ಬಾಲ ಮುನಿಗಳ ಶತಾವಧಾನ 


Team Udayavani, Dec 1, 2018, 8:51 AM IST

4.jpg

ಹತ್ತು ವರ್ಷದ ಮಕ್ಕಳಿಗೆ ಏನೆಲ್ಲಾ ನೆನಪಿರಲು ಸಾಧ್ಯ? ಪಠ್ಯದ ವಿಷಯಗಳು, ಒಂದಷ್ಟು ಹಾಡುಗಳು, ಶ್ಲೋಕಗಳು, ಸಿನಿಮಾ ಡೈಲಾಗ್‌ಗಳು, ಹೆಚ್ಚೆಂದರೆ ಮೂರ್ನಾಲ್ಕು ಭಾಷೆ… ಪುಟ್ಟ ಮೆದುಳಿನ ಸಾಮರ್ಥ್ಯವೇ ಅಷ್ಟು ಅಂತ ನೀವು ಭಾವಿಸಿದ್ದರೆ, ಈ ಅವಳಿ ಬಾಲ ಮುನಿಗಳ ಕತೆ ಕೇಳಿ… 

ಹತ್ತು ಭಾಷೆ, ಜೈನ ಆಗಮನದ 5 ಸಾವಿರ ಶ್ಲೋಕಗಳು, ಭಗವದ್ಗೀತೆ, ಖುರಾನ್‌, ಬೈಬಲ್‌ನಲ್ಲಿ ಪಾಂಡಿತ್ಯ, ನೂರು ಜನರ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸುವ ಛಾತಿ… ಇಷ್ಟು ಸಾಮರ್ಥ್ಯ ಪಡೆಯಲು ಹಲವಾರು ವರ್ಷಗಳ ಕಠಿಣ ಸಾಧನೆ, ತಪಸ್ಸು, ಅವಿರತ ಪ್ರಯತ್ನ ಅಗತ್ಯ ಎನ್ನುವುದು ಒಪ್ಪತಕ್ಕ ಮಾತು. ಆದರೆ, ಸೂರತ್‌ ನಿಂದ ಬೆಂಗಳೂರಿಗೆ ಬಂದಿರುವ, ಅವಳಿ ಬಾಲಮುನಿ ಗಳು ಈ ಮಾತನ್ನು ಸುಳ್ಳು ಮಾಡಿದ್ದಾರೆ. 9ನೇ ವಯಸ್ಸಿಗೆ ಜೈನ ಸನ್ಯಾಸತ್ವ ಸ್ವೀಕರಿಸಿದ, ನಮಿಚಂದ್ರಸಾಗರ್‌ ಮತ್ತು ನೇಮಿಚಂದ್ರ ಸಾಗರ್‌ಗೆ ಈಗ ಕೇವಲ ಹತ್ತು ವರ್ಷ. ಆಟವಾಡುವ ವಯಸ್ಸಿನಲ್ಲಿ ದೀಕ್ಷೆ ಸ್ವೀಕರಿಸಿದ್ದೇ ಒಂದು ದೊಡ್ಡ ಸಾಧನೆಯಾದರೆ, ಕೇವಲ ಒಂದು ವರ್ಷದಲ್ಲಿ ಇವರು ತೋರಿದ ಬೌದ್ಧಿಕ ಬೆಳವಣಿಗೆಯೂ ದೊಡ್ಡ ಪವಾಡವೇ.

ಅವಳಿ ಬಾಲಮುನಿಗಳ ಪರಿಚಯ ಧ್ರುವ ಮತ್ತು ಧೈರ್ಯ ಎಂಬ ಹೆಸರಿನ ಈ ಮುನಿದ್ವಯರು ಹುಟ್ಟಿದ್ದು ಗುಜರಾತ್‌ನ ಸೂರತ್‌ನಲ್ಲಿ. ತಂದೆ ಪಿಯುಷ್‌ಭಾಯ್‌ ಮತ್ತು ತಾಯಿ ಸೋನಲ್‌ಬೆನ್‌. ಸಾತ್ವಿಕ ಸ್ವಭಾವದ ಈ ಮಕ್ಕಳು, ತಮ್ಮ ವಯಸ್ಸಿನ ಇತರೆ ಮಕ್ಕಳಂತೆ ಎಂದಿಗೂ ಟಿ.ವಿ., ಮೊಬೈಲ್‌, ವಿಡಿಯೊ ಗೇಮ್‌ ಗಳತ್ತ ಆಕರ್ಷಿತರಾದವರಲ್ಲ. ಗುಜರಾತಿ ಮಾಧ್ಯಮದಲ್ಲಿ 1ನೇ ತರಗತಿ ಓದಿದ ಇವರು, ನಂತರ 2 ವರ್ಷ ಗುರುಕುಲದಲ್ಲಿದ್ದು ಸನ್ಯಾಸ ಜೀವನದ ತರಬೇತಿ ಪಡೆದು, 9ನೇ ವಯಸ್ಸಿಗೆ ಸನ್ಯಾಸತ್ವ ಸ್ವೀಕರಿಸಿದರು. 8ನೇ ವಯಸ್ಸಿನಲ್ಲಿ ಸಂಯುಕ್ತ ಅವಧಾನ ಮತ್ತು ಅರ್ಧಶತಾವಧಾನ ನಡೆಸಿ, ಗುಜರಾತಿನ ಆಗಿನ ಶಿಕ್ಷಣ ಸಚಿವ ಭೂಪೇಂದ್ರ ಸಿಂಗ್‌ ಚುಡಾಸಮಾ ಅವರಿಂದ ಸುವರ್ಣಶಾಯಿಯಲ್ಲಿ ಬರೆದ ಗೌರವ ಪತ್ರ ಪಡೆದಿದ್ದರು. 

ದೀಕ್ಷೆ ಪಡೆದ ನಂತರ, ತಪ, ತ್ಯಾಗ, ಪರಮಾರ್ಥ ಹಾಗೂ ಧ್ಯಾನ ಸಾಧನೆಯಲ್ಲಿರುವಇವರು, ಕೇವಲ ಎರಡೂವರೆ ಗಂಟೆಯಲ್ಲಿ 350  ಪದ್ಯಗಳನ್ನು ಕಂಠಪಾಠ ಮಾಡಿ ದಾಖಲೆಯನ್ನೂ ಸೃಷ್ಟಿಸಿದ್ದಾರೆ.

ಸತತ 10 ಗಂಟೆ ಅಭ್ಯಾಸ ಈ ಬಾಲಮುನಿಗಳ ಬೆಳಗ್ಗಿನ ದಿನಚರಿ ನಾಲ್ಕು ಗಂಟೆಗೆ ಶುರುವಾಗುತ್ತದೆ. 4-7 ಗಂಟೆಯವರೆಗೆ ಧ್ಯಾನ ಮಾಡುತ್ತಾರೆ. ನಂತರ, ಸಂಜೆ ಏಳು ಗಂಟೆಯವರೆಗೂ, ಅಧ್ಯಯನ, ಗಣಿತ ಹಾಗೂ ಭಾಷಾ ವಿಷಯಗಳ ಕಲಿಕೆ, ಕಂಠಪಾಠದಲ್ಲಿ ತೊಡಗಿರುತ್ತಾರೆ. ನಡುವೆ 2 ಗಂಟೆಯನ್ನು ಆಹಾರ ಸೇವನೆಗೆ ಬಳಸುತ್ತಾರೆ. ಪಾದಯಾತ್ರೆಯಲ್ಲಿದ್ದರೆ, ದಿನಕ್ಕೆ 30-35 ಕಿ.ಮೀ. ನಡೆಯುತ್ತಾರೆ. ರಾತ್ರಿ ಎಲ್ಲಿ ಜಾಗ ಸಿಗುತ್ತದೋ ಅಲ್ಲಿ ವಿಶ್ರಾಂತಿ. ಮನೆ, ಶಾಲೆ, ಛತ್ರ, ದೇವಸ್ಥಾನ, ಯಾವುದೂ ಆದೀತು. ಸನ್ಯಾಸ ಸ್ವೀಕರಿಸಿದ ಒಂದು ವರ್ಷದಲ್ಲೇ ಅವರು ಸುಮಾರು 5 ಸಾವಿರ ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲಿ ಸಂಚರಿಸಿದ್ದಾರೆ. ದೇಶಾದ್ಯಂತ ಸಂಚಾರ ಮಾಡುತ್ತಲೇ ಹಲವು ಭಾಷೆಗಳನ್ನು ಕಲಿತಿದ್ದಾರೆ. 

ಯಾವ್ಯಾವ ಭಾಷೆ ಗೊತ್ತು?
ಸಂಸ್ಕೃತ, ಪ್ರಾಕೃತ, ಹಿಂದಿ, ಗುಜರಾತಿ, ಮರಾಠಿ, ಮಾರ್ವಾಡಿ, ಇಂಗ್ಲಿಷ್‌, ಪಂಜಾಬಿ, ಕನ್ನಡ, ಉರ್ದು

ಸನ್ಯಾಸ ಜೀವನ
 ಯಾವ ಜೀವಿಗೂ ಹಿಂಸೆ ಮಾಡುವಂತಿಲ್ಲ
 ತಣ್ಣೀರು ಕುಡಿಯುವಂತಿಲ್ಲ
 ಕೂದಲಿಗೆ ಕತ್ತರಿ, ಬ್ಲೇಡ್‌ ಹಾಕುವಂತಿಲ್ಲ. ಕೂದಲು ಬೆಳೆದಾಗ ಅದನ್ನು ಕೈಯಿಂದ ಕಿತ್ತೇ ತೆಗೆಯಬೇಕು

 ಸೂರ್ಯೋದಯದ ನಂತರ, ಸೂರ್ಯಾಸ್ತಕ್ಕೂ ಮೊದಲು ಮಿತಾಹಾರ ಸೇವನೆ ಮಾಡಬಹುದು

ಶತಾವಧಾನ ಎಂದರೇನು ?
ನಿಮಗೆ ಎಷ್ಟು ಜನರ ಮೊಬೈಲ್‌ ನಂಬರ್‌ ನೆನಪಿದೆ? ಹತ್ತು ಸಂಖ್ಯೆಯ ಮೊಬೈಲ್‌ ನಂಬರ್‌ ಅನ್ನು ಒಂದೇ ಒಂದು ಬಾರಿ ಹೇಳಿದರೆ ಅದು ನಿಮ್ಮ ನೆನಪಿನಲ್ಲಿ ಉಳಿಯುತ್ತದಾ? ಐದಾರು ಜನ ಒಟ್ಟಿಗೇ ಪ್ರಶ್ನೆ ಕೇಳಿದರೆ, ಪ್ರಶ್ನೆಯನ್ನು ನೆನಪಿಟ್ಟುಕೊಂಡು ನೀವು ಎಲ್ಲರಿಗೂ ಉತ್ತರಿಸಬಲ್ಲಿರಾ? ಇದು ಕಷ್ಟದ ವಿಷಯ. ಯಾಕೆಂದರೆ, ಸಾಮಾನ್ಯ ಜನರು ಒಂದು ಬಾರಿಗೆ 3-4 ವಿಷಯಗಳನ್ನು ನೆನಪಿಟ್ಟುಕೊಂಡರೆ, ಅಸಾಮಾನ್ಯರು 10-15 ವಿಷಯಗಳನ್ನು ಸ್ಮರಣೆ ಮಾಡಬಲ್ಲರು. ಆದರೆ, ಶತವಧಾನ ಎಂದರೆ, ನೂರು ಸಂಗತಿಗಳನ್ನು ಒಟ್ಟಿಗೇ ಕೇಳಿ ನೆನಪಿಟ್ಟುಕೊಳ್ಳುವುದು. ಈ ಅವಳಿ ಮುನಿಗಳಿಗೆ ಶತಾವಧಾನ ಸಿದ್ಧಿಸಿದೆ. ಪ್ರೇಕ್ಷಕರು ಒಬ್ಬೊಬ್ಬರಾಗಿ ಎದ್ದು ನಿಂತು ತೋರಿಸುವ ಅಥವಾ ಕೇಳುವ 100 ವಿವಿಧ ವಿಷಯ, ವಸ್ತುಗಳನ್ನು ನೆನಪಿನಲ್ಲಿಟ್ಟುಕೊಂಡು, ಪ್ರಶ್ನೋತ್ತರ ಸಮಯ ಮುಗಿದ ನಂತರ ಅವುಗಳಿಗೆ ಅನುಕ್ರಮವಾಗಿ ಉತ್ತರಿಸುತ್ತಾರೆ. ಪ್ರಶ್ನೆಗಳನ್ನು ಹಿಂದು-ಮುಂದು ಅಥವಾ ಮಧ್ಯೆ-ಮಧ್ಯೆದಲ್ಲಿ ನೆನಪಿಟ್ಟು ಕೊಳ್ಳುವ, ಯಾರು, ಯಾವ ಪ್ರಶ್ನೆಯನ್ನು, ಯಾರ ನಂತರ ಕೇಳಿದರು ಎಂದು ಹೇಳುವ ಚಾಕಚಕ್ಯತೆಯೂ ಇವರಿಗಿದೆ. 

ಅವಳಿ ಮುನಿಗಳಿಗೆ ಏನೇನು ಗೊತ್ತು?
ಯಾವುದೇ ದೇಶದ ಹೆಸರು ಹೇಳಿದರೂ, ಅದರ ರಾಜಧಾನಿ, ರಾಷ್ಟ್ರಭಾಷೆ ಹಾಗೂ ಅಲ್ಲಿನ ಇತರೆ ಭಾಷೆಗಳು ಯಾವುದೆಂದು ಹೇಳುತ್ತಾರೆ.

 ಗಣಿತದ ಕಠಿಣ ಒಗಟುಗಳನ್ನು ಬಿಡಿಸುತ್ತಾರೆ.

 ದರ್ಶನ ಅವಧಾನದಲ್ಲಿ ಪ್ರೇಕ್ಷಕರು ತೋರಿಸುವ ವಸ್ತುಗಳನ್ನು ನೆನಪಿಟ್ಟುಕೊಂಡು, ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.

 ಜೈನ ಆಗಮ ಗ್ರಂಥದ ಪಠ್ಯಗಳನ್ನು, 5 ಸಾವಿರ ಶ್ಲೋಕಗಳನ್ನು ಸುಲಲಿತವಾಗಿ ಹೇಳಬಲ್ಲರು.

 ಭಗವದ್ಗೀತೆಯ 15ನೇ ಅಧ್ಯಾಯದ ಶ್ಲೋಕಗಳು, ಖುರಾನ್‌ ಆಯಾತ್‌, ಬೈಬಲ್‌ ಅಧ್ಯಾಯಗಳ ವಾಕ್ಯಗಳಲ್ಲಿ, ಗುರು ಗ್ರಂಥಾ ಸಾಹಿಬ್‌ನಲ್ಲಿ ಪರಿಣತರು.

10 ವಿವಿಧ ಭಾಷೆಗಳಲ್ಲಿ ಮಾತನಾಡಲು ಗೊತ್ತು.
ಕಣ್ಣಿಗೆ ಪಟ್ಟಿ ಕಟ್ಟಿಕೊಂಡು 22, 33 ಮತ್ತು ಪಿರಮಿಡ್‌ ಕ್ಯೂಬ್‌ಅನ್ನು ಸರಿಪಡಿಸುತ್ತಾರೆ.

 ಪ್ರಶ್ನೆಗಳು, ಪವಿತ್ರ ತೀರ್ಥ ಸ್ಥಳಗಳು, ಉತ್ಸವಗಳು, ಸಂತರು, ತತ್ವಜ್ಞಾನಿಗಳು, ವಿಜ್ಞಾನಿಗಳು, ರಾಷ್ಟ್ರ ನಾಯಕರು ಮತ್ತು ಯೋಗಾಸನಗಳನ್ನು ಗುರುತಿಸಬಲ್ಲರು. 

ಪ್ರಿಯಾಂಕಾ ಎನ್‌.

ಟಾಪ್ ನ್ಯೂಸ್

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.