ಗಂಗೂಲಿಗಾಗಿ ಬಿಸಿಸಿಐ ನಿಯಮ ಬದಲಾವಣೆ?
Team Udayavani, Nov 16, 2019, 4:03 AM IST
ಲೋಧಾ ಶಿಫಾರಸಿನ ಪ್ರಕಾರ 6 ವರ್ಷ ಅಧಿಕಾರದಲ್ಲಿದ್ದವರು ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ)ನಲ್ಲಿ ಮತ್ತೆ ಅಧಿಕಾರ ಹೊಂದುವಂತಿಲ್ಲ. ಹಿಂದೆ ಸುಪ್ರೀಂ ಕೋರ್ಟ್‌ಗೆ ಲೋಧಾ ಸಮಿತಿಯು ಕ್ರಿಕೆಟ್‌ನಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಹಲವು ಶಿಫಾರಸು ಮಾಡಿತ್ತು. ಅದರಲ್ಲಿ 6 ವರ್ಷಕ್ಕಿಂತ ಹೆಚ್ಚಾಗಿ ವ್ಯಕ್ತಿಯೊಬ್ಬರು ಬಿಸಿಸಿಐನಲ್ಲಿ ಹುದ್ಧೆ ಹೊಂದಿರಬಾರದು ಎನ್ನುವ ಅಂಶವೂ ಒಳಗೊಂಡಿತ್ತು.
ಬಿಸಿಸಿಐಗೆ ವಿನೋದ್ ರಾಯ್ ನೇತೃತ್ವದ ಆಡಳಿತಾಧಿಕಾರಿಗಳು ಅಧಿಕಾರದಲ್ಲಿದ್ದಾಗ ಈ ನಿಯಮ ಜಾರಿಯಾಗಿತ್ತು. ಈಗ ಬಿಸಿಸಿಐಗೆ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಗಂಗೂಲಿ 5 ವರ್ಷ 3 ತಿಂಗಳು ಕಾರ್ಯ ನಿರ್ವಹಿಸಿರುವುದರಿಂದ ಅವರು ಮುಂದೆ ಬಿಸಿಸಿಐನಲ್ಲಿ 9 ತಿಂಗಳು ಆಡಳಿತ ಮಾಡುವ ಅವಕಾಶ ಮಾತ್ರ ಬಾಕಿ ಇದೆ.
ಮೂಲಗಳ ಪ್ರಕಾರ, ಗಂಗೂಲಿಯಂತಹ ಆಡಳಿತಾಧಿಕಾರಿಗಳು ಭಾರತ ಕ್ರಿಕೆಟ್‌ಗೆ ಬೇಕು ಎನ್ನುವ ಉದ್ದೇಶದಿಂದ ಬಿಸಿಸಿಐ ಇದೀಗ ತನ್ನ ನಿಯಮವನ್ನೇ ಬದಲಾವಣೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಕೆಲವರು ಈ ನಿರ್ಧಾರವನ್ನು ಮುಕ್ತ ಕಂಠದಿಂದ ಸ್ವಾಗತಿಸಿದ್ದಾರೆ. ಮತ್ತೆ ಕೆಲವರು ನಿಯಮ ಉಲ್ಲಂಘನೆ ನಡೆಸುವುದನ್ನು ವಿರೋಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.