ರೀಗಂಧದ ಗಿಡಗಳನ್ನು ಹಾಕಬಹುದು.15 ವರ್ಷ ಬೆಳೆದ ಒಂದು ಶ್ರೀಗಂಧದ ಮರದಿಂದ 15 ಕೆಜಿ ಆರ್ಟ್‌ಹುಡ್‌ ಸಿಗುತ್ತದೆ.ಈಗ ಸರಕಾರದ ದರ ಪ್ರತಿ ಕೆಜಿಗೆ 9000 ರೂಪಾಯಿ ಇದೆ. ಅಂದರೆ ಒಂದು ಎಕರೆಯಿಂದ ನಾಲ್ಕು ಕೋಟಿ ಆದಾಯ ಬರುತ್ತದೆ.ಇದರಲ್ಲಿ ಸರಕಾರಕ್ಕೆ ಶೇಕಡ 18 ರಷ್ಟು ವ್ಯಾಟ್‌ ಕಟ್ಟಿದರೂ ರೈತರಿಗೆ ಮೂರು ಕೋಟಿ ರೂಪಾಯಿ ಉಳಿಯುತ್ತದೆ. ಹೀಗಾದಾಗ ರೈತರು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ರಂಗಸ್ವಾಮಿ ಪ್ರಶ್ನಿಸುತ್ತಾರೆ.

ಈಗ ಅವರ ತೋಟದಲ್ಲಿ ]ಗಂಧ ಕಾವಲಿಗೆ ತೋಟದ ಸುತ್ತ ಸೋಲಾರ್‌ ಬೇಲಿ ಹಾಕಿ ಜೊತೆಗೆ 25 ಬೇಟೆ ನಾಯಿಗಳನ್ನು ಸಾಕಿದ್ದಾರೆ.15 ಮಂದಿ ಕಾವಲುಗಾರರು ಹಗಲು ರಾತ್ರಿ ತೋಟದ ರಕ್ಷಣೆಗೆ ನಿಂತಿದ್ದಾರೆ.ಆದರೂ ಮೊನ್ನೆ ಮೂರು ಮರಗಳನ್ನು ಕಳ್ಳರು ಕತ್ತರಿಸಿಕೊಂಡು ಹೋಗಿದ್ದಾರೆ.ಕದ್ದವರು ಈಗ ಸಿಕ್ಕಿಬಿದ್ದಿದ್ದಾರೆ.

ಶ್ರೀಗಂಧದ ಮರಗಳಿಗೆ 10 ವರ್ಷ ತುಂಬಿದ ನಂತರ ನಮಗೆ ಮರ ಕಾಯುವುದು ದೊಡ್ಡ ಸವಾಲು ಎನ್ನುವ ರಂಗಸ್ವಾಮಿ ಅದಕ್ಕಾಗಿ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರನ್ನು ನೇಮಿಸಿಕೊಳ್ಳುವ ಆಲೋಚನೆಯಲ್ಲಿದ್ದಾರೆ. ಹತ್ತು ವರ್ಷದ ನಂತರ ]ಗಂಧ ಬೆಳೆಗಾರ ಹಾಟ್‌ಸೀಟ್‌ ಮೇಲೆ ಕುಳಿತಂತಾಗುತ್ತದೆ. ಒಂದು ಮರದಿಂದ ಬರುವ ಆದಾಯದಲ್ಲಿ ಮರ ಕಾಯುವವರಿಗೆ ಶೇಕಡ 25 ರಷ್ಟು ಆದಾಯವನ್ನು ಕೊಡುವ ಒಪ್ಪಂದದ ಮೇರೆಗೆ ಮರಗಳು ಕಳುವಾಗದಂತೆ ಕಾಪಾಡಿಕೊಳ್ಳಬೇಕು ಎನ್ನುತ್ತಾರೆ.

ಬೆಸ್ಟ್‌ ಡೈರಿ ಫಾರಂ 
180 ಹಸು,50 ಎಮ್ಮೆ ಸಾಕಿರುವ ರಂಗಸ್ವಾಮಿ ಅವರು ಪ್ರತಿದಿನ 400 ಲೀಟರ್‌ ಹಾಲು ಉತ್ಪಾದಿಸುತ್ತಾರೆ. ತಿರುಮಲ ಡೈರಿ ಎಂಬ ಖಾಸಗಿ ಡೈರಿಯವರು ಪ್ರತಿ ಲೀಟರ್‌ ಹಾಲಿಗೆ ಮಾರುಕಟ್ಟೆ ದರಕ್ಕಿಂತ  2 ರೂ ಹೆಚ್ಚಿಗೆ ಕೊಟ್ಟು ಖರೀದಿಸುತ್ತಾರೆ. ಪಶುಪಾಲನೆಗೆ 50 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಮೇವಿನ ಹುಲ್ಲು ಮತ್ತು ಮುಸುಕಿನ ಜೋಳ ಬೆಳೆದುಕೊಂಡಿದ್ದಾರೆ ರಂಗಸ್ವಾಮಿ. ಪ್ರತಿ ದಿನ ಒಂದು ಲೋಡ್‌ ಟ್ರ್ಯಾಕ್ಟರ್‌ ಹುಲ್ಲು ದನಗಳಿಗೆ ಬೇಕಾಗುತ್ತದೆ. ದನಗಳ ತಿರುಗಾಟಕ್ಕೆ ಒಂದೆರಡು ಎಕರೆಯ ಸುತ್ತಾ ಬೇಲಿನಿರ್ಮಾಣ ಮಾಡಿ ವ್ಯವಸ್ಥೆ ಕಲ್ಪಿಸಲಾಗಿದೆ.

ದನಗಳಿಂದ ಸಿಗುವ ಸಗಣಿಯಿಂದ ಜೈವಿಕ ಅನಿಲ ಉತ್ಪಾದನೆ ಘಟಕವನ್ನು ಸ್ಥಾಪಿಸಿಕೊಂಡಿದ್ದು ಅದರಿಂದ ದೊರೆಯುವ ಸ್ಲರಿಯನ್ನು ಗಂಜಲ ಮತ್ತು ಅಡಿಕೆ ಸಿಪ್ಪೆಯ ಜೊತೆ ಮಿಕ್ಸ್‌ ಮಾಡಿ ಕೊಳೆಸಿ ತೋಟಕ್ಕೆ ಬಳಸುತ್ತಾರೆ. ಅತ್ಯುತ್ತಮ ಡೈರಿ ನಿರ್ವಹಣೆಗಾಗಿ 2011 ರಲ್ಲಿ ರಾಷ್ಟ್ರೀಯ ಡೈರಿ ಆವಾರ್ಡ್‌ ರಂಗಸ್ವಾಮಿ ಅವರಿಗೆ ಸಂದಿದೆ.

ಟಾಪ್ ನ್ಯೂಸ್

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

National Mourning: Postponement of Mangaluru Beach Festival

National Mourning: ಮಂಗಳೂರಿನ ಬೀಚ್‌ ಉತ್ಸವ ಮುಂದೂಡಿಕೆ

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.