ಅನಿರೀಕ್ಷಿತದ ಹಿಂದೊಂದು ನಿರೀಕ್ಷಿತ
Team Udayavani, Jan 20, 2018, 11:23 AM IST
“ಕ್ರೀಡಾಕೂಟ ಆರಂಭಕ್ಕೂ ಮೊದಲು ಪದಕ ಗೆಲ್ಲುವೆ ಅನ್ನುವ ಯಾವುದೇ ಭರವಸೆ ನನಗೇ ಇರಲಿಲ್ಲ. ಒಂದು ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ. ಸ್ಪರ್ಧೆಯನ್ನು ಪೂರ್ತಿಗೊಳಿಸಬೇಕು ಅನ್ನುವುದು ಮಾತ್ರ ನನ್ನ ಗುರಿಯಾಗಿತ್ತು. ಆದರೆ, ಪದಕ ಬಂದಿದೆ. ಈಗಲೂ ಪದಕ ಗೆದ್ದಿರುವುದನ್ನು ನಂಬಲಾಗುತ್ತಿಲ್ಲ’
ಇದು, ಟರ್ಕಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಕೀಯಿಂಗ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದ ಮನಾಲಿ ಸುಂದರಿ ಅಂಚಲ್ ಠಾಕೂರ್ ಮಾತು. ಹೌದು, ಅಂಚಲ್ ಕ್ರೀಡಾಕೂಟಕ್ಕೂ ಮುನ್ನ ಪದಕ ಗೆಲ್ಲುವ ಯಾವುದೇ ಭರವಸೆಯನ್ನು ಇಟ್ಟುಕೊಂಡವರಲ್ಲ. ಯಾಕೆಂದರೆ ಅಲ್ಲಿ ಆಸ್ಟ್ರೇಲಿಯಾ, ಸ್ವಿಜರ್ಲೆಂಡ್, ಕೆನಡಾ, ಫ್ರಾನ್ಸ್, ಇಟಲಿ ದೇಶದ ಕ್ರೀಡಾಪಟುಗಳದ್ದೇ ಅಬ್ಬರ. ಇಂತಹ ಕಠಿಣ ಎದುರಾಳಿಗಳ ಎದುರು ಸ್ಪರ್ಧಿಸಿ ಭಾರತಕ್ಕೆ ಕಂಚಿನ ಪದಕ ತಂದಿರುವುದು ಸಾಮಾನ್ಯ ಸಂಗತಿಯಲ್ಲ.
ತಂದೆಯೇ ಮೊದಲ ಗುರು
ಅಂಚಲ್‌ಗೆ ಸ್ಕೀಯಿಂಗ್ ರಕ್ತಗತವಾಗಿ ಬಂದಿರುವ ಕ್ರೀಡೆ. ಈಕೆಯ ತಂದೆ ರೋಷನ್ ಲಾಲ್ ಠಾಕೂರ್, ಮಾಜಿ ರಾಷ್ಟ್ರೀಯ ಸ್ಕೀಯಿಂಗ್ ಆಟಗಾರ. ಈ ಹಿನ್ನೆಲೆ ಸಹಜವಾಗಿಯೇ ಅಂಚಲ್ ಅವರನ್ನು ಸ್ಕೀಯಿಂಗ್ ಆಟದತ್ತ ಸೆಳೆದಿದೆ. ನಿವೃತ್ತಿಯ ನಂತರ ರೋಷನ್ ಲಾಲ್ ಯುವ ಪ್ರತಿಭೆಗಳಿಗೆ ತರಬೇತಿ ನೀಡಲು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಬಾಲಕಿ ಅಂಚಲ್ ಕೂಡ ತಂದೆಯ ಜತೆ ತೆರಳುತ್ತಿದ್ದಳು. ಹೀಗೆ ಬಾಲಕಿಯಾಗಿದ್ದಾಗಲೇ ಸ್ಕೀಯಿಂಗ್ ನೋಡುತ್ತ ಬೆಳೆದ ಈಕೆ ನಂತರ ತಾನೂ ಅಂಗಳಕ್ಕೆ ಇಳಿಯಲು ನಿರ್ಧರಿಸಿದಳು. ಆಗ, ಮೊದಲ ಮಾರ್ಗದರ್ಶನ ಸಿಕ್ಕದ್ದೇ ತಂದೆಯಿಂದ.
ಇಟಲಿ, ಆಸ್ಟ್ರೇಲಿಯಾದಲ್ಲಿ ತರಬೇತಿ
15ರ ಬಾಲಕಿಯಾಗಿದ್ದಾಗ 2012ರಲ್ಲಿ ನಡೆದ ಚಳಿಗಾಲದ ಯೂತ್ ಒಲಿಂಪಿಕ್ಸ್‌ನಲ್ಲಿ ಅಂಚಲ್ ಪಾಲ್ಗೊಂಡಿದ್ದರು. ಪದಕ ಗೆಲ್ಲಲು ಸಾಧ್ಯವಾಗದಿದ್ದರೂ ಗಮನಾರ್ಹ ಪ್ರದರ್ಶನ ನೀಡಿದ್ದರು. ಇದನ್ನು ಗಮನಿಸಿದ ತಂದೆ ರೋಷನ್ ಠಾಕೂರ್ ಕಷ್ಟದ ಸ್ಥಿತಿಯಲ್ಲಿಯೂ ಅಂಚಲ್ ಅವರನ್ನು ಆಸ್ಟ್ರೇಲಿಯಾ ಮತ್ತು ಇಟಲಿಗೆ ಕಳುಹಿಸಿ ತರಬೇತಿ ಕೊಡಿಸಿದರು. ಇದುವೇ ಅಂಚಲ್ ಜೀವನಕ್ಕೆ ಸಿಕ್ಕ ಟರ್ನಿಂಗ್ ಪಾಯಿಂಟ್.
ದುಬಾರಿ ಕ್ರೀಡೆ
ಇದು ಚಳಿಗಾಲದಲ್ಲಿ ಮಾತ್ರ ನಡೆಯುವ ಕ್ರೀಡೆ. ಪಾದಗಳಿಗೆ ಸ್ಕೀಗಳನ್ನು ಕಟ್ಟಿಕೊಂಡು ಹಿಮದಲ್ಲಿ ಜಾರುತ್ತಾ ಹೋಗಬೇಕು. ಎರಡೂ ಕೈಯಲ್ಲಿ ಕೋಲುಗಳನ್ನು ಹಿಡಿದು ಅದನ್ನೇ ಹಿಡಿತದ ಸಾಧನವಾಗಿ ಬಳಸಿಕೊಳ್ಳಬೇಕು. ನೋಡಲು ಈ ಕ್ರೀಡೆ ಸುಲಭ ಅನ್ನಿಸುತ್ತದೆ. ಆದರೆ, ಇದು ತುಂಬಾ ಕಠಿಣ ಮತ್ತು ದುಬಾರಿ ಕ್ರೀಡೆಯೂ ಹೌದು. ಒಂದು ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಅಂದರೆ, ಒಬ್ಬ ಸ್ಪರ್ಧಿಗೆ ಕನಿಷ್ಠ ಅಂದರೂ 5 ರಿಂದ 10 ಲಕ್ಷ ರೂ. ಖರ್ಚು ಬೀಳುತ್ತದೆ. ಹೀಗಾಗಿ ಕ್ರೀಡಾಪಟುಗಳು ಸರ್ಕಾರದ ನೆರವನ್ನು ಬಯಸುತ್ತಿರುತ್ತಾರೆ.
ಸ್ಕೀಯಿಂಗ್ ಸ್ಪರ್ಧಿಗಳಿಗೆ ಸ್ಫೂರ್ತಿ
ಇದು ಹಿಮದಲ್ಲಿ ಮಾತ್ರ ನಡೆಯುವ ಕ್ರೀಡೆ. ಹೀಗಾಗಿ ಸಹಜವಾಗಿ ಭಾರತದಲ್ಲಿ ಯಾವ ಯಾವ ರಾಜ್ಯಗಳಲ್ಲಿ ಹಿಮ ಇದೆಯೋ ಅಲ್ಲಿ ಮಾತ್ರ ಸ್ಪರ್ಧಿಗಳು ಕಂಡುಬರುತ್ತಾರೆ. ಹೆಚ್ಚಿನದಾಗಿ ಜಮ್ಮು ಕಾಶ್ಮೀರ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಸ್ಕೀಯಿಂಗ್ ಸ್ಪರ್ಧಿಗಳು ಇದ್ದಾರೆ. ಈ ಕ್ರೀಡೆಯಲ್ಲಿ ಇಲ್ಲಿಯವರೆಗೂ ಒಂದೂ ಅಂತಾರಾಷ್ಟ್ರೀಯ ಪದಕ ಗೆಲ್ಲದ ಭಾರತಕ್ಕೆ ಅಂಚಲ್ ಮೊದಲ ಪದಕ ತಂದಿದ್ದಾರೆ. ಇದು ಇತರೇ ಸ್ಪರ್ಧಿಗಳಿಗೆ ಸ್ಫೂರ್ತಿಯಾಗಿದೆ. ಯುವ ಕ್ರೀಡಾಪಟುಗಳನ್ನು ಸ್ಕೀಯಿಂಗ್ ಅತ್ತ ಸೆಳೆಯುತ್ತಿದೆ.
2022ರ ಚಳಿಗಾರದ ಒಲಿಂಪಿಕ್ಸ್ ಮೇಲೆ ಕಣ್ಣು
ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿರುವ ಅಂಚಲ್‌ರ ಮುಂದಿನ ಗುರಿ 2022ರಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು. ಹೀಗಾಗಿ ತಾನು ಇನ್ನಷ್ಟು ಕಠಿಣ ಅಭ್ಯಾಸ ನಡೆಸುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.