ಮಲೆನಾಡಿನ ಮಡಿಲಲ್ಲಿ ನಿಸರ್ಗದ ಸೊಬಗಲ್ಲಿ: ಕಲ್ಲತ್ತಗಿರಿ ಜಲಪಾತ
Team Udayavani, Sep 8, 2018, 4:06 PM IST
ರಾತ್ರಿ ಇಡೀ ಮಳೆ. ಕೆಮ್ಮಣ್ಣು ಗುಂಡಿಯ ಹಾದಿಯಲ್ಲಿ ಉದ್ದಕ್ಕೂ ಗುಂಡಿಗಳೇ ಸಿಕ್ಕವು. ಕಲ್ಲತ್ತಗಿರಿ ಜಲಪಾತ ನೋಡುವ ಉತ್ಸಾಹ ನೂರ್ಮುಡಿಯಾಗಿದ್ದು ಈ ಮಳೆಯಿಂದಲೇ.
ಜಲಪಾತ ನೋಡಲು ಅಣಿಯಾದೆವು. ಅಲ್ಲಿಯೇ ಹತ್ತಿರದ ಹೋಟೆಲ್‌ವೊಂದರಲ್ಲಿ ಉಪಹಾರ ಮುಗಿಸಿ ಬಳುಕಿನ ಹಾದಿಯಲ್ಲಿ ಮಲೆನಾಡ ಸೊಬಗನ್ನು ಸವಿಯುತ್ತಾ ಹೊರಟೆವು. ಎಲ್ಲೆಲ್ಲೂ ಹಚ್ಚ ಹಸಿರು, ನಡುನಡುವೆ ಸುರಿವ ತುಂತುರು. ಜೊತೆ ಜೊತೆಗೆ ಜೋರು ಮಳೆ. ಹಸಿರು ಗಿರಿಶ್ರೇಣಿಗಳ ಮೇಲೆ ಹಾರಾಡುತ್ತಾ ಹಸಿರು ಗುಡ್ಡಗಳಿಗೆ ಮುತ್ತಿಕ್ಕುವ ಮುದವಾದ ನೋಟ ನಮ್ಮ ಕಣ್ಣುಗಳನ್ನು ತಂಪಾಗಿಸಿತು. ದಾರಿಯ ನಡುವೆ ಸಿಗುವ ಸಣ್ಣ ಸಣ್ಣ ಜಲಪಾತಗಳು ಇನ್ನಷ್ಟು ಹುಚ್ಚೆಬ್ಬಿಸಿದ್ದವು. ಎಲ್ಲರೂ ಫೋಟೋ ಶೂಟ್ ನಡೆಸಿದ್ದೇ ನಡೆಸಿದ್ದು.
ಜಲಪಾತದ ಸೊಬಗು
ಅರಣ್ಯ ಇಲಾಖೆಯ ತಪಾಸಣೆ ಮುಗಿಸಿಕೊಂಡು ಜಲಪಾತದ ಹತ್ತಿರಕ್ಕೆ ಬಂದಾಗಲೂ ಮಳೆ ಸುರಿಯುತ್ತಲೇ ಇತ್ತು. ಮಳೆಹನಿಗಳ ಜೊತೆ ಹರಿಯುವ ನೀರಿನಲ್ಲಿ ಮಿಂದು ಅಲ್ಲಿಯೇ ಇದ್ದ ಹೋಟೆಲ್‌ವೊಂದರಲ್ಲಿ ಕುಡಿದ ಮಲೆನಾಡಿನ ಬಿಸಿ ಬಿಸಿ ಕಾಫಿ, ಹೃದಯವನ್ನು ಬೆಚ್ಚಗೆ ಮಾಡಿತು. ಅಲ್ಲಿಂದ ಹೊರಟ ತಲುಪಿದ್ದು ಝೆಡ್‌ಪಾಯಿಂಟ್‌ಗೆ.
ಅಲ್ಲೂ ಜಿಟಿಜಿಟಿ ಮಳೆ, ಮೈ ಕೊರೆಯುವ ಚಳಿ. ಸುಂದರ ಪರಿಸರ, ಮಳೆಯಿಂದಾಗಿ ಎಲ್ಲೆಲ್ಲೂ ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುವ ಪರ್ವತ ಸಾಲುಗಳ ರುದ್ರರಮಣೀಯ ಪರಿಸರ.
ನೋಡುತ್ತಾ ಅಲ್ಲಿಯೇ ಇದ್ದು ಇಡಬೇಕೆನಿಸುವಷ್ಟು ಆನಂದ. ಸ್ವಲ್ಪ ಮುಂದೆ ಸಾಗುತ್ತಿರುವಾಗಲೇ ಧುಮುಕುತ್ತಿರುವ ನೀರಿನ ಜಲಧಾರೆಯ ದರ್ಶನವಾಯ್ತು. ಅದೇ ಶಾಂತಿ ಜಲಪಾತ. ಜಲಧಾರೆಯ ಸೌಂದರ್ಯವನ್ನು ಕಣ್ತುಂಬಿಕೊಂಡು ಪ್ರಯಾಣ ಮುಂದುವರೆಸಿದೆವು.
ಮುಂದೆ ಸಿಕ್ಕಿದ್ದು, ಎಲ್ಲೆಲ್ಲೂ ಹಸಿರು ಸೀರೆಯನ್ನು ಉಟ್ಟ ಪರ್ವತ ಸಾಲುಗಳೇ. ಪ್ರಕೃತಿಯ ಹಸಿರ ಸೌಂದರ್ಯವನ್ನು ಆಸ್ವಾದಿಸುತ್ತಾ ಗುಡ್ಡದ ತುತ್ತತುದಿಯನ್ನು ತಲುಪಿದಾಗ ಸ್ವರ್ಗಕ್ಕೆ ಮೂರೇ ಗೇಣು. ಮೈಮನಗಳಲ್ಲಿ ನಿಜಾರ್ಥದಲ್ಲಿ ರೋಮಾಂಚನ ಉಂಟುಮಾಡುವಂಥ ಜಾಗ. ಸ್ವಲ್ಪ ಸಮಯ ಅಲ್ಲೇ ಕಾಲ ಕಳೆದು ವಾಪಸ್ ಹೊರಟೆವು.
ಕೆಮ್ಮಣ್ಣುಗುಂಡಿಯಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಲಾಡ್ಜ್, ಹೋಮ್‌ಸ್ಟೇ, ಕಾಟೇಜ್‌ಗಳ ಸೌಕರ್ಯವಿದೆ. ಊಟ ಉಪಹಾರಕ್ಕೆ ಅಷ್ಟೇನೂ ಹೇಳಿಕೊಳ್ಳುವಂತಹ ಹೋಟೆಲ್‌ಗಳಿಲ್ಲದಿದ್ದರೂ ಹಸಿವು ಮರೆಸುವುದರಲ್ಲಿ ಸಂಶಯವಿಲ್ಲ.
ಹೋಗುವುದು ಹೇಗೆ
ಬೆಂಗಳೂರಿನಿಂದ ಹೋಗುವುದಾದರೆ 275 ಕಿ.ುà., ಮೈಸೂರಿನಿಂದ 216 ಕಿ.ಮೀ. ಕೆಮ್ಮಣ್ಣುಗುಂಡಿುಂದ 04 ಕಿ.ಮೀ ಸಾಗಿದರೆ ಸಿಗುತ್ತದೆ ಕಲ್ಲತ್ತಗಿರಿ ಜಲಪಾತಕ್ಕೆ ಖಾಸಗಿ ವಾಹನಗಳನ್ನು ಮಾಡಿಕೊಂಡು ಹೋದರೆ ಅನುಕೂಲ.
ಲಕ್ಷ್ಮಿಕಾಂತ್ ಎಲ್.ವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ
Malpe: ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.