ವಿಶ್ವಕಪ್‌ಗೆ ಆಲ್‌ರೌಂಡರ್ ತಯಾರಾದರೇ?
Team Udayavani, Feb 9, 2019, 12:30 AM IST
ನ್ಯೂಜಿಲೆಂಡ್ ನೆಲದಲ್ಲಿ ಭಾರತ ಅತೀ ದೊಡ್ಡ ಅಂತರದಲ್ಲಿ ಏಕದಿನ ಸರಣಿ ಗೆದ್ದು ಸಂಭ್ರಮಿಸಿದೆ. ಇನ್ನು ನಾಲ್ಕೇ ತಿಂಗಳಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ದೃಷ್ಟಿಯಿಂದ ಟೀಮ್ ಇಂಡಿಯಾ ಪಾಲಿಗೆ ಈ ಗೆಲುವು ಅತ್ಯಂತ ಅಗತ್ಯದ್ದೂ ಮಹತ್ವದ್ದೂ ಆಗಿದೆ.
ವಿಶ್ವಕಪ್ ಎಂಬುದು ಸಾಮಾನ್ಯ ಕೂಟವಲ್ಲ. ಏಕದಿನ ಕ್ರಿಕೆಟಿನ ಸಾಮ್ರಾಟನನ್ನು ಆರಿಸಲು 4 ವರ್ಷಗಳಿಗೊಮ್ಮೆ ಬರುವ ಮಹೋನ್ನತ ಪಂದ್ಯಾವಳಿ. ಹೀಗಾಗಿ ಈ ಸಂದರ್ಭದಲ್ಲಿ ದಾಖಲಾಗುವ ಪ್ರತಿಯೊಂದು ಪಂದ್ಯದ ಫಲಿತಾಂಶ, ಆಟಗಾರರ ಸಾಧನೆ, ದೌರ್ಬಲ್ಯಗಳನ್ನೆಲ್ಲ ಅಳೆದು ತೂಗಿ ನೋಡಲಾಗುತ್ತದೆ. ಎಲ್ಲ ದೇಶಗಳೂ ವರ್ಲ್ಡ್ಕಪ್‌ಗೆ ತಮ್ಮ ತಂಡ ಎಷ್ಟರ ಮಟ್ಟಿಗೆ ಹುರಿಗೊಂಡಿದೆ ಎಂಬ ಲೆಕ್ಕಾಚಾರದಲ್ಲಿ ತೊಡಗುತ್ತವೆ. ಈ ನಿಟ್ಟಿನಲ್ಲಿ ಟೀಮ್ ಇಂಡಿಯಾದ್ದು ಪರಾÌಗಿಲ್ಲ ಎಂಬಂಥ ಸಾಧನೆ. ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಅವರದೇ ನೆಲದಲ್ಲಿ ಬಗ್ಗುಬಡಿಯುವುದು ಸಾಮಾನ್ಯ ಸಂಗತಿಯಲ್ಲ. ಭಾರತ ಇಂಥದೊಂದು ಅಸಾಮಾನ್ಯ ಪರಾಕ್ರಮದೊಂದಿಗೆ ವಿಶ್ವ ಮಟ್ಟದಲ್ಲಿ ಸಂಚಲನ ಮೂಡಿಸಿದೆ.
* 1983ರ ಹೀರೋಗಳು..
ಎರಡು ಬಲಿಷ್ಠ ತಂಡಗಳ ವಿರುದ್ಧ ಒಲಿದ ಈ ಸರಣಿ ಗೆಲುವು ಭಾರತದ ಒಟ್ಟು ಸಾಮರ್ಥ್ಯವನ್ನು ಜಾಹೀರುಗೊಳಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಶಕ್ತಿ ಯಾವ ಮಟ್ಟದಲ್ಲಿದೆ ಎಂಬುದರ ನಿಖರ ಅಂದಾಜು ಸಿಕ್ಕಿದೆ. ಆಸ್ಟ್ರೇಲಿಯ, ನ್ಯೂಜಿಲೆಂಡ್‌ನಂಥ ಟ್ರ್ಯಾಕ್‌ಗಳೇ ವಿಶ್ವಕಪ್ ವೇಳೆ ಇಂಗ್ಲೆಂಡ್‌ನಲ್ಲಿ ಎದುರಾಗುವುದರಿಂದ ನಮ್ಮವರ ಸಾಧನೆ ನಿಜಕ್ಕೂ ತೋರುಗಂಭ. ಆದರೆ ಕೇವಲ ಬ್ಯಾಟಿಂಗ್-ಬೌಲಿಂಗ್ ಬಲವಿದ್ದರಷ್ಟೇ ಸಾಲದು, ವಿಶ್ವಕಪ್ ಗೆಲ್ಲಬೇಕಾದರೆ ಸಮರ್ಥ ಆಲ್‌ರೌಂಡರ್‌ಗಳ ಪಾಲೂ ಅಷ್ಟೇ ಮುಖ್ಯ. ಭಾರತ 1983ರಲ್ಲಿ ಮೊದಲ ಸಲ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ್ದೇ ಆಲ್‌ರೌಂಡರ್‌ಗಳ ಅಮೋಘ ಪರಾಕ್ರಮದಿಂದ. ಕಪಿಲ್‌ದೇವ್, ಮೋಹಿಂದರ್ ಅಮರನಾಥ್, ರೋಜರ್ ಬಿನ್ನಿ, ಕೀರ್ತಿ ಆಜಾದ್ ಅಂದಿನ ಹೀರೋಗಳಾಗಿದ್ದರು. ಮದನ್‌ಲಾಲ್, ಬಲ್ವಿಂದರ್ ಸಿಂಗ್ ಸಂಧು ಆಟವನ್ನೂ ಮರೆಯುವಂತಿರಲಿಲ್ಲ.
2011ರಲ್ಲಿ ಧೋನಿ ಪಡೆ ವಿಶ್ವಕಪ್ ಎತ್ತುವಾಗ ಯುವರಾಜ್ ಸಿಂಗ್ ಪಾತ್ರ ಮಹತ್ವದ್ದಾಗಿತ್ತು. ಹರ್ಭಜನ್, ಜಹೀರ್, ಸೆಹವಾಗ್ ಕೂಡ ಎರಡೂ ವಿಭಾಗಗಳಲ್ಲಿ ಗಮನಾರ್ಹ ನಿರ್ವಹಣೆ ತೋರಿದ್ದರು. ಈ ಬಾರಿ ವಿಶ್ವಕಪ್‌ನಲ್ಲಿ ಸವ್ಯಸಾಚಿಗಳಾಗಿ ಮಿಂಚುವ ಭಾರತೀಯ ಆಟಗಾರರು ಯಾರು ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ.
* ಪಾಂಡ್ಯ ನಂ.1 ಆಲ್‌ರೌಂಡರ್
ಅನುಮಾನವೇ ಇಲ್ಲ, ಹಾರ್ದಿಕ್ ಪಾಂಡ್ಯ ಭಾರತ ತಂಡದ ಅಗ್ರಮಾನ್ಯ ಆಲ್‌ರೌಂಡರ್ ಆಗಿ ಮಿಂಚುವುದು ಖಂಡಿತ. ಇತ್ತೀಚಿನ ಟಿವಿ ಶೋ ಪ್ರಕರಣದಿಂದ ಹೆಚ್ಚು “ಸೀರಿಯಸ್‌ನೆಸ್’ ಕಲಿತಿರುವ ಪಾಂಡ್ಯ, ನ್ಯೂಜಿಲೆಂಡ್ ವಿರುದ್ಧ ದೊರಕಿದ ಅವಕಾಶಗಳನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಇಂಗ್ಲೆಂಡ್‌ನಲ್ಲಿ ಹಾರ್ದಿಕ್ ಟ್ರಂಪ್‌ಕಾರ್ಡ್ ಆಗುವುದು ಖಂಡಿತ.
ಹಾರ್ದಿಕ್ ಅವರಷ್ಟೇ ಸಾಮರ್ಥ್ಯವುಳ್ಳ ಮತ್ತೂಬ್ಬ ಸವ್ಯಸಾಚಿ ಭಾರತ ತಂಡದಲ್ಲಿ ಯಾರಿದ್ದಾರೆ? ಆಗ ರವೀಂದ್ರ ಜಡೇಜ ಹೆಸರು ಗೋಚರಿಸುತ್ತದೆ. ಆದರೆ ಇಂಗ್ಲೆಂಡ್ ಟ್ರ್ಯಾಕ್‌ನಲ್ಲಿ ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ಗೆ ಅವಕಾಶ ಕಡಿಮೆ. ಕೇದಾರ್ ಜಾಧವ್ ಪರಾÌಗಿಲ್ಲವಾದರೂ ಅವರು ಪಾರ್ಟ್‌ಟೈಮ್ ಬೌಲರ್. ಉಳಿದವರಲ್ಲಿ ಭುವನೇಶ್ವರ್ ಓಕೆ. ವಿಜಯ್ ಶಂಕರ್, ಕೃಣಾಲ್ ಪಾಂಡ್ಯಗೆ ಅವಕಾಶ ಸಿಕ್ಕೀತೇ ಎಂಬುದೊಂದು ದೊಡ್ಡ ಪ್ರಶ್ನೆ!
ಪ್ರೇಮಾನಂದ ಕಾಮತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.