ಅಣ್ಣಾವ್ರೇ ನನ್ನೊಳಗಿದ್ದಾರೆ, ಏನು ಮಾಡಲಿ?


Team Udayavani, May 19, 2018, 12:58 PM IST

2563.jpg

ನಾನು ಮಾಡುವ ಪಾತ್ರಕ್ಕೂ, ಬದುಕಿಗೂ ಯಾವ ಅಂತರವೂ ಇಲ್ಲ..ಹಾಗಾಗಿ ಅಶೋಕ್‌ ಬಸ್ತಿ ಕಾಣೆ ಆಗಿದ್ದಾನೆ…

“ನೋಡಪ್ಪಾ, ನೀನು ಮಾಮೂಲಿ ಪಾತ್ರಗಳನ್ನು ಮಾಡ ಬೇಡ. ಅದನ್ನು ಮಾಡೋಕೆ ತುಂಬಾ ಜನ ಇದ್ದಾರೆ. ನೀನು ರಾಜ್‌ಕುಮಾರ್‌ ಅವರನ್ನು ಹೋಲುತ್ತೀಯ. ಹಾಗಾಗಿ, ಅವರ ಪಾತ್ರಗಳನ್ನೇ ಅನುಸರಿಸು. ಇದು ಹೆತ್ತವರು ಕೊಟ್ಟಪುಣ್ಯ ಅಂತ ತಿಳ್ಕೊ. ಎಷ್ಟೋ ಜನ ರಾಜಕುಮಾರರ ರೀತಿ ಇರಬೇಕು ಅಂದುಕೊಳ್ಳುತ್ತಾರೆ. ಅವರಿಗೆ ಈ ಭಾಗ್ಯ ಇಲ್ಲ. ನಿನಗೆ ಮಾತ್ರ ಒಲಿದಿದೆ – ಹೀಗೆ ಹೇಳಿ ನಮ್ಮ ಗುರುಗಳು ಬಣ್ಣ ಹಚ್ಚಿಸಿದರು. ಆವತ್ತಿಂದ ಇವತ್ತಿನ ತನಕ ರಾಜುRಮಾರರನ್ನು ಅನುಕರಿ ಸುತ್ತಾ, ಅವರು ಮಾಡಿದ ಪಾತ್ರಗಳನ್ನು ಆವಾಹಿಸಿಕೊಳ್ಳುತ್ತಾ,  ಹಾವ ಭಾವ, ನಡೆ, ನುಡಿ ಎಲ್ಲದರಲ್ಲೂ ರಾಜಕುಮಾರರೇ ಆಗಿ ದ್ದೀನಿ.  ಜನ, “ಓ ರಾಜ್‌ಕುಮಾರ್‌ ನೋಡ್ರಪ್ಪಾ’ ಅಂಥ ಚಪ್ಪಾಳೆ ತಟ್ಟುತ್ತಾರೆ. ಅಂಥ ಸಂದರ್ಭದಲ್ಲಿ ತುಂಬಾ ಖುಷಿಯಾಗುತ್ತೆ. ಮನೆಯಲ್ಲಿ ದೇವರಿಗಿಂತ ಹೆಚ್ಚು ಪೂಜಿಸುವುದು ಅಣ್ಣಾವ್ರನ್ನ.  ಹೀಗಾಗಿ ನಾನು ರಾಜಕುಮಾರರ ನೆರಳಾಗಿದ್ದೇನೆ.

ಹೆಸರು, ಹಣ ಎಲ್ಲವೂ ಸಂದಿದ್ದು ಅಣ್ಣ ನಿಂದಲೇ.  ಹೀಗೆ ನನ್ನ ಸಾರ್ವಜನಿಕ, ಖಾಸಗಿ ಬದುಕಿನ ಪೂರ್ತಿ ಹಾಸು ಹೊಕ್ಕಾಗಿರುವು ದರಿಂದ ಎಷ್ಟೋ ಸಲ ಅನಿಸಿದ್ದು ಇದೆ. ನನ್ನೊಳಗಿರುವ ನಿಜವಾದ ನಟ ಅಶೋಕ್‌ ಬಸ್ತಿ ಎಲ್ಲಿ ಹೋದ ಅಂತ. ಅವನಿಗಾಗಿ ತಡಕಾಡಿದ್ದೇನೆ. ಸಿಗದೇ ಇದ್ದಾಗ. ರಾಜಕುಮಾರರನ್ನು ಇಷ್ಟೊಂದು ಅನುಕರಣೆ ಮಾಡಬೇಕಾ ಅಂತ ಅನಿಸಿದ್ದೂ ಉಂಟು. ಆದರೆ ಬದುಕಲ್ಲಿ ಅವರ ಕೈ ಹಿಡಿದುಕೊಂಡು ಬಹಳ ದೂರ ಬಂದು ಬಿಟ್ಟಿದ್ದೇನೆ. ಏನು ಮಾಡುವುದು? 

ಉತ್ತರ ಹುಡುಕಲೇ ಬೇಕು ಅಂತ ನನ್ನದೇ ಸ್ವಂತಿಕೆಯಲ್ಲಿ ಪಾತ್ರ ಮಾಡಲು ಮುಂದಾದೆ. ಉತ್ತರ ಕರ್ನಾಟಕದ ಭಾಷೆಯನ್ನು ಬಳಸಿದೆ. ಆದರೆ ನೋಡುವ ಜನ ಮತ್ತೆ ನನ್ನಲ್ಲಿ ರಾಜುRಮಾರರನ್ನೇ ಹುಡುಕಿದರು. 

“ಬೇಡ ರೀ. ನೀವು ಏನೇ ಮಾಡಿದರೂ ಅಶೋಕ ಬಸ್ತಿ ಕಾಣಾ¤ ಇಲ್ಲ. ರಾಜುRಮಾರ್‌ ಆಗೇ ಕಾಣಿ¤àರಿ’ ಅಂದರು.  “ಇಲ್ಲ, ನಿಮಗೆ ಅಂಥ ಭಾವನೆ ಬರಬಾರದು ಅಂತಲೇ ನನ್ನ ಪಾತ್ರ ಉತ್ತರ ಕರ್ನಾಟಕದ ಭಾಷೆ ಮಾತನಾಡುತ್ತ ಇರೋದು ಅಂದರ.  “ಇಲ್ಲ ನೀವು ಏನೇ ಮಾಡಿದರೂ ರಾಜಕುಮಾರ್‌ ರೀತಿನೇ ಕಾಣಿ¤àರಿ’ ಅಂದು ಬಿಟ್ಟರು.

ಹಾಗಂತ, ರಾಜ್‌ಕುಮಾರರಿಂದ, ಅವರ ಪಾತ್ರಗಳ ಅನುಕರಣೆಯಿಂದ ನನಗೆ ತೊಂದರೆ ಆಗಿಲ್ಲ. ಬದಲಾಗಿ, ರಾಜಕುಮಾರ್‌ ಪಾತ್ರಗಳಿಂದಲೇ ಇಡೀ ಜಗತ್ತು ನನ್ನನ್ನು ಗುರುತಿಸುವಂತೆ ಮಾಡಿದೆ. ಆದರೆ ನನ್ನೊ ಳಗಿರುವ ಒಬ್ಬ ನಟ ಕಾಣೆಯಾಗಿಬಿಟ್ಟನಲ್ಲ ಅನ್ನೋ ಬೇಸರ ಹಾಗೇ ಇದೆ. 
 ರಾಜ್‌ಕುಮಾರರು ರಂಗದ ಮೇಲೆ, ರಂಗದ ಹೊರಗೆ ಇಂಚಿಂಚೂ ನನ್ನೊಳಗೆ ಸೇರಿಬಿಟ್ಟಿದ್ದಾರೆ.  

ಇವರು ನನ್ನ ಖಾಸಗಿ ಬದುಕಿನ ಮೇಲೆ ಎಷ್ಟು ಪ್ರಭಾವ ಬೀರಿದ್ದಾರೆ ಎಂದರೆ, ಅಲ್ಲೂ ಕೂಡ ನಾನು ರಾಜುRಮಾರರ ಶಾಂತಿ ಮಂತ್ರ ಪಠಿಸುತ್ತಿರುತ್ತೇನೆ. ಸರಳ ಜೀವನ, ಉಡುಪು, ಯೋಗಾಭ್ಯಾಸ ಎಲ್ಲವೂ ಅವರಿಂದ ಕಲಿತದ್ದೇ.  ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಾಗ ಅವರಿಗೆ ಕೋಪ ಬರೋದು. ನನಗೂ ಹಾಗೇ ಆಗಿದೆ. ಎಷ್ಟೋ ಸಲ ಕೋಪ ಬಂದಾಗ “ಒಡಹುಟ್ಟಿದವರು’ ಚಿತ್ರದಲ್ಲಿ ರಾಜುRಮಾರರು ಮನೆ ಬಿಟ್ಟು ಹೋಗ್ತಾರಲ್ಲ. ಒಬ್ಬಂಟಿಯಾಗಿ.  ಹಾಗೇ ನಾನೂ ಏಕಾಂಗಿಯಾಗುತ್ತೇನೆ. ನಂತರ ನನಗೆ ನಾನೇ ಸಮಾಧಾನ ಮಾಡಿಕೊಂಡು ಶಾಂತವಾಗುತ್ತೇನೆ. ದೇವರ ಮುಂದೆ ಕೂತಾಗಲಂತೂ ಅವರಿಗೆ ಒಳ್ಳೇ ಬುದ್ಧಿ ಕೊಡಪ್ಪಾ, ಇವರನ್ನು ಸರಿ ಮಾಡಪ್ಪ ಅಂತ ಕೇಳ್ಳೋಲ್ಲ. ಬದಲಾಗಿ ನನಗೆ ಅವರನ್ನು ಸಹಿಸುವ ಸೈರಣೆ ಕೊಡು ಅಂತ ಕೇಳಿಕೊಳ್ಳುತ್ತೇನೆ. 

 ಹೀಗೆ ರಾಜ್‌ಕುಮಾರ್‌ ಅವರು ನನ್ನ ಪಾಲಿಗೆ ರಂಗದ ಮೇಲೆ ಅಭಿನಯಿಸುವ ಪಾತ್ರವಷ್ಟೇ ಆಗಿಲ್ಲ. ನನ್ನ ಬದುಕೇ ಆಗಿಹೋಗಿದ್ದಾರೆ. 

ಕಟ್ಟೆ ಗುರುರಾಜ್‌

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.