“ಆಕೃತಿ’ಯಲ್ಲಿ ಲಂಕೇಶರ ಕುರಿತ ಮಾತು- ಕಥೆ
Team Udayavani, Mar 11, 2017, 4:03 PM IST
ಬೆಂಗಳೂರಿನಲ್ಲಿರುವ ಪುಸ್ತಕ ಮಳಿಗೆಗಳಲ್ಲಿ “ಆಕೃತಿ ಬುಕ್ಸ್’, ಅನೇಕ ಕಾರಣಗಳಿಗಾಗಿ ವಿಶಿಷ್ಟವಾಗಿ ನಿಲ್ಲುತ್ತದೆ. “ಆಕೃತಿ’ ಪುಸ್ತಕ ಮಾರಾಟ ತಾಣವಷ್ಟೇ ಅಲ್ಲ, ಓದುಗರನ್ನು ರೂಪಿಸುವ ತಾಣ ಕೂಡ ಹೌದು. ಇಲ್ಲಿ ಆಗಾಗ ನಡೆಯುವ ಸಂವಾದಗಳು, ಸಿನಿಮಾ ಪ್ರದರ್ಶನ ಮತ್ತು ಸಿನಿಮಾ ಸಂಬಂಧಿತ ಕಾರ್ಯಕ್ರಮಗಳು ಅದಕ್ಕೆ ಸಾಕ್ಷಿ. ಇತ್ತೀಚಿಗಷೆc ಆಕೃತಿಯಲ್ಲಿ ಲಂಕೇಶರ ಕುರಿತ ಮಾತುಕತೆ ಮತ್ತು ಅವರ ಬರಹ- ಕವಿತೆಗಳನ್ನು ಓದುವ ಕಾರ್ಯಕ್ರಮ ನಡೆಯಿತು.
ಪತ್ರಕರ್ತ ಆದಿತ್ಯ ಭಾರದ್ವಾಜ್, ಫಿಲಂಮೇಕರ್ ಸಂದೀಪ್ ಕುಮಾರ್, ಶ್ರೀಪಾದ್ ಹೆಗಡೆ, ಕುಮಾರ್ ರೈತ, ಚಂದ್ರಶೇಖರ್, ಪ್ರಸನ್ನ ಲಕ್ಷಿ$¾àಪುರ ಸೇರಿದಂತೆ ಅನೇಕರು ಲಂಕೇಶ್ ವ್ಯಕ್ತಿತ್ವ ಮತ್ತವರ ಪುಸ್ತಕಗಳ ಕುರಿತ ಮಾತುಕತೆಯಲ್ಲಿ ಭಾಗಿಯಾದರು. ಹರಟೆ ಮಾದರಿಯಲ್ಲಿ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ತಾವು ಕಂಡ ಲಂಕೇಶರನ್ನು ನೆನಪಿನಾಳದಿಂದ ಹೆಕ್ಕಿಕೊಟ್ಟಿದ್ದು ವಿಶೇಷವಾಗಿತ್ತು. ಅಂದಿನ ಕಾಲದ ರಾಜಕೀಯ ಸಂದರ್ಭ, ಲಂಕೇಶರ ಬರವಣಿಗೆ, ಮತ್ತವರ ಮನೋಭಾವದ ಕುರಿತ ಸ್ವಾರಸ್ಯಕರ ಘಟನೆಗಳು ಅಲ್ಲಿ ನೆರೆದಿದ್ದವರನ್ನು ರಂಜಿಸಿದ್ದು ಮಾತ್ರವಲ್ಲದೆ ಚಿಂತನೆಗೆ ಹಚ್ಚಿತು. ಇನ್ನು ಮುಂದೆಯೂ ಆಕೃತಿಯಲ್ಲಿ ಪುತಿನ, ಮಾಸ್ತಿ ಹೀಗೆ ಕನ್ನಡದ ಹೆಸರಾಂತ ಸಾಹಿತಿಗಳ ಕುರಿತ ಸಂವಾದಗಳು ನಡೆಯಲಿವೆ. ಆಸಕ್ತರು, ಕನ್ನಡಾಭಿಮಾನಿಗಳು ಪಾಲ್ಗೊಳ್ಳಬಹುದು.
ಎಲ್ಲಿ?: 12ನೇ ಮುಖ್ಯರಸ್ತೆ, 3ನೇ ಬ್ಲಾಕ್, ರಾಜಾಜಿನಗರ
ಜಾಲತಾಣ: www.facebook.com/akrutibooks
ಸಂಪರ್ಕ: 9886694580
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.