ನೀರೊಂದು ನೆನಪು ಎದೆಯಾಳದಿಂದ…
Team Udayavani, Mar 11, 2017, 11:00 AM IST
ನೀರ ಸಪ್ಪಳವಿಲ್ಲದೆ ಬಂಡೀಪುರ, ನಾಗರಹೊಳೆ ಅರಣ್ಯ ಕಾದ ಕಾವಲಿಗಳಾಗಿವೆ. ಶುಭ್ರ ಆಕಾಶದಲ್ಲಿ ಎರಡು ತಿಂಗಳಿಂದ ನಡೆಯುತ್ತಿರುವ ಬಿಳಿ ಮೋಡಗಳ ಜಾತ್ರೆಯಿಂದಾಗಿ ಪ್ರಾಣಿಗಳೆಲ್ಲವೂ ವಲಸೆ ಹೋಗಿವೆ; ಬರ ಇಲ್ಲಿಗೆ ಗುಳೆ ಬಂದಿದೆ. ಹಾಗಾದರೆ ಈ ಎರಡೂ ಕಾಡು ಹೇಗಿದೆ? ಇಲ್ಲಿದೆ ಸಾûಾತ್ ದರ್ಶನ.
ಆಕಾಶದಲ್ಲಿ ಮೋಡಗಳ ಹಿಂಡು. ಗಾಳಿ, ಮೋಡಗಳ ನಡುವೆ ಜೂಟಾಟ. ಪ್ರತಿ ಸಲ ಗಾಳಿ ಬಂಡೀಪುರದ ಕಾಡಿನ ತಲೆ ಸವರಿದಾಗಲೂ ” ಇವತ್ತಾದರು ಮಳೆ ಬೀಳಬಹುದೇ’ ಅನ್ನೋ ನಿರೀಕ್ಷೆ. ಬಂಡೀಪುರ ರೇಂಜ್‌ನ ಒಂದಷ್ಟು ಜಿಂಕೆಗಳ ಹಿಂಡು ಕಂಡ, ಕಂಡವರೆನ್ನೆಲ್ಲಾ ಕೆಕ್ಕರಿಸಿ ನೋಡುತಲಿತ್ತು. ತಿಂಡಿ ಹಾಕುತ್ತಾರೆ ಅಂತಲ್ಲ. ನೀರು ಕೊಡಬಹುದೇ ಅಂತ.
ಈ ಸಲ ಮಳೆ ಬಂದರೆ ಸಾಕು. ಹಾಗಾಗಿದೆ ಪರಿಸ್ಥಿತಿ. ನೋಡಿ ಆ ಕೆರೇನಾ? ದೂರದಲ್ಲಿ ಕಾಣುತ್ತಿದ್ದ ಕುಂದ್ಕೆರೆ ಯನ್ನು ತೋರಿಸಿದರು ಆರ್‌ಎಫ್ಓ… ಇದಕ್ಕೂ ಮೊದಲು ಮೀರಾಲಾಲ್ ಸಾಕು ಸಾಕಾಗಿದೆ. ಮಳೆ ಬಂದ್ರೆ ಸಾಕಪ್ಪಾ…! ಅಂದಿದ್ದರು.
ಇಬ್ಬರದೂ ಒಂದೇ ಧ್ವನಿ- ನಮ್ಮ ಕೈಲಾದ್ದು ಮಾಡಿದ್ದೇವೆ. ಮಿಕ್ಕಿದ್ದು ದೇವರ ಇಚ್ಛೆ ‘ ಅಂತ ಐಸಿಯು ಮುಂದೆ ಹೇಳುವ ಡಾಕ್ಟರ ರೀತಿ. ಜೀಪು ಹಾಗೇ ಮಂಗಳದ ದಾರಿಯಲ್ಲಿ ಸಾಗಿ ಎಡಭಾಗದ ಗೇಮ್ ರೂಟಿಗೆ ತಿರುಗಿತ್ತಾಗದಲೇ ಕರೀ ಮೋಡ ಕಮರಿ ಬಿಳಿಯಾಗಿತ್ತು. ಅರಳೀಕಟ್ಟೆ ಕೆರೆ ಹತ್ತಿರ ನಿಂತಾಗ ಸೋಲಾರ್ ಶೀಟುಗಳ ಕಂಡವು. ನೋಡಿ- ಕೆಲ್ಸ ನಡೀತಿದೆ. ಇಲ್ಲಿ 120 ಅಡಿಗೆ ನೀರಿ ಸಿಕ್ಕಿದ್ದು ನಮ್ಮ ಪುಣ್ಯ. ಸೋಲಾರ್ ಮೂಲಕ ಕೆರೆಗೆ ನೀರು ಹಾಯಿಸಿದರೆ ಜಿಂಕೆಗಳ ದಾಹ ತೀರುತ್ತದೆ ಅಂತ ವಿವರಿಸಿದರು.
ಏಕೆಂದರೆ ಮೊದಲು ನರ್ಸರಿ ಇತ್ತಂತೆ. ಮಿಕ್ಕೆಲ್ಲ ರೇಂಜ್‌ಗೆ ಹೋಲಿಸಿದರೆ ಇಲ್ಲಷ್ಟೇ ಕಡಿಮೆ ಅಡಿಗೆ ನೀರು ಸಿಕ್ಕಿರೋದು. ಬಂಡೀಪುರದಲ್ಲಿ ಕಡಿಮೆ ಎಂದರೂ 500-600 ಅಡಿ ಕೊರದರೆ ನೀರು.
ಅರಳೀಕಟ್ಟೆಯಿಂದ ಎರಡು ಕೆರೆಗೆ ನೀರು ಹಾಯಿಸುವ ಯೋಜನೆ ಇದೆ. ಸೋಲಾರ್ ಬಳಕೆಯಿಂದಾಗಿ ಶಬ್ದ ಕಡಿಮೆಯಂತೆ. ಬಿಸಿಲು ಹೆಚ್ಚಾದಾಗ ಪಂಪ್ ಓಡುತ್ತದೆ. ಕಡಿಮೆಯಾದಾಗ ನಿಲ್ಲುತ್ತದೆ. ಮೂರು ದಿನಕ್ಕೆ ಒಂದು ಸಲ ಹೀಗೆ ನೀರು ಹರಿಸಿದರೆ ದಾಹ ಕಡಿಮೆ ಮಾಡಬಹುದು. ಚಿಕ್ಕಸೊಳ್ಳೆ ಕಟ್ಟೆ ಕೆರೆ ಸ್ವಲ್ಪ ಚಿಕ್ಕದು. ಅರಳೀಕಟ್ಟೆ ಕೆರೆಯಲ್ಲೂ ನೀರು ಇರಲಿಲ್ಲ. ಹಾಗೇ ತಾವರೆ ಕಟ್ಟೆಯಲ್ಲಿ ಸ್ವಲ್ಪ ನೀರು. ಹಾಗೇ ಮುಂದೊದಾಗ ಸಿಕ್ಕಿದ್ದು ನಂಜನಾಪುರ ಕೆರೆ. ಇದರಲ್ಲಿ ನೀರಿತ್ತು. ಮಳೆ ಬಿದ್ದಾ ತುಂಬಿ ತುಳುಕುವ ಕೆರೆ ಪೂರ್ತಿ ಪಕ್ಷಿಗಳು. ಮೂರ್ಕೆರೆಯಲ್ಲಿ ನೀರು ತುಂಬಿತ್ತು. ಇಲ್ಲಿ ಯಾರೂ ಕೂಡ ನೀರು ತಂದು ಹಾಕಿಲ್ಲ. ಏಕೆಂದರೆ ಕೆರೆಯ ಕ್ಯಾಚ್‌ಮೆಂಟ್ ಏರಿಯಾ ಆ ರೀತಿ ಇದೆ. ಸುತ್ತಲು ಗುಡ್ಡ. ಬಂದ ನೀರು ಇಲ್ಲಿಗೇ ಬರಬೇಕು. ಇಂಗುವುದಕ್ಕೆ ಸುತ್ತಲೂ ಅತ್ತಿ, ತೇಗ ಮರಗಳಿವೆ.
ಒಂದೇ ಹಾದಿಯಲ್ಲಿ ಮೂರು ಕೆರೆಗಳಿವೆ. ರಸ್ತೆಯ ಬಲಪಕ್ಕದಲ್ಲಿ ಪುಟ್ಟ ಕೆರೆ, ಎಡಭಾಗದಲ್ಲಿ ಒಂದು ಕೆರೆ. ಹಾಗೇ ಮುಂದೆ ದೊಡ್ಡ ಕೆರೆ. ರಸ್ತೆಯ ಆ ಬದಿಯ ಆ ಕೆರೆಗೆ, ಈ ಬದಿಯೆ ನೀರು ಈ ಕೆರೆಗೆ. ಜೊತೆಗೆ ಎದುರಿಗೆ ದೊಡ್ಡ ಗುಡ್ಡ. ಗುಡ್ಡದ ಮೇಲೆ ಧೋ ಅಂತ ಬಿದ್ದ ಮಳೆ ನೀರು ಇಲ್ಲಿಗೇ ಬರಬೇಕು. ಪ್ರಕೃತಿ ನಿರ್ಮಿತ ಕೆರೆ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಈ ದೊಡ್ಡೆ ಕೆರೆಯನ್ನು ಜೆಸಿಬಿಯಿಂದ ಸವರಿ, ಶಿಲ್ಟ್ ತೆಗೆದ ಕುರುಹು ಇತ್ತು.
ಕಾಡಿಗೆ ಜೆಸಿಬಿ ತರಬಹುದಾ?
ನಾವು ಎಲ್ಲಾನೂ ಕಾನೂನು ಕಣ್ಣಲ್ಲೇ ನೋಡಕ್ಕಾಯ್ತದಾ? ಈಗ ನೋಡಿ, ನೀರಿಲ್ಲ. ಪ್ರಾಣಿಗಳಿಲ್ಲ. ಅವಕ್ಕೆ ತೊಂದರೆ ಆಗೋಲ್ಲ. ಅದಕ್ಕೆ ಜೇಸಿಬಿಯಲ್ಲಿ ಶಿಲ್ಟ್ ತೆಗೆದಿದ್ದೇವೆ. ಈಗ ಮಳೆ ಬರಲಿ. ನೀರು ತುಂಬ¤ದೆ. ಪಾಪ ಪ್ರಾಣಿಗಳ ಗಂಟಲಾದರು ತಣ್ಣಗಾಗಲಿ. ಇದೇನು ತಪ್ಪೇ? ಆರ್‌ಎಫ್ಒ ಸಾಹೇಬರು ಕೇಳಿದರು.
ಇಡೀ ಬಂಡೀಪುರದಲ್ಲಿ 13 ರೇಂಜ್‌ಗಳಿಲ್ಲಿ 300 ಕೆರೆಗಳು ಬೆತ್ತಲೆಯಾಗಿವೆ. ಓಂಕಾರ್ ಹಿಲ್ಸ್, ದಾಸನಕಟ್ಟೆ ಧಿ ಬಂಡೀಪುರದ ದಕ್ಷಿಣಭಾಗದಲ್ಲಿರುವುದೇ ದೊಡ್ಡ ಕೆರೆ. ಇದಕ್ಕಾಗಿಯೇ ಬಂಡೀಪುರದಲ್ಲೂ ಕೂಡ ಸೋಲಾರ್ ಪಂಪ್ ಮೂಲಕ ನೀರು ತುಂಬಿಸುವ ಯೋಜನೆ ಜಾರಿಯಾಗುತ್ತಿದೆ. ಇದರ ಜೊತೆಗೆ 150 ಅಡಿ ಚಿಮ್ಮುವ ಸ್ಪ್ರೆàಯರ್‌ಗಳು ಇವರ ಬಳಿ ಇವೆ. ಬಿದ್ದ ಮಳೆ ಕರ್ನಾಟಕಕ್ಕಿಂತ ಹೆಚ್ಚಾಗಿ ಬಂಡೀಪುರ ನಾಗರಹೊಳೆಯನ್ನು ಬೇರ್ಪಡಿಸುವ ಮೋಯಾರ್ ನದಿಯ ಮೂಲಕ ತಮಿಳುನಾಡು ಸೇರುತ್ತದೆ.
ಸಮಸ್ಯೆ ಇರೋದು ಎಲ್ಲಿ ಎಂದರೆ – ಯಾವುದು ಕೆರೆ, ಯಾವುದು ಕುಂಟೆ ಅನ್ನೋದರಲ್ಲಿ. ಸಣ್ಣ ಸಣ್ಣ ಕುಂಟೆಗಳೂ ಇಲ್ಲಿ ಕೆರೆಯಾಗಿವೆ. ಕುಂಟೆ ಅಂದರೆ ಕೆರೆಯ ಅಥವಾ ಭೂಮಿಯ ಇಂಗದ ಹೆಚ್ಚವರಿ ನೀರು ಇದರಲ್ಲಿ ಸೇರುತ್ತದೆ. ಇದೂ ಕೂಡ ಅಂತರ್ಜಲ ಏರಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಒಂದಷ್ಟು ಕುಂಟೆಗಳನ್ನು ಊಳೆತ್ತಿ ಕೆರೆಯಾಗಿಸಿರುವುದರಿಂದ ಕುಂಟೆಗೆ ಇರುವ ಕ್ಯಾಚ್‌ಮೆಂಟ್ ಏರಿಯಾದಿಂದ ನೀರು ಸರಬರಾಜಾಗುತ್ತಿಲ್ಲ.
ಇದು ದೊಡ್ಡ ದುರಂತ.
ನಾಗರಹೊಳೆ ಹಿಂಗೇ
ಜನವರಿ, ಫೆಬ್ರವರಿ, ಮಾರ್ಚಿ ಬಂದರಂತೂ ಕಾಡಿಗೆ ಪುರುಸೊತ್ತಿರೋಲ್ಲ. ಎಲ್ಲ ಅಧಿಕಾರಿಗಳ ಕೈಯಲ್ಲೂ “ಬಿಲ್ಲು ಬಾಣ’ಗಳಿರುತ್ತವೆ. ವರ್ಷದ ಕೊನೆ ಬಾಕಿ ಉಳಿದಿರುವ ಬಿಲ್ಲುಗಳನ್ನು ಪೂರೈಸಲು ಇದು ಸುಸಮಯ. ಈ ಕಾರಣಕ್ಕೆ ಕಾಡಲ್ಲಿ ಸದ್ದು ಹೆಚ್ಚು. ನಾಗರಹೊಳೆ ಕೂಡ ಇದಕ್ಕೆ ಹೊರತಾಗಿಲ್ಲ. ಸಿಸಿಎಫ್ ಮಣಿಕಂದನ್ ಸಾಹೇಬರು ” ನಮ್ಮಲ್ಲಿ ನೀರ ಸಮಸ್ಯೆ ಇಲ್ಲವೇ ಇಲ್ಲ. 1. ಲಕ್ಷ್ಣತೀರ್ಥ ನದಿಯ ಮೂಲಕ, 2, ಸೋಲಾರ್ ಪಂಪ್‌ಸೆಟ್ ಮೂಲಕ, 3 ಜನರೇಟರ್ ಬಳಸಿ, 4 ಟ್ಯಾಂಕರ್ ಮೂಲಕ 5. ಸಣ್ಣ ಸಣ್ಣ ಹಳ್ಳ ತೋಡಿ ನೀರು ಇಂಗಿಸುವ ಮೂಲಕ – ಹೀಗೆ ನೀರನ್ನು ಹಿಡಿದಿಡುತ್ತಿದ್ದೇವೆ. ಈ ಕಾರಣದಿಂದ ಅಷ್ಟೊಂದು ಸಮಸ್ಯೆ ಇಲ್ಲ. ಎಲ್ಲ ಪ್ರಾಣಿಗಳೂ ಕ್ಷೇಮವಾಗಿವೆ ‘ ಎಂದು ಷರಾ ಬರೆದು ಬಿಟ್ಟರು.
“ಸಾರ್, ಟ್ಯಾಂಕ್ ಮೂಲಕ ನೀರು ಹಾಯಿಸಿದರೆ ಪ್ರಾಣಿಗಳಿಗೆ ತೊಂದರೆ ಆಗೋಲ್ಲವೇ?’ ಅಂತ ಹಳೆ ಪ್ರಶ್ನೆ ಕೇಳಿದಾಕ್ಷಣ- ಅಯ್ಯೋ, ಪ್ರತಿದಿನ ನಾವೆಲ್ಲಾ ರೌಂಡ್ಸ್ ಹೋಗ್ತಿàವಿ. ಆಗೇನು ತೊಂದರೆ ಆಗೋಲ್ಲವೇ? ಟ್ಯಾಂಕರ್ ಜಾಸ್ತಿ ಹೊತ್ತು ಇರೋಲ್ಲ. ಎಷ್ಟೋ ರೈತರು ನೀರು ಕುಡಿಯೋಕೆ ಆನೆ, ಚಿರತೆ ಬಂದಿತ್ತು ಅಂತೆಲ್ಲಾ ಹೇಳ್ತಾರೆ. ಹಾಗಾದರೆ ನಾವೇಕೆ ಅವಕ್ಕೆ ನೀರು ಕೊಡಬಾರದು. ಇವೆಲ್ಲಾ ಮಾನವ ಸಂಘರ್ಷ ಕಡಿಮೆ ಮಾಡುವ ಪ್ರಯತ್ನಗಳು ಅಂದರು.
ಪಾರ್ಕಿಗೆ ಅಡಿ ಇಡುತ್ತಿದ್ದಂತೆ ಎಡಭಾಗದಲ್ಲೇ ಸಣ್ಣ ಕುಂಟೆ. ಅರಣ್ಯ ಇಲಾಖೆ ಭಾಷೆಯಲ್ಲಿ ಇದು ಕೆರೆಯೇ. ಹಾಗೇ ಮುಂದೆ ಹೋದರೆ ಮರಳುಕಟ್ಟೆಯಲ್ಲಿ ದೊಡ್ಡದಾದ ಕೆರೆ. ಊಳು ಎತ್ತಿದೆ. ಅಲ್ಲಿ ಸೋಲಾರ್ ಪಂಪಿನ ಮೂಲಕ ನೀರು ಹಾಯಿಸುತ್ತಿದ್ದರು. ದಿನಂಪ್ರತಿ 7 ಗಂಟೆ ನೀರು. ಅಂತರಸಂತೆ, ಮೇಟಿಕುಪ್ಪೆಯಲ್ಲೂ ಇದೇ ರೀತಿಯ ಬೋರ್‌ವೆಲ್‌ಗಳು ಹಾಕಿ ಕೆರೆಗಳಿಗೆ ನೀರು ಉಣಿಸುತ್ತಿದ್ದಾರೆ. ಇಲ್ಲಿನ ಕೆರೆಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಕುಡಿಸೋದು ಸಾಮಾನ್ಯ. ಪ್ರತಿ ಟ್ಯಾಂಕರ್ ಅಂದಾಜು ಎರಡು ಸಾವಿರ ರೂ. ಅಕ್ಕಪಕ್ಕದ ರೈತರು, ರೆಸಾರ್ಟ್‌ನವರು ಉಚಿತ ನೀರು ಕೊಟ್ಟರೆ, ಇಲಾಖೆ ಡೀಸೆಲ್ ತುಂಬಿಸಿಕೊಂಡರೆ – 24 ಗಂಟೆ ನೀರು ಹೊಡೆಯಬಹುದು. ಇದಕ್ಕೆ ಸರಾಸರಿ 2-3 ಸಾವಿರ ರೂ. ಬಾಡಿಗೆ. ದಿನಕ್ಕೆ ಮೂರು ಟ್ರಿಪ್ಪಿನಂತೆ ವಾರಕ್ಕೆ ಮೂರು ನಾಲ್ಕು ಬಾರಿ, ಕೆರೆಗೆ ನೀರು ಕುಡಿಸುತ್ತಾರೆ. ನಾಗರಹೊಳೆಯಲ್ಲೂ ಹೆಚ್ಚಾ ಕಡಿಮೆ 300ಕ್ಕೂ ಹೆಚ್ಚು ಕೆರೆಗಳಿವೆ. ಲೆಕ್ಕದ ಪ್ರಕಾರ 20 ಬೋರ್‌ವೆಲ್‌ಗಳು ಹಾಕಿವೆ. ಸುಮಾರು 500 ಅಡಿಗೆ ನೀರು ಸಿಕ್ಕಿದೆ. ಇದಕ್ಕಿಂತ ಹುಣಸೂರು ಪಟ್ಟಣವೇ ವಾಸಿ. ಅಲ್ಲಿ 250 ಅಡಿಗೆ ನೀರು ಸಿಗುತ್ತಿದೆ.
ಬರೀ ಅಭಿವೃದ್ಧಿ ಕೆಲಸ ಮಾಡಿದರೆ ನೀರು ಎಲ್ಲಿ ಸಿಗುತ್ತದೆ. ನಾಗರಹೊಳೆ, ಬಂಡೀಪುರಕ್ಕೆ ಅಗತ್ಯಕ್ಕಿಂತ ಹೆಚ್ಚೆಚ್ಚು ಕಬ್ಬಿಣ, ಸೀಮೆಂಟ್ ಸರಬರಾಜಾಗುತ್ತಿದೆ. ಇವೆಲ್ಲ ಏತಕ್ಕೆ? ಕಾಡು ಕಾಯೋಕೆ ಇವೆಲ್ಲ ಏಕೆ ಬೇಕು ಅಂತಾರೆ’ ಪರಿಸರವಾದಿ ಮುತ್ತಣ್ಣ.
ಒಂದರ್ಥದಲ್ಲಿ ಜನವರಿಯಿಂದ ಮಾರ್ಚ್ ತನಕ ನಾಗರಹೊಳೆ ಒಂಥರ ಮೈಸೂರು ಜೂ ಇದ್ದಾಗೆ. ಆದರೆ ಪ್ರಾಣಿಗಳು ಮಾತ್ರ ಕಾಣೋದಿಲ್ಲ. ಏಕೆಂದರೆ ಪಾಪ, ಬೇಟೆ, ಬೆಂಕಿ, ದನಗಳು ನುಗ್ಗದಂತೆ ನೋಡಿಕೊಳ್ಳಬೇಕಾದವರು ನೀರು ತುಂಬಿಸುತ್ತಿರುತ್ತಾರೆ.
ಬೆಂಗಳೂರಿಗೆ ನೀರು ಇಲ್ಲಿಂದಲೇ…
ನಾಗರಹೊಳೆ ಬಂಡೀಪುರವನ್ನು ಬೇರ್ಪಡಿಸಿರುವುದು ಮೋಯಾರ್ ನದಿ. ದಾಸನಕಟ್ಟೆ, ಓಂಕಾರ್ ರೇಂಜಲ್ಲಿ 30-40 ಕೆರೆಗಳಿವೆ. ಅವೆಲ್ಲ ಇದೇ ನದಿಗೆ ಬಂದು ಸೇರುತ್ತದೆ. ಮೋಯಾರ್ ತಮಿಳುನಾಡಿನ ಭವಾನಿಸಾಗರಕ್ಕೆ ತಲುಪುತ್ತದೆ. ಸುಲ್ತಾನ್‌ಬತೇರಿ ಮಾರ್ಗದಲ್ಲಿ ದುಬ್ಬಗುಂಟು ಹಳ್ಳ, ಸಾಲೇಮರದ ತಿಟ್ಟು ಹಳ್ಳಗಳಿವೆ. ಇವೆಲ್ಲ ಸೇರಿಯೇ ವಾರಂಚಿ ಹೊಳೆಯಾಗೋದು. ಕಾಳರಹಟ್ಟಿ ಹೊಳೆ ಕಾವಡಿ ಬೆಟ್ಟದ ಹರಿವು ಕೂಡ ಇಲ್ಲಿಗೇ ಸೇರುತ್ತದೆ. ಹೀಗೆ ಇಲ್ಲಿ ನೂರಾರು ತೊರೆಗಳಿವೆ. ಎಲ್ಲವೂ ಹುಟ್ಟುವುದು ಮಳೆಗಾಲದಲ್ಲಿ. ಡಿಸೆಂಬರ್ ತನಕ ತಣುಪನ್ನು ಇಟ್ಟುಕೊಂಡಿರುತ್ತದೆ. ಜನವರಿ ಹುಟ್ಟಿದ ನಂತರ ದಿನೇ ದಿನೇ ಬರಿದಾಗುತ್ತಾ ಹೋಗುತ್ತದೆ. ಆದರೆ ಈ ನೀರು ಯಾವುದೂ ಕೂಡ ನೇರ ಕೆ.ಆರ್.ಎಸ್‌ಗೆ ಬರುವುದಿಲ್ಲ. ಬೇಗೂರು, ಗುಂಡ್ರೆಯ ಸ್ವಲ್ಪ ಮಟ್ಟಿನ ನೀರು ಕಬಿನಿ ಹಿನ್ನೀರಿಗೆ ಬರುತ್ತದೆ. ಆದರೆ ನಾಗರಹೊಳೆ ಹೀಗಾಗಲ್ಲ. ಎಂಟು ರೇಂಜ್‌ಗಳಲ್ಲಿ ಒಟ್ಟಾರೆ 140ಕ್ಕೂ ಹೆಚ್ಚು ಕೆರೆಗಳಿವೆ. ಸಣ್ಣ ತೊರೆಗಳ ಜೊತೆಗೆ ಲಕ್ಷ್ಮಣ ತೀರ್ಥ ನದಿ ಇದೆ. ನುಗು, ತಾರಕ್ ಡ್ಯಾಂ ಬೆಂಬಲವಿದೆ.
ಮೇಟಿಕುಪ್ಪೆ, ಅಂತರಸಂತೆಯ ರೇಂಜ್‌ಗಳ ನೀರು ತಾರಕಕ್ಕೆ ಸೇರುತ್ತದೆ. ಲಕ್ಷಣತೀರ್ಥ ನಾಗರಹೊಳೆಯ ಈಶಾನ್ಯದಲ್ಲಿದೆ. ಅದಕ್ಕೆ ಕಲ್ಲಾಳ, ಹೆಬ್ಟಾಳ, ನಾಗರಹೊಳೆ ಆನೆಚೌಕೂರಿಗೆ ಕೂರ್ಗಿನ ನೆರವಿದೆ. ಇಲ್ಲಿ ಎವರ್‌ಗ್ರೀನ್ ಕಾಡಿರುವುದರಿಂದ ನೀರಿಗೆ ತೊಂದರೆ ಇಲ್ಲ. ಹೆಚ್ಚಾ ಕಡಿಮೆ ಈ ಭಾಗದಲ್ಲಿ 60ಕ್ಕೂ ಹೆಚ್ಚು ಕೆರೆಗಳಿವೆ. ಆನೇಚೌಕೂರು, ವೀರನಹೊಸಳ್ಳಿ ನೀರು ಇಲ್ಲಿಗೆ ಬರೋದು. ಲಕ್ಷಣತೀರ್ಥ ಇರುಪು ಫಾಲ್ಸ್, ನುಗು ಡ್ಯಾಂ ಮೂಲಕ ಕೆಆರ್‌ಎಸ್‌ಗೆ ಇಲ್ಲಿನ ನೀರು ತಲುಪುತ್ತದೆ. ಅಂದರೆ ನಾಗರಹೊಳೆ ಬರಿದಾದರೆ- ಬೆಂಗಳೂರ ಗಂಟಲು ಆರುತ್ತದೆ ಎಂದರ್ಥ.
ಕಾಡಿನ ಕೆರೆಗೆ ನೀರು ತುಂಬಿಸಬೇಕೋ ಬೇಡವೋ?
ಬೇಸಿಗೆ ಬಂದರೆ ಕಾಡಿಗೆ ದೀಪಾವಳಿ. ಕೆರೆಗಳಿಗೆ ನೀರು ತುಂಬುವ ಹಬ್ಬ ಶುರು. ಬೋರ್ ಕೊರೆಸಿ, ನೀರು ತೆಗೆದು ಕೆರೆಗೆ ತುಂಬಿಸುವುದು, ಟ್ಯಾಂಕರ್ ಮೂಲಕ ನೀರು ಹಾಯಿಸುವುದು, ಊಳು ಎತ್ತಿ ಸಂಭ್ರಮಿಸುವುದು ನಡೆಯುತ್ತದೆ. ” ಹಂಪ್‌ಗೆ ಯಾರಾದರು ಹಾರನ್ ಹೊಡೀತಾರೇನ್ರೀ, ನೀರು ಕೊಡೋ ಕಾಡಿಗೇ ನೀರು ಕುಡಿಸ್ತಾರೇನ್ರೀ- ಅನ್ನೋರು ಇದ್ದಾರೆ. ಹಾಗಾದರೆ ಕಾಡಿನ ಕೆರೆಗಳಿಗೆ ನೀರು ತುಂಬಿಸಬೇಕೇ, ಬೇಡವೇ? ಇಲ್ಲಿದೆ ಉತ್ತರ.
ನೀರು ತುಂಬಿಸಿ, ಅದೇ ದೊಡ್ಡ ಕೆಲಸ ಅಲ್ಲ
ಇಂದಿನ ಪರಿಸ್ಥಿತಿಗೆ ಕೆರೆಗೆ ನೀರು ತುಂಬಿಸೋದು ಅವಶ್ಯ. ಏಕೆಂದರೆ ಅರಣ್ಯ ಚಿದ್ರೀಕರಣವಾಗಿದೆ. ಊರು,ಹಳ್ಳಿ ಬಂದು ಕೂತಿದೆ. ಈ ಕಾರಣಕ್ಕೆ ಪ್ರಾಣಿಗಳು ನೀರು, ಆಹಾರಕ್ಕಾಗಿ ವಲಸೆ ಹೋಗುವ ಸ್ಥಿತಿ ಇಲ್ಲ. ನೀರು ಜಲಾಶಯದಿಂದ ತೆಗೆದು ತುಂಬಿಸಿದರೆ ಬಹಳ ಒಳ್ಳೆಯದು. ಕೊಳವೆ ಬಾವಿಯಿಂದ ಆಳದಿಂದ ತೆಗೆದ ನೀರು ಒಳ್ಳೇದಲ್ಲ. ಟೀಕ್, ನೀಲಗಿರಿ, ರೋಜಕಂಟಿಗಳನ್ನು ಬೆಳೆಸುತ್ತಾ ದುಡ್ಡು ಮಾಡುವ ಹಾದಿ ಹಿಡಿಯಬಾರದು. ಕಲಂಮರ, ಕಣಗಲೆ, ನರುಕಲು ಹೀಗೆ ಅನೇಕ ಗಿಡಬಳ್ಳಿಗಳಿವೆ. ನುರುಕಲವನ್ನು ಕೋತಿ, ಜಿಂಕೆಗಳೂ ಹುಡುಕಿ ತಿನ್ನುತ್ತವೆ. ಇಂಥ ನೀರು ಹಿಡಿಯುವ ಗಿಡ ಬೆಳೆಸುವ ಪ್ರಯೋಗಗಳನ್ನು ಮಾಡದೇ ಕೇವಲ ಕೆರೆಗೆ ನೀರು ತುಂಬಿಸುವುದೇ ದೊಡ್ಡದಲ್ಲ.
ಶಿವಾನಂದ ಕಳವೆ, ಪರಿಸರ ತಜ್ಞ
ಪ್ರಾಣಿಗೆ ಆಯ್ತು, ಮರಗಳಿಗೂ ನೀರು ಕೊಡ್ತೀರಾ?
ನಿಸರ್ಗದಲ್ಲಿ ಬರ ಬರೋದು ಸಾಮಾನ್ಯ. ಬರ ಬಂದಾಗ ಕೈಲಾಗದ ಪ್ರಾಣಿಗಳನ್ನು ಪ್ರಕೃತಿ ಬ್ಯಾಲೆನ್ಸ್ ಮಾಡಿಕೊಳ್ಳುತ್ತದೆ. ಹಾಗಂತ ಅವುಗಳಿಗೆ ನೀರು ಕೊಟ್ಟು ಸರಿಪಡಿಸೋಕೆ ಆಗೋದಿಲ್ಲ. ಪ್ರಾಣಿಗಳಿಗೆ ದಾಹಜಾಸ್ತಿಯಾಗುತ್ತಿದೆ ಪಾಪ ಅಂತ ನೀರು ಕೊಡುವುದಾದರೆ ಕಾಡಿನ ಪ್ರತಿ ಮರಗಳಿಗೆ ಪಾತಿ ಮಾಡಿ, ನೀರು ಹಾಕಿ ಬೆಳಸೋಕೆ ಆಗುತ್ತಾ? ಹಾಗಾದರೆ ಮರ, ಗಿಡಗಳ ನೋವು ಕೇಳ್ಳೋರು ಯಾರು? ಬೆಂಗಳೂರಲ್ಲಾದರೆ ಜಾಗ ಇಲ್ಲ ಅಂದರೆ ಒಂದರ ಮೇಲೆ ಇನ್ನೊಂದು ಮನೆ ಕಟ್ಟಿ ಅಪಾರ್ಟಮೆಂಟ್ ನಿರ್ಮಿಸಬಹುದು. ಆದರೆ ಒಂದು ಕಾಡಿನ ಮೇಲೆ ಇನ್ನೊಂದು ಕಾಡು ನಿರ್ಮಿಸಿ ಪ್ರಾಣಿಗಳಿಗೆ ಜಾಗ ಮಾಡಿಕೊಡೋಕ್ಕೆ ಆಗುತ್ತಾ? ಕಾಡನ್ನು ತನ್ನ ಪಾಡಿಗೆ ಬಿಟ್ಟರೆ ಎಲ್ಲ ಸರಿಹೋಗುತ್ತದೆ.
ಸಂಜಯ್‌ಗಾಬ್ಬಿ, ವನ್ಯಜೀವಿ ತಜ್ಞ
ನೀರ ಹಬ್ಬ ಮಾಡಬೇಡಿ
ಪ್ರಾಣಿಗಳಿಗೆ ನೀರು ಬೇಕು. ಹಾಗಂತ ಕೆರೆಗೆ ನೀರು ಹಾಯಿಸುವುದು ಸಂಭ್ರಮವಲ್ಲ. ಅದಕ್ಕಾಗಿ ರಸ್ತೆ ಮಾಡೋದು, ಸೈನ್ಯ ಕಟ್ಟಿಕೊಂಡು ಹೋಗೋದು ಆಗಬಾರದು. ಊರು ಬೆಳೆದಿದೆ. ಕಾಡು ಚಿಕ್ಕದಾಗುತ್ತಿದೆ. ಕಾಡಿನ ಅಂಚಲೆಲ್ಲಾ ಬೋರ್‌ವೆಲ್ ಕೊರೆಸಿರುವುದರಿಂದ ಒಳಗೆ ನೀರಿಲ್ಲ. ಫಾರೆಸ್ಟ್ ಫೈರು, ಊರು ಬೆಳೆದು ಪ್ರಾಣಿಗಳಿಗೆ ಜಾಗ ಕಡಿಮೆಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ಪ್ರಾಣಿಗಳು ನೀರು ಹುಡುಕಿಕೊಂಡು ಹೋಗೋದು ಕಷ್ಟವೇ. ಅದಕ್ಕೆ ಕೆರೆಗೆ ನೀರು ಹಾಯಿಸಲಿ. ಇದರ ಹಿಂದೆ ದುರುದ್ದೇಶ ಇರಬಾರದು ಅಷ್ಟೇ.
ನಾಗೇಶ್ ಹೆಗಡೆ, ಪರಿಸರ ತಜ್ಞ
ನೀರು ಕುಡಿಸೋದು ದುಡ್ಡು ಮಾಡೋಕೆ…
ಮಳೆ ಬರಿಸೋದು, ಮಳೆ ನಿಲ್ಲಿಸೋದು, ಬರ ಬರೋದು, ಪ್ರಾಣಿ ಸಾಯೋದು ಎಲ್ಲವೂ ಪ್ರಕೃತಿ ತೀರ್ಮಾನ. ನಮ್ಮದು ನಿಮ್ಮದು ಅಲ್ಲ. ಕೆರೆ ತೋಡೋದು, ಅದಕ್ಕೆ ನೀರು ಬಿಡೋದು ಎಲ್ಲಾ ದುಡ್ಡು ಮಾಡೋ ದಾರಿಗಳಷ್ಟೇ. ಇಲಾಖೆ ಅಧಿಕಾರಿಗಳು ಕಾಡಿಗೆ ಬೆಂಕಿ ಬೀಳದಂತೆ, ಪೋಚಿಂಗ್ ನಡೆಯದಾಗೆ ನೋಡಿಕೊಂಡರೆ ದೊಡ್ಡ ಉಪಕಾರ ಮಾಡಿದಂತೆ. ಪ್ರಾಣಿಗಳಿಗೆ ನೀರು ಕುಡಿಸುವ ಜವಾಬ್ದಾರಿ ಇವರಿಗೆ ಏಕೆ? ಆನೆ ತಡೆಯೋಕೆ ಟ್ರಂಚ್ ತೆಗೆದದ್ದಾಯ್ತು, ಗೋಡೆ ಕಟ್ಟಿದ್ದಾಯ್ತು, ಸೌರಶಕ್ತಿ ಬೇಲಿ, ರೈಲ್ವೇಕಂಬಿ ನೆಟ್ಟಿದ್ದು ಆಯ್ತು. ಫಲಿತಾಂಶ ಏನು? ಕೊಬ್ಬಿದ ಅಧಿಕಾರಿಗಳು ದುಡ್ಡು ಮಾಡಿದ್ದು. ಇವರ ಆಸಕ್ತಿ ಎಷ್ಟಿದೆ ಅನ್ನೋದು ನೋಡಿ- ನಾಗರಹೊಳೆ ವ್ಯಾಪ್ತಿಯಲ್ಲಿ ಚಿಕ್ಕಬಾಲ ಅನ್ನೋ ಜಾಗ ಇದೆ. ದಶಕಗಳಿಂದ ಇಲ್ಲಿ ಬಿದಿರು ದಟ್ಟವಾಗಿತ್ತು. ಬೆಂಕಿ ಬೀಳುತ್ತೆ ಅಂತ ನೆಪ ಹೇಳಿ ಪೂರ್ತಿ ಮೈದಾನ ಮಾಡಿಟ್ಟಿದ್ದಾರೆ. ಈಗ ಆನೆ ಎಲ್ಲಿಹೋಗುತ್ತೆ? ಏನು ಬಡ್ಕೊàಬೇಕು ಇವರಿಗೆ.
ಈಗ ನೀರ ಹೆಸರು ಹೇಳಿ ದುಡ್ಡು ಮಾಡ್ತಾ ಇದ್ದಾರೆ ಅಷ್ಟೇ.
ಕೆ.ಎಂ. ಚಿಣ್ಣಪ್ಪ, ನಿವೃತ್ತರೇಂಜರ್,
ಟ್ರಂಚ್ ತೆಗೆದರೆ ಆನೆ. ಗೋಡೆ ಕಟ್ಟಿದರೆ ಆನೆ ನಿಲ್ಲುತ್ತದೆ, ಹೋಯ್ತು..ಸೌರಶಕ್ತಿ ಬೇಲಿ.
ವೆಸ್ಟ್ರನ್‌ಗಾಟ್‌ಗೆ ಟ್ರಂಚ್ ಹೊಡೀತಿದ್ದಾರೆ. ಅದೇ ದುಡ್ಡನ್ನೆಲ್ಲಾ ಎಷ್ಟಾಗುತ್ತ ಕೋಟಿ, ಕೋಟಿ ಟ್ರಂಚ್ ಎಷ್ಟು, 300-400 ಕೋಟಿ.. ನೂರು ನಷ್ಟ ಬಂದಿದ್ದರೆ. ಬಿಳಿ ಹಂದಿ ಇತ್ತಂತೆ ಜನಕ್ಕೆ ಕೊಡೋದನ್ನು ಕೊಟ್ಟು ಬಿಡಿ ಅವರು ಮಾತೋಡಲ್ಲ. ಸೆನ್ಸಿಟೀವ್ ಜೋನ್ ಹೆಸರು. ಓಡಾಡೋದು ಯಾರು?
ಇದೆಲ್ಲಾ ನ್ಯಾಚುರಲ್ ಬ್ಯಾನೆಲ್ ಜೋರು ಮಳೆ, ಮಳೆ ಆಗೋಲ್ಲ. ಪ್ರಾಣಿಗಳು ಸಾಯ್ತದೆ. ಅದು ಬಿಟ್ಟು ಕೆರೆ ತೋಡೋದು, ನೀರು ಕೊಡೋದು. ಬರ ಬರೋದಿಲ್ಲವಾ ಆಗಲೇಬೇಕು. ದುಡ್ಡು ಮಾಡೋಕೆ ಇರೋ ದಾರಿ. ನೀರಿಲ್ಲ ಅಂತ ಹೇಳಿಕೊಂಡು ದುಡ್ಡು ಮಾಡೋದು. ನೇಚರ್ ಬಿಟ್ಟು ಬಿಡಿ. ನೋಡಿಕೊಳದೆ. ಬೆಂಕಿ, ಪೋಚಿಂಗ್ ಕಂಟ್ರೋಲ್ ಮಾಡಿ..
ಚಿಕ್ಕಬಾಲ ಬ್ಯಾಂಬೋ ಗಿಂಬೂ ಬಿದ್ದು. ಇಡೀ ರಾತ್ರಿ ಬ್ಯಾಂಬೋ ಸುಟ್ಟು ಬಿಟ್ಟಿದ್ದಾರೆ. ಮೈದಾನ ಮಾಡಿದ್ದಾರೆ. ಮನೆ ಮೆಂದರು ದುಡ್ಡು ಮಾಡ್ತಾರೆ.
ಕಟ್ಟೆ ಗುರುರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.