ಸರ್ವಾಂಗ ಸುಂದರ ಹೊಳೆಕಟ್ಟೆ ಆಂಜನೇಯ


Team Udayavani, May 11, 2019, 6:00 AM IST

KAN-AKAPUR

ಮಧ್ವ ಯತಿಗಳಾದ ವ್ಯಾಸರಾಜರು, ದೇಶಾದ್ಯಂತ 700ಕ್ಕೂ ಹೆಚ್ಚು ಹನುಮನ ಮೂರ್ತಿಗಳನ್ನು ಸ್ಥಾಪಿಸಿದರಂತೆ. ಆ ಪೈಕಿ ಒಂದು ಮೂರ್ತಿ ಕನಕಪುರ ಪಟ್ಟಣದಲ್ಲಿದೆ…


ಮಧ್ವಯತಿಗಳಾದ ಶ್ರೀ ವ್ಯಾಸರಾಜರು ತಮ್ಮ ಕಾಲದಲ್ಲಿ ದೇಶಾದ್ಯಂತ ಜನರ ಒಳಿತಿಗಾಗಿ ಸುಮಾರು 732 ಹನುಮನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದರಂತೆ. ಅವರು ಹೀಗೆ ಸ್ಥಾಪಿಸಿದ ಮೊದಲ ಐವತ್ತು ಮೂರ್ತಿಗಳಲ್ಲಿ ಒಂದು ಕನಕಪುರ ಪಟ್ಟಣದಲ್ಲಿದೆ. ಸೋಪಾನ ಕಟ್ಟೆ ಹನುಮ ಅಥವಾ ಹೊಳೆ ಆಂಜನೇಯ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಹನುಮ, ಕನಕಪುರದ ಹೊರಭಾಗದ ಅರ್ಕಾವತಿ ನದಿ ತೀರದಲ್ಲಿ ನೆಲೆ ನಿಂತು ಭಕ್ತರ ಅಭೀಷ್ಟಗಳನ್ನು ನೆರವೇರಿಸುತ್ತಿದ್ದಾನೆ. ತಲತಲಾಂತರದಿಂದ ಪೂಜೆ ಮಾಡಿಕೊಂಡು ಬರುತ್ತಿರುವ ವೆಂಕಟೇಶ್‌ ಅವರ ವಂಶಸ್ಥರು ಶಿಥಿಲವಾಗಿದ್ದ ಈ ದೇವಸ್ಥಾನವನ್ನು 16 ವರ್ಷಗಳ ಹಿಂದೆ ನವೀಕರಣಗೊಳಿಸಿ, ಪ್ರತಿದಿನ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಾರೆ.

ಸರ್ವಾಂಗ ಸುಂದರ ಈ ಹನುಮ
ಸುಮಾರು ಏಳೂವರೆ ಅಡಿ ಎತ್ತರ ಇರುವ ಹನುಮನ ಮೂರ್ತಿಯನ್ನು ಗ್ರಾನೈಟ್‌ ಶಿಲೆಯಲ್ಲಿ ಕೆತ್ತಿರುವುದರಿಂದ, ಆ ಹೊಳಪು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಅತ್ಯಂತ ಸುಂದರವಾಗಿ ಕೆತ್ತಿರುವ ಈ ಮೂರ್ತಿಯಲ್ಲಿ ಆಚಾರತ್ರಯರಾದ ಹನುಮ, ಭೀಮ, ಮಧ್ವರ ಸಮಾಗಮವನ್ನು ಕಾಣಬಹುದು. ತಿದ್ದಿ ತೀಡಿದ ಕಣ್ಣು, ತಲೆಯ ಜುಟ್ಟಿನ ಗಂಟು, ಕಿವಿಯಲ್ಲಿ ಹಾಕಿರುವ ಒಲೆಯನ್ನು ಅತಿ ನಾಜೂಕಾಗಿ ಕೆತ್ತಲಾಗಿದೆ. ಕೈ ಹಾಗೂ ಕಾಲಿನ ಬೆರಳಿನಲ್ಲಿರುವ ಉಗುರುಗಳು ವಜ್ರದಂತೆ ಗಟ್ಟಿಯಾಗಿದ್ದು, ತುಂಬಾ ಹರಿತವಾಗಿರುವುದನ್ನು ಕಾಣಬಹುದು.

ಕೈಯಲ್ಲಿ ಹಿಡಿದಿರುವ ಸೌಗಂಧಿಕಾ ಪುಷ್ಪ, ತಲೆಯ ಎರಡು ಬದಿಯಲ್ಲಿರುವ ಶಂಖ, ಚಕ್ರ, ಕೈಕಾಲಿನ ಬೆರಳುಗಳು, ಬಾಲದ ಗಂಟೆ, ಕಣ್ಣು ಹುಬ್ಬು ಎಲ್ಲವನ್ನೂ ಶಿಲ್ಪಿ ಬಹಳ ನಾಜೂಕಾಗಿ ಕೆತ್ತಿದ್ದಾನೆ. ಈ ಮೂರ್ತಿಯಲ್ಲಿ ಗಮನಿಸಿದಬೇಕಾದ ಇನ್ನೊಂದು ವಿಶೇಷ ಎಂದರೆ, ಹನುಮನಿಗೆ ಇಲ್ಲಿ ಯಜೊnàಪವೀತ ಇಲ್ಲದಿರುವುದು. ಉಧ್ವì ಫ‌ುಂಡ್ರ, ಬಾಲದಲ್ಲಿರುವ ಗಂಟೆ, ಕಪೋಲ ಕೇಶಗಳು, ತೋಳ ಬಂದಿ, ಮುಂಗೈ ಕಡಗಗಳು, ಸೊಂಟದ ಪಟ್ಟಿ, ಖಟಾರಿ, ರಾಮ ದಾಸ್ಯ ಸಂಕೇತದ ಕಾಲ್ಬಳೆ ಮೂರ್ತಿಯಲ್ಲಿ ಅತ್ಯಂತ ನಾಜೂಕಾಗಿ ಎದ್ದು ಕಾಣುತ್ತದೆ.

ಹನುಮಂತನ ಮೂರ್ತಿಯಲ್ಲಿ ಆಚಾರತ್ರಯರ ಸನ್ನಿಧಾನವನ್ನು ಕಾಣಬಹುದು, ಸೌಗಂಧಿಕಾ ಪುಷ್ಪದಿಂದ ಭೀಮಸೇನರ ಸನ್ನಿಧಾನವನ್ನು, ಯಜೊnàಪವೀತವಿಲ್ಲದಿರುವುದು, ಶ್ರೀಮನ್‌ ಮಧ್ವಾಚಾರ್ಯರ ಸನ್ನಿಧಾನವನ್ನೂ ತೋರಿಸಿದರೆ ಭುಜದಿಂದ ಇಳಿದು ಬಂದಿರುವ ತಾವರೆಯ ಮೊಗ್ಗುಗಳು ಮುಖ್ಯಪ್ರಾಣರ ಮುಂದಿನ ಬ್ರಹ್ಮ ಪದವಿಯನ್ನು ಸೂಚಿಸುತ್ತವೆ. ವೈಷ್ಣವ ಸಂಪ್ರದಾಯದಲ್ಲಿ ನಿರ್ಮಾಣಗೊಂಡಿರುವ ವಿಗ್ರಹ, ಅತ್ಯಂತ ಭವ್ಯ ಹಾಗೂ ಸೂಕ್ಷ್ಮ ಕೆತ್ತನೆಯಿಂದ ಕೂಡಿದೆ.

ಸಂತಾನ ಕರುಣಿಸುವ ಹನುಮ
ಜಾಗ್ರತ ಕಾರಣಿಕ ಎಂದು ಜನಜನಿತವಾಗಿರುವ ಈ ದೈವದ ಬಳಿ, ಎರಡು ಹೆಣ್ಣುಮಕ್ಕಳಿದ್ದು ಪುತ್ರ ಸಂತಾನ ಬೇಕೆನ್ನುವವರು ಧನುರ್ಮಾಸದಲ್ಲಿ ಬ್ರಾಹ್ಮಿ ಮಹೂರ್ತದಲ್ಲಿ ಇಲ್ಲಿ ಬಂದು ಹರಕೆ ಮಾಡಿ ಸೇವೆ ಮಾಡಿದರೆ ಪುತ್ರ ಸಂತಾನವಾಗುತ್ತದೆ ಎಂಬ ಪ್ರತೀತಿ ಇದೆ. ಇಲ್ಲಿಗೆ ಬಂದು ಹರಕೆ ಮಾಡಿ ಪುತ್ರ ಸಂತಾನ ಪಡೆದ ಭಕ್ತರ ಅದೆಷ್ಟೋ ನಿದರ್ಶನಗಳಿದೆ. ಅಷ್ಟೇ ಅಲ್ಲದೇ ಯಾರಿಗಾದರೂ ನರ ಸಂಬಂಧಿ ಖಾಯಿಲೆಗಳಿದ್ದರೂ ಸಹ ಇಲ್ಲಿ ಬಂದು ಹನುಮಪ್ಪನ ಸೇವೆ ಮಾಡಿದರೆ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಮೊದಲು ಅರ್ಕಾವತಿ ನದಿಯಲ್ಲಿ ನೀರಿತ್ತು, ಆದರೆ ಈಗ ನೀರು ಕಲುಷಿತ ಗೊಂಡಿರುವುದರಿಂದ ಭಕ್ತಾದಿಗಳಿಗೆ ಅನುಕೂಲವಾಗಲೆಂದು ಸಮಿತಿಯವರೇ ಬೋರ್‌ ವೆಲ್‌ ಒಂದನ್ನು ಕೊರೆಸಿದ್ದಾರೆ. ಹನುಮ ಜಯಂತಿ ಹಾಗೂ ರಾಮನವಮಿ ಕಾರ್ಯಕ್ರಮಗಳು ಇಲ್ಲಿ ಬಹಳ ವಿಜೃಂಭಣೆಯಿಂದ ನೆರವೇರುತ್ತವೆ. ದೇವಸ್ಥಾನದ ಆವರಣದಲ್ಲಿರುವ ಬಿಲ್ವವೃಕ್ಷದ ಕೆಳಗೆ ಬಲಮುರಿ ವಿಶ್ವಂಭರ ಗಣಪತಿಯನ್ನು ಸ್ಥಾಪಿಸಲಾಗಿದೆ.

ಮಾರ್ಗ: ಬೆಂಗಳೂರಿನಿಂದ ಕನಕಪುರ 45 ಕಿಲೋ ಮೀಟರ್‌ ಇದೆ. ಕನಕಪುರ ಪಟ್ಟಣದಲ್ಲಿ ಅರ್ಕಾವತಿ ಚಿತ್ರಮಂದಿರದ ಹಿಂಭಾಗದಲ್ಲಿ ಈ ದೇವಸ್ಥಾನವಿದೆ.

-ಪ್ರಕಾಶ್‌ ಕೆ.ನಾಡಿಗ್‌

ಟಾಪ್ ನ್ಯೂಸ್

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

lorry-bike

Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.