ಕೆಂಗುಲಾಬಿ ಹೆಬ್ಬಾತು


Team Udayavani, Apr 1, 2017, 12:12 PM IST

106.jpg

ಕೆಂಗುಲಾಬಿ ಬಾತುಕೋಳಿ, BRAHMINY SHELDUCK  [ RUDDY SHELDUCK (TadornaFerraginea ) RM  Duck +ಡಕ್‌ ಎಂದರೆ ಬಾತುಕೋಳಿ. ಇದು ಬಾತು ಕೋಳಿಗಿಂತ ಸ್ವಲ್ಪದಪ್ಪ ಇದೆ. ಇದು ಬಾತು ಕೋಳಿಯ ಹೋಲಿಕೆ ಇದ್ದರೂ, ನಿಖರತೆ ದೃಷ್ಟಿಯಿಂದ ಇದನ್ನು ಹೆಬ್ಟಾತು ಎಂದು, ಡಕ್‌ ಸಾಮನ್ಯ ಬಾತು ಕೋಳಿಯೆಂದೆ ಕರೆಯಬೇಕೆಂದಿದ್ದೇನೆ. ಇದು ಸಲಿಂಗ್‌ ಬಾತುವನ್ನೂ ತುಂಬಾ ಹೋಲುವುದು. ಇತರ ಬಾತುಕೋಳಿಗಳಿಗಿಂತ ಇದು ಸ್ವಲ್ಪ ಭಿನ್ನ ಇದೆ. ರೆಡೀ ಶೆಲ್‌ಡಕ್‌ ಎಂದೂ ಇದನ್ನು ಇಂಗ್ಲೀಷಿನಲ್ಲಿ ಕರೆಯಲಾಗಿದೆ. 
ಇದು ಸುಮಾರು 58 ಸೆಂ.ಮೀ. ನಿಂದ 70 ಸೆಂ.ಮೀ ದೊಡ್ಡ ಇರುವುದು. ಇದಕ್ಕೆ ಗುಲಾಬಿ ಕೆಂಪು ಕಂದುಬಣ್ಣ ಮೈಯಲ್ಲಿದೆ. ತಲೆ ಸ್ವಲ್ಪ ತಿಳಿಬಣ್ಣ ಇದ್ದು ,ಕುತ್ತಿಗೆ ಮತ್ತು ಮೈ ಸೇರುವಲ್ಲಿಕುತ್ತಿಗೆ ಸುತ್ತ ಕಂದುಬಣ್ಣದ ಪಟ್ಟಿ ಇದೆ.

ಇದು ಅನ¤ಡಿಯಾ ಅಥವಾ ಅನ್ನೆರಿಫಾರುಸ್‌ ಕುಟುಂಬದ ಹಕ್ಕಿ. 110 ರಿಂದ 135 ಸೆಂಮೀ. ರೆಕ್ಕೆಯ ಅಗಲ ಇರುವುದು. ಕಿತ್ತಳೆ ಕಂದುಬಣ್ಣದ ದೇಹ, ಬಾಲ ಮತ್ತು ಹಾರುವಾಗ ರೆಕ್ಕೆಯಲ್ಲಿ ಕಪ್ಪು ಬಣ್ಣಕಾಣುವುದು. ಇದು ರೆಕ್ಕೆ ಮಡಚಿ ಕುಳಿತಾಗ ರೆಕ್ಕೆ ಮತ್ತು ಹೊಟ್ಟೆಯ ಗರಿಗಳ ನಡುವೆ ಬಿಳಿಬಣ್ಣ ಕಾಣುತ್ತದೆ. ಇದು ಸ್ಲಿಗ್‌ ಬಾತುವನ್ನು ನೆನಪಿಸುವುದು. ಎದೆಯ ಭಾಗ ಸ್ವಲ್ಪಕಂದುಗಪ್ಪು ಬಣ್ಣದಿಂದ ಕೂಡಿರುತ್ತದೆ. ಬೂದು ಬಣ್ಣದ ಚುಂಚು ತುದಿಯಲ್ಲಿ ಇತರ ಬಾತುಗಳಂತೆ ಸ್ವಲ್ಪ ಬಾಗಿದೆ. ಕಾಲು ಬೂದು ಬಣ್ಣಇದ್ದು, ಜಾಲಪಾದಇದೆ. ಕಾಲಿನ ಹಿಂಬದಿಯಲ್ಲಿ ಕೋಳಿಗಳಿಗಿರುವಂತೆ ಚಿಕ್ಕ ಬರಳಿದ್ದು ತುದಿಯಲ್ಲಿ ಉಗುರಿದೆ.  ಇದು ಚಳಿಗಾಲದಲ್ಲಿ ಭಾರತ ಮತ್ತು ಭಾರತದ ನಡುಗಡ್ಡೆಗಳಿಗೆ ಬರುತ್ತವೆ. ದಕ್ಷಿಣ ಪೂರ್ವ
ಯುರೋಪು, ಮಧ್ಯ ಏಷಿಯಾಗಳಲ್ಲಿ ಇವು ಮರಿಮಾಡುತ್ತವೆ. ಇದು ಬಹುದೂರ ವಲಸೆ ಬರುವ ಪಕ್ಷಿ.  ಬಹು ಎತ್ತರದಲ್ಲಿ ಮಾಯ ಪರ್ವತ ಶ್ರೇಣಿಗಳನ್ನು ದಾಟಿ ಬರುವ ವಿಶೇಷ ಗುಣ ಹೊಂದಿವೆ. ಬಹು ಎತ್ತರದಲ್ಲಿ ಚಳಿ ಇದ್ದರೂ, ಕಡಿಮೆ ಆಮ್ಲಜಕ ತೆಗೆದುಕೊಂಡು ಹಾರಬಲ್ಲದು. ಅತಿ ಕಡಿಮೆ ಆಮ್ಲಜನಕ ಉಪಯೋಗಿಸುವ ಗುಣ ಇದರ ರಕ್ತದಲ್ಲಿದೆ. ಇದರ ಅಧ್ಯಯನ ಮತ್ತು ಇದು ವಲಸೆ ಬರುವ ಮಾರ್ಗ ಎತ್ತರ, ಒಂದು ಹಾರಿಕೆಯಲ್ಲಿ ನಿಲ್ಲದೇ ವಲಸೆಯಲ್ಲಿ ಬರುವ ಗುಣ. ಅನೇಕ ಪ್ರತಿರೋಧ, ಅಂದರೆ ಹವಾಮಾನ ವೈಪರಿತ್ಯ ಇತ್ಯಾದಿ ಎದುರಿಸುವ ಗುಣ-ಸೂಕ್ಷ್ಮತೆ ಇದರಲ್ಲಿದೆ. ಇದರ ಒಂದು ತಳಿ ಆಫ್ರಿಕಾದಲ್ಲೂ ಇದೆ. ಆದರೆ ದೊಡ್ಡದಾಗಿ ಹೂಂಕರಿಸುವಂತೆ ಅನುನಾಸಿಕ ಸ್ವರವನ್ನು ಅದು ಹೊಡಿಸುವ ವಿಶೇಷ ಗುಣ ಹೊಂದಿದೆ. 

ಲಡಾಕಿನ ಸರೋವರ, ನದಿ ತೀರಗಳಲ್ಲಿ ಮರಿಮಾಡುತ್ತವೆ. ಇವುಗಳಿಗೆ ಗುರುತು ಪಟ್ಟಿಕಟ್ಟಿ ಮತ್ತು ಉಪಗ್ರಹದ ಮೂಲಕ ಇದರ ವಲಸೆಯ ಮಾರ್ಗ, ಎತ್ತರ ಕುರಿತು ಸಂಶೋಧನೆಗಳು ದಾಖಲಾಗಿವೆ. ವಲಸೆಬರುವಾಗ ಇವುಗಳ ಹೃದಯ ಬಡಿತದ ವ್ಯತ್ಯಾಸ ಸಹ ಅಧ್ಯಯನ ನಡೆದಿದೆ. ಇದು ಚಿಕ್ಕ ಗುಂಪು ಕಟ್ಟಿಕೊಂಡು, ಪಟ್ಟೆತಲೆ ಹೆಬ್ಟಾತುಗಳ ಜೊತೆ ಭಾರತಕ್ಕೆ ಬರುವುದು. ಈಜಾತಿಯ ಬಾತುಗಳು ಅಪಾಯದ ಸೂಚನೆಯನ್ನು ಬಹು ಬೇಗ ಗ್ರಹಿಸುತ್ತವೆ.  ಇಂತಹ ಅಪಾಯದ ಸೂಚನೆ ಕಂಡಕೂಡಲೇ ಅವು ಜಾಗ ಬದಲಿಸುತ್ತವೆ. ಇದನ್ನು ತಿಳಿದಿರುವ ಇತರ ಹೆಬ್ಟಾತು, ಬಾತು, ಪಕ್ಷಿಗಳು ಸಹ ಅಪಾಯದಿಂದ ಪಾರಾಗುತ್ತವೆ. ಆಹಾರಕ್ಕಾಗಿ ಅಪಾಯ ಇಲ್ಲದ ಇತರ ಸ್ಥಳಗಳಿಗೆ ಇವುಗಳನ್ನು ಅನುಸರಿಸಿ ಹೋಗುತ್ತವೆ. ಇದರ ಅಪಾಯದ ಸೂಚನೆ ಗ್ರಹಿಸುವ ಸಾಮಥ್ಯ, ಇತರ ಹೆಬ್ಟಾತುಗಳಿಗೆ ಅನುಕೂಲವಾಗಿದೆ. 

ಲಡಾಕಿನಲ್ಲಿ ಬೌದ್ಧರು ಹೆಚ್ಚಿನ ಸಂಖ್ಯಯಲ್ಲಿರುವುದರಿಂದ ಅಲ್ಲಿ ಈ ಹೆಬ್ಟಾತುಗಳನ್ನು ಹಿಂಸಿ ಇಲ್ಲ. ಹಾಗಾಗಿ ಲಡಾಕು ಈ ಹೆಬ್ಟಾತುಗಳಿಗೆ ಸುರಕ್ಷಿತ ಪ್ರದೇಶ. ಅದರಿಂದಾಗಿ ಲಡಾಕಿಗೆ ಚಳಿಗಾಲ ಮುಗಿಯುತ್ತಿದ್ದಂತೆ ತಿರುಗಿ ಬರುತ್ತವೆ. ಇವುಗಳ ಮನೆಗಳ ಸುತ್ತಮುತ್ತ , ಮಾಳಿಗೆಗಳಲ್ಲಿ ಸಹ ಮರಿಮಾಡುತ್ತವೆ. ಇವುಗಳ ಪ್ರಣಯ ಸಮಯ ಮೇ-ಜೂನ್‌.
 ಈ ಸಮಯದಲ್ಲಿ ಗುಡ್ಡಗಾಡಿನಕಲ್ಲು ಬಿರುಕು, ಮನೆಗಳ ಬಿರುಕು ಗೋಡೆಗಳಲ್ಲಿ ಗೂಡು ನಿರ್ಮಿಸುತ್ತವೆ. ಅಲ್ಲಿ 6-10 ಬಿಳಿ ಬಣ್ಣದ ಮೊಟ್ಟೆ ಇಡುತ್ತವೆ. ಹೆಣ್ಣು ಹಕ್ಕಿ ಕಾವುಕೊಟ್ಟು 28-30ದಿನಗಳಲ್ಲಿ ಮರಿ ಮಾಡುತ್ತವೆ.  

ಗಂಡು – ಹೆಣ್ಣು ಪಕ್ಷಿಯನ್ನು ಸುಮಾರು 55 ದಿನ ಆರೈಕೆ ಮಾಡುತ್ತದೆ.  
ಇದು ಪ್ರೌಢಾವಸ್ಥೆ ತಲುಪುವಲ್ಲಿ 2 ವರ್ಷ ಬೇಕಾಗುವುದು. ಇದು ಚಳಿಗಾಲದಲ್ಲಿ ವಲಸೆ ಬರುವಾಗ, ಎತ್ತರದಲ್ಲಿ ಹಾರುವಾಗ ಇದರ ಹೃದಯ, ರಕ್ತ ಚಲನೆ, ರಕ್ತ ಕಣಗಳು ಕಡಿಮೆ ಆಮ್ಲಜನಕ ಇರುವ ಎತ್ತರದ ಪರ್ವತ ಪ್ರದೇಶದಲ್ಲಿ ಉಂಟಾಗುವ ಬದಲಾವಣೆ ಕುರಿತು ಅಧ್ಯಯನ ನಡೆಯಬೇಕಿದೆ. 

ನೀರಿನಲ್ಲಿ ಈಜುವುದು, ಮುಳುಗಿ, ನೀರಿನ ಹೊಂಡದ ಅಡಿ ಇರುವ ಕವಳೆ, ಕಮಲ ಗಿಡಗಳ ಗದ್ದೆ ಸಹ ತಿನ್ನುತ್ತದೆ. ಇದು ಜೀವ ಬೆಳವಣಿಗೆ ಸರಪಳಿಯಲ್ಲಿ ಬಾತುಗಳಿಗಿಂತ ಮೇಲಿದೆ.  ನೀರಿನಲ್ಲಿ ಈಜುವುದು. ನೀರಿನ ಅಕ್ಕಪಕ್ಕ ಇರುವ ಹಸಿರು ಹುಲ್ಲು, ಪೈರಿನ ಹೊಲದಲ್ಲಿ ಮೇಯುವುದು. ಆಯಾಸವಾದಾಗ ನೀರು ಸರೋವರಗಳಲ್ಲಿ ತೇಲಿ ವಿಶ್ರಾಂತಿ ಪಡೆಯುತ್ತವೆ. ಇದು ತನ್ನ ಜೀವನದ ಅರ್ಧ ಸಮಯ ಇಂತಹ ಭಾರತದ ಪ್ರದೇಶಗಳಲ್ಲಿ ಕಳೆಯುತ್ತವೆ. 

ಟಾಪ್ ನ್ಯೂಸ್

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.