ಹೇಳಿ ಹೋಗು ಚಾರಣ :  ನೋಡ ಬನ್ನಿ ಭಂಡಾಜೆ ಜಲಪಾತ


Team Udayavani, Jun 24, 2017, 5:15 PM IST

697.jpg

 ಜಲಪಾತ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಜಲಪಾತದ ಜಲಧಾರೆಗೆ ಮೈಯೊಡ್ಡಿ ಕುಳಿತುಕೊಳ್ಳುವುದೇ ಒಂದು ಖುಷಿ.  ಇಂತಹ ಹಲವಾರು ಜಲಪಾತಗಳ ಪೈಕಿ ಪ್ರಸಿದ್ಧಿಯನ್ನು ಪಡೆದ ಜಲಪಾತಗಳು ಒಂದೆಡೆಯಾದರೆ, ಅಷ್ಟೊಂದು ಪ್ರಸಿದ್ಧಿಯನ್ನು ಪಡೆಯದ ಜಲಪಾತಗಳು ಇನ್ನೊಂದೆಡೆ. ಇಂತಹ ಜಲಪಾತಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ  “ಭಂಡಾಜೆ ಜಲಪಾತ’ವೂ ಒಂದು. 

ಜಲಪಾತದ ಚಾರಣ ಎಂದ ತಕ್ಷಣ ದಕ್ಷಿಣಕನ್ನಡ ಜಿಲ್ಲೆಯ ಚಾರಣಿಗರಿಗೆನೆನಪಾಗುವುದೇ ಬೆಳ್ತಂಗಡಿ ತಾಲೂಕಿನ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿರುವ ‘ಚಾರ್ಮಾಡಿ ಘಾಟ್‌’ನ ಅಂಚಿನ ವಳಂಬ್ರ ಬಳಿಯ ‘ಭಂಡಾಜೆ ಜಲಪಾತ’. ಇದು ಮಾಮೂಲಿ ಜಲಪಾತಕ್ಕಿಂತ ವಿಶಿಷ್ಟ . ಏಕೆಂದರೆ ಕಠಿಣವಾದ ಚಾರಣದೊಂದಿಗೆ ರಾತ್ರಿ ಇಡೀ ‘ಕ್ಯಾಂಪ್‌ಫೈರ್‌’ ಹಾಕಿಕೊಂಡು ಮಸ್ತಿ ಮಾಡುತ್ತಾ, ಜಲಪಾತದ ಶೃಂಗದಿಂದಲೇ (ಜಲಪಾತದ ತಳಭಾಗಕ್ಕೆ ತೆರಳಲು ಸಾಧ್ಯವಿಲ್ಲ ಹಾಗೂ ಅನುಮತಿ ಇಲ್ಲ) ನೀರು ಕೆಳಗಡೆಗೆ ಧುಮ್ಮಿಕ್ಕುವ ರುದ್ರರಮಣಿಯ ದೃಶ್ಯವನ್ನು 

ವೀಕ್ಷಿಸುತ್ತಾ ಮನಸೋ ಇಚ್ಛೆ ನೀರಿನಲ್ಲಿ ಆಟವಾಡುತ್ತ ಕಾಲ ಕಳೆಯುವ ಅವಕಾಶರುವುದೇ ಇದಕ್ಕೆ ಪ್ರಮುಖ ಕಾರಣ. ಈ ಜಲಪಾತವು ಬೆಳ್ತಂಗಡಿ ವನ್ಯಜೀವಿ ವಿಭಾಗ, ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಸೇರುತ್ತದೆ.  ಬೆಳ್ತಂಗಡಿ ವಲಯ ಅರಣ್ಯಧಿಕಾರಿಗಳಿಂದ ಪೂರ್ವಾನುಮತಿ ಪಡೆದು ಚಾರಣಿಗರು ತಲಾ ರೂ.200/- ರಂತೆ ಶುಲ್ಕವನ್ನು ಪಾವತಿಸಿ ಕಡ್ಡಾಯವಾಗಿ ಗೈಡ್‌ಗಳ ಸಹಕಾರದೊಂದಿಗೇ ಚಾರಣ ಮಾಡಬೇಕು.  ಏಕೆಂದರೆ ಇಲ್ಲಿನ ದಟ್ಟಾರಣ್ಯದಲ್ಲಿ ದಾರಿ ತಪ್ಪಿ ಚಾರಣಿಗರು ಕಾಡು ಪಾಲಾಗುವ, ಕ್ರೂರ ಪ್ರಾಣಿಗಳಿಗೆ ಬಲಿಯಾಗುವ, ಆನೆಗಳ ದಾಳಿಗೆ ಸಿಲುಕುವ ಸಾಧ್ಯತೆ ಇದೆ. ಸುಮಾರು 200 ಅಡಿ ಆಳಕ್ಕೆ ಧುಮ್ಮಿಕ್ಕುವ ಈ ಜಲಪಾತವು ಮುಂದಕ್ಕೆ ಹರಿದು “ನೇತ್ರಾವತಿ ನದಿ’ಯನ್ನು ಸೇರುತ್ತದೆ. ಸಾಮಾನ್ಯವಾಗಿ ಸ್ಥಳೀಯರು ಈ ಜಲಪಾತವನ್ನು ‘ಭಂಡಾಜೆ ಅರ್ಬಿ’ ಎಂದೂ ಕರೆಯುತ್ತಾರೆ. “ಅರ್ಬಿ’ಯೆಂದರೆ ತುಳು ಭಾಷೆಯಲ್ಲಿ ‘ಜಲಪಾತ’ ಎಂದರ್ಥ. 

ಬೆಳ್ತಂಗಡಿಯಿಂದ 23ಕಿ.ಮೀ. ದೂರದಲ್ಲಿರುವ ಈ ಜಲಪಾತಕ್ಕೆ ಎರಡು ರೀತಿಯಲ್ಲಿ ಚಾರಣವನ್ನು ಮಾಡಬಹುದಾಗಿದೆ. ಮೊದಲನೆಯದಾಗಿ, ಉಜಿರೆಯಿಂದ ಪ್ರಾರಂಭಿಸಿ ಚಾರ್ಮಾಡಿ ರಸ್ತೆಯಲ್ಲಿ ಸಾಗಿ ಸೋಮಂತಡ್ಕ ಎಂಬಲ್ಲಿ ಎಡಗಡೆ ಕಡಿರುದ್ಯಾವರದ ಮೂಲಕ ವಳಂಬ್ರವರೆಗೆ ವಾಹನದಲ್ಲಿ ಸಾಗಬೇಕು. ಇಲ್ಲಿಂದ ಕಾಡಿನ ಕಾಲು ದಾರಿಯ ಮೂಲಕ 9-10 ಕಿ.ಮೀ. ದೂರದ ಏರು ದಾರಿಯ ಚಾರಣವನ್ನು ಮಾಡಬೇಕು. ಇನ್ನೊಂದು, ಉಜಿರೆಯಿಂದ ಚಾರ್ಮಾಡಿ ರಸ್ತೆಯಲ್ಲಿ ಸಾಗಿ ಕೊಟ್ಟಿಗೆಹಾರ, ಇಲ್ಲಿಂದ ಸಂಸೆ ರಸ್ತೆಯಲ್ಲಿ 2 ರಿಂದ 3 ಕಿ.ುà ಸಾಗಿ ಸುಂಕಸಾಲೆ ಎಂಬಲ್ಲಿ ಮತ್ತೆ ಎರಡರಿಂದ ಮೂರು ಕಿ.ಮೀ ವಾಹನದಲ್ಲಿ ಸಾಗಬೇಕು. ಇಲ್ಲಿ ವಾಹನವನ್ನು ನಿಲ್ಲಿಸಿ ರಸ್ತೆಯ ಬಲಭಾಗದ ಕಾಲು ದಾರಿಯ ಮೂಲಕ 7-8 ಕಿ.ಮೀ. ಕಾಲುದಾರಿಯಲ್ಲಿ ಸಾಗುವ ದಾರಿ. ಪರ್ವತದ ದಾರಿಯಲ್ಲಿ ಸಾಗುವಾಗ ಕಾಡು ಕೋಣ, ಕಾಡೆಮ್ಮೆ, ಕಾಡಾನೆ ಮತ್ತಿತರ ಪ್ರಾಣಿಗಳ ಹಾವಳಿಗಳು ಹೆಚ್ಚಿರುವ ಸಾಧ್ಯತೆಗಳೂ ಇವೆ.  ಅವುಗಳಿಂದ ರಕ್ಷಣೆ ಪಡೆಯಲು ಒಂದಷ್ಟು ದೀಪಾವಳಿಯ ಸಿಡಿಮದ್ದು, ಬೆಂಕಿಪೊಟ್ಟಣ ಮತ್ತು ಹೆಚ್ಚು ಪ್ರಕಾಶವನ್ನು ಬೀರುವ ದೊಡ್ಡ ದೊಡ್ಡ ಟಾರ್ಚ್‌ ಲೈಟ್‌ಗಳು, ಸಾಕಷ್ಟು ಆಹಾರದ ಪೊಟ್ಟಣಗಳ ತಯಾರಿಯೊಂದಿಗೇ ಚಾರಣವನ್ನು ಆರಂಭಿಸುವುದು ಸೂಕ್ತ. ಚಾರಣ ಸಂದರ್ಭದಲ್ಲಿ ಶೂ, ಚಳಿಯಿಂದ ರಕ್ಷಣೆಗಾಗಿ ಜಾಕೆಟ್‌, ಕೈಗವಸು ಮತ್ತು ಚಾರಣದ ಧಿರಿಸನ್ನು ಧರಿಸುವುದು ಹೆಚ್ಚು ಪ್ರಯೋಜನಕಾರಿ. ಚಾರಣಿಗರು ಸೂರ್ಯಾಸ್ತದ ಮೊದಲೇ ಜಲಪಾತದ ಪ್ರದೇಶವನ್ನು ತಲುಪುವಂತೆ ಚಾರಣವನ್ನು ಪ್ರಾರಂಭಿಸಬೇಕು.  ಸೂರ್ಯಾಸ್ತದ ನಂತರದ ಪ್ರಯಾಣ ಅಪಾಯಕಾರಿ, ಹಾಗೂ ಇದೇ ಸಂದರ್ಭದ ಚಾರಣದಲ್ಲಿ ಹಲವು ತಂಡಗಳು ದಾರಿ ತಪ್ಪಿ ಅಪಾಯಕ್ಕೊಳಗಾಗಿದ್ದೂ ಇದೆ. ಚಾರಣಕ್ಕೆ ಮಾರ್ಗದರ್ಶಕರ ಲಭ್ಯತೆ ಇದ್ದು, ಅವರಿಗೆ ರೂ.300/- ರಿಂದ ರೂ.500/- ರವರೆಗೆ ಪಾವತಿಸಿ ಅವರೊಂದಿಗೆ ತೆರಳಬಹುದಾಗಿದೆ.

ಭಂಡಾಜೆ ಚಾರಣವನ್ನು ಮಾಡುವವರು ಮಧ್ಯಾಹ್ನ ತಪ್ಪಲಿನಿಂದ ಹೊರಟು ರಾತ್ರಿ ಅಲ್ಲೇ ಉಳಿದುಕೊಂಡು ಮಾರನೆಯ ದಿನ ವಾಪಾಸು ಬರುವುದು ಒಳಿತು. ಒಂದೇ ದಿನದಲ್ಲಿ ಹೋಗಿ ಮರಳುವ ಪ್ರಯತ್ನ ಕಠಿಣ ಅಲ್ಲದೇ ಅಪಾಯವೆನ್ನಬಹುದು. ಮಾರ್ಗದರ್ಶಕರ ಸಹಾಯವಿಲ್ಲದೇ ಚಾರಣ ನಡೆಸಿದ ಅದೆಷ್ಟೋ ಮಂದಿ ಕಾಡು ದಾರಿಯಲ್ಲಿ ದಾರಿ ತಪ್ಪಿದ ದುರಂತ ಘಟನೆಗಳು ಸಂಭವಿಸಿದೆ.  ವರ್ಷದ ನವೆಂಬರ್‌ ತಿಂಗಳಿನಿಂದ ಮಾರ್ಚ್‌ ತಿಂಗಳು ಚಾರಣ ನಡೆಸಲು ಸೂಕ್ತ. ಚಾರಣಿಗರು ಉಜಿರೆಯಿಂದ ಲಭ್ಯವಿರುವ ಜೀಪ್‌ಗ್ಳನ್ನು ಬಾಡಿಗೆಗೆ ಗೊತ್ತುಪಡಿಸಿಕೊಂಡು ಚಾರಣದ ಪ್ರಾರಂಭಿಕ ಹಂತವಾದ ವಳಂಬ್ರವರೆಗೆ ತೆರಳಬಹುದು. 

ಭಂಡಾಜೆ ಚಾರಣವನ್ನು ಮಾಡಬೇಕಾದರೆ ಅತ್ಯಂತ ಕಡಿದಾದ ದಟ್ಟಾರಣ್ಯದ ಮಧ್ಯೆ ಸಾಗಬೇಕಾದ್ದರಿಂದ ಚಾರಣಿಗರ ಸಾಮರ್ಥ್ಯ ಹಾಗೂ ದೌರ್ಬಲ್ಯವನ್ನು ಪರೀಕ್ಷೆಗೆ ಒಡ್ಡುತ್ತದೆ. ವಳಂಬ್ರದ ಗೌಡ್ರ ಮನೆಯನ್ನು ದಾಟಿ ಮುಂದಕ್ಕೆ ಸಾಗುತ್ತಿದ್ದಂತೆ ಎರಡನೆಯ ದೊಡ್ಡದಾದ ಹಳ್ಳವನ್ನು ದಾಟಿದ ನಂತರದಲ್ಲಿ ಚಾರಣವು ನಿಧಾನವಾಗಿ ಕಠಿಣವಾಗುತ್ತಾ ಸಾಗುತ್ತದೆ. ಕಾಡಿನ ಮಧ್ಯೆ ಚಾರಣಿಗರಿಗೆ ಕತ್ತಲಾಗುತ್ತಿದ್ದಂತೆ ಹಾದಿ ತಪ್ಪದಂತೆ ಅರಣ್ಯ ಇಲಾಖೆಯು ಅಲ್ಲಲ್ಲಿ ಮರಗಳಿಗೆ ಕೆಂಪು ಬಣ್ಣದ ಪ್ರತಿಫ‌ಲಕಗಳನ್ನು ಅಳವಡಿಸಿದ್ದು ಇದು ರಾತ್ರಿಯಾದರೂ ಚಾರಣಿಗರು ಸುಲಭವಾಗಿ ಗಮ್ಯಸ್ಥಾನವನ್ನು ತಲುಪಲು ಸಹಕಾರಿಯಾಗಿದೆ. 

ದಟ್ಟ ಕಾಡಿನ ಭಯ ಒಂದೆಡೆಯಾದರೆ, ಕಾಡಿನಲ್ಲಿರುವ ರಕ್ತ ಹೀರುವ ಇಂಬಳದ ಕಾಟ ಇನ್ನೊಂದೆಡೆ. ಸುಮಾರು ಒಂದೂವರೆ ಗಂಟೆಗಳ ಕಾಲದ ದಟ್ಟಾರಣ್ಯದ ಚಾರಣದ ನಂತರ ಬಿರು ಬಿಸಿಲಿನ ಕಠಿಣ ಏರು ಚಾರಣಕ್ಕೆ ಚಾರಣಿಗರು ಸಿದ್ಧರಾಗಬೇಕು. ಏಕೆಂದರೆ ಈ ಚಾರಣದಲ್ಲಿ ಕೇವಲ ಬರಿದಾದ ಗುಡ್ಡವನ್ನೇ ಏರುತ್ತಾ ಸಾಗಬೇಕಾಗಿದ್ದು, ಇಲ್ಲಿ ಮರಗಳ ಆಶ್ರಯವೇ ಇಲ್ಲವೆನ್ನಬಹುದು. ಈ ಪ್ರದೇಶದಲ್ಲಿ ಸ್ವಲ್ಪ ಇಂಬಳಗಳ ಕಾಟ ಕಡಿಮೆ. ಜಲಪಾತವು ವರ್ಷ ಪೂರ್ತಿ ಬರಿದಾಗದೇ ಧುಮ್ಮಿಕ್ಕುತ್ತಿರುವುದು ಇದರ ವಿಶೇಷತೆ. 

  ಕೊಟ್ಟಿಗೆಹಾರದ ರಸ್ತೆಯ ಮೂಲಕ ಚಾರಣ ಮಾಡುವ ಸಂದರ್ಭದಲ್ಲಿ ಚಾರಣವಿದುದ್ದಕ್ಕೂ ಪರ್ವತ ಶೇಣಿಯ ಏರು ಸ್ಥಳಗಳು ಮತ್ತು ಆಳವಾದ ಕಂದಕಗಳ ರುದ್ರ ರಮಣೀಯವಾದ ದೃಶ್ಯಾವಳಿ ಮತ್ತು ಬಲ್ಲಾರಾಯನ ಕೋಟೆ ಇತ್ಯಾದಿಗಳ ಹಾಗೂ ಪ್ರಕೃತಿ ಸೌಂದರ್ಯದ ಫೋಟೋಗಳನ್ನು ಮತ್ತು ಸೆಲ್ಫಿ ತೆಗೆಯುತ್ತಾ ಚಾರಣದ ಮಜಾವನ್ನು ಅನುಭಸಬಹುದು. ಚಾರಣದ ಹಾದಿಯುದ್ದಕ್ಕೂ ಕಾಡಿನ ಹಣ್ಣುಗಳು ಸಿಗುತ್ತವೆ.  ಜಲಪಾತದ ಪ್ರದೇಶದಲ್ಲಿ ‘ಕ್ಯಾಂಪ್‌ಫೈರ್‌’ ಹಾಕಲು ಅವಕಾಶವಿದೆ.  ಇಲ್ಲಿ ಬೆಂಕಿಯ ಮುಂದೆ ಹಾಡುತ್ತಾ ಕುಣಿಯುತ್ತಾ ಸಮಯವನ್ನು ಕಳೆಯಬಹುದಾಗಿದ್ದು, ಪಾಳಿಯಲ್ಲಿ ಎರಡೆರಡು ಮಂದಿಯ ತಂಡಗಳು ಮಲಗಿರುವವರನ್ನು ಕಾವಲು ಕಾಯುವುದು ಉತ್ತಮ. 

ಇಲ್ಲಿ ಗಾಳಿಯ ವೇಗವೂ ಅತ್ಯಂತ ಹೆಚ್ಚಾಗಿರುವುದರಿಂದ ಸಾಮಾನ್ಯ ಗುಂಡಿಗೆಯವರು ಇದರ ತಳವನ್ನು ವೀಕ್ಷಿಸಲಾಗುವುದಿಲ್ಲ. ಇಲ್ಲಿ ಸ್ವಲ್ಪ ಮೈಮರೆತರೂ, ಒಬ್ಬರಿಗೊಬ್ಬರು ತಳ್ಳಾಡಿದರೂ ಸಾವು ಖಚಿತ. ಜಲಪಾತದ ತಳವನ್ನು ವೀಕ್ಷಿಸಬೇಕಾದರೆ ಇಲ್ಲಿನ ಶೃಂಗದ ಬಂಡೆಕಲ್ಲಿನ ಮೇಲೆ ಬೋರಲಾಗಿ ಮಲಗಿ ತೆವಳುತ್ತಾ ಜಲಪಾತದ ಅಂಚನ್ನು ಬಹಳ ಎಚ್ಚರಿಕೆಯಿಂದ ಸಾಗಿದಲ್ಲಿ ಇಲ್ಲಿ ನೀರು ಧುಮ್ಮಿಕ್ಕುವ ಹಾಗೂ ನೀರಿನ ಹನಿಗಳಿಗೆ ಬಿಸಿಲು ಮುತ್ತಿಕ್ಕುವಾಗ ಕಾಣುವ ಭಿನ್ನ ಕಾಮನಬಿಲ್ಲಿನ ಚಿತ್ತಾರದ ಸೊಬಗನ್ನು ಆಸ್ವಾಧಿಸಲು ಸಾಧ್ಯ.  ದುರ್ಗ ಉಂಟು

ಭಂಡಾಜೆ ಜಲಪಾತದಿಂದ ಸುಮಾರು 5 ಕಿ.ಮೀ. ದೂರದಲ್ಲಿದ್ದು, ಹೊಯ್ಸಳರ ಕಾಲದ ಗತವೈಭವವನ್ನು ಮೌನವಾಗಿ ಸಾರುತ್ತಿರುವ ತೀರಾ ಶಿಥಿಲಗೊಂಡ “ಬಳ್ಳಾಲರಾಯನ ದುರ್ಗ’ ಇಲ್ಲಿನ ಇನ್ನೊಂದು ವಿಶೇಷ ಆಕರ್ಷಣೆ. ಜಲಪಾತದ ಶೃಂಗದಿಂದ ಎರಡು ಗಂಟೆಗಳ ಚಾರಣ ಮಾಡಿದರೆ  ಈ ಕೋಟೆಯನ್ನು ತಲುಪಬಹುದಾಗಿದೆ. ಇಡೀ ಪರ್ವತಕ್ಕೇ ಕೋಟೆ ಕಟ್ಟಿದಂತೆ ಭಾಸವಾಗುತ್ತದೆ.

ಸಂತೋಷ್‌ ರಾವ್‌ ಪೆರ್ಮುಡ

ಟಾಪ್ ನ್ಯೂಸ್

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.