ಆಟೋ ಚಾಲಕನ ಮಗನ: ವೇಟ್‌ಲಿಫ್ಟಿಂಗ್ ಸಾಧನೆ
Team Udayavani, Feb 11, 2017, 11:32 AM IST
ಅನೇಕ ಕಷ್ಟನಷ್ಟಗಳು ಒಬ್ಬ ವ್ಯಕ್ತಿಯ ಜೀವನವನ್ನು ಪರೀಕ್ಷಿಸಲಿಕ್ಕೆಂದೇ ಬರುತ್ತದೆ. ಇದರಿಂದ ಒಳ್ಳೆಯದೇ ಆಗುತ್ತದೆ ಎನ್ನುವ ಮಾತಿದೆ. ಕುಂದಾಪುರದ ವೇಟ್‌ಲಿಫ್ಟರ್ ಜೀವನದಲ್ಲಿ ಇದು ನಿಜವಾಗಿದೆ. ಕುಂದಾಪುರದ ಆಟೋ ಚಾಲಕನ ಪುತ್ರನಾಗಿರುವ ಗುರುರಾಜ್ ರಾಜ್ಯ ಒಲಿಂಪಿಕ್ಸ್‌ನ ಪುರುಷರ 56 ಕೆ.ಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 240 ಕೆ.ಜಿ ಭಾರ ಎತ್ತಿ ಸ್ವರ್ಣ ಗೆದ್ದ ಸಾಧನೆ ಮಾಡಿದ್ದಾರೆ. ಇವರು 2 ಅಂತಾರಾಷ್ಟ್ರೀಯ ಮತ್ತು 3 ರಾಷ್ಟ್ರೀಯ ಪದಕವನ್ನು ಗೆದ್ದ ಸಾಧನೆ ಮಾಡಿದ್ದಾರೆ. ರಾಜ್ಯ ಒಲಿಂಪಿಕ್ಸ್‌ನಲ್ಲಿ ಭರ್ಜರಿ ಸಾಧನೆ ಬಳಿಕ ಇವರು ಉದಯವಾಣಿ ಜತೆಗೆ ಮಾತನಾಡಿ ತಮ್ಮ ಬದುಕಿನ ನೋವು-ನಲಿವುಗಳನ್ನು ಹಂಚಿಕೊಂಡಿದ್ದು ಹೀಗೆ.
ಕೂಟದ ಮೊದಲ ಪದಕ ವಿಜೇತರಾಗಿದ್ದೀರಿ, ಹೇಗೆನಿಸುತ್ತಿದೆ? ಪದಕದ ನಿರೀಕ್ಷೆ ಇತ್ತಾ?
– ನಾನು ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ 2 ಮತ್ತು ರಾಷ್ಟ್ರೀಯ ಮಟ್ಟದಲ್ಲಿ 3 ಪದಕ ಗೆದ್ದಿದ್ದೇನೆ. ಹೀಗಾಗಿ ಪದಕ ಗೆಲ್ಲುವ ಭರವಸೆ ಇತ್ತು. ಆದರೆ ಕೂಟದ ಮೊದಲ ಪದಕ ವಿಜೇತ ಪಟ್ಟ ಸಿಕ್ಕಿರುವುದು ನನ್ನ ಅದೃಷ್ಟ. ಇದೊಂದು ರೀತಿಯಲ್ಲಿ ಡಬಲ್ ಸಂತೋಷ.
ನಿಮ್ಮ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪದಕದ ಬಗ್ಗೆ ಹೇಳಿ?
– 2016 ಸೌತ್ ಏಷ್ಯನ್ ಗೇಮ್‌ನಲ್ಲಿ ಚಿನ್ನ, 2016 ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, 2014 ಮತ್ತು 2015 ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಮತ್ತು 2016 ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ.
ವೇಟ್‌ಲಿಫ್ಟಿಂಗ್ ಬಗ್ಗೆ ಆಸಕ್ತಿ ಹುಟ್ಟಿದ್ದು ಹೇಗೆ?
– ಮೊದಲು ನಾನು ಕುಸ್ತಿಪಟುವಾಗಿದ್ದೆ. ಆದರೆ ಎಸ್‌ಡಿಎಂ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವಾಗ ವೇಟ್‌ಲಿಫ್ಟಿಂಗ್‌ನತ್ತ ಆಸಕ್ತಿ ಬೆಳೆಸಿಕೊಂಡೆ.
ನಿಮ್ಮ ಮುಂದಿನ ಯೋಜನೆ ಏನು?
– ಸದ್ಯ 2018ರ ಕಾಮನ್‌ವೆಲ್ತ್ ಗೆಮ್ಸ್‌ನಲ್ಲಿ ಪದಕ ಗೆಲ್ಲುವುದು. ನಂತರ 2020 ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲಬೇಕು ಅನ್ನುವ ಛಲಯಿದೆ. ಈ ನಿಟ್ಟಿನಲ್ಲಿ ಪ್ರತಿದಿನ ಅಭ್ಯಾಸ ನಡೆಸುತ್ತಿದ್ದೇನೆ.
ರಾಜ್ಯ ಒಲಿಂಪಿಕ್ಸ್ ಬಗ್ಗೆ ನಿಮ್ಮ ಅಭಿಪ್ರಾಯ?
– ರಾಜ್ಯದ ಅಥಿÉಟ್‌ಗಳಿಗೆ ಇದರಿಂದ ತುಂಬಾ ಅನುಕೂಲ. ತಮ್ಮ ಪ್ರತಿಭೆಯನ್ನು ತೊರಿಸಲು ಸಹಾಯವಾಗುತ್ತದೆ. ಕನಿಷ್ಠ ನಾಲ್ಕು ವರ್ಷಕ್ಕೊಮ್ಮೆ ಯಾದರೂ ಈ ಕೂಟ ನಡೆಯುತ್ತಿದ್ದರೆ ಉತ್ತಮ.
ತುಂಬಾ ಸಂತಷದ ಕ್ಷಣ?
– ಸೌತ್ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವ ಸುದ್ದಿ ಟೀವಿಯಲ್ಲಿ ಬಂದಿತ್ತು. ಅದನ್ನು ನೋಡಿದ ನನ್ನ ಮನೆಯವರು ಫೋನ್ ಮಾಡಿ ಮಾತಾಡಿಸಿದ್ದರು. ಮನೆಯಲ್ಲಿ ಅಪ್ಪ, ಅಮ್ಮ ಸಂತೋಷಗೊಂಡಿರುವುದೇ ನನಗೆ ಖುಷಿ ಸಿಕ್ಕ ಕ್ಷಣ.
ಸರ್ಕಾರದಿಂದ ಏನಾದರು ಸಹಾಯ ಸಿಕ್ಕಿದೆಯೆ?
– ತುಂಬಾ ಬಡತನವಿತ್ತು. ಆದರೆ ಕಳೆದ ವರ್ಷ ನ್ಪೋರ್ಟ್ಸ್ ಕೂಟಾದಲ್ಲಿ ಇಂಡಿಯನ್ ಏರ್‌ಫೋರ್ಸ್ ನಲ್ಲಿ ಉದ್ಯೋಗ ಸಿಕ್ಕಿದೆ. ಹೀಗಾಗಿ ಸ್ವಲ್ಪ ಚೇತರಿಕೆ. ಉಳಿದಂತೆ ತಂದೆ ಇವತ್ತಿಗೂ ಆಟೋ ಓಡಿಸುತ್ತಾರೆ. ರಾಜ್ಯ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ.ಕುಂದಾಪುರದ ಆಟೋ ಚಾಲಕನ ಪುತ್ರನಾಗಿರುವ ಗುರುರಾಜ್ ರಾಜ್ಯ ಒಲಿಂಪಿಕ್ಸ್‌ನ ಪುರುಷರ 56 ಕೆ.ಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 240 ಕೆ.ಜಿ ಭಾರ ಎತ್ತಿ ಸ್ವರ್ಣ ಗೆದ್ದ ಸಾಧನೆ ಮಾಡಿದ್ದಾರೆ. ಇವರು 2 ಅಂತಾರಾಷ್ಟ್ರೀಯ ಮತ್ತು 3 ರಾಷ್ಟ್ರೀಯ ಪದಕವನ್ನು ಗೆದ್ದ ಸಾಧನೆ ಮಾಡಿದ್ದಾರೆ. ರಾಜ್ಯ ಒಲಿಂಪಿಕ್ಸ್‌ನಲ್ಲಿ ಭರ್ಜರಿ ಸಾಧನೆ ಬಳಿಕ ಇವರು ಉದಯವಾಣಿ ಜತೆಗೆ ಮಾತನಾಡಿ ತಮ್ಮ ಬದುಕಿನ ನೋವು-ನಲಿವುಗಳನ್ನು ಹಂಚಿಕೊಂಡಿದ್ದು ಹೀಗೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Qatar: ಕತಾರ್ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ
Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.