ದೊಡ್ಡಪಟ್ಟೆ ಗೊರವಾ
Team Udayavani, Oct 14, 2017, 2:30 PM IST
ಇದನ್ನು ನೀರು ಹಕ್ಕಿ ಎಂದೂ ಕರೆಯುತ್ತಾರೆ. ಉದ್ದ ಚುಂಚಿದೆ. ಅದಕ್ಕೆ ಇಂಗ್ಲಿಷಿನಲ್ಲಿ ಗ್ರೇಟರ್ ಪೇಂಯೆಡ್ ಸ್ನೆಪೆ ಅಂತಾರೆ. ಇಲ್ಲಿ ಸ್ನೆಪೆ ಎಂದರೆ ಕತ್ತರಿಸು ಎಂಬ ಅರ್ಥವಿದೆ. ಅದಕ್ಕೆ ತಕ್ಕಂತೆ, ನೀರು ಸಸ್ಯ, ಎಲೆ ,ನೀರು ಹುಲ್ಲುಗಳನ್ನು ಕತ್ತರಿಸಲು ಅನುಕೂಲವಾದ ಉದ್ದ ಚುಂಚು ಈ ಹಕ್ಕಿಗೆ ಇದೆ. ಈ ಕುಟುಂಬದ ಎಲ್ಲಾ ಹಕ್ಕಿಗಳ ಮೈಮೇಲೆ ಕಂದು, ಅಚ್ಚ ಕಂದು, ತಿಳಿ ಕಂದು ಹಸಿರು ಮಿಶ್ರಿತ ಕಂದು ಮತ್ತು ಮಸಕುಬಿಳಿ ಬಣ್ಣ ಮಿಶ್ರಿತ ಬಣ್ಣದ ಪಟ್ಟೆಗಳೇ ಇವೆ.
ದೊಡ್ಡ ಪಟ್ಟೆ ಗೊರವ ಹಕ್ಕಿಯಲ್ಲಿ- ಕಣ್ಣಿನ ಸುತ್ತ ಇರುವ ಬಿಳಿಬಣ್ಣ ಕುತ್ತಿಗೆವರೆಗೆ ವ್ಯಾಪಿಸಿದೆ. ಹಸಿರು ಮಿಶ್ರಿತ -ಕಂದು ಗಪ್ಪು ಬಣ್ಣ ಎದ್ದು ಕಾಣುತ್ತದೆ. 2 ಇಂಚಿಗಿಂತ ಉದ್ದ ಇರುವ -ನೇರವಾದ ಬಲವಾದ ಚುಂಚು ಇದಕ್ಕಿದೆ. ಇದು ಕೆಸರು ಕೆದಕಲು, ಮಣ್ಣಿನ ಅಡಿಯಲ್ಲಿರುವ -ಚಿಕ್ಕ ಮಣ್ಣಿನ ಹುಳು, ಎರೆಹುಳಗಳ ಮರಿ, ಅರಸಿ ತಿನ್ನಲು ಅನುಕೂಲವಾಗಿದೆ. ಸಮುದ್ರ ತೀರದ ಕೆಸರು ಗಜನಿ ಪ್ರದೇಶ, ನದಿಗಳು ಸಮುದ್ರ ಸೇರುವ ಜಾಗ, ಉಪ್ಪು ನೀರಿನ ಕೆಸರುಪ್ರದೇಶ, ಭತ್ತದ ಗದ್ದೆ ಮುಂತಾದ ಸ್ಥಳಗಳು ಈ ಹಕ್ಕಿಗೆ ಪ್ರಿಯವಾಗಿದೆ. ಪ್ರದೇಶದಲ್ಲಿ ಒಂಟಿಯಾಗಿ ಇಲ್ಲವೇ ಚಿಕ್ಕ ಗುಂಪಿನಲ್ಲಿ ಇದನ್ನು ಕಾಣಬಹುದು.
ಸೆಂಡ್ ಪೈಪರ್, ಅರಿಸಿನ ಗೊರವ, ಪೋ› ಹಕ್ಕಿಗಳು ಇರುವ- ಗದ್ದೆ ಪ್ರದೇಶದಲ್ಲಿ ಉಳುಮೆ ಮಾಡಿ ಗೊಬ್ಬರ ಇತ್ಯಾದಿ ಹಾಕಿರುವಾಗ ಅಲ್ಲಿ ದೊಡ್ಡ ಪಟ್ಟೆ ಗೊರವ ಇದ್ದೇ ಇರುತ್ತದೆ. ಉತ್ತ ಗದ್ದೆಯ ಕೆಸರಿನಲ್ಲಿರುವ ಕೆಸರನ್ನು ತನ್ನ ಉದ್ದವಾದ ಚುಂಚಿನ ಸಹಾಯದಿಂದ -ಚುಂಚನ್ನು ಬುಡದ ತನಕ ಕೆಲವೊಮ್ಮ ಮುಳುಗಿಸಿ -ತನ್ನ ಆಹಾರ ಪಡೆದುಕೊಳ್ಳುವಲ್ಲಿ ಇದು ಪ್ರವೀಣ. ಇದಲ್ಲದೆ ಗೊಬ್ಬರದದಲ್ಲಿ ಇರುವ ಚಿಕ್ಕ ಕ್ರಿಮಿ, ಇಲ್ಲವೇ ಗೊಬ್ಬರದ ಹುಳುಗಳನ್ನು ಹಿಡಿದು ತಿನ್ನುವುದು. ಇಂತಹ ಕೆಸರಿನ ಮಧ್ಯೆ ಇದನ್ನು ಗುರುತಿಸುವುದೂ ಅಷ್ಟು ಸುಲಭವಲ್ಲ. ಕೆಸರು ಗದ್ದೆ ಮತ್ತು ಇದರ ಮೈ ಬಣ್ಣದ ಒಂದೇ ರೀತಿ ಇರುತ್ತದೆ.
ಹಾಗೆ ನೋಡಿದರೆ, ಇದು ಕಿರುಕೋಳಿಗಾತ್ರದ ಹಕ್ಕಿ. ಸುಮಾರು 22 -27 ಸೆಂ.ಮೀ ದೊಡ್ಡ ಹಕ್ಕಿ. ಇದರ ಚುಂಚು ನೇರ ಇದ್ದು 5-6 ಸೆಂ.ಮೀ ಇರುತ್ತದೆ.
ಬಲವಾದ ಉದ್ದ ಹಸಿರು ಮಿಶ್ರಿತ ಹಳದಿ ಕಾಲು ಬಲವಾಗಿರುವುದು ಓಡಾಡಿ ತನ್ನ ಆಹಾರ ದೊರಕಿಸಲು ಸಹಾಯಕವಾಗಿದೆ. ಚುಂಚು ಕಪ್ಪು ಬಣ್ಣದಿಂದ ಕೂಡಿರುತ್ತದೆ. ರೆಕ್ಕೆ ಆರಂಭದಲ್ಲಿ ಬಿಳಿ ಬಣ್ಣದಿಂದ ಕೂಡಿದ್ದು, ರೆಕ್ಕೆಯ ಬುಡದಲ್ಲಿ ಬಿಳಿ ರೇಖೆ ಇರುತ್ತದೆ. ರೆಕ್ಕೆ ಚೂಪಾಗಿದೆ.
ನೀರು ಇರುವಲ್ಲಿ ಇದು ಜಿಗ್ ಜಾಗ್ ರೀತಿಯಲ್ಲಿ ಮೇಲೆ ಹಾರುತ್ತದೆ. ಹೀಗೆ ಹಾರುವಾಗ ಕುರಿಗಳ ದನಿಯನ್ನು ಹೋಲುವ ಗೊರಗಲು ದನಿ ಹೊರಡಿಸುತ್ತದೆ. ಅಂಕು ಡೊಂಕಾಗಿ ವೇಗವಾಗಿ ಹಾರುತ್ತದೆ. ಕೆಲವೊಮ್ಮೆ ಆಹಾರ ದೊರಕಿಸುವಾಗ, ಇಲ್ಲವೇ ಇದು ತನ್ನ ಇರುನಲೆ ಎಂದು ಘೋಷಿಸುವಾಗ – ಭಿನ್ನವಾಗಿ ಸುತ್ತು ಹಾಕುತ್ತಾ ಹಾಕಿ ದನಿ ಹೊರಡಿಸುವುದನ್ನು ನೋಡುವುದೇ ಚಂದ. ಮರಿಮಾಡುವ ಸಮಯದಲ್ಲಿ ಗಂಡನ್ನು ಆಕರ್ಷಿಸಲು ತನ್ನ ಬಾಲದ ಪುಕ್ಕ ಮೇಲೆ ಮಾಡಿ ಅಗಲಿಸಿ ಕುಣಿಯುವುದೂ ಉಂಟು.
ಈ ಹಕ್ಕಿಯ ವಿಶೇಷ ಎಂದರೆ ತನ್ನ ಜೀತಾವಧಿಯಲ್ಲಿ ಒಂದೇ ಒಂದು ಗಂಡನ್ನು ವರಿಸುವ ಪಕ್ಷಿ ಇದು. ಅಕಸ್ಮಾತ್ತಾಗಿ ಗಂಡು ಇಲ್ಲವೇ ಹೆಣ್ಣು ಮೃತವಾದರೆ ಬೇರೆ ಹಕ್ಕಿಗಳ ಜೊತೆ ಸೇರಿ- ಸಂಸಾರ ಮಾಡುತ್ತೋ, ಇಲ್ಲವೋ? ಅಥವಾ ಹಾಗೇ ಬ್ರಹ್ಮಚಾರಿಯಾಗಿ ಜೀವಿತಾವಧಿ ಕಳೆಯುವುದೋ ತಿಳಿದಿಲ್ಲ. ಇದು ಓಡಾಡುವಾಗ ಮತ್ತು ಆಹಾರ ದೊರಕಿಸುವಾಗ ತನ್ನ ಚುಂಚನ್ನು ಮೇಲೆ ಕೆಳಗೆ ಹೊಲಿಗೆ ಯಂತ್ರದ ಸೂಜಿಯಂತೆ ಕುಣಿಸುತ್ತದೆ. ಕೆಲವೊಮ್ಮೆ ತನ್ನ ಮೋಟು ಬಾಲವನ್ನು ನೀರುಕೋಳಿಯಂತೆ ಕುಣಿಸುತ್ತದೆ.
ಇದು ತನ್ನ ಮರಿಗಳಿಗೆ ಬಾಲವನ್ನು ಭಿನ್ನವಾಗಿ ಕುಣಿಸಿ , ಮಾರ್ಗದರ್ಶನ ಮಾಡುವುದು. ಭಾರತ, ಚೀನಾ ಆಫ್ರಿಕಾ ದೇಶದಲ್ಲಿ ಈ ಹಕ್ಕಿಯನ್ನು ಕಾಣಬಹುದು. ಜಮ್ಮು-ಕಾಶ್ಮೀರ, ಹರಿಯಾಣ,ಪಂಜಾಬ್, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಓರಿಸಾ, ಜಾರ್ಖಂಡ್, ಆಸಾಂ ಮಧ್ಯಪ್ರದೇಶ,ತೆಲಂಗಾಣ , ಮಹಾರಾಷ್ಟ್ರ, ಕರ್ನಾಟಕ, ಗೋವಾ, ಕೇರಳ ರಾಜ್ಯಗಳಲ್ಲೂ ಈ ಹಕ್ಕಿ ಇದೆ.
ಬಣ್ಣ ಮತ್ತು ಆಕಾರದ ವ್ಯತ್ಯಾಸದಿಂದ ಇದನ್ನು 4 ಉಪಜಾತಿಗಳಾಗಿ ವಿಂಗಡಿಸಲಾಗಿದೆ. ಗಂಡು ಹೆಣ್ಣಿನಲ್ಲಿ ಹೋಲಿಕೆ ಇದ್ದರೂ ಹೆಣ್ಣು ಸ್ವಲ್ಪ ತಿಳಿಬಣ್ಣ ಇದೆ. ಆಕಾರದಲ್ಲೂ ಹೆಣ್ಣು ದೊಡ್ಡದು. ಮರಿಮಾಡುವ ಸಮಯದಲ್ಲಿ ತನ್ನ ಬಾಲದ ಪುಕ್ಕ ಅಗಲಿಸಿ- ರೆಕ್ಕೆಯಿಂದ ದನಿ ಹೊರಡಿಸುತ್ತಾ ಹೆಣ್ಣು ಆಕರ್ಷಿಸುತ್ತದೆ. ಪ್ರಣಯ ಮತ್ತು ಮಿಲನದ ನಂತರ ಮೊಟ್ಟೆ ರಕ್ಷಣೆ ಸಂದರ್ಭದಲ್ಲಿ ಗಂಡನ್ನು ನಿಯಂತ್ರಿಸುತ್ತದೆ.
* ಪಿ. ವಿ. ಭಟ್ ಮೂರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.