ಸಪ್ತ ದೇಗುಲಗಳ ಬೀಡು ಅರಕಲಗೂಡು
Team Udayavani, Jun 10, 2017, 11:32 AM IST
ಅರಕಲಗೂಡಿನಿಂದ ದಕ್ಷಿಣಕ್ಕೆ 10 ಕಿ.ಮೀ. ಅಂತರದ ಕಾವೇರಿ ಎಡದಂಡೆಯಲ್ಲಿ ಒಂದು ಪುಣ್ಯ ಕ್ಷೇತ್ರವಿದೆ. ಇಲ್ಲಿ ಪ್ರಸನ್ನ ರಾಮೇಶ್ವರ, ಸುಬ್ರಹ್ಮಣ್ಯೇಶ್ವರ, ಪಟ್ಟಾಭಿರಾಮ, ಅಗಸ್ತ್ಯ, ಆಂಜನೇಯ, ಲಕ್ಷ್ಮೀ ನರಸಿಂಹ ಮತ್ತು ದುರ್ಗಾರಾಮೇಶ್ವರಿ… ಹೀಗೆ ಏಳು ಭವ್ಯ ದೇವಾಲಯಗಳಿವೆ. ಹರಿಹರ ಕ್ಷೇತ್ರ ಎಂದೂ ಕರೆಯಲಾಗುವ ಈ ಕ್ಷೇತ್ರಕ್ಕೆ ಆಚಾರ್ಯತ್ರಯರಾದ ಆದಿಶಂಕರರು ಹಾಗೂ ರಾಮಾನುಜಾಚಾರ್ಯರು ಭೇಟಿ ನೀಡಿದ್ದರಂತೆ. ಇಲ್ಲಿರುವ ಪ್ರಸನ್ನ ರಾಮೇಶ್ವರ ದೇವಾಲಯ ಪ್ರಧಾನವಾದದ್ದು. ವಿಜಯನಗರದ ಅರಸರ ಹಾಗೂ ಪಾಳೇಗಾರರ ಕಾಲದಲ್ಲಿ ಈ ದೇವಾಲಯ ಜೀಣೊìàದ್ದಾರವಾಗಿದೆ ಎಂಬ ಉಲ್ಲೇಖಗಳಿವೆ. ಪ್ರಸನ್ನ ರಾಮೇಶ್ವರ ಕೃತಯುಗ, ತ್ರೇತಾಯುಗ, ದ್ವಾಪರಯುಗದಲ್ಲಿ ಪೂಜಿತ ನಾಗಿದ್ದನೆಂದು ಪುರಾಣಗಳಲ್ಲಿ ಉÇÉೇಖವಿದೆ.
ಕೃತಯುಗದಲ್ಲಿ ಸಂವರ್ತಿಕೇಶ್ವರನಾಗಿ. ದ್ವಾಪರದಲ್ಲಿ ವಹಿ°ಕೇಶ್ವರನಾಗಿ, ತ್ರೇತಾಯುಗದಲ್ಲಿ ವಾಸುಕೇಶ್ವರನಾಗಿ ಈಗ ಪ್ರಸನ್ನ ರಾಮೇಶ್ವರನಾಗಿ ದರ್ಶನ ನೀಡುತ್ತಿದ್ದಾನೆ ಎನ್ನಲಾಗುತ್ತದೆ. ಸ್ಥಳ ಪುರಾಣದಂತೆ ಶ್ರೀರಾಮಚಂದ್ರ ಸೀತಾನ್ವೇಷಣೆಗೆ ಬಂದಾಗ, ಇಲ್ಲಿ ಶಿವನನ್ನು ಪೂಜಿಸಿದನಂತೆ. ತ್ರೇತಾಯುಗ ಪುರುಷನಿಂದ ಪ್ರತಿಷ್ಠಾಪಿತವಾಗಿ, ಪೂಜಿಸಲ್ಪಟ್ಟ ಈ ಲಿಂಗ ರಾಮೇಶ್ವರ ಎಂದು ಖ್ಯಾತವಾಗಿದೆ. ಪುರಾತನವಾದ ಪ್ರಸನ್ನ ರಾಮೇಶ್ವರ ದೇವಾಲಯ ನಕ್ಷತ್ರಾಕಾರದ ಜಗುಲಿಯ ಮೇಲೆ ಇತ್ತೆಂದು ಹೇಳುತ್ತಾರಾದರೂ ಈಗ ಅದು ಕಾಣುವುದಿಲ್ಲ. ದೇವಾಲಯಕ್ಕೆ ಭವ್ಯವಾದ ರಾಜಗೋಪುರವಿದೆ. ಇದು ವಿಜಯನಗರ ಶೈಲಿಯಲ್ಲಿದೆ. ದ್ವಾರ ಪ್ರವೇಶಿಸಿದರೆ ವಿಶಾಲವಾದ ಪ್ರಾಕಾರವಿದೆ. ದೇವಾಲಯದ ಒಳಗೆ ಗರ್ಭಗೃಹದಲ್ಲಿ ಸುಂದರವಾದ ರಾಮೇಶ್ವರನನ್ನು ಪ್ರತಿಷ್ಠಾಪಿಸಲಾಗಿದೆ.
ಇಲ್ಲಿರುವ ಇನ್ನೊಂದು ದೇವಸ್ಥಾನವೆಂದರೆ ಪಟ್ಟಾಭಿರಾಮಚಂದ್ರ ದೇವಾಲಯ. ಇದು ದ್ರಾವಿಡ ಶೈಲಿಯಲ್ಲಿದೆ. ಗರ್ಭಗೃಹದಲ್ಲಿ, ಕುಳಿತಿರುವ ಶ್ರೀರಾಮಚಂದ್ರನ ತೊಡೆಯ ಮೇಲೆ ಸೀತಾ ಮಾತೆ ಇರುವುದು ವೈಶಿಷ್ಟ್ಯ. ಇಲ್ಲಿರುವ ಮೂಲ ವಿಗ್ರಹವನ್ನು ಸೌಭರಿ ಮುನಿಗಳು ಪ್ರತಿಷ್ಠಾಪಿಸಿದರಂತೆ. ಪ್ರತಿವರ್ಷ ವೈಶಾಖ ಶುಕ್ಲದಲ್ಲಿ ಇಲ್ಲಿ ರಥೋತ್ಸವ ನಡೆಯುತ್ತದೆ.ಪಟ್ಟಾಭಿರಾಮ ದೇವಾಲಯದ ಎದುರು ಲಕ್ಷ್ಮೀನರಸಿಂಹ ದೇವಾಲಯವಿದೆ. ಇದನ್ನು ಚಿಕ್ಕದೇವರಾಜ ಒಡೆಯರು ಕಟ್ಟಿಸಿದರು ಎಂಬ ಬಗ್ಗೆ ದಾಖಲೆಗಳಿವೆ. ಇಲ್ಲಿರುವ ಇನ್ನೊಂದು ಪ್ರಮುಖ ದೇವಾಲಯ ದುರ್ಗಾರಾಮೇಶ್ವರಿಯದು. ಈ ದೇವಿ ವಿಗ್ರಹವನ್ನು ಆದಿ ಶಂಕರಾಚಾರ್ಯರು ಪ್ರತಿಷ್ಠಾಪಿಸಿದರೆಂಬುದು ಪ್ರತೀತಿ. ಅಗಸ್ತ್ಯ ಮಹಾಮುನಿಗಳು ಸ್ಥಾಪಿಸಿದ ಅಗಸೆöàಶ್ವರ ದೇವಾಲಯ ರಮಣೀಯವಾಗಿದೆ. ಇನ್ನು ದ್ರಾವಿಡ ಶೈಲಿಯ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ಏಳು ಹೆಡೆಗಳುಳ್ಳ ಸುಂದರ ನಾಗವಿಗ್ರಹವಿದೆ. ಮಾರ್ಗಶಿರ ಶುದ್ಧ ಶಷ್ಠಿಯಂದು ರಾಮನಾಥಪುರದಲ್ಲಿ ದನಗಳ ಜಾತ್ರೆ ನಡೆಯುತ್ತದೆ.
ರಾಕ್ಷಸರ ಗುರು ಶುಕ್ರಾಚಾರ್ಯರು ಸತ್ತವರನ್ನು ಬದುಕಿಸುವ ಸಂಜೀವಿನಿ ಮಂತ್ರದ ಸಿದ್ಧಿಗಾಗಿ ಇಲ್ಲಿ ತಪಸ್ಸನ್ನು ಆಚರಿಸಿದರೆಂದೂ ಹೇಳಲಾಗುತ್ತದೆ. ಮೂರು ಲೋಕಗಳಿಗೂ ಹೋಗಿ ಬಂದ ಭೃಗು ಮುನಿಗಳಿಂದ ಶಾಪಕ್ಕೆ ತುತ್ತಾದ ದೇವನಿಗೆ ಇಲ್ಲಿ ಶಾಪವಿಮೋಚನೆ ಆಯಿತೆಂದೂ ಹೇಳಲಾಗುತ್ತದೆ. ಆ ನೆನಪಿಗಾಗಿ ಇÇÉೊಂದು ಪುಷ್ಕರಣಿ ಇದ್ದು, ಇದನ್ನು ವಹಿ° ಪುಷ್ಕರಿಣಿ ಎಂದು ಕರೆಯುತ್ತಾರೆ. ಗೋಗರ್ಭ, ಊರ್ವಶಿ ಶಿಲೆಗಳೂ ಇಲ್ಲಿವೆ. ಕಾವೇರಿ ನದಿಯ ನಡುವೆ ಗಾಯತ್ರಿಶಿಲೆ ಇದೆ. ಇಲ್ಲಿ ಒಂದು ಗಾಯತ್ರಿ ಮಂತ್ರ ಜಪ ಮಾಡಿದರೆ ಹನ್ನೆರೆಡು ಸಾವಿರ ಗಾಯತ್ರಿ ಜಪ ಮಾಡಿದ ಪುಣ್ಯ ಬರುತ್ತದೆ ಎಂಬ ನಂಬಿಕೆ ಇದೆ. ಅರಕಲಕೂಡಿನಿಂದ ಸುಮಾರು 20 ಕಿ.ಮೀ ಅಂತರದಲ್ಲಿರುವ ರಾಮನಾಥಪುರಕ್ಕೆ ಸಾಕಷ್ಟು ಬಸ್ ಸೌಲಭ್ಯವಿದೆ.
ಆಶಾ ಎಸ್. ಕುಲಕರ್ಣಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.