ಉಡುಪಿಯ ಅನಂತೇಶ್ವರ
Team Udayavani, Dec 1, 2018, 12:27 PM IST
ಅನಂತೇಶ್ವರ ದೇವಾಲಯ, ಉಡುಪಿಯ ಅತ್ಯಂತ ಪ್ರಾಚೀನ ದೇವಸ್ಥಾನ. ಇಲ್ಲಿ ಪೂಜೆಗೊಳ್ಳುತ್ತಿರುವ ಮುಖ್ಯ ದೇವತೆ, ಅನಂತೇಶ್ವರನ ರೂಪದಲ್ಲಿರುವ ಶ್ರೀ ನಾರಾಯಣ. ಅನಂತೇಶ್ವರನು ಇಲ್ಲಿ ಲಿಂಗದ ರೂಪದಲ್ಲಿ ಪೂಜೆಗೊಳ್ಳುತ್ತಿರುವುದಾಗಿ ವಿಶೇಷ ಅಂಶ.
ಉಡುಪಿಯ ರಥಬೀದಿಯ ಮಧ್ಯೆ 2 ಪುರಾತನ ದೇವಾಲಯಗಳು ಇವೆ. ಅದರಲ್ಲಿ ಅನಂತೇಶ್ವರ ದೇವಾಲಯವೂ ಒಂದು. ಇದು ಉಡುಪಿಯ ಅತ್ಯಂತ ಪ್ರಾಚೀನ ದೇವಸ್ಥಾನ. ಇಲ್ಲಿ ಆರಾಧನೆಗೊಳ್ಳುತ್ತಿರುವ ಮುಖ್ಯ ದೇವತೆ ಅನಂತೇಶ್ವರನ ರೂಪದಲ್ಲಿರುವ ಶ್ರೀನಾರಾಯಣ. ಅನಂತ ಅಂದರೆ ಶೇಷ, ಅನಂತೇಶ್ವರಂದರೆ ಶೇಷ ಶಯನನಾದ ನಾರಾಯಣ.
ಅನಂತೇಶ್ವರನನ್ನು ಅನಂತಾಸನ, ಅನಂತ ಪದ್ಮನಾಭ ಎಂತಲೂ ಕರೆಯುತ್ತಿದ್ದರು. ಇಲ್ಲಿ ಅನಂತೇಶ್ವರನು ಲಿಂಗದ ರೂಪದಲ್ಲಿ ಪೂಜೆಗೊಳ್ಳುತ್ತಿರುವುದು ವಿಶೇಷ. ಇದಕ್ಕೆ ಒಂದು ಪ್ರಾಚೀನ ನಂಬಿಕೆಯಿದೆ. ಭಗವಂತ ಪರುಶುರಾಮನಾಗಿ ಅವತಾರ ಮಾಡಿದಾಗ ತನ್ನ ಅವತಾರ ಲೀಲೆಯ ಭಾಗವಾಗಿ ರುದ್ರ ದೇವರಲ್ಲಿ ಧನುರ್ವಿದ್ಯಾ ಶಿಕ್ಷಣ ಪಡೆಯುತ್ತಾನೆ. ಜಗತ್ತಿಗೆ ಗುರುಶಿಷ್ಯರ ಬಾಂಧ್ಯವವನ್ನು ಲೀಲಾ ಜಾಲವಾಗಿ ತೋರಿಸಿಕೊಡಲು ಲಿಂಗ ರೂಪದಲ್ಲಿ ಸನ್ನಿಹಿತನಾಗಿ¨ªಾನೆ. ಅಂತೆಯೇ ಈತ, ನಂಬಿ ಬಂದ ಭಕುತರಿಗೆ ಶೀಘ್ರ ವರಕೊಡುವ ದೇವತೆ ಎಂದೇ ಮನೆಮಾತು.
ದೇವಾಲಯದ ರಚನೆ
ಈ ದೇವಾಲಯ ಹಿಂದೆ ಪಡು ದೇವಾಲಯವೆಂದು ಕರೆಯಲ್ಪಟ್ಟಿತು. ಒಂದು ನಂಬಿಕೆಯ ಪ್ರಕಾರ, ಪಾಂಡವರು ತಮ್ಮ ವನವಾಸದ ಅವಧಿಯಲ್ಲಿ ಈ ದೇವಾಲಯ ನಿರ್ಮಿಸಿದರೆಂದು ಹೇಳಲಾಗುತ್ತದೆ.ಅನಂತೇಶ್ವರ ಉಡುಪಿಯ ಪುರ ಜನರಿಗೆ ಪ್ರೀತಿಯ ಅಜ್ಜನಾಗಿ ಕಾಣಿಸಿಕೊಂಡರೆ, ಶಿವಳ್ಳಿ ಜನಾಂಗದ ಗ್ರಾಮದೇವತೆಯಾಗಿ ಗುರುತಿಸಿಕೊಂಡದೈವವೂ ಹೌದು.
ಈ ದೇವಾಲಯವು ಅತಿ ವಿಶಾಲವಾಗಿ ಗಜಪೃಷ್ಠಾಕಾರದ ಅಥವಾ ಇಂಗ್ಲಿಷಿನ ಖೀ ಅಕ್ಷರದ ಮಾದರಿಯಲ್ಲಿದೆ. ದೇವಾಲಯದೊಳಗೆ ಪ್ರವೇಶಿಸುತ್ತಿದ್ದಂತೆ ಸುಂದರವಾದ ಹಳೆಯ ವಾಸ್ತುಕಲೆಯ ಭವ್ಯತೆಯು ಕಾಣಸಿಗುತ್ತದೆ. ಎರಡು ಅಂತಸ್ತಿನ ದೊಡ್ಡ ಗರ್ಭ ಗೃಹ. ಅದಕ್ಕೆ ಅಂಟಿಕೊಂಡೇ ಮುಖ ಮಂಟಪ, ಇದರ ಪಕ್ಕದಲ್ಲಿ ಮಧ್ವಾಚಾರ್ಯರು ತಮ್ಮ ಶಿಷ್ಯರಿಗೆ ಪಾಠ ಹೇಳುತ್ತಿದ್ದರು ಎನ್ನಲಾದ ಸನ್ನಿಧಾನದ ಶೀಲಾ ಫಲಕ. ಅದರೊಳಗೆ ಪುರಾತನ ಮಾದರಿಯ ಒಂದು ಸುತ್ತಿನ ಪೌಳಿ. ಗರ್ಭ ಗುಡಿಯಿಂದ ಹೊರ ಬಂದರೆ ಆನೆಕಲ್ಲಿನ ಮಾದರಿಯ ಮೆಟ್ಟುಲುಗಳು,ಹೊರಗೆ ಮತ್ತೆ ಅತಿ ವಿಶಾಲವಾದ ಪ್ರದಕ್ಷಿಣೆ ಬೀದಿ.
ಶ್ರೀ ಅನಂತೇಶ್ವರ, ತ್ತೈಲೋಕ್ಯ ಗುರು ಶ್ರೀ ಮಧ್ವಾಚಾರ್ಯರ ಕುಲದೇವತೆ, ಮಧ್ವಾಚಾರ್ಯರ ಮಾತಾ -ಪಿತೃಗಳಾದ ಮದ್ಧಿಗೆಯ ಭಟ್ಟರು 12 ವರುಷಗಳ ಕಾಲ ಸೇವೆ ಮಾಡಿ ವಾಯುದೇವರನ್ನು ಮಧ್ವಾಚಾರ್ಯರ ರೂಪದಲ್ಲಿ ಮಗುವಾಗಿ ಪಡೆದಿದ್ದರು. ಈ ದೇವಸ್ಥಾನವು ಮದ್ವಾಚಾರ್ಯರ ಕಾಲದಲ್ಲಿ ಅತಿ ಮಹತ್ವ ಪಡೆಯಿತು. ಅನಂತೇಶ್ವರನ ಅನುಗ್ರಹದಿಂದ ಹುಟ್ಟಿದ ಶ್ರೀ ಮಧ್ವ ಗುರುಗಳು ಅನಂತೇಶ್ವರನ ಸನ್ನಿಧಿಯೆಲ್ಲೇ ಹೆಚ್ಚು ಸಮಯ ಕಳೆದು ಪಾಠ ಪ್ರವಚನ ನಡೆಸುತ್ತಿದ್ದರಂತೆ.
ಮಧ್ವಾಚಾರ್ಯರು ಅದೃಶ್ಯವಾದ ಸ್ಥಳ ಇದೇ
ಮಧ್ವಾಚಾರ್ಯರು ಸುಮಾರು 800 ವರ್ಷಗಳ ಹಿಂದೆ ಉಡುಪಿ ಬಳಿಯ ಪಾಜಕ ಕ್ಷೇತ್ರದಲ್ಲಿ ಜನಿಸಿ ಹರಿ ಸರ್ವೋತ್ತಮತ್ವ ಮತ್ತು ವಾಯು ಜೀವೋತ್ತಮತ್ವ ಎಂಬ ತತ್ವವನ್ನು ಪ್ರತಿಪಾದಿಸಿದರು. ಭಗವಂತನ ಪಾರಮ್ಯದ ಕುರಿತಾಗಿ ಒಟ್ಟು 37 ಸದ್ ಗ್ರಂಥಗಳನ್ನು ಜಗತ್ತಿಗೆ ನೀಡಿದರು. ಆ ಗ್ರಂಥಗಳೇ ಸರ್ವಮೂಲಗ್ರಂಥಗಳೆಂದು ವಿಶ್ವಮಾನ್ಯವಾದವು.
ಮಾಘ ಮಾಸದ ಕೃಷ್ಣ ಪಕ್ಷದ ನವಮಿಯಂದು ಮಧ್ವಾಚಾರ್ಯರು ಅನಂತೇಶ್ವರ ದೇವಳದ ಎಡಪಕ್ಕದಲ್ಲಿ ಶಿಷ್ಯರಿಗೆ ಐತರೇಯ ಉಪನಿಷತ್ ಪಾಠ ಉಪದೇಶಿಸಿದ ನಂತರ ಅದೇ ಪೀಠದಲ್ಲಿ ಕುಳಿತು, ದೇವತೆಗಳು ಸುರಿಸಿದ ಪುಷ್ಪರಾಶಿಯ ಮಧ್ಯೆ ಅದೃಶ್ಯರಾದರಂತೆ.
ಒಟ್ಟು 79 ವರ್ಷಗಳ ಕಾಲ ಆದರ್ಶವಾದ ದಿವ್ಯಮಯ ಜೀವನ ನಡೆಸಿ ಅದೃಷ್ಯ ರೂಪದಿಂದ 4418 ರ ಪಿಂಗಳ ನಾಮ ಸಂವತ್ಸರದ ಮಾಘ ಮಾಸ ಶುದ್ಧ ನವಮಿ ತಿಥಿಯಂದು (ಕ್ರಿ ಶಕ :1317 ) ಮಧ್ವರು, ಬದರಿಗೆ ತೆರಳಿದ ಶುಭ ದಿನ. ಅವರು ಅದೃಶ್ಶ$Â ವಾದ ಸ್ಥಳ ಈಗಲೂ ಕೂಡ ಉಡುಪಿಯ ಈ ಅನಂತೇಶ್ವರ ದೇವಳದ ಒಳ ಆವರಣದಲ್ಲಿದೆ. ಈ ಶಿಲೆಗೆ ಈಗಲೂ ಪೂಜೆ ನಡೆಯುತ್ತದೆ.
ಮನೋಹರ ಜೋಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.