ಘಂಟೆಯ ಕೊರಳೊಳಗಿಂದ…
Team Udayavani, Oct 20, 2018, 2:24 PM IST
ಘಂಟೆಯನ್ನು ಬಾರಿಸುವುದು ದೇವರಿಗೆ ತಾನು ಬಂದಿದ್ದೇನೆಂದು ಹೇಳುವುದಕ್ಕಲ್ಲ; ನಾನು ದೇವರ ಬಳಿ ಇದ್ದೇನೆಂಬುದನ್ನು ನನಗೇ ನಾನು ಹೇಳಿಕೊಳ್ಳುವುದಕ್ಕೆ. ಆ ಕ್ಷಣ ದೇವರಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಅನುಕೂಲವಾಗುವುದೇ ಈ ಘಂಟೆ. ಇದೇ ಗಂಟಾನಾದದ ಮಹತ್ವ…
ನಾವು ಯಾವುದೇ ದೇವಾಲಯಕ್ಕೆ ಹೋದರೂ ಬೇರೆಬೇರೆ ಗಾತ್ರದ, ಬಗೆಬಗೆಯ ಆಕೃತಿಯ ಘಂಟೆಗಳು ತೂಗಿಹಾಕಿರುವುದನ್ನು ಕಾಣುತ್ತೇವೆ. ಅಲ್ಲದೇ, ನಮಗೆ ಅರಿವಿ¨ªೋ ಅರಿವಿಲ್ಲದೆಯೋ ಅವುಗಳಲ್ಲಿ ಒಂದು ಘಂಟೆಯನ್ನು ಬಾರಿಸಿ ದೇವರಿಗೆ ನಮಸ್ಕರಿಸುತ್ತೇವೆ. ಇನ್ನು ಕೆಲವರು ದೇಗುಲದಲ್ಲಿ ಮೌನವನ್ನು ಬಯಸುವುದುಂಟು. ಬಂದವರೆಲ್ಲರೂ ಘಂಟೆಯನ್ನು ಬಾರಿಸುತ್ತ ಶಬ್ದಮಾಲಿನ್ಯವನ್ನು ಮಾಡುತ್ತಾರಲ್ಲ ಎಂದು ಅವರಿಗೆ ಅನ್ನಿಸಬಹುದು. ಅದು ತಪ್ಪೇನೂ ಅಲ್ಲ. ಯಾಕೆಂದರೆ, ಕೈಗೆ ಘಂಟೆ ಸಿಕ್ಕಿತೆಂದರೆ ಅದನ್ನು ಐದಾರು ಬಾರಿ ಬಾರಿಸಿ ಗಲಾಟೆ ಎಬ್ಬಿಸುವವರನ್ನು ನಾವೆಲ್ಲರೂ ನೋಡಿರುತ್ತೇವೆ. ಘಂಟೆ ಬಾರಿಸುವ ಕ್ರಮ ಮತ್ತು ಅದರ ಅಗತ್ಯವನ್ನು ತಿಳಿಯದೇ ಇ¨ªಾಗ ಘಂಟೆಯ ಶಬ್ದಗಳು ದೇವರಲ್ಲಿ ಭಕ್ತಿ ಹುಟ್ಟಿಸುವ ಬದಲು ಶಬ್ದಮಾಲಿನ್ಯವನ್ನೇ ಉಂಟುಮಾಡುತ್ತವೆ.
ಮಂಗಳಾರತಿಯ ಸಂದರ್ಭವನ್ನು ಹೊರತುಪಡಿಸಿ, ನಾವು ನಮಸ್ಕರಿಸುವ ಮೊದಲು ಘಂಟೆಯನ್ನು ಕೇವಲ ಒಂದು ಬಾರಿ ಮಾತ್ರ ಬಾರಿಸಬೇಕು. ಇದು ಕ್ರಮ. ಆದರೆ, ಮನಬಂದಂತೆ ಮೂರೋ- ನಾಲ್ಕೋ ಅಥವಾ ಅದಕ್ಕೋ ಹೆಚ್ಚು ಬಾರಿ “ಢಣ್ ಢಣ್ ಢಣ್ ಢಣ್ ಢಣ್’ ಎಂದು ಬಾರಿಸುತ್ತ ಹೋದರೆ ಅದು ದೇಗುಲದ ಮೌನವನ್ನು ಹಾಳು ಮಾಡಿದಂತೆಯೇ ಸರಿ. ಹಾಗಾಗಿ, ಒಮ್ಮೆ ಮಾತ್ರ ಬಾರಿಸುವುದು ಸೂಕ್ತ.
ಘಂಟೆ ಬಾರಿಸಲೂ ಒಂದು ಕಾರಣ…
ಯಾಕೆ ಒಮ್ಮೆ ಮಾತ್ರ ಬಾರಿಸಬೇಕು? “ಅದು ನನ್ನಿಷ್ಟ, ಎಷ್ಟು ಬಾರಿಯಾದರೂ ಘಂಟೆಯನ್ನು ಬಾರಿಸುತ್ತೇನೆ’ ಎಂದು ಸಮರ್ಥನೆ ಮಾಡಿಕೊಳ್ಳುವವರೂ ಇದ್ದಾರೆ. ಆದರೆ, ಗಂಟಾನಾದದ ಹಿಂದೆ ಒಂದು ವಿಶೇಷ ಮಹತ್ವವಿದೆ. ನಾವು ಒಮ್ಮೆ ಬಾರಿಸಿದ ಘಂಟೆಯ ಶಬ್ದ ಸಣ್ಣದಾಗುತ್ತ ಹೋಗಿ ಕೊನೆಗೊಳ್ಳುತ್ತದೆ. ಅದು ಅರ್ಧದಿಂದ ಒಂದು ನಿಮಿಷಗಳ ಕಾಲಾವಧಿಯೂ ಇರಬಹುದು. ಇದು ಘಂಟೆಯ ಗಾತ್ರ ಹಾಗೂ ಬಾರಿಸಿದ ರೀತಿಯನ್ನು ಅವಲಂಬಿಸಿದೆ. ಸಣ್ಣದಾಗಿ ಬಾರಿಸಿದಾಗ ಕಡಿಮೆ ಅವಧಿಯಲ್ಲಿಯೂ ದೊಡ್ಡದಾಗಿ ಅಥವಾ ಗಟ್ಟಿಯಾಗಿ ಬಾರಿಸಿದಾಗ ದೀರ್ಘಾವಧಿಯಲ್ಲಿಯೂ ಅದರ ಶಬ್ದ ಕ್ಷೀಣಿಸುತ್ತ ಹೋಗಿ ಮರೆಯಾಗುತ್ತದೆ. ಘಂಟೆಯನ್ನು ಬಾರಿಸುವುದು ದೇವರಿಗೆ ತಾನು ಬಂದಿದ್ದೇನೆಂದು ಹೇಳುವುದಕ್ಕಲ್ಲ; ನಾನು ದೇವರ ಬಳಿ ಇದ್ದೇನೆಂಬುದನ್ನು ನನಗೇ ನಾನು ಹೇಳಿಕೊಳ್ಳುವುದಕ್ಕೆ.
ಏಕಾಗ್ರತೆಯೇ ದೇವರು
ನಾವು ದೇಗುಲಕ್ಕೆ ಹೋಗುವ ಮೊದಲ ಕಾರಣವೇ ಮಾನಸಿಕ ನೆಮ್ಮದಿಗಾಗಿ. ಬದುಕಿನ ಜಂಜಾಟದಿಂದಾಗಿ ತಲೆಯಲ್ಲಿ ಓಡಾಡುವ ಚಿಂತೆಗಳನ್ನು ಇಟ್ಟುಕೊಂಡು ದೇಗುಲಕ್ಕೆ ಹೋಗಿ ನಮಸ್ಕರಿಸುವಾಗಲೂ ನಮ್ಮ ತಲೆಯಲ್ಲಿ ಯಾವುದೋ ಆಲೋಚನೆಗಳು ಓಡಾಡುವ ಸಾಧ್ಯತೆಗಳಿವೆ. ಅಲ್ಲದೇ, ನಮ್ಮ ಚಿತ್ತ ದೇವಾಲಯದಲ್ಲಿನ ಆಗುಹೋಗುಗಳ ಕಡೆಗೆ ಗಮನಕೊಡುವ ಸಾಧ್ಯತೆಯೂ ಇದೆ. ಆದುದರಿಂದಲೇ ನಾವು ದೇವಾಲಯಕ್ಕೆ ಕಾಲಿಟ್ಟ ತಕ್ಷಣ ಅಥವಾ ನಮಸ್ಕರಿಸುವ ಮೊದಲು ಘಂಟೆಯನ್ನು ಬಾರಿಸುತ್ತೇವೆ. ಆ ಘಂಟೆ “ನೀನೀಗ ದೇಗುಲದಲ್ಲಿದ್ದೀಯ, ಮನದಲ್ಲಿ ಬೇರೆ ಯಾವುದೇ ಯೋಚನೆಗಳಿಲ್ಲದೇ, ಭೌತಿಕ ಬಾಧೆಗಳನ್ನೂ ಮರೆತು ನಮಸ್ಕರಿಸು’ ಎಂದು ನಮ್ಮನ್ನು ಎಚ್ಚರಿಸುತ್ತದೆ. ಆ ಕ್ಷಣ ದೇವರಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಅನುಕೂಲವಾಗುವುದೇ ಈ ಘಂಟೆ. ಇದೇ ಗಂಟಾನಾದದ ಮಹತ್ವ.
ಏಕಾಗ್ರತೆಯೂ ಒಂದು ಸಾಧನೆ. ಈ ಘಂಟೆ ಆ ಕ್ಷಣದ ಏಕಾಗ್ರತೆಯ ಮಾರ್ಗ. ಏಕಾಗ್ರತೆ ಮನುಷ್ಯನ ಶಕ್ತಿಯೂ ಹೌದು; ಭಕ್ತಿಯೂ ಹೌದು.
ಘಂಟೆಯ 6 ತತ್ವಗಳು
1. ಘಂಟೆಯನ್ನು ಒಮ್ಮೆ ಮಾತ್ರ ಬಾರಿಸಬೇಕು.
2. ಆ ಘಂಟೆ ಕೊನೆಯಾಗುವ ತನಕವೂ ಅದರಲ್ಲಿಯೇ ನಿಮ್ಮ ಗಮನವಿರಲಿ.
3. ಘಂಟಾನಾದದ ದೀರ್ಘತೆಯು ಬದುಕಿನ ಸುದೀಘತೆಗೆ ಶ್ರುತಿಯಾಗಿ, ಮಾನವ ಜನ್ಮದ ಮೌಲ್ಯದ ಅರಿವಾಗುತ್ತದೆ.
4. ಘಂಟೆಯಿಂದ ಹೊರಡುವ “ಓಂ’ ಎಂಬ ಶಬ್ದವು ಮನಸ್ಸನ್ನು ಭಕ್ತಿ-ಭಾವದಿಂದ ತಾಜಾವಾಗಿಸುತ್ತದೆ.
5. ಘಂಟೆಯ ನಾದದ ಕಡೆಗೇ ಗಮನ ಕೊಟ್ಟರೆ, ಏಕಾಗ್ರತೆಯ ಮಿಂಚೊಂದು ನಿಮ್ಮೊಳಗೆ ಬೆಳಕಾಗುತ್ತದೆ.
6. ಆ ನಾದವು ಮನಸ್ಸನ್ನು ಶುದ್ಧವಾಗಿಸುತ್ತದೆ. ಶುದ್ಧಮನಸ್ಸಿನಿಂದ ನಮಸ್ಕರಿಸಿದರೆ, ದೇವರು ಸಂಪ್ರೀತನಾಗುತ್ತಾನೆ. ನಿಮ್ಮ ಮನಸ್ಸೂ ಉಲ್ಲಸಿತವಾಗುತ್ತದೆ.
ವಿಷ್ಣು ಭಟ್ಟ ಹೊಸ್ಮನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Astrology 2024: 2024ರಲ್ಲಿ ಮಿಶ್ರ ಫಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?
ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?
ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…
ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?
ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.