ಚರ್ಲೆ – ಸರಳೆ
ಹಕ್ಕಿ ಸಾಲು : ಹಾರುವ ಹಕ್ಕಿಗೆ ಇಲ್ಲಿ ಮನೆ...
Team Udayavani, Apr 20, 2019, 7:03 PM IST
Gadwall (Anas strepera) M -Duck +
ಗದ್ವಾಲ್ ಬಾತನ್ನು ಚರ್ಲೆ ಅಥವಾ ಸರಳೆ ಬಾತು ಎಂದು ಕರೆಯಲಾಗುತ್ತದೆ. ಈ ಹಕ್ಕಿ, ನೀರಿನಲ್ಲಿ ಮುಳುಗಿ ಅಲ್ಲಿರುವ ಕ್ರಿಮಿ ಕೀಟಗಳನ್ನು ಬೇಟೆಯಾಡುತ್ತದೆ. ನೀರೊಳಗಿನ ಸಸ್ಯದ ಮೆತ್ತನೆಯ ಭಾಗವನ್ನು ಇದು ಭಕ್ಷಿಸುತ್ತದೆ.
ಈ ಬಾತಿಗೆ ಇಂಗ್ಲೀಷ್‌ನಲ್ಲಿ ಗಡ್ವಾಲ್‌ಎಂಬ ಹೆಸರಿದೆ. ಬಯರ್ ಅಂತ ಹಿಂದಿಯಲ್ಲಿ ಕರೆಯುತ್ತಾರೆ. ಜಾಲಪಾದ ಇರುವ ಎಲ್ಲಾ ಪ್ರಭೇದ ಹಕ್ಕಿಯನ್ನು ಕನ್ನಡದಲ್ಲಿ ಬಾತು ಎಂದೇ ಕರೆಯುತ್ತಾರೆ. ಈ ಬಾತು ಅಸ್ಸಾಮ್, ಬಿಹಾರ, ನೇಪಾಳ, ಮಣಿಪುರದ ಜನರಿಗೆ ಚಿರಪರಿಚಿತ ಎಂದೇ ಹೇಳಬಹುದು. ಗಡ್ವಾಲ್ ಬಾತನ್ನು ಸರಳೆ ಇಲ್ಲವೇ ಚರ್ಲೆ ಎಂದು ಕರೆದರೆ ಇದರ ಸ್ವಭಾವಕ್ಕೆ ಸರಿಯಾಗಿ ಹೊಂದುತ್ತದೆ.
ಗಡ್ವಾಲ್ ಬಾತು ಸಹ ಭಾರತಕ್ಕೆ ವಲಸೆ ಬರುವ ಬಾತುಕೋಳಿಗಳಲ್ಲಿ ಒಂದು. ಇದನ್ನು ಬಾತು ಕೋಳಿ ಎಂದು ಕರೆಯಲು ಒಂದು ಕಾರಣ ಇದೆ. ಇದು ಕೋಳಿಗಳಂತೆ ನೆಲದಲ್ಲಿ ಓಡಾಡಿ, ಕಸ ಇಲ್ಲವೇ ಹುಲ್ಲನ್ನು – ಕೆದಕಿ – ಕೋಳಿಗಳಂತೆಯೇ ಕೂಗುತ್ತಾ, ಚಿಕ್ಕ ಕ್ರಿಮಿ ಇಲ್ಲವೇ ಮಣ್ಣಿನ ಹುಳ ತಿನ್ನುವುದರಿಂದಲೇ ಕೋಳಿ ಅನ್ನೋ ಶಬ್ದ ಸೇರ್ಪಡೆಯಾಗಿರುವುದು.
ಇದು ನೀರಿನ ಹಕ್ಕಿ. ಸರಾಗವಾಗಿ ನೀರಿನಲ್ಲಿ ಈಜುವುದು, ಹಾರಿ ನೀರು ಚಿಮ್ಮಿಸುತ್ತಾ ಪಾತಳಿಯಲ್ಲಿ ನಿಂತಂತೆ ಹಾರುವುದು. ತಟ್ಟನೆ ಮೇಲೆ ಜಿಗಿದಂತೆ ಮಾಡಿ, ಮುಳುಗು ಹಾಕಿ ನೀರಿನ ಅಡಿಯಲ್ಲಿರುವ ಕ್ರಿಮಿ, ಕೀಟಗಳನ್ನು ಹಿಡಿಯುತ್ತದೆ. ಮತ್ತೆ ನೀರಿನ ಮೇಲೆ ಬಂದು ಸರಾಗವಾಗಿ ತೇಲುತ್ತಾ, ಒಂದನ್ನು ಇನ್ನೊಂದು ಅಟ್ಟಿಸಿಕೊಂಡು ಹೋಗುತ್ತದೆ. ಗಾತ್ರದಲ್ಲಿ ಇದು ಸುಮಾರು 51 ಸೆಂ.ಮೀ.ನಷ್ಟು ದೊಡ್ಡದಾಗಿರುತ್ತದೆ. ರೆಕ್ಕೆಯ ಅಗಲ 79-80 ಸೆಂ.ಮೀ. ಹಾರುವಾಗ ಇದರ ರೆಕ್ಕೆಯ ಅಂಚಿನಲ್ಲಿರುವ ಬಿಳಿ ಬಣ್ಣ ಹೊಳೆಯುತ್ತದೆ.
ಗುರಿ ಇಟ್ಟು ನೋಡಿದರೆ, ಕಂದು-ಕಪ್ಪು ಬಣ್ಣದ ನಡುವೆ ಇರುವ ತಿಳಿ ಕಂದು ಕೆಂಪು ಬಣ್ಣ ಹಾಗೂ ಕೆನ್ನೆಯ ಮೇಲಿರುವ ತಿಳಿ ಬಿಳಿ ಬಣ್ಣ ಕಾಣುತ್ತದೆ. ಹೊಟ್ಟೆ, ಎದೆಯ ಮೇಲೆ ತಿಳಿ ಹಳದಿ ಮಿಶ್ರಿತ ಮಣ್ಣು ಬಣ್ಣದಿಂದ ಕೂಡಿರುತ್ತದೆ. ರೆಕ್ಕೆಯ ಗಾಢ ಕೆಂಪು ಮಿಶ್ರಿತ-ಕಪ್ಪು ಬಣ್ಣದ್ದು. ಇದು ಹಾರುವಾಗ ಇಲ್ಲವೇ ಈಜುವಾಗ ಸ್ಪಷ್ಟವಾಗಿ ಕಾಣುತ್ತದೆ. ಕಾಲಿನಲ್ಲಿ ಜಾಲಪಾದ ಇದ್ದು ಇದರ ಬಣ್ಣ ನೀಲಿಗಪ್ಪಾಗಿದೆ. ಭಾರತಕ್ಕೆ ವಲಸೆ ಬರುವ ಮೇಲಾರ್ಡ್ ಬಾತು ಮತ್ತು ಗುದ್ವಾಲ್ ಬಾತಿನಲ್ಲಿ ತುಂಬಾ ಸಾಮ್ಯತೆ ಇದೆ. ಆದರೆ ಮೇಲಾರ್ಡ್ ಬಾತುವಿನ ತಲೆ ಮತ್ತು ಕುತ್ತಿಗೆ ಹಸಿರು ಬಣ್ಣದಿಂದ ಕೂಡಿರುತ್ತದೆ. ದೇಹ ಕಂದುಗಪ್ಪು ಇದ್ದು- ಬಾಲ ಕಪ್ಪು ಬಣ್ಣದಿಂದ ಕೂಡಿರುತ್ತದೆ. ಹೆಣ್ಣು ಹಕ್ಕಿ ಸ್ವಲ್ಪ ಮುಸುಕು ಕಂದುಬಣ್ಣದಿಂದಿರುತ್ತದೆ. ಚುಂಚಿನ ಬುಡದಲ್ಲಿ ಕಿತ್ತಳೆ ಬಣ್ಣದ ಗೆರೆ ವಿಶೇಷವಾಗಿ ಹೆಣ್ಣಿಗೆ ಮಾತ್ರ ಇರುವುದು.
ಹಾರುವ ಇಲ್ಲವೇ ಈಜುತ್ತಿರುವಾಗ, ರೆಕ್ಕೆ ಅಗಲಿಸಿದಾಗ ಕಾಣುವ ಬಿಳಿ ಗೆರೆಯಿಂದಲೇ ಇದು ಹೆಣ್ಣೋ, ಗಂಡೋ ಅಂತ ಗುರುತಿಸಬಹುದು. ನೀರಿನ ದಡದಲ್ಲಿರುವ ದೊಡ್ಡ ಮರಗಳ, ಪೊಟರೆಯಲ್ಲೂ ಗೂಡು ಕಟ್ಟಿ, ಮರಿಮಾಡಿರುವುದು ಇದೆ. ಹಾಗಾಗಿ, ಈ ಬಾತನ್ನು ಪ್ರಾದೇಶಿಕ ಮತ್ತು ವಲಸೆ ಹಕ್ಕಿ ಎಂದರೆ ತಪ್ಪಾಗಲಾರದು.
ಚರ್ಲೆ ಬಾತು ಈಜಿ, ಆಹಾರ ಸಂಗ್ರಹಿಸುತ್ತದೆ. ಕೆಲವೊಮ್ಮೆ ನೆಲದ ಮೇಲೆ ಓಡಾಡಿ – ಇಲ್ಲವೇ ಕಡಿಮೆ ನೀರು ಇರುವಲ್ಲಿ ಈಜಿ ನೀರೊಳಗಿನ ಸಸ್ಯದ ಒಳಗಿರುವ ದಂಟಿನ ಮೆತ್ತನೆ ಭಾಗ ಮತ್ತು ಅದರ ಬೀಜಗಳನ್ನು ಸಹ ಆರಿಸಿ ತಿನ್ನುತ್ತವೆ. ಕೊಳ, ಗಜನಿ ಪ್ರದೇಶ, ಮಳೆಗಾಲದಲ್ಲಿ ನೀರು ನಿಂತ ಹೊಂಡ, ಸರೋವರ, ಸಿಹಿ ನೀರಿನ ನೀರಿನಾಶ್ರಯ ಇರುವ ಪ್ರದೇಶದಲ್ಲಿ ಕಾಣಸಿಗುತ್ತದೆ. ಗೂಡು ಕಟ್ಟುವ ಸಂದರ್ಭದಲ್ಲಿ ಕ್ವಾಕ್, ಕ್ವಾಕ್ ಎಂದು ಹೆಣ್ಣು ದನಿ ಹೊರಡಿಸುವ ಮೂಲಕವೇ ಇದು ನನ್ನ ಬೌಂಡರಿ ಅಂತ ಎದುರಾಳಿಗೆ ಸೂಚನೆ ನೀಡುತ್ತದೆ.
— ಪಿ. ವಿ. ಭಟ್ ಮೂರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.