ಬದುಕು ಬದಲಿಸಿದ ಚಿತ್ರ
ಒಂದು ಫೋಟೋ ಕತೆ
Team Udayavani, Oct 26, 2019, 4:08 AM IST
ಅಂದು ಮುಂಜಾನೆ, ಶ್ರವಣ ಬೆಳಗೊಳದ ಗೊಮ್ಮಟ ಗಿರಿಯನ್ನು ಏರಿದ್ದೆ. ಅಲ್ಲೊಬ್ಬರು ಜೈನ ಮುನಿ, ಮುಗಿಲವೀರ ಬಾಹುಬಲಿಯ ಮಹಾನ್ ಪಾದಗಳ ಕೆಳಗೆ, ಪುಟ್ಟ ಆಕೃತಿಯಂತೆ ಧ್ಯಾನಸ್ಥರಾಗಿ ಕುಳಿತಿದ್ದನ್ನು ಕಂಡೆ. ಅವರು “ಜಂಗಲ್‌ವಾಲೆ ಬಾಬಾ’ ಅಂತಲೇ ಖ್ಯಾತಿ ಪಡೆದಿದ್ದ ಚಿನ್ಮಯ ಸಾಗರ ಮಹಾರಾಜರು ಎಂಬುದು ಆಮೇಲೆ ಗೊತ್ತಾಯಿತು. ಆ ದೃಶ್ಯ ಸೆರೆಹಿಡಿಯಲೆಂದೇ, ಎದುರಿನ ಅಟ್ಟಹತ್ತಿದ್ದೆ. 2006ರಲ್ಲಿ ತೆಗೆದ ಈ ಅನಿರೀಕ್ಷಿತ ಫೋಟೊ, ನನ್ನ ಬದುಕಿನ ತಿರುವನ್ನೇ ಬದಲಿಸಿತು. ಈ ಚಿತ್ರ 25 ದೇಶಗಳಲ್ಲಿ ಪ್ರದರ್ಶನ ಕಂಡಿತು. 25 ಚಿನ್ನದ ಪದಕಗಳ ಗೌರವ ನನ್ನ ಪಾಲಾಯಿತು. ಆದರೆ, ಇತ್ತೀಚೆಗೆ ಆ ಜೀವ ಇಲ್ಲವಾಯಿತು ಎಂದು ಕೇಳಿದಾಗ, ಮನಸ್ಸಿನಲ್ಲಿ ದುಃಖ ಕವಿಯಿತು. (ಚಿಕ್ಕೋಡಿ ಸಮೀಪದ ಜುಗುಳದಲ್ಲಿ ಸಲ್ಲೇಖನ ವ್ರತದಲ್ಲಿದ್ದ ಚಿನ್ಮಯ ಸಾಗರರು, ಇತ್ತೀಚೆಗೆ ಇಹಲೋಕ ತ್ಯಜಿಸಿದರು)
* ಸುಧೀಂದ್ರ ಕೆ.ಪಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.