ಸೀತೆಯ ಮೂಗುತಿ ಬಿದ್ದಿದ್ದು ಎಲ್ಲಿ?
Team Udayavani, Aug 31, 2019, 5:00 AM IST
ಅದು ಶ್ರೀರಾಮನ ವನವಾಸದ ಸಂದರ್ಭ. ಕಾವೇರಿ ನದಿಯ ತೀರದಲ್ಲಿ ಸೀತೆ ಸ್ನಾನ ಮಾಡುತ್ತಿರುವಾಗ, ಆಕೆಯ ಮೂಗುತಿ ನೀರೊಳಗೆ ಬೀಳುತ್ತದೆ. ಶ್ರೀರಾಮನಿಗೆ ಈ ವಿಚಾರ ತಿಳಿದು, ಹನುಮಂತನಿಗೆ ಮೂಗುತಿ ಹುಡುಕಿಕೊಡುವಂತೆ ಮನವಿ ಮಾಡುತ್ತಾನೆ. ಆಂಜನೇಯ ತನ್ನ ಬಾಲವನ್ನು ನೀರಿನಲ್ಲಿ ರೊಂಯ್ಯನೆ ತಿರುಗಿಸಿದಾಗ, ಮೂಗುತಿ ಕಾಣಿಸಿಕೊಳ್ಳುತ್ತದೆ. ಅದನ್ನು ಸೀತೆಗೆ ಒಪ್ಪಿಸುತ್ತಾನೆ. ಮೂಗುತಿಯನ್ನು ಎತ್ತಿಕೊಟ್ಟಿದ್ದಕ್ಕಾಗಿ, ಹನುಮಂತನಿಗೆ “ಮುತ್ತೆತ್ತರಾಯ’ ಎಂಬ ಹೆಸರು ಬರುತ್ತದೆ. ಈ ಸ್ಥಳವೇ ಮುತ್ತತ್ತಿ ಆಯಿತು ಎಂಬುದು ಪ್ರತೀತಿ. ಮಂಡ್ಯ ಜಿಲ್ಲೆಯ ಮುತ್ತತ್ತಿಯಲ್ಲಿ ಈಗಲೂ ಆಂಜನೇಯ ದೇಗುಲವಿದ್ದು, ಹನುಮಂತ ಬಾಲ ತಿರುಗಿಸಿದ “ತಿರುಗಣೆ ಮಡು’ ಪ್ರಮುಖ ಆಕರ್ಷಣೆ.
-ಪ್ರವೀಣ ಕೊಣನೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.