ಕಪ್ಪು ತಲೆಯ ಬಂಟಿಂಗ್‌


Team Udayavani, Dec 15, 2018, 11:07 AM IST

25411.jpg

ಗಾತ್ರದಲ್ಲಿ ಮನೆ ಗುಬ್ಬಿಗಿಂತ ಸ್ವಲ್ಪ ದೊಡ್ಡದಿರುವ ಈ ಹಕ್ಕಿ, ಚಳಿಗಾಲ ಕಳೆಯಲು ದಕ್ಷಿಣ ಭಾರತಕ್ಕೆ ವಲಸೆ ಬರುತ್ತದೆ.Black-headed Bunting (Emberiza melanocephala Scoppoli) (  RM – Sparrow + ಕೃಷಿ ಭೂಮಿಯ ಪ್ರದೇಶವೇ ಇದರ ಇರುನೆಲೆ. ಬಟ್ಟಲಾಕಾರದಲ್ಲಿ ಗೂಡು ನಿರ್ಮಿಸುವ ಈ ಹಕ್ಕಿ, ಒಮ್ಮೆಗೆ 4ರಿಂದ 6 ಮೊಟ್ಟೆ ಇಡುತ್ತದೆ. 

 ಇದನ್ನು ಕಪ್ಪು ತಲೆಯ ದೊಡ್ಡ ಗುಬ್ಬಚ್ಚಿ ಎಂದೂ ಕರೆಯುತ್ತಾರೆ. ಏಕೆಂದರೆ, ಆಕಾರದಲ್ಲಿ ಇದು ಮನೆಗುಬ್ಬಿಗಿಂತ ದೊಡ್ಡದಾಗಿದೆ. ಇದು 17 ಸೆಂ.ಮೀನಷ್ಟು ದೊಡ್ಡದಾದ ಹಕ್ಕಿ. ರೆಕ್ಕೆಯ ಅಗಲ 23-29 ಸೆಂ.ಮೀ. ಇರುತ್ತದೆ.  ಭಾರ ಸುಮಾರು 23-35 ಗ್ರಾಂ.

  ಗುಬ್ಬಚ್ಚಿ, ಅದರಲ್ಲೂ ಹಳದಿ ಗುಬ್ಬಿಯ ಬಣ್ಣವನ್ನು ಇದು ತುಂಬಾ ಹೋಲುತ್ತದೆ.  ಹೆಲ್ಮೆಟ್‌ ಅನ್ನು ನೆನಪಿಗೆ ತರುವ ತಲೆಯ ಮೇಲಿನ ಕಪ್ಪು ಬಣ್ಣ, ರೆಕ್ಕೆಯ ತುದಿ, ಮೇಲಾºಗದಲ್ಲಿರುವ ಕಪ್ಪು ಗೀರು ಈ ಹಕ್ಕಿಯನ್ನು  ಗುಂಪಿನಿಂದ ಬೇರ್ಪಡಿಸಿ ನೋಡಲು ಸಹಾಯಕವಾಗಿದೆ.  ಗಂಡು ಹಕ್ಕಿ ಹೆಣ್ಣಿಗಿಂತ ಸ್ವಲ್ಪ ದಪ್ಪ ಇರುತ್ತದೆ. ತಲೆಯಲ್ಲಿರುವ ಕಪ್ಪು ಬಣ್ಣ, ಕುತ್ತಿಗೆ ಅಡಿಯ ಬಿಳಿಬಣ್ಣ ಎದ್ದು ಕಾಣುತ್ತದೆ. ಕಪ್ಪು ತಲೆಯ ಬಂಟಿಂಗ್‌,  ಎಂಬೆರಿದಿಜಿಯಾ ಕುಟುಂಬಕ್ಕೆ ಸೇರಿದ ಹಕ್ಕಿ. ಇರಾನ್‌ನಿಂದ ದಕ್ಷಿಣ ಏಷಿಯಾದ ಪೂರ್ವ ಭಾಗಕ್ಕೆ ವಲಸೆ ಹೋಗುತ್ತವೆ.  ಅದೇ ರೀತಿ  ಕರ್ನಾಟಕ, ಆಂಧ್ರ, ತಮಿಳುನಾಡುಗಳಿಗೂ ಚಳಿಗಾಲ ಕಳೆಯಲು ಬರುತ್ತವೆ.  ಇವು ಚಿಕ್ಕ ಗಿಡ ಗಂಟಿಗಳಿರುವ ಜಾಗ, ಜೋಳ, ರಾಗಿ, ನವಣೆ ಮೊದಲಾದ ಹೊಲಗಳಿರುವ ಪ್ರದೇಶ, ಭತ್ತದ ಗದ್ದೆ ಇರುವ ಕೃಷಿ ಭೂಮಿಯ ಸ್ಥಳಗಳನ್ನು ಇರು ನೆಲೆಯಾಗಿಸಿಕೊಳ್ಳುತ್ತದೆ.  ಈ ಹಕ್ಕಿ ಚಿಕ್ಕ ಮತ್ತು ದೊಡ್ಡ ಗುಂಪಿನಲ್ಲೂ ವಲಸೆ ಬರುವುದು ವಿಶೇಷ.  ಇದರ ಜೊತೆಯಲ್ಲೇ ಇದನ್ನೆ ಹೋಲುವ ಆದರೆ ತಲೆ ಮಾತ್ರ ಸ್ವಲ್ಪ ತಿಳಿ ಕೇಸರಿ ಇರುವ ಈ ಗುಂಪಿಗೆ ಸೇರಿದ ಕೇಸರಿ ತಲೆ ಬಂಟಿಂಗ್‌ ಸಹ ಇರುತ್ತದೆ.  ಈ ಎರಡೂ ಹಕ್ಕಿಗಳಿಂದ ಕ್ರಾಸ್‌ಬ್ರಿàಡ್‌ ಹಕ್ಕಿಗಳು ಜನಿಸಿರುವುದುಂಟು. 

 ಈ ಹಕ್ಕಿ  ಅತಿದೂರ ಅಂದರೆ 7,000 ಕಿ. ಮೀ. ದೂರದವರೆಗೂ ವಲಸೆ ಹೋಗುತ್ತದೆ. ಪಕ್ಷಿ ತಜ್ಞರು ಕಪ್ಪುತಲೆಯ ಬಂಟಿಗ್‌ಗೆ ಉಂಗುರ ತೊಡಿಸಿ ಅಧ್ಯಯನ ನಡೆಸಿದಾಗ ಈ ಸಂಗತಿ ತಿಳಿದು ಬಂದಿದೆ.   ಕಟಾವಿಗೆ ಬಂದ ಪೈರು ಅಂದರೆ ಇದಕ್ಕೆ ಪಂಚ ಪ್ರಾಣ. ಹೀಗಾಗಿ, ಅದರ ತೆನೆಯ ಮೇಲೆ ಕುಳಿತು, ಕಾಳುಗಳನ್ನು ತಿಂದು ಬೆಳೆಯನ್ನು ಧ್ವಂಸಮಾಡಿ ರೈತರ ಕೋಪಕ್ಕೂ ಕಾರಣವಾಗುತ್ತದೆ.  ಕಾಳು, ಜೋಳ, ನವಣೆ ಮೊದಲಾದ ಧಾನ್ಯ ಮತ್ತು ಹುಲ್ಲು ಬೀಜಗಳೇ ಇದರ ಆಹಾರ. ಈ ಬೆಳೆಗಳಿಗೆ ಹಾನಿಮಾಡುವ ಕೀಟಗಳನ್ನು ಇದು ನಿಯಂತ್ರಿಸುವುದರಿಂದ ರೈತರಿಗೆ ಉಪಕಾರ ಸಹ ಆಗುತ್ತದೆ.  ಈ ಹಕ್ಕಿ ವಂಶಾಭಿವೃದ್ಧಿ ಮಾಡುವುದು ಮಾರ್ಚ್‌ ನಿಂದ ಜುಲೈ ತನಕ. 

ಈ ಹಕ್ಕಿ ಬೇಸಿಗೆ ಕಾಲದಲ್ಲಿ ಮರಿಮಾಡುತ್ತವೆ. ಚಿಕ್ಕ ಗಿಡಗಂಟಿಗಳ ಮಧ್ಯ ಇಲ್ಲವೇ ನೆಲ ಮಟ್ಟದಲ್ಲಿ ಒಣಗಿದ ಹುಲ್ಲು ನಾರು ಹಾಗೂ ಆಡಿನ ಕೂದಲನ್ನು ಸೇರಿಸಿ ಬಟ್ಟಲಾಕಾರದಲ್ಲಿ ಗೂಡನ್ನು ನಿರ್ಮಿಸುತ್ತದೆ. ಇದು 1-2 ಮೀ. ಎತ್ತರದಲ್ಲಿ ಗೂಡನ್ನು ಕಟ್ಟುತ್ತದೆ. ತಿಳಿ ಬೂದು ಮಿಶ್ರಿತ ಬಿಳೀ ಮೊಟ್ಟೆ ಇಡುತ್ತದೆ. 
ಒಂದು ಸಲಕ್ಕೆ  4 ರಿಂದ 6 ಮೊಟ್ಟೆ ಇಟ್ಟು ಅದಕ್ಕೆ  13 ದಿನ ಕಾವುಕೊಡುತ್ತದೆ.  ಆರಂಭದಲ್ಲಿ ಚಿಕ್ಕ ಹುಳುಗಳನ್ನು ಮರಿಗಳಿಗೆ ಗುಟುಕು ನೀಡುವುದು ರೂಢಿ.  ಸ್ವಲ್ಪ ಬಲಿತಮೇಲೆ ಕಾಳು, ಹುಲ್ಲಿನ ಬೀಜ ನೀಡುತ್ತದೆ. ಒಟ್ಟು 23 ದಿನದಲ್ಲಿ ಮೊಟ್ಟೆ ಮರಿಯಾಗುತ್ತದೆ.  

ಪಿ.ವಿ.ಭಟ್‌ ಮೂರೂರು 

ಟಾಪ್ ನ್ಯೂಸ್

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

4

Belthangady: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

man-a

Udupi: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

13-

Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು

Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ

Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.