“ಬುಕ್ ಬ್ರಹ್ಮ’ನ ಬಜಾರು
ಓದುಗ- ಲೇಖಕರ ನಡುವಿನ ನವಸೇತುವೆ
Team Udayavani, Aug 10, 2019, 5:00 AM IST
ಬುಕ್‌ಬ್ರಹ್ಮ ವೇದಿಕೆಯು, ಲೇಖಕ, ಓದುಗ, ವಿಮರ್ಶಕ ಹಾಗೂ ಪ್ರಕಾಶಕರ ನಡುವಿನ ಸೇತುವೆಯಾಗಿ ಕೆಲಸ ಮಾಡಲಿದೆ. ಬಿಡುಗಡೆಯಾಗುವ ಹೊಸ ಪುಸ್ತಕಗಳ ಮಾಹಿತಿ, ಪುಸ್ತಕ ಎಲ್ಲೆಲ್ಲಿ ಸಿಗುತ್ತದೆ ಎಂಬುದರ ವಿವರ, ಆ ಲೇಖಕನ ಬೇರೆ ಪುಸ್ತಕಗಳ ಮಾಹಿತಿ, ಪುಸ್ತಕ ವಿಮರ್ಶೆಯ ಕುರಿತಾದ ಸಂಪೂರ್ಣ ವಿವರಗಳು ಬುಕ್‌ಬ್ರಹ್ಮದಲ್ಲಿ ಲಭ್ಯ…
ಪುಸ್ತಕ ಎನ್ನುವುದು ದುಂಬಿ ಇದ್ದಂತೆ. ಜ್ಞಾನದ ಪರಾಗವನ್ನು ಒಬ್ಬರಿಂದ ಮತ್ತೂಬ್ಬರಿಗೆ ದಾಟಿಸುವ ಭೃಂಗ- ಅಮೆರಿಕದ ಪ್ರಸಿದ್ಧ ಪ್ರೇಮಕವಿ ಜೇಮ್ಸ್ ರಸೆಲ್ ಲೊವೆಲ್, ಓದಿನ ಗುಂಗನ್ನು ಮೋಹಕವಾಗಿ ಬಣ್ಣಿಸುವುದು ಈ ಪರಿ. ಹಾಗೆ ಓದುತ್ತಲೇ, ಬದುಕನ್ನು ಸಿಹಿ ಮಾಡಿಕೊಳ್ಳುವ ಸುಖವನ್ನು ಕನ್ನಡಿಗರಿಗೆ ದಯಪಾಲಿಸಲು ಹೊರಟಿದ್ದಾನೆ, ಇಲ್ಲೊಬ್ಬ “ಬುಕ್‌ಬ್ರಹ್ಮ’. ಕುವೆಂಪು ಕಾಲದ ನಡುವೆ ನಿಮ್ಮನ್ನು ನಿಲ್ಲಿಸಬಲ್ಲ; ಬೇಂದ್ರೆಯ ಕಾವ್ಯದ ಕರಾಮತ್ತನ್ನೂ, ಹರವಿಡಬಲ್ಲನೀತ. ಭೈರಪ್ಪನವರ ಕಾದಂಬರಿಗೆ ಬಂದ ವಿಮರ್ಶೆ, ತೇಜಸ್ವಿ- ಕಾರಂತರ ಕಾಡು- ಪರಿಸರದ ಕತೆಗಳನ್ನೂ, ಮೊನ್ನೆ ಮೊನ್ನೆ ಬಂದ ಕೃತಿಯ ಸಂಪೂರ್ಣ ಮಾಹಿತಿಯನ್ನೂ, ಹೊತ್ತು ತರುವನೀತ.
ಯಾರು ಈ ಬುಕ್ ಬ್ರಹ್ಮ?
ಕನ್ನಡದಲ್ಲಿ ಪ್ರತಿವರ್ಷ ಆರೇಳು ಸಾವಿರಕ್ಕೂ ಹೆಚ್ಚು ಪುಸ್ತಕಗಳು ಬಿಡುಗಡೆಯಾಗುತ್ತವೆ. ಆದರೆ, ಓದುಗರ ಕೈ ತಲುಪುವುದು ಐನೂರೋ, ಆರು ನೂರೋ ಪುಸ್ತಕಗಳಷ್ಟೇ. ನಾನು ಪುಸ್ತಕಪ್ರೇಮಿ ಅಂತ ಎದೆ ತಟ್ಟಿ ಹೇಳುವವರಿಗೂ, ಬಿಡುಗಡೆಯಾಗುವ ಎಲ್ಲ ಪುಸ್ತಕಗಳ ಮಾಹಿತಿ ಸಿಗುವುದಿಲ್ಲ. ಲೇಖಕರ ಪರಿಚಯವಾಗುವುದಿಲ್ಲ. ಯಾಕೆಂದರೆ, ಆ ಪುಸ್ತಕಗಳ ಪೈಕಿ ಸರಿ ಸುಮಾರು ಸಾವಿರ ಪುಸ್ತಕಗಳು ಮಾತ್ರ ವಿವಿಧ ಮಾಧ್ಯಮ (ಪತ್ರಿಕೆ, ಸೋಷಿಯಲ್ ಮೀಡಿಯಾ)ಗಳಲ್ಲಿ ಸುದ್ದಿಯಾಗುತ್ತವೆ.
ಮಾಹಿತಿ ಕೊರತೆಯಿಂದಾಗಿ ಓದುಗರಿಗೆ ಕನ್ನಡದಲ್ಲಿ ಪ್ರಕಟವಾಗುವ ಪುಸ್ತಕಗಳ ಮಾಹಿತಿ ದೊರೆಯುತ್ತಿಲ್ಲ. ಲೇಖಕರಿಗೆ ತಮ್ಮ ಓದುಗರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಓದುಗ- ಲೇಖಕರ ಮಧ್ಯೆ ಇರುವ ಕಂದರದಿಂದಾಗಿ ಪ್ರಕಾಶಕರಿಗೆ ಲಾಭವಾಗುತ್ತಿಲ್ಲ. ಒಳ್ಳೆಯ ಪುಸ್ತಕದ ಬಗ್ಗೆ ವಿಮರ್ಶೆ, ಚರ್ಚೆಗಳು ನಡೆಯಲು ಸಾಧ್ಯವಾಗುತ್ತಿಲ್ಲ. ಈ ಕೊರತೆಗಳನ್ನು ನೀಗಿಸಲು, “ಬುಕ್ ಬ್ರಹ್ಮ’ ಎನ್ನುವ ಮಲ್ಟಿಮೀಡಿಯಾ ವೇದಿಕೆಯೊಂದು ರೂಪುಗೊಳ್ಳುತ್ತಿದೆ.
ಸೇತುವೆ ಕಟ್ಟುವ ಬ್ರಹ್ಮ
ಈ ಬುಕ್‌ಬ್ರಹ್ಮ ವೇದಿಕೆಯು, ಲೇಖಕ, ಓದುಗ, ವಿಮರ್ಶಕ ಹಾಗೂ ಪ್ರಕಾಶಕರ ನಡುವಿನ ಸೇತುವೆಯಾಗಿ ಕೆಲಸ ಮಾಡಲಿದೆ. ಬಿಡುಗಡೆಯಾಗುವ ಹೊಸ ಪುಸ್ತಕಗಳ ಮಾಹಿತಿ, ಪುಸ್ತಕ ಎಲ್ಲೆಲ್ಲಿ ಸಿಗುತ್ತದೆ ಎಂಬುದರ ವಿವರ, ಆ ಲೇಖಕನ ಬೇರೆ ಪುಸ್ತಕಗಳ ಮಾಹಿತಿ, ಪುಸ್ತಕ ವಿಮರ್ಶೆಯ ಕುರಿತಾದ ಸಂಪೂರ್ಣ ವಿವರಗಳು ಬುಕ್‌ಬ್ರಹ್ಮದಲ್ಲಿ ಲಭ್ಯ. ಸಮಕಾಲೀನ ಪುಸ್ತಕಗಳ ಮಾಹಿತಿಯ ಜೊತೆಗೆ, ಹಳೆಯ ಪುಸ್ತಕಗಳ ಮತ್ತು ಲೇಖಕರ ವಿವರಗಳೂ ಇರಲಿವೆ. ಪುಸ್ತಕದ ಕುರಿತಾಗಿ ಎಲ್ಲಿ, ಯಾವುದೇ ಕಾರ್ಯಕ್ರಮ ನಡೆದರೂ, ಬುಕ್‌ಬ್ರಹ್ಮನಲ್ಲಿ ಮಾಹಿತಿ ಇರುತ್ತದೆ.
ಆಗಸ್ಟ್ 15ಕ್ಕೆ ಬಿಡುಗಡೆ
ಬುಕ್ ಬ್ರಹ್ಮ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ವರ್ಬಿಂಡನ್ ಕಮ್ಯುನಿಕೇಷನ್ ಕಂಪನಿಯ ನೇತೃತ್ವದಲ್ಲಿ ನಡೆಯುತ್ತಿರುವ ಯೋಜನೆಯಾಗಿದ್ದು, 25 ಜನರ ತಂಡ ಕನ್ನಡದ ಕೆಲಸದಲ್ಲಿ ತೊಡಗಿಕೊಂಡಿದೆ. ಆಗಸ್ಟ್ 15ರಂದು, ಈ ಮಲ್ಟಿ ಮೀಡಿಯಾ ವೇದಿಕೆಯು ಓದುಗರಿಗೆ ಲಭ್ಯವಾಗಲಿದೆ. ಮೊದಲ ದಿನವೇ 5 ಸಾವಿರ ಪುಸ್ತಕಗಳ ಹಾಗೂ 2 ಸಾವಿರ ಲೇಖಕರ ಮಾಹಿತಿಯು ಈ ವೆಬ್ ಪೋರ್ಟಲ್‌ನಲ್ಲಿ ಸಿಗಲಿದೆ. ಕಂಪನಿಯ ಸಿಇಒ ವಿನಯ್‌ಕುಮಾರ್ ಮತ್ತು ಸಂಪಾದಕ ದೇವು ಪತ್ತಾರ್‌ರ ನೇತೃತ್ವದಲ್ಲಿ, ಮುಂಬರುವ ದಿನಗಳಲ್ಲಿ ಎಲ್ಲ ಹೊಸ ಪುಸ್ತಕಗಳ ಮಾಹಿತಿ ಕ್ರೋಡೀಕರಿಸುವ ಇರಾದೆಯಿದೆ.
ಪಾಯಿಂಟ್ಸ್
“ಬುಕ್ ಬ್ರಹ್ಮ’ನ ಗಂಟೊಳಗೆ…
– ಹಳೆಯ ಮತ್ತು ಹೊಸ ಪುಸ್ತಕಗಳ ಸಂಪೂರ್ಣ ಮಾಹಿತಿ.
– ಲೇಖಕರ ಪರಿಚಯ.
– ಪುಸ್ತಕ ವಿಮರ್ಶೆ ಮತ್ತು ಪತ್ರಿಕೆಗಳಲ್ಲಿ ಪುಸ್ತಕದ ಕುರಿತು ಪ್ರಕಟವಾದ ಬರಹಗಳ ಲಿಂಕ್.
– ಪುಸ್ತಕದ ಕುರಿತಾದ ಕಾರ್ಯಕ್ರಮಗಳ ವಿವರ.
– ಯಾವ್ಯಾವ ಪುಸ್ತಕ ಎಲ್ಲೆಲ್ಲಿ ಸಿಗುತ್ತದೆ (ಆನ್‌ಲೈನ್, ಆಫ್ಲೈನ್) ಎಂಬ ಮಾಹಿತಿ.
– ಮುಂಬರುವ ದಿನಗಳಲ್ಲಿ, ದಿನ ದಿನ ಪ್ರಕಟವಾಗುವ ಪುಸ್ತಕಗಳ ಮಾಹಿತಿಯನ್ನು ಅಂದಿನ ದಿನವೇ ಕೊಡಲಾಗುವುದು.
– ಓದುಗರಿಗೆ ಮತ್ತು ಲೇಖಕರಿಗೆ ತಮ್ಮ ಪುಸ್ತಕದ ಮಾಹಿತಿಯನ್ನು ಹಂಚಿಕೊಳ್ಳಲು ಅವಕಾಶ.
ಬುಕ್ ಬ್ರಹ್ಮ ಯೋಜನೆಯು ಕನ್ನಡ ಸಾಹಿತ್ಯ ಪೋಷಕರು ಹಾಗೂ ಲೇಖಕರನ್ನು ಒಂದೇ ವೇದಿಕೆಯಲ್ಲಿ ಸೇರಿಸುತ್ತದೆ. ಇದರಿಂದಾಗಿ, ಓದುಗರಿಗೆ ಅತ್ಯುತ್ತಮ ಕೃತಿಗಳ, ಲೇಖಕರ ಮಾಹಿತಿ ದೊರೆಯುತ್ತದೆ. ಹಾಗೆಯೇ, ಲೇಖಕರಿಗೆ ಹೆಚ್ಚಿನ ಓದುಗರನ್ನು ತಲುಪಲು ಸಾಧ್ಯವಾಗುತ್ತದೆ.
– ವಿನಯ್ ಕುಮಾರ್ (ಸಿಇಒ ಬುಕ್‌ಬ್ರಹ್ಮ)
ಕನ್ನಡದಲ್ಲಿ ವರ್ಷಕ್ಕೆ ಸುಮಾರು ಇನ್ನೂರು ಸಿನಿಮಾಗಳು ಬಿಡುಗಡೆಯಾಗುತ್ತವೆ. ಅದನ್ನು ನಾವು ಚಿತ್ರೋದ್ಯಮ ಅಂತ ಕರೆಯುತ್ತೇವೆ. ಆದರೆ, ವರ್ಷಕ್ಕೆ ಆರು ಸಾವಿರ ಪುಸ್ತಕಗಳು ಬಿಡುಗಡೆಯಾದರೂ, ಐನೂರಕ್ಕೂ ಹೆಚ್ಚು ವೃತ್ತಿಪರ ಪ್ರಕಾಶಕರಿದ್ದರೂ ಇದು ದೊಡ್ಡ ಉದ್ಯಮದ ಮಟ್ಟಕ್ಕೆ ಬೆಳೆದಿಲ್ಲ. ಪುಸ್ತಕ ಪ್ರಕಟಣೆ ಇನ್ನೂ ಅನ್ ಆರ್ಗನೈಸ್ಡ್ ಆಗಿಯೇ ಇದೆ. ಈ ಅಂಶಗಳ ಮೇಲೆ ಗಮನ ಹರಿಸುವ ಪ್ರಯತ್ನವೇ ಬುಕ್ ಬ್ರಹ್ಮ.
– ದೇವು ಪತ್ತಾರ್, ಬುಕ್ ಬ್ರಹ್ಮ ಸಂಪಾದಕ
ಬುಕ್ ಬ್ರಹ್ಮ ಯೋಜನೆಯ ಉದ್ದೇಶ ಬಹಳ ಚೆನ್ನಾಗಿದೆ. ಇದರಿಂದ ಪುಸ್ತಕಗಳ ಪ್ರಚಾರವೂ ಆಗುತ್ತೆ. ಓದುಗರಿಗೂ ಉಪಯೋಗವಾಗುತ್ತೆ.
– ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿ
ಓದುಗರಲ್ಲಿ ಪುಸ್ತಕದ ಕುರಿತು ಪ್ರೀತಿ ಮತ್ತು ಸದಭಿರುಚಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಬುಕ್ ಬ್ರಹ್ಮ ಒಳ್ಳೆಯ ಕೆಲಸಗಳನ್ನು ಮಾಡಲಿ.
– ಚೆನ್ನವೀರ ಕಣವಿ, ಹಿರಿಯ ಕವಿ
ಯುಟ್ಯೂಬ್ ಲಿಂಕ್:
<https://www.youtube.com/c/bookbrahma>
ಫೇಸ್ ಬುಕ್ ಲಿಂಕ್:
<https://www.facebook.com/BookBrahma>
– ಪ್ರಿಯಾಂಕ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.