ಕಪ್ಪು ಕೊಕ್ಕರೆ
Team Udayavani, Feb 10, 2018, 2:00 PM IST
ಕೊಕ್ಕರೆ ಪ್ರಧಾನವಾಗಿ ಕಪ್ಪು ಬಣ್ಣ ಇರುವುದು. ನಿಂತಿರುವಾಗ ಇದು 106 ಸೆಂ.ಮೀ. ಎತ್ತರ ಇರುತ್ತದೆ. ಇದು ದೊಡ್ಡ ಹಕ್ಕಿ. ಹೊಳೆವ ಕಪ್ಪು ಬಣ್ಣದ ಜೊತೆ ಹಸಿರು, ಹೊಳೆವ ಹಿತ್ತಾಳೆ ಮತ್ತು ಬದನೆಕಾಯಿ ಬಣ್ಣ ಸೇರಿದಂತಿರುವ ಕಪ್ಪುಛಾಯೆ ಇರುತ್ತದೆ. ಹೊಟ್ಟೆ ಅಡಿಯಲ್ಲಿ ಮತ್ತು ರೆಕ್ಕೆ ಆರಂಭವಾಗುವ ಬಾಲದ ಅಡಿಯಲ್ಲಿ ಬಿಳಿ ಬಣ್ಣವಿರುತ್ತದೆ. ಚುಂಚು ಉದ್ದವಾಗಿದ್ದು ಸುಮಾರು 13 ಸೆಂ.ಮೀ ಇರುತ್ತದೆ. ಚುಂಚು ಮತ್ತು ಕಾಲು ಕೆಂಪು ಬಣ್ಣದಿಂದ ಕೂಡಿರುತ್ತದೆ. ಉದ್ದುದ್ದ ಕಾಲು, ನಿಧಾನವಾಗಿ ನಡೆಯುವ ಇದರಗತ್ತು, ಇದನ್ನು ಸುಲಭವಾಗಿ ಗುರುತಿಸಲು ಸಹಾಯಕ. ಕಪ್ಪು ಐಬೀಸ್, ಬಿಳಿಕುತ್ತಿಗೆ ಕೊಕ್ಕರೆ, ಕಪ್ಪು ಕುತ್ತಿಗೆ ಕೊಕ್ಕರೆಯನ್ನು ತುಂಬಾ ಹೋಲುತ್ತದೆ. ಆದರೆ ಕಪ್ಪು ಐಬೀಸ್‌ಗೆ ಕೆಂಪು ಟೊಪ್ಪಿ ಇರುತ್ತದೆ.
ಬಿಳಿಯ ಐಬೀಸ್ ಗುಂಪಿನಲ್ಲಿರುವ ಕಪ್ಪುಕುತ್ತಿಗೆ ಬೆಳ್ಳಹಕ್ಕಿಯ ಮೈಬಣ್ಣ ಬಿಳಿ. ಹಾಗಾಗಿ ಇದನ್ನು ಇವುಗಳಿಗಿಂತ ಪ್ರತ್ಯೇಕವಾಗಿ ಗುರುತಿಸಬಹುದು. ಕುತ್ತಿಗೆ, ತಲೆ ಹಸಿರು ಮಿಶ್ರಿತ ಕಪ್ಪು ಬಣ್ಣವಿರುವುದರಿಂದ ಇದನ್ನು ಸುಲಭವಾಗಿ ಗುರುತಿಸಬಹುದು. ಗಜನೀ ಪ್ರದೇಶ, ಹಿನ್ನೀರಿನ ಪ್ರದೇಶ, ಕಾಡು, ಹರಿಯುವ ನದೀತೀರಗಳಲ್ಲಿ, ಯುರೋಪಿಯನ್ ಬಿಳಿ ಕೊಕ್ಕರೆ ಜೊತೆ ಸಹ ಕಾಣಬಹುದು. ಇದು ಜೋಡಿಯಾಗಿ ಇಲ್ಲವೇ ನಾಲ್ಕು ಐದರ ಗುಂಪಿನಲ್ಲಿ ಕಾಣಸಿಗುತ್ತದೆ. ಕಣ್ಣಿನ ಸುತ್ತ ಕೆಂಪು ಬಣ್ಣದ ಚರ್ಮ ಇದೆ. ಇದರಕೆನ್ನೆಕಂದು ಗೆಂಪು ಬಣ್ಣದ್ದು.
ಇದರ ರೆಕ್ಕೆಯ ಅಗಲ 145 ರಿಂದ 155 ಸೆಂ.ಮೀ. ಭಾರ 3 ಕೆ.ಜಿ. ಉದ್ದ ಕಾಲು, ಉದ್ದ ಚೂಪಾದ ಚುಂಚು, ಇದು ನಡೆದಾಡಿ ನೀರಿನ ಕೆಸರಿನಲ್ಲಿ ಕೆದಕಿ ಹುಳಗಳನ್ನು, ಮೃದ್ವಂಗಿಗಳನ್ನು ಮತ್ತು ಮೀನ, ಬಸವನ ಹುಳು, ಚಿಪ್ಪಿನ ಹುಳು, ಲಾರ್ವಾ ಗಳನ್ನು ಹಿಡಿಯಲು ಸಹಾಯಕವಾಗಿದೆ. ಇದು ಚಳಿಗಾಲದಲ್ಲಿ ಉತ್ತರ ಭಾರತ, ಪಾಕಿಸ್ತಾನ, ಆಂಧ್ರಪ್ರದೇಶ, ಮೈಸೂರು, ಶ್ರೀಲಂಕಾಗಳಲ್ಲೂ ಕಂಡ ಉದಾಹರಣೆ ಇದೆ. ಜೌಗು ಪ್ರದೇಶದಲ್ಲಿ ನೀರಿನಲ್ಲಿ ನಡೆದಾಡುತ್ತಾ, ನೀರಿನ ಕೆಸರನ್ನು ಕೆದಕಿ ಹುಳ ಹಿಡಿದು ತಿನ್ನುತ್ತದೆ. ನದಿ, ಹಳ್ಳಗಳ ತೀರದಲ್ಲಿ, ತೆರೆದ ಎರೆಭೂಮಿಯಲ್ಲಿ ತನ್ನ ಆಹಾರತಿನ್ನುತ್ತಿರುವುದು ಸಾಮಾನ್ಯದೃಶ್ಯ. ಗಂಡು ಹೆಣ್ಣು ಒಂದೇ ರೀತಿ ಇರುತ್ತದೆ. ಆದರೆ ಗಂಡು ಹೆಣ್ಣಿಗಿಂತ ಸ್ವಲ್ಪದೊಡ್ಡದಾಗಿರುವುದು. ಪ್ರಾದೇಶಿಕವಾಗಿ ಕೆಲವೊಮ್ಮೆ ಕಪ್ಪುರೆಕ್ಕೆಯ ಬದಲಿಗೆ ಕಂದು ಬಣ್ಣದಿಂದ ಕೂಡಿರುತ್ತದೆ. ಬಣ್ಣ ಮಸುಕಾಗಿ ಇದ್ದು ಹೊಳೆಯುವುದಿಲ್ಲ. ರೆಕ್ಕೆ ಮತ್ತು ಬಾಲದ ಮೇಲ್ಬದಿ ಅಂದರೆ ಅಪ್ಪರ್ ಟೇಲ್‌ಕವರ್‌ಅಂಚಿನಲ್ಲಿ ಮಸುಕಾದರೇಖೆ ಇರುತ್ತದೆ. ಚುಂಚು ಮತ್ತುಕಣ್ಣಿನ ಸುತ್ತ ಇರುವ ಚರ್ಮದ ಬಣ್ಣ ಹಸಿರು ಮಿಶ್ರಿತ ಬೂದು ಬಣ್ಣ. ಈ ಬಣ್ಣ ಹಳದಿ ಕೊಕ್ಕಿನ ಕೊಕ್ಕರೆ ಮತ್ತು ಈ ಬಣ್ಣದಕಪ್ಪು ಕೊಕ್ಕರೆಒಂದೇ ಎನ್ನುವ ಭ್ರಮೆ ಹುಟ್ಟಿಸುತ್ತದೆ.
ಎತ್ತರದ ಮರಗಳನ್ನು ಆರಿಸಿ ಅದರ ಟೊಂಗೆಗಳ ಮೇಲೆ ಮರದ ಕಡ್ಡಿಗಳನ್ನು ಸೇರಿಸಿ, ಅಟ್ಟಣಿಗೆ ನಿರ್ಮಿಸಿ ಅದರ ನಡುವೆ ಮೆತ್ತನೆ ಹಾಸನ್ನು ಮಾಡಿ ಅಲ್ಲಿತನ್ನ ಮೊಟ್ಟೆ ಇಡುತ್ತದೆ. ಕೆಲವೊಮ್ಮೆ ದೊಡ್ಡ ಎಲೆಗಳಿಂದ ಕೂಡಿದ ಕಾಡಿನ ಪ್ರದೇಶದಲ್ಲೂ ಮರಗಳ ಮೇಲೆ ಗೂಡುಕಟ್ಟಿ ಮೊಟ್ಟೆ ಇಟ್ಟು ಮರಿಮಾಡುವ ಸ್ವಭಾವ ಹೊಂದಿದೆ. ಪರ್ವತ ಹಾಗೂ ಕಲ್ಲು ಬಂಡೆಗಳಿರುವ ಗುಡ್ಡ ಪ್ರದೇಶಗಳ ಕಲ್ಲು ಕೊರಕಲು ಬಂಡೆಯ ಸಂದಿನಲ್ಲೂ ಸಹ ಕಟ್ಟಿಗೆ ತುಂಡುಗಳನ್ನು ಸೇರಿಸಿ ಗೂಡು ಮಾಡಿದ ಉದಾಹರಣೆ ಇದೆ. ಅಲ್ಲಿ ಮೊಟ್ಟೆ ಇಟ್ಟು ಕಾವು ಕೊಟ್ಟು ಮರಿ ಮಾಡಿವೆ. ಇತರ ಕೊಕ್ಕರೆಗಳಂತೆ ನೆಲದ ಮೇಲೆ ನಡೆದಾಡುತ್ತಾ ಒಂದನ್ನು ಇನ್ನೊಂದು ಅಟ್ಟಿಸಿಕೊಂಡು ಓಡುವುದು, ಕೆಲವೊಮ್ಮೆ ಕುಪ್ಪಳಿಸಿ ಒಂದರ ಮೇಲೆ ಇನ್ನೊಂದು ಹಾರುವುದು, ಒಂದು ಇನ್ನೊಂದರ ಚುಂಚನ್ನು ಕುಟ್ಟಿ, ಚುಂಚನ್ನು ಅಗಲಿಸಿ ಒಂದು ಇನ್ನೊಂದರಜೊತೆ ಪ್ರಣಯದಾಟ ಆಡುತ್ತದೆ.
ಇದೊಂದು ವಲಸೆ ಹಕ್ಕಿ. ಗಾತ್ರದಲ್ಲಿದೊಡ್ಡದಿದ್ದರೂ ಇದು ಎಷ್ಟು ದೂರ ವಲಸೆ ಹೋಗುವುದು? ಪ್ರತಿದಿನ ಎಷ್ಟು ದೂರ ಹಾರುವುದು? ವಲಸೆ ಕೈಗೊಳ್ಳುವ ಮೊದಲು ಎಷ್ಟು ಸಮಯ ವಲಸೆ ತಯಾರಿ, ವಲಸೆಗೂ ಮುನ್ನಯಾವ ರೀತಿ ಆಹಾರ ತೆಗೆದುಕೊಳ್ಳುವುದು ಇತ್ಯಾದಿ ವಿಷಯದಲ್ಲಿ ಅಧ್ಯಯನ ನಡೆಯಬೇಕಿದೆ. ಇದಲ್ಲದೇ ಪ್ರತಿ ವರ್ಷಅದೇ ಸಮಯದಲ್ಲಿ ವಲಸೆ ಕೈಗೊಳ್ಳುವುದೋ? ಸಮುದ್ರಇತ್ಯಾದಿ ವಲಸೆ ಮಾರ್ಗದಲ್ಲಿ ಸಿಕ್ಕಾಗ ನಿರಂತರಎಲ್ಲೂ ನಿಲ್ಲದೇ ಎಷ್ಟು ದೂರ ಹಾರುವುದು ? ಪುನಃ ತನ್ನ ಇರುನೆಲೆ ತಲುಪಲು ಅದೇ ಮಾರ್ಗಉಪಯೋಗಿಸುವುದೋ ಇಲ್ಲವೇ ತಿರುಗಿ ತನ್ನ ಇರು ನೆಲೆಗೆತಿ ರುಗಿ ಬರಲು ಬೇರೆ ಬೇರೆೆ ಮಾರ್ಗಅನುಸರಿಸುವುದೋ ಇತ್ಯಾದಿ ಅಧ್ಯಯನ ನಡೆದರೆ ಇದರ ವಲಸೆ ಬಗ್ಗೆ ಅನೇಕ ವಿಸ್ಮಯ ಸಂಗತಿ ತಿಳಿಯುವುದು.
ಪಿ. ವಿ.ಭಟ್ ಮೂರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.