ಬಾಹುಬಲಿಯ ಮಾಹಿಷ್ಮತಿ ನಿಜಕ್ಕೂ ಇದೆಯೇ?
Team Udayavani, May 20, 2017, 3:15 PM IST
ಸದ್ಯದ ಮಟ್ಟಿಗೆ ಭಾರತದೆಲ್ಲೆಡೆ ಬಾಹುಬಲಿಯದ್ದೇ ಹವಾ. ಸಿನಿಮಾದಲ್ಲಿ ಬಳಸಲಾದ ಗ್ರಾಫಿಕ್ಸ್ ತಂತ್ರಜ್ಞಾನ, ಹಾಕಲಾದ ಸೆಟ್‌ಗಳ ಬಗ್ಗೆ ಮಾತುಗಳು ಕೇಳಿಬರುತ್ತಿರುವಂತೆಯೇ ಸಿನಿಮಾ ಒಂದು ವಿಷಯ ಜನರ ಕುತೂಹಲವನ್ನು ಕೆರಳಿಸುತ್ತಿದೆ. ಅದೇನು ಗೊತ್ತಾ? ಸಿನಿಮಾದಲ್ಲಿ ಬಾಹುಬಲಿ ಆಳುವ ರಾಜ್ಯ ಮಾಹಿಷ್ಮತಿ ಎಂಬುದು ಸಿನಿಮಾ ನೋಡಿದವರೆಲ್ಲರಿಗೂ ಗೊತ್ತೇ ಇರುತ್ತೆ. “ಮಾ… ಹಿ… ಷ್ಮಾ… ತಿ…’ ಎಂದು ಸ್ಲೋಮೋಷನ್‌ನಲ್ಲಿ ಹೇಳುನ ಪರಿಪಾಠ ಬೇರೆ ಈಗ ಆರಂಭವಾಗಿದೆ.
ಇರಲಿ, ಬಾಹುಬಲಿ ಸಿನಿಮಾ ನೋಡಿದ ಬಹುತೇಕರ ಪ್ರಶ್ನೆ ಒಂದೇ. ಮಾಹಿಷ್ಮತಿ ಎನ್ನುವ ಹೆಸರಿನ ಪ್ರದೇಶ ನಿಜಕ್ಕೂ ಭಾರತದಲ್ಲಿ ಇತ್ತೇ? ಎಂದು. ಈಗ ಬರುತ್ತಿರುವ ವರದಿಗಳನ್ನು ನಂಬುವುದಾದರೆ ಅಂಥದ್ದೊಂದು ರಾಜ್ಯ ನಿಜಕ್ಕೂ ನಮ್ಮಲ್ಲಿ ಇತ್ತು ಅಂತಲೇ ಹೇಳಬೇಕಾಗುತ್ತದೆ. ಪುರಾಣದಲ್ಲಿ ಮಾತ್ರವಲ್ಲದೆ ಇತಿಹಾಸದಲ್ಲಿಯೂ ಮಾಹಿಷ್ಮತಿಗೆ ಸಂಬಂಧಿಸಿದ ಮಾಹಿತಿಗಳು ಅಲ್ಲಲ್ಲಿ ಸಿಗುತ್ತಿವೆ. ಅದರ ಪ್ರಕಾರ ಮಾಹಿಷ್ಮತಿ, ಅವಂತಿ ಸಾಮ್ರಾಜ್ಯದ ಭಾಗವಾಗಿರುವುದು ಕಂಡುಬರುತ್ತದೆ. ಅವಂತಿ ಸಾಮ್ರಾಜ್ಯ ಎರಡು ಭಾಗವಾಗಿ ವಿಂಗಡನೆಯಾದಾಗ ಉತ್ತರ ಭಾಗದ ರಾಜಧಾನಿ ಉಜ್ಜಯಿನಿಯಾಯಿತು. ದಕ್ಷಿಣದ ಭಾಗದ ರಾಜಧಾನಿ ಮಾಹಿಷ್ಮತಿ ಆಯಿತು. ಈ ಪ್ರದೇಶ ಮಧ್ಯಪ್ರದೇಶ ರಾಜ್ಯದಲ್ಲಿದೆ. ಮಾಹಿಷ್ಮತಿಯನ್ನಳುತ್ತಿದ್ದ ರಾಜ ವಂಶಸ್ಥರು ಕಾಲಾಂತರದಲ್ಲಿ ದಕ್ಷಿಣ ಬಾರತದಲ್ಲಿ, ಮಹೇಶ್ವರ್, ಮಾಂಡ್ಲಾ, ಮೈಸೂರು ಮುಂತಾದ ಕಡೆಗಳಲ್ಲಿ ನೆಲೆ ಕಂಡರು ಎಂಬ ವಾದವೂ ಇದೆ. ಆದರೆ ಆ ವಾದವನ್ನು ಇತಿಹಾಸ ತಜ್ಞರು ಒಪ್ಪುವುದಿಲ್ಲ. ಆದರೆ ಮಧ್ಯಪ್ರದೇಶದ ದಕ್ಷಿಣ ಬಾಗದ ಅವಂತಿ ರಾಜ್ಯ ಮಾಹಿಷ್ಮತಿಯಾಗಿದ್ದರ ಬಗ್ಗೆ ದಾಖಲೆಗಳು ಲಭ್ಯ ಇವೆ. ನರ್ಮದಾ ನಡಿಯ ದಡದಲ್ಲಿರುವ ಈ ರಾಜ್ಯಕ್ಕೆ ಮಾಹಿಷ್ಮತಿ ಎಂಬ ಹೆಸರು ಬಂದಿದ್ದು ಮಾಹಿಷ್ಮಾನ್ ಎನ್ನುವ ರಾಜನಿಂದ. ಇದೇ ಪ್ರದೇಶದಲ್ಲಿ ಈಗಿನ ಮಹೇಶ್ವರ್ ಪಟ್ಟಣವಿದೆ. ಈ ಪಟ್ಟಣ ಮಹೇಶ್ವರಿ ಸೀರೆಗಳಿಗೆ ತುಂಬಾ ಫೇಮಸ್ಸು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
ಪ್ರಯಾಣಿಕರಿಗೆ ಟಿಕೆಟ್ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.