ಪ್ರಾರಬ್ಧಗಳನ್ನು ಹೀಗೂ ನಿವಾರಿಸಿಕೊಳ್ಳಬಹುದು
Team Udayavani, Mar 4, 2017, 2:42 PM IST
ಈ ವಾರ ಕರ್ಮಸ್ಥಾನದ ಬಗೆಗೆ ವಿಶ್ಲೇಷಣೆ ಮಾಡಲಾಗಿದೆ. ಕರ್ಮಸ್ಥಾನದ ಬಲವೇ ನಿಜವಾದ ಪುರುಷಬಲ. ನಾವು ಯಾವ ಕೆಲಸ ಮಾಡುತ್ತೇವೆ ಎಂಬುದನ್ನು ಈ ಮನೆ ನಿರ್ಧರಿಸುತ್ತದೆ. ಜತೆಗೆ ಲೌಕಿಕ ಜಗದ ಜೊತೆಗಿನ ವಾಸ್ತವಕ್ಕೆ ಅಲೌಕಿಕದ ಕೊಂಡಿಗಳ ಬಗ್ಗೆಯೂ ಕರ್ಮಸ್ಥಾನ ಬೆಳಕು ಚೆಲ್ಲುತ್ತದೆ.
ಭಾಗ್ಯದ ಮನೆಯ ದೋಷಗಳನ್ನು ನಿವಾರಿಸಿಕೊಂಡು ಸಫಲತೆಗಾಗಿನ ಹೆಜ್ಜೆ ಮುಂದಿಡಲು ಅಗತ್ಯವಾದ ವಿಚಾರಗಳನ್ನು ಮುಂದಿನವಾರ ಚರ್ಚಿಸಲಾಗಿದೆ. ಈ ವಾರ ಕರ್ಮಸ್ಥಾನದ ಬಗೆಗೆ ವಿಶ್ಲೇಷಣೆ ಮಾಡಲಾಗಿದೆ. ಕರ್ಮಸ್ಥಾನದ ಬಲವೇ ನಿಜವಾದ ಪುರುಷಬಲ. ನಾವು ಯಾವ ಕೆಲಸ ಮಾಡುತ್ತೇವೆ ಎಂಬುದನ್ನು ಈ ಮನೆ ನಿರ್ಧರಿಸುತ್ತದೆ. ಜತೆಗೆ ಲೌಕಿಕ ಜಗದ ಜೊತೆಗಿನ ವಾಸ್ತವಕ್ಕೆ ಅಲೌಕಿಕದ ಕೊಂಡಿಗಳ ಬಗ್ಗೆಯೂ ಕರ್ಮಸ್ಥಾನ ಬೆಳಕು ಚೆಲ್ಲುತ್ತದೆ. ವಾಸ್ತವವಾಗಿ ಅಷ್ಟಮ ಸ್ಥಾನದ ಕುಜದೋಷ ಮನಮೋಹನಗ ಸಿಂಗ್ ಅವರನ್ನು ಮೂಲೆಗೆ ತಳ್ಳಬೇಕಿತ್ತು. ವಾಸ್ತವದಲ್ಲಿ ಕುಜನು ಯೋಗಕಾರಕನಾದರೂ ಅನೇಕ ರೀತಿಯ ವ್ಯಕ್ತಿತ್ವ ಹನನಗಳನ್ನು ಶುಕ್ರ ನಡೆಸಿಯೇ ತೀರಬೇಕಿತ್ತು. ಆದರೆ ಅವರ ವ್ಯಕ್ತಿತ್ವದ ಶಾಂತತೆ ಭಾಗ್ಯದಲ್ಲಿ ಗುರು, ಕೇತು ಪೀಡಿತನಾದರೂ ಬಾಧಕನಾದ ಬುಧನು ಧರ್ಮಕರ್ಮಾಧಿಫಲ, ಯೋಗಬಲ ಉತ್ಛಸ್ಥಿತಿಯ ಲಾಭ ಪಡೆದು ಗಟ್ಟಿಯಾಗಿ ಮಾತನಾಡಲೂ ಸಾಧ್ಯವಿರದ ಮನಮೋಹರನನ್ನು ಹತ್ತು ವರ್ಷಗಳ ಕಾಲ ಈ ದೇಶದ ಪ್ರಧಾನಿಯಾಗಿಸಿದ. ಮೌನವೂ ಬಂಗಾರವಾಯ್ತು. ರಾಜಕಾರಣಿಗಳ ಅಬ್ಬರವಿಲ್ಲದ ಮನುಷ್ಯ. ಸೋನಿಯಾರ ಅತ್ತೆ ಇಂದಿರಾರನ್ನು ಸಿಖ್ ಧಮೀಯರೇ ಮುಗಿಸಿದ್ದರೂ ಸೋನಿಯಾಗೆ ಮನಮೋಹನ್ ಬಗ್ಗೆ ನಂಬಿಕೆ ಇತ್ತು. ನಂಬಿಕೆಗೆ ದ್ರೋಹ ಎಸಗಲು ಸಾಧ್ಯವೇ ಇರದ ಅಪ್ಪಟ ಬಂಗಾರ ಮನಮೋಹನ್. ಪ್ರಧಾನಿಯಾದದ್ದು ಆಶ್ಚರ್ಯವೇ ಹೌದು. 1984ರಲ್ಲಿ ಇಂದಿರಾ ಕಗ್ಗೊಲೆಯಾಗಿ ರಾಜೀವ್ ಪ್ರಧಾನಿಯಾದಾಗ ಮನಮೋಹನ್ ಯಾರು ಎಂಬುದನ್ನು ಭಾರತೀಯರು ಎಷ್ಟು ಜನ ತಿಳಿದಿದ್ದರು. ಆದರೆ 2004ರಲ್ಲಿ ನೆಹರು ಗಾಂಧಿ ಕುಟುಂಬ ತಾವೇ ಅಧಿಕಾರಕ್ಕೆ ಬರಬಹುದಾಗಿದ್ದರೂ ವಿಧಿ ಮನಮೋಹನರನ್ನು ಅಧಿಕಾರ ಪೀಠಕ್ಕೆ ಸೋನಿಯಾರ ಮೂಲಕವೇ ಏರಿಸಿತ್ತು. ಜಾತ್ಯತೀತ ಭಾರತೀಯ ಪರಂಪರೆಯನ್ನು ಪ್ರಪಂಚಕ್ಕೆ ತೋರಿಸಿಕೊಟ್ಟ ಬಹುದೊಡ್ಡ ನಿದರ್ಶನವನ್ನು ಭಾರತ ತೋರಿಸಿಕೊಟ್ಟಿತು. ಆದರೂ ಅದೇ ಮನಮೋಹನ್ ಕರ್ಮಸ್ಥಾನಾಧಿಪತಿ ಗುರು ದುಃಸ್ಥಾನಕ್ಕೆ ಬಂದು ಕೇತು ಲಗ್ನಭಾವ ಆವರಿಸಿದಾಗ ದುರ್ಬಲರಾದರು. ಮನಮೋಹನ್ ಸಿಂಗ್ ಭಾರತ ರಾಜಕಾರಣಿ ವಲಯದ ಪಟ್ಟುಗಳನ್ನು ಕರಗತ ಮಾಡಿಕೊಳ್ಳುವುದು ಕಷ್ಟವಾಯಿತು.
ಏನಾದರೂ ಆಗು ಮೊದಲು ಮಾನವನಾಗು
ಸರಿ ಮೊದಲು ಮಾನವನಾಗು ಎಂಬ ಮಾತು. ಮಾನವರಾದವರೆಲ್ಲಾ ಗೆದ್ದಿ ದ್ದಾರೆಯೇ? ಮಾನವರಾದರೆ ಗೆಲ್ಲಲು ಅಸಾಧ್ಯ ಎಂದು ತಿಳಿದು ಕೋಟೆ ಕಟ್ಟಿದವೆರಲ್ಲ ಉಳಿದು
ಕೊಂಡರೆ? ಹಾಗಾದರೆ ಏನು? ಪಾನ್ ಬೀಡಾ ಮಾರಾಟ ಮಾಡುವ ಅಂಗಡಿಯ ಜಾಗ ಪಟ್ಟಣದ ದೊಡ್ಡ ಹೋಟೆಲ್ ಬೇಕಾಗಿಲ್ಲ. ಚಿಕ್ಕ ಹೋಟೆಲ್ ಎದುರಿಗೂ ಪಾನ್ ಬೀಡಾ ಮಾರಾಟ ಮಾಡಿ ಜೀವನಕ್ಕೆ ದಾರಿ ಕಂಡುಕೊಂಡವರು ಇದ್ದಾರೆ. ಕೆಲಸ ಸುಲಭ ಎಂದು ಭಾವಿಸದಿರಿ ಹಾಗಾದರೆ ಕಷ್ಟದ ಕೆಲಸವೇ? ಖಂಡಿತಾ ಇಲ್ಲ. ಆದರೆ ಏನು ಅಂತರ?
ಓಂ ಶನ್ನೋ ದೇವಿರಭಿಷ್ಟಯಾ ಅಪೋ ಭವಂತು ಪೀತಯೇ ಶಯ್ಯೋ ರಭಿಸ್ರಂವಂತುನಃ ಶನೈಶ್ಚರಾಯ ನಮಃ ಇದಿಷ್ಟೇ ಮಂತ್ರದ ಸಾಲುಗಳನ್ನು ಲಕ್ಷಾಂತರ ಜಪಿಸಿ ಶನೈಶ್ಚರ ಸಿದ್ಧಿಯನ್ನು ಗಳಿಸಿಕೊಂಡು ಪ್ರಪಂಚದಲ್ಲಿ ಅದ್ಭುತ ಶಕ್ತಿಯಾದವರಿದ್ದಾರೆ. ನೆನಪಿಡಿ. ಇದು ಅದ್ಭುತ ಸಂಗತಿ. ಆಶ್ಚರ್ಯ ಆದರೂ ನಿಜ. ಹಿಲರಿ ಕ್ಲಿಂಟನ್ನ ನೆನಪಿದೆಯಲ್ಲ ಗೆದ್ದೇ ಗೆಲ್ಲಬೇಕಿತ್ತು. ಆದರೆ ಗೆಲುವಿಗಾಗಿ 5 ಕೆರೆಟ್ ಪಚ್ಛೆ ಧರಿಸಲು ಎದುರಾಗಿ ಕಂಡು ಸಲಹೆ ನೀಡಿದರೂ ಚುನಾವಣೆಯ ಒತ್ತಡಗಳ ಧಾವಂತದಲ್ಲಿ ಮರೆತರು. ಕೊನೆಯ ದಿನದ ಇಂಟರ್ನೆಟ್ ಪತ್ರೋತ್ತರ ಸೋರಿಕೆ ಸೋಲಿಗೆ ಕಾರಣವಾಯ್ತು. ಭಾಗ್ಯದಲ್ಲಿ ಬೇರೂರಿದ ಕುಜನು ಶನೈಶ್ಚರನು ಒದಗಿಸಬೇಕಾದ ಮಹತ್ತರ ಭಾಗ್ಯವನ್ನು ಕತ್ತರಿಸಿ ಚೆಲ್ಲಿದ್ದ. ವ್ಯಕ್ತಿತ್ವದಲ್ಲಿ ಶಕ್ತಿಯು ಆದರೆ ಆತ್ಮಶ್ವಾಸದಲ್ಲಿ ದುರ್ಬಲತೆ ಇತ್ತು. ಇದನ್ನು ಪಚ್ಚೆ ನಿಯಂತ್ರಿಸುತ್ತಿತ್ತು.
ಟ್ರಂಪ್‌ಗೆ ತಾತೂ³ರ್ತಿಕವಾಗಿ ಶನೈಶ್ಚರನನ್ನು ನಿಗ್ರಹಿಸುವ ಕುಜನ ಶಕ್ತಿ ಲಭಿಸಿತು ಎಂಬ ಕಾರಣದಿಂದ ಯಾರೂ ಊಹಿಸಿರದ ಗೆಲುವು ಸಿಕ್ಕಿತು. ಅಪೂರ್ವವಾದ ಮಾಣಿಕ್ಯ ಒಂದು ಅವರನ್ನು ಬಲಾಡ್ಯರನ್ನಾಗಿಸಿತು. ಆದರೆ ನಿಕ್ಸನ್‌ರಂತೆ ಚರಿತ್ರೆ ಟ್ರಂಪ್ ಅವರನ್ನು ಶಿಕ್ಷಿಸದ ಹಾಗೆ ಟ್ರಂಪ್ ಅನಾವಶ್ಯಕವಾದ ಬಿರುಗಾಳಿಯನ್ನು ಮೈಮೇಲೆ ಎಳೆದುಕೊಳ್ಳಬಾರದು. ಅವಕಾಶಕ್ಕಾಗಿ ಕಾಯುತ್ತಿರುವ ಶನೈಶ್ಚರ ಟ್ರಂಪ್ ಅವರ ಆತುರವನ್ನು ಅವರ
ವಿರುದ್ಧದ ಉರುಳಾಗಿಸುವ ತಂತ್ರ ಹೆಣೆಯದಿರಲಾರ. ಟ್ರಂಪ್ ಅವರ ಭೂತಕಾಲದ ಹೊರೆಗಳನ್ನು ರಷ್ಯಾದ ಪುಟಿನ್ ತಮ್ಮ ಸಂಗ್ರಹದಲ್ಲಿ ಇರಿಸಿಕೊಂಡಿರುವುದು ಒಳ್ಳೆಯ ಸೂಚನೆ ಅಲ್ಲ.
ನಿಕ್ಸನ್ ಮಾದರಿ ಬೇರೆ, ಮನಮೋಹನ್ ಮಾದರಿ ಬೇರೆ
ರಿಚರ್ಡ್ ನಿಕ್ಸನ್ ಅಮೆರಿಕಾದ ಅಧ್ಯಕ್ಷ ಪಟ್ಟದಿಂದ ಪದಚ್ಯುತಗೊಳಿಸಲ್ಪಟ್ಟರು. ಡೊನಾಲ್ಡ್ ಟ್ರಂಪ್ ಈಗ ಸಾಗುತ್ತಿರುವ ವೇಗ ಬಿರುಗಾಳಿಯನ್ನು ಸೃಷ್ಟಿಸುತ್ತಿರುವಂತೆ ವಾಟರ್ ಗೇಟ್ ಹಗರಣ ಎಂಬ ಬಿರುಗಾಳಿಗೆ ಸಿಕ್ಕಿಬಿದ್ದಿದ್ದರು. ಡೊನಾಲ್ಡ್‌ಗೆ ಸುಧಾರಿಸಿಕೊಳ್ಳುವ ಅವಕಾಶವಿದೆ ಇನ್ನೂ. ಆದರೆ ನಿಕ್ಸನ್ ಹತ್ತನೇ ಮನೆಯಲ್ಲಿ ಶನೈಶ್ಚರ ಸ್ವಾಮಿಯನ್ನು ಹೊಂದಿದ್ದರೂ, ವಿರೋಧಿಗಳ ಫೋನ್ ಕದ್ದಾಲಿಕೆ ನಡೆಸಿ ಕೋರ್ಟ್ ಮೂಲಕ ಛಿಮಾರಿಗೆ ಒಳಗಾಗಿ ಎರಡನೆಯ ಅವಧಿಯ ಅಧ್ಯಕ್ಷೀಯ ಪಟ್ಟದ ಅವಧಿ ಪೂರೈಸಲಾಗದೆ ಪದಚ್ಯುತರಾದರು. ಕುಜನ ಮೂಲಕವಾಗಿ ಮನಮೋಹನರಿಗಿಂತ ಭಿನ್ನ ಮನೋಭಾವ ಅಗತ್ಯಕ್ಕಿಂತ ಹೆಚ್ಚಿನ ಧೈರ್ಯವನ್ನು ಆಲಂಗಿಸಿಕೊಂಡು ಪತನರಾದರು. 70ರ ದಶಕದ ಅಡಿಯಲ್ಲಿಬಾಂಗ್ಲಾದೇಶ ರ್ಭಟಿಸುತ್ತಿದ್ದಾಗ ಭಾರತವನ್ನು ಹಣ್ಣು ಮಾಡಲು ಯಾಹ್ಯಾಖಾನ್ ಹಾಗೂ ಜುಲ್ಫಿಕರ್ ಆಲಿ ಭುಟ್ಟೋಗೆ ಇನ್ನಿಲ್ಲದ ಬೆಂಬಲ ನೀಡಲು ಮುಂದಾಗಿ ಅಮೆರಿಕಾ ಸೇನೆಯ ಬಲಿಷ್ಠ ನೌಕಾ ಹಡಗು 7 ಫ್ಲೀಟನ್ನು ಇಂಡಿಯಾದ ಸಾಗರ ತೀರದತ್ತ ಕಳುಹಿಸಿ ರಣವೀಳ್ಯ ನೀಡಿದಂತೆ ಕಂಡಿದ್ದರು. ಅವಸರದ ನಿರ್ಣಯಗಳನ್ನು ಮಾಡುವವನು ವ್ಯಕ್ತಿತ್ವಕ್ಕೆ ದುರ್ಬಲತೆಯನ್ನು ಆಹ್ವಾನಿಸಿಕೊಳ್ಳುತ್ತಾನೆ. ಹೀಗಾಗಿ ದುರ್ಬಲರಲ್ಲದ ನಿಕ್ಸನ್ ದುರ್ಬಲರಾಗಿರಬೇಕಿರದ ಮನಮೋಹನ್ ಒಂದೊಂದು ರೀತಿಯಲ್ಲಿ ಭಾರತದ ಚರಿತ್ರೆಯಲ್ಲಿ ದಾಖಲಾದರು. ನಿಕ್ಸನ್ ಜಾಗತಿಕ ಚರಿತ್ರೆಯಲ್ಲಿ ಕಳಂಕದ ದೊಡ್ಡ ಕಪ್ಪು ಚುಕ್ಕೆಯೊಂದಿಗೆ ಹೊರದಬ್ಬಲ್ಪಟ್ಟರು. ರಾಮಕೃಷ್ಣ ಹೆಗೆಡೆಯಂಥವರು ಇನ್ನಷ್ಟು ಸೂಕ್ಷ್ಮವಾಗಿರುವುದನ್ನು ಕೈಚೆಲ್ಲಿದರು. ಬಯಸದೇ ಬಂದರೂ ದೇವೇಗೌಡರಂಥವರು ಒದಗಿ ಬಂದಿದ್ದನ್ನು ಹಿಡಿದಿಟ್ಟುಕೊಳ್ಳಲು ವಿಫಲರಾದರು. ಈ ಎಲ್ಲಾ ಉದಾಹರಣೆಗಳಲ್ಲೂ ವ್ಯಕ್ತಿತ್ವವೇ ಕರ್ಮಸ್ಥಾನವನ್ನು ನಿರ್ದೇಶಿಸಿ ಗೆಲುವನ್ನು ಗೆಲುವಾಗಿ ಪರಿವರ್ತಿಸಿಕೊಳ್ಳಲಾಗದ ಸ್ಥಿತಿಗೆ ತಳ್ಳಿದ್ದವು.
ಯಾವುದು ಬಲವೋ ಅದನ್ನು ಕರ್ಮಸ್ಥಾನದ ಶಕ್ತಿಯನ್ನಾಗಿಸಬೇಕು. ಯಾರೋ ಫೈವ್ ಸ್ಟಾರ್ ಹೋಟೆಲ್ ಸ್ಥಾಪಿಸಿ ಯಶಸ್ಸು ಪಡೆದ ಮಾತ್ರಕ್ಕೆ ಹೋಟೆಲ್ ಉದ್ಯಮ ಎಲ್ಲರಿಗೂ ಭಾಗ್ಯದ ಬಾಗಿಲಾಗದು. ಒಬ್ಬರು ಕೋಳಿಫಾರ್ಮ್ ಮಾಡಬಹುದು. ಒಬ್ಬ ಶಿಕ್ಷಕನಾಗಬಹುದು. ಮತ್ತೂಬ ವೈದ್ಯನಾಗಬಹುದು. ವೈದ್ಯರಾಗಿ ಒಬ್ಬ ಹೃದಯ ತಜ್ಞರಾಗಬಹುದು. ಪೊಲೀಸ್ ಇಲಾಖೆಯಲ್ಲಿ ನಡುಕ ತರುವ ಅಧಿಕಾರಿಯಾಗಿ ಅಪರಾಧಿಗಳ ಪಾಲಿಗೆ ಬೆವರು ಉಕ್ಕಿಸಬಹುದು. ರಾಜಕಾರಣಿಗಳ ತಾಳಕ್ಕೆ ಕುಣಿದು ತನ್ನತನ ಕಳೆದುಕೊಳ್ಳಬಹುದು ಒಬ್ಬ ಅಪರಾಧಿ ಲೋಕದ ಡಾನ್ ಆಗಿ ವ್ಯವಸ್ಥೆಯನ್ನೇ ನಡುಗಿಸಬಹುದು. ಫುಟ್ ಪಾತಿನಲ್ಲಿ ಪಾನಿಪುರಿ ಮಾರಾಟ ಮಾಡಿ, ಪ್ರತಿತಿಂಗಳು ಲಕ್ಷಾಂತರ ರೂಪಾಯಿ ಗಳಿಸಬಹುದು. ಗುಜರಾತಿನ ಸೂರತ್‌ನಲ್ಲಿ ಪ್ರಪಂಚದ ಅತ್ಯದ್ಭುತ ವಜ್ರಗಳಿಗೆ ಅಲಂಕಾರದ ಒಪ್ಪ ಕೊಟ್ಟು ರಾತ್ರಿ ಮನೆಗೆ ಹೋಗುವಾಗ ಎರಡು ಹೊತ್ತಿಗಿನ ಊಟಕ್ಕಾಗಿನ ಅಕ್ಕಿಬೇಳೆ ಒಯ್ಯಬಹುದು. ಹಾಗಾದರೆ ಏನು ಈ ವೈರುಧ್ಯ? ಯಾಕೆ ಈ ಶಕ್ತಿ ಅಥವಾ ಮಿತಿ? ನಮ್ಮದೇ ಆದ ವ್ಯಕ್ತಿತ್ವ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. 90ರ ದಶಕದಲ್ಲಿ ದೇವ ಮಾನವ ಸ್ವಯಂ ಘೋಷಿತ ಚಂದ್ರಸ್ವಾಮಿ ಭಾರತದ ರಾಜಕೀಯದ ಮೇಲೆ ಬೀರಿದ್ದ ಪ್ರಭಾವ ನೆನಪಿಸಿಕೊಳ್ಳಿ. ಹರ್ಷದ್ ಮೆಹ್ತಾ ಶೇರುಪೇಟೆಯನ್ನೇ ತಲೆಕೆಳಗಾಗಿಸಿದ್ದನ್ನು ಗಮನಿಸಿ. ಅಡಗಿ ಕುಳಿತು ಭಾರತಕ್ಕೆ ತಲೆನೋವಾಗಿರುವ ದಾವೂದ್ ಇಬ್ರಾಹಿಂ ಗಮನಿಸಿ. ಶಾಂತಿ ದೂತನಾಗಿ ಭಾರತದ ರಾಷ್ಟ್ರಪತಿ ಪಟ್ಟವೇರಿದ ಅಬ್ದುಲ್ ಕಲಾಂ ಗಮನಿಸಿ. ಯಾವುದು ಯಾವುದರ ಅಳತೆ ಗೋಲು?
ಅನಂತ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Astrology 2024: 2024ರಲ್ಲಿ ಮಿಶ್ರ ಫಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?
ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?
ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…
ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?
ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.