ಖಡ್ಗ ಹಿಡಿಯೋ ಕಾಮಣ್ಣರು..


Team Udayavani, Mar 18, 2017, 11:52 AM IST

4.jpg

ಕೈಯಲ್ಲಿ ಝಳ್ಪಿಸುವ ಖಡ್ಗಗಳು..ಇನ್ನೂ ಕೆಲವರ ಕೈಯಲ್ಲಿ ಮಚ್ಚು ಮಿಂಚುವ ಲಾಂಗು…ಮೀಸೆ ತಿರುವಿ ತಲೆಗೆ ಪೇಟ ಸುತ್ತಿ ಕೈಯಲ್ಲಿ ಕೂಡುಗೋಲು ಹಿಡಿದು ತಿರುಗಾಡುವ ಭಂಟರು ಮತ್ತಷ್ಟು ಜನ…ಪರಶುರಾಮನ ಪರಶುವಿನಂತೆಯೇ ಇರುವ ಕೊಡಲಿ ಕೈಯಲ್ಲಿ ಹಿಡಿದು….ಹುಷಾರ್‌…ಎಂದು ಗುಟುರು ಹಾಕುವ ಯುವ ಪಡೆ..!  ಕಾಮಣ್ಣನ ಹಬ್ಬ ಎಂದರೆ ಎಲ್ಲರೂ ಹೋಳಿಯಾಡಿ ಹೋಳಿಗೆ ತಿನ್ನುವ ಹಬ್ಬ. ಈ ಗ್ರಾಮದ ಜನರಿಗೆ ಮಾತ್ರ  ತಮ್ಮೂರಿನ ಶೌರ್ಯ ಮೆರೆದ ಯುವಕನ ಕಾಮಣ್ಣನ ತಂಟೆಗೆ ಯಾರು ಬರದಂತೆ ಕಾಯುವ ಹಬ್ಬ. 

ಎಡ ಕೈಯಲ್ಲಿ ಹಿಡಿದ ಕಾಮಣ್ಣನ ತಲೆ ಮುಗ್ನವಾಗಿ ನಗುತ್ತಲೇ ಇದೆ. ಬಲ ಗೈಯಲ್ಲೊಂದು ದೊಡ್ಡ ಕೊಡಲಿ. ಓಡುವ ವೇಗ ಗಂಟೆಗೆ 60 ಕಿ.ಮೀ. ನೂರಕ್ಕೂ ಹೆಚ್ಚು ಜನರು ಕಾಮಣ್ಣನನ್ನೇ ಕಾಯಲು ಕುಳಿತಿದ್ದರೂ, ಅವರ ಎದುರಿನಲ್ಲಿಯೇ ಆ ಕಾಮಣ್ಣನ ಶಿರವನ್ನ ಹಾರಿಸಿಕೊಂಡು ಓಟ ಕಿತ್ತ ಆ ಧೀರನ ಮಿಂಚಿನ ಓಟಕ್ಕೆ ಅಲ್ಲಿದ್ದವರೆಲ್ಲ ಕಂಗಾಲಾಗಿ ಕೈಯಲ್ಲಿ ಸಿಕ್ಕ ಆಯುಧಗಳನ್ನು ಹಿಡಿದು, “ಬರೋÅ ನಮ್ಮೂರ ಕಾಮಣ್ಣನ ಚಂಡು ಹೊಡಕೊಂಡು ಹೊಂಟಾನ… ಅವನನ್ನ ಹಿಡಿರೋ…ಬಡಿರೋ…ಕೊಲ್ಲರೋ… ಬಿಡಬ್ಯಾಡರ್ಲೆ ಅವನ್ನ… ‘ಎನ್ನುತ್ತಲೇ ಆತನತ್ತ ಕಲ್ಲು ಎಸೆಯುತ್ತ.., ಹೂಡಿದ ಬಾಣಗಳನ್ನು ಬಿರುಸಾಗಿ ಬಿಡುತ್ತ,ಅಷ್ಟೇ ವೇಗದಲ್ಲಿ ದೊಡ್ಡ ಯುವಕರ ಪಡೆ ಆತನ ಬೆನ್ನಿಗೆ ಬಿದ್ದಿತು. 

ಒಂದಲ್ಲ ಎರಡಲ್ಲ… ಬರೊಬ್ಬರಿ 50 ಕಿ.ಮೀ.ನಷ್ಟು ದೂರ ಓಡಬೇಕು. ಅಣ್ಣೀಗೇರಿ ಸೀಮೆಯ ಕಪ್ಪು ಮಣ್ಣು ಹೋಳಿ ಹುಣ್ಣಿಮೆ ಮುಂದಿನ ಬಿಸಿಲಿಗೆ ಬೆಂಕಿ ಕೆಂಡದಂತಾಗಿತ್ತು. ಪೀಕು ಜಾಲಿಯ ಮುಳ್ಳುಗಳು ಕಬ್ಬಿಣದ ಮೊಳೆಯಷ್ಟೇ ಹರಿತ ಮತ್ತು ಗಟ್ಟಿ. ಅವುಗಳನ್ನು ಲೆಕ್ಕಿಸಿದೇ ಚಿರತೆಯಂತೆ ಚಂಗನೇ ನೆಗೆಯುತ್ತ, ಎಲ್ಲೆಂದರಲ್ಲಿ ಗಿಡಗಂಟೆಗಳ ಸಂಧಿಯಲ್ಲಿ ಉಡದಂತೆ ನುಗ್ಗಿದ ಆ ಯುವಕನ ಧೈರ್ಯ ನೋಡಿಯೇ ಬೆನ್ನಟ್ಟಿ ಬೇಟೆಯಾಡಬೇಕೆಂದು ಬಂದವರ ಜಂಗಾಬಲವೇ ಉಡುಗಿ ಹೋಗಿತ್ತು. ಒಂದೆಡೆ ತಮ್ಮೂರಿನ ಮರ್ಯಾದೆಯ ಕಳಸದಂತಿರುವ ಆ ಕಾಮಣ್ಣನ ಶಿರ, ಇನ್ನೊಂದೆಡೆ ಅದನ್ನು ಹಾರಿಸಿಕೊಂಡು ಹೋಗುತ್ತಿರುವ ಈ ಧೀರ ಯುವಕ. ಆದರೂ ಬಿಡಲಿಲ್ಲ. ಬೆನ್ನಟ್ಟಿದರು, ಮುನ್ನುಗ್ಗಿದರು, 24 ಮೈಲಿ ದೂರ ಓಡಿದ ನಂತರ, ತನ್ನೂರಾದ ಧಾರವಾಡದ ಮುಳಮುತ್ತಲ ಸೀಮೆಗೆ ಕಾಲಿಟ್ಟ. ಬೆನ್ನಟ್ಟಿದ ಹಿಂಡು ಮಂದಿಯಲ್ಲಿ ಬೆಳಣಿಕೆಯಷ್ಟು ಜನ ಕಾಣುತ್ತಿದ್ದರು. 

24 ಮೈಲಿಯ ದೂರವನ್ನು ಎಲ್ಲಿಯೂ ನಿಲ್ಲದೇ, ನೀರು ಕುಡಿಯದೇ ಓಡಿದ ಧೀರ ಈಗ ತನ್ನೆಲ್ಲ ಶಕ್ತಿ ಹಾಕಿ ಇನ್ನೊಂದು ಮೈಲಿ ಓಡಬೇಕು ಅಷ್ಟೇ. ಆದರೆ ಕಾಲಿನಲ್ಲಿ ನಟ್ಟ ಭಾರಿ ಮುಳ್ಳು ಆತನನ್ನ ಮುನ್ನಡೆಯದಂತೆ ಮಾಡಿತು. ಆದರೆ ಕೈಯಲ್ಲಿದ್ದ ಅಣ್ಣಿಗೇರಿ ಕಾಮಣ್ಣನ ಚಂಡು ತಂದು ತನ್ನ ಅತ್ತಿಗೆಗೆ ಒಪ್ಪಿಸಬೇಕು ಎನ್ನುವ ಅವನೊಳಗಿನ ಹಠ ಇನ್ನು ಚೇತರಿಸಿಕೊಳ್ಳುತ್ತಲೇ ಇತ್ತು. ಆದರೆ ಜೋರಾಗಿ ಆ ಕಾಮಣ್ಣನ ಶಿರವನ್ನ ತನ್ನೂರು ಮುಳಮುತ್ತಲಿನ ಹದ್ದಿಗೆ ಎಸೆಯುತ್ತಾನೆ. ಅಸ್ವಸ್ಥನಾದ ತನ್ನನ್ನು ಅಣ್ಣಿಗೇರಿಯಿಂದ ಬೆನ್ನಟ್ಟಿದ ಜನ ಕೊಲ್ಲುತ್ತಾರೆ ಎಂದು ತನ್ನ ಶಿರವನ್ನು ತಾನೇ ಛೇದಿಸಿಕೊಂಡು ಅಲ್ಲಿಯೇ ಪ್ರಾಣ ಬಿಡುತ್ತಾನೆ ಆ ಯುವಕ. 

300 ವರ್ಷಗಳ ಹಿಂದೆ ಧಾರವಾಡ ಸೀಮೆಯಲ್ಲಿ ನಡೆದ ಈ ನೈಜ ಘಟನೆಯ ಪರಿಣಾಮ ಇಂದು ಧಾರವಾಡ ಸಮೀಪದ ಮುಳಮುತ್ತಲ ಗ್ರಾಮ ಪ್ರತಿ ಹೋಳಿ ಹಬ್ಬಕ್ಕೂ ಕಾಮಣ್ಣನ ಕಾವಲು ಕಾಯುವುದು ಇಲ್ಲಿನ ಎಲ್ಲಾ ಜನರ ಕೆಲಸ. ಕೈಯಲ್ಲಿ ಸಿಕ್ಕ ಆಯುಧಗಳನ್ನು ಹಿಡಿದು ಝರಕ್‌ ಹಾಕುತ್ತ, ಗಂಭೀರವಾಗಿ ಕೂಗುತ್ತ, ಕಾಮಣ್ಣನ ಗಸ್ತು ಮಾಡುವ ಊರಿನ ಜನರಿಗೆ ಸರ್ಕಾರವೇ ಪರವಾನಗಿ ಕೊಟ್ಟು ಬಿಟ್ಟಿದೆ. 

ಅಣ್ಣಿಗೇರಿ ಕಾಮಣ್ಣನ ಶಿರ ಮುಳಮುತ್ತಲಕ್ಕೆ ಬಂದಾಗಿದೆ. ಇನ್ಯಾರಾದರೂ ಇದನ್ನು ಮತ್ತೆ ಬಂದು ಹೊಡೆದುಕೊಂಡು ಹೋದರೆ ? ನಮ್ಮೂರಿನ ಗೌರವ ಏನಾಗಬೇಕು ? ಎನ್ನುವ ಪ್ರಶ್ನೆ ಊರಿನ ಎಲ್ಲಾ ಜನರನ್ನು ಪ್ರತಿವರ್ಷ ಕಾಡುತ್ತಲೇ ಇರುತ್ತದೆ. ಹೀಗಾಗಿ ಕಾಮಣ್ಣನ ಹಬ್ಬ ಎಂದರೆ ಈ ಊರಿನಲ್ಲಿ ಆಯುಧಗಳ ಪ್ರದರ್ಶನ ಎನ್ನುವಂತಾಗಿದೆ.  

ಸಾಮಾನ್ಯವಾಗಿ ಊರುಗಳಲ್ಲಿ ಹೋಳಿ ಆಚರಣೆ ನಿಮಿತ್ತ ಕಾಮಣ್ಣನ ಸುಡುವುದು ಸಂಪ್ರದಾಯ. ಆದರೆ ಮುಳಮುತ್ತಲ ಕಾಮಣ್ಣ ಮಾತ್ರ ಐತಿಹಾಸಿಕ ಜನರೂಢಿಯ ಜಾನಪದ ಕಥೆಯೊಂದನ್ನು ಅವಲಂಬಿಸಿರುವಂತಹದು. ಊರಿನವರೇ ಹೇಳುವ ಹಾಗೇ 300 ವರ್ಷಗಳ ಹಿಂದೆ ಅತ್ತಿಗೆಯ ಕಡು ಮಾತನ್ನು ಸವಾಲಾಗಿ ಸೀÌಕರಿಸಿದ ಧೀರಬಟ್ಟ ಬುಡಪ್ಪ ಕಣವಿ ಎಂಬಾತ ಪಂಪನ ಹುಟ್ಟೂರು ಅಣ್ಣಿಗೇರಿಯಿಂದ ಕಾಮಣ್ಣನ ಶಿರಸ್ಸು ಛೇಧಿಸಿಕೊಂಡು ಬರುವ ಕಥೆಯಿದು. ಈ ಭಾಗದಲ್ಲಿ ಎಲ್ಲ ಊರುಗಳಲ್ಲಿ ಹೋಳಿ ಹಬ್ಬ ಮತ್ತು ಕಾಮದಹನ ಸಂಪ್ರದಾಯಿಕವಾಗಿ ನಡೆಯುತ್ತದೆ. ಆದರೆ ಮುಳಮುತ್ತಲ ಗ್ರಾಮದಲ್ಲಿ ಮಾತ್ರ ಕಾಮಣ್ಣನ ಹಬ್ಬದ ಜೊತೆಗೆ ಶೌರ್ಯ ಮರೆದ ವ್ಯಕ್ತಿಯ ಆರಾಧನೆಯೂ ನಡೆಯುತ್ತದೆ. 

ಹರಿಜನ ಸಮಾಜದ ಬುಡಪ್ಪ ಕಣವಿ ಎಂಬ ಯುವಕ ಅಂದು ಮಾಡಿದ ತ್ಯಾಗ, ಶೌರ್ಯವನ್ನು ಗ್ರಾಮಸ್ಥರೂ ಇಂದಿಗೂ ಸ್ಮರಿಸಿಕೊಂಡು ಬಂದಿದ್ದಾರೆ. ಕೌÒರ ಮಾಡಿಸಿಕೊಂಡು ಮನೆಗೆ ಬಂದ ಬುಡಪ್ಪ ಅತ್ತಿಗೆ ಸ್ನಾನಕ್ಕೆ ನೀರು ಕೊಡುವಂತೆ ಹೇಳುತ್ತಾನೆ. ಆದರೆ ಬೇರೆ ಕೆಲಸದಲ್ಲಿ ನಿರತಳಾಗಿದ್ದ ಅತ್ತಿಗೆ ನೀರು ಕೊಡಲು ವಿಳಂಬ ಮಾಡುತ್ತಾಳೆ. ಅಲ್ಲದೇ, ಸ್ವಲ್ಪ ನಿಲ್ಲು…. ನೀನೇನು ದೊಡ್ಡ ಕೆಲಸ ಮಾಡಿದಿಯಾ ? ಏನು ಅಣ್ಣಿಗೇರಿಯಿಂದ ಕರೀ ತಂದಿರೋ ಹ್ಯಾಗೇ (ಕಾಮದೇವರ ಮೂರ್ತಿ) ಎಂದು ಆತನಿಗೆ ವ್ಯಂಗ್ಯವಾಡುತ್ತಾಳೆ. ಈ ಮಾತು ಕೇಳಿದ ಬುಡಪ್ಪನಿಗೆ ತನ್ನ ಹಿಂದಿನ ಜನ್ಮದ ನೆನಪಾಗಿ, ಅಣ್ಣಿಗೇರಿಯಿಂದ ಕರೀ ತಂದು ಮುಳಮುತ್ತಲ ಗ್ರಾಮವನ್ನೇ ಪಾವನ ಮಾಡುವ ಕಾರ್ಯ ಮಾಡುತ್ತನೆ ಎನ್ನುವುದು ಹೋಳಿ ಹಬ್ಬದಲ್ಲಿ ಇಲ್ಲಿ ಸ್ಮರಣೆ ಆಗುತ್ತದೆ. ಅಣ್ಣಿಗೇರಿಯಿಂದ ಕರೀ ತಂದು ಸ್ನಾನ ಮಾಡುವುದಾಗಿ ಹೇಳಿ ಅತ್ತಿಗೆ ಸೀರೆಯೊಂದನ್ನು ತಗೊಂಡು ತೆರಳುತ್ತಾನೆ.

ಅಂದು ಅಣ್ಣಿಗೇರಿಯಲ್ಲಿ ಇದ್ದು, ಸಂಜೆ ವೇಳೆಗೆ ಅತ್ತಿಗೆ ಸೀರೆಯುಟ್ಟು ಕಾಮಣ್ಣ ಮೂರ್ತಿಗೆ ಆರತಿ ಬೆಳಗುವ ನೆಪ ಮಾಡಿ ಕಾಮಣ್ಣನ ಶಿರ ತೆಗೆದುಕೊಂಡು ಓಡುತ್ತಾನೆ. ಮುಳಮುತ್ತಲ ಗ್ರಾಮದ ಸೀಮೆಯತ್ತ ಬಂದ ಬುಡಪ್ಪನು ತನ್ನ ಶಿರವನ್ನೇ ಛೇದಿಸಿಕೊಂಡು ಅದರ ಶಿರ ಹಾಗೂ ಕಾಮನ ಶಿರವನ್ನು ಮುಳಮುತ್ತಲ ಗ್ರಾಮದತ್ತ ಎಸೆಯುತ್ತಾನೆ. ಈತನ ಬೆನ್ನಟ್ಟಿದ ಅಣ್ಣಿಗೇರಿಯವರು ಮುಳಮುತ್ತಲ ಗ್ರಾಮದ ಸೀಮೆಯ ಒಳಗೆ ಬಿದ್ದ ಕಾಮಣ್ಣ ಶಿರ ತೆಗೆದುಕೊಂಡು ಹೋದಾಗ ಕಣ್ಣು ಕಾಣದಂತಾಗುತ್ತದೆ. ಅದನ್ನು ಅಲ್ಲಿಯೇ ಬಿಟ್ಟು ಬುಡಪ್ಪನಿಗೆ ಕೈ ಮುಗಿದು ಮರಳುತ್ತಾರೆ. ಅಲ್ಲಿಂದ ಮುಳಮುತ್ತಲ ಗ್ರಾಮಸ್ಥರು ಬುಡಪ್ಪ ತಂದ ಕಾಮನ ರುಂಡವನ್ನು ಪೂಜಿಸಿ, ಹೋಳಿ ಆಚರಿಸುತ್ತಾರೆ. ಆದರೆ ಕಾಮನ ರುಂಡ ತರಲು ಪ್ರಾಣ ತ್ಯಾಗ ಮಾಡಿದ ಯುವಕನ ಶೋಕಾಚರಣೆಗಾಗಿ ಬಣ್ಣದ ಓಕುಳಿಯಾಟವನ್ನು ಇಲ್ಲಿನ ಜನರು ತ್ಯಾಗ ಮಾಡಿದ್ದಾರೆ. 

ಅಣ್ಣಿಗೇರಿಯವರು ಯಾರಾದರೂ ಬಂದು ಮತ್ತೆ ಕಾಮಣ ಶಿರವನ್ನ (ಕರೀ) ತೆಗೆದುಕೊಂಡು ಹೋಗಬಹುದೆಂಬ ಸಂಶಯದಿಂದ ಪ್ರತಿವರ್ಷ ಕಾಮನ ಮೂರ್ತಿಗೆ ಸಕಲ ರೀತಿಯಲ್ಲಿ ಸಂರಕ್ಷಣೆ ಮಾಡಲಾಗುತ್ತದೆ. ಕಾಮದಹನ ಆಗುವವರೆಗೂ ಯುವಕರ ಹಾಗೂ ಮಕ್ಕಳ ಕೈಯಲ್ಲಿ ಮಚ್ಚು, ಕೊಡಲಿ, ಆಯುಧಗಳು ಇಂದಿಗೂ ರಾರಾಜಿಸಿಕೊಂಡು ಬಂದಿದ್ದು, ಈ ಸಂಪ್ರದಾಯ ಮುಂದುವರೆದುಕೊಂಡು ಸಾಗಿದೆ. ಆದರೆ ಕಾಮಣ್ಣನ ಕಾಯಲು ಗ್ರಾಮಸ್ಥರು ಕೈಯಲ್ಲಿ ಆಯುಧ ಹಿಡಿದು ತಿರುಗುವ ದೃಶ್ಯ ಮಾತ್ರ ಬಿಹಾರ್‌ ರಾಜ್ಯದ ಹಳ್ಳಿಗಳನ್ನ ನೆನಪಿಸುತ್ತದೆ. ಆದರೆ ಸೂಕ್ತ ಪೊಲೀಸ್‌ ಬಂದೋಬಸ್ತ್ನ್ನು ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಪ್ರತಿವರ್ಷ ತಪ್ಪದಂತೆ ಮಾಡಿಕೊಂಡು ಬರುತ್ತಿದೆ. ಹೀಗಾಗಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. 

ಕಾಮಣ್ಣನಿಗೆ ಒಂದಿಷ್ಟು ಸಂಪ್ರದಾಯಗಳು 
ಗ್ರಾಮದ ಬಡಿಗೇರ ಮನೆಯಿಂದ ಅಗಸಿಯ ಮಂಟಪದವರೆಗೆ ಕಾಮದೇವರ ಪ್ರತಿಮೆಯನ್ನು ಡೊಳ್ಳು, ಝಾಂಜ, ಕರಡಿಮಜಲು, ಬ್ಯಾಂಡ್‌, ಭಜನೆ ಸಕಲ ವಾದ್ಯ ವೈಭವಗಳೊಂದಿಗೆ ಮರವಣಿಗೆ ನಡೆಸಿ, ಕಾಮದೇವರ ಪ್ರತಿಷ್ಠಾಪನೆ ಮಾಡಿದರು. ಕಾಮದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಎತ್ತುಗಳ ಮೆರವಣಿಗೆ, ಇಷ್ಟಾರ್ಥಸಿದ್ದಿಗಾಗಿ ಪೂಜೆ, ಹರಕೆ ತೀರಿಸುವುದು, ಮಕ್ಕಳ ಭಾಗ್ಯಕ್ಕಾಗಿ ಪೂಜೆ ನಡೆಯಿತು. ಆದರೆ ಮೂರ್ತಿ ಪ್ರತಿಷ್ಠಾಪನೆಯಾದ ಕ್ಷಣದಿಂದ ದಹನ ಆಗುವವರೆಗೂ ಮಾತ್ರ ಎಲ್ಲರ ಕೈಯಲ್ಲೂ ಲಾಂಗು ಮಚ್ಚು, ಕೊಡಲಿ ಕುಡಕೋಲು ಹಿಡಿದು ಗಸ್ತು ಹೊಡೆಯುತ್ತಿರಬೇಕು.  ಕಾಮದಹನವಾಗುವವರೆಗೂ ಪರಸ್ಥಳದಿಂದ ಜನರು ಬಂದು ದರ್ಶನ ಪಡೆದರು.  ಕಾಮಣ್ಣನ ದಹನದ ನಂತರ ಪರಸ್ಥಳದವರು ಯಾರೂ ಈ ಗ್ರಾಮದಲ್ಲಿ ಉಳಿಯುವಂತಿಲ್ಲ. ಹೀಗಾಗಿ ಕಾಮದಹನವಾಗುತ್ತಿದ್ದಂತೆ ಅಲ್ಲಿಂದ ಜಾಗ ಖಾಲಿ ಮಾಡಿಬಿಟ್ಟರು.  ಇನ್ನು ಕಾಮಣ್ಣನ ಛಾಯಾಚಿತ್ರ ತೆಗೆಯುವುದು ನಿಷೇಧ. ಕಾಮಣ್ಣನ ಸಲುವಾಗಿ ಗ್ರಾಮದ ಹರಿಜನ ಸಮಾಜದವರು ಮೂರು ದಿನ ಇನ್ನಷ್ಟು ಕಠಿಣ ಆಚರಣೆಗಳನ್ನು ಮಾಡುತ್ತಾರೆ. ಹಬ್ಬದ ಅಡುಗೆ ಮೊದಲೆ ಮಾಡುವಂತಿಲ್ಲ. ಹೊಸಬಟ್ಟೆ ತೊಡುವಂತಿಲ್ಲ. ಕಾಮದಹನದ ಬಳಿಕವೇ ಸ್ನಾನ ಮಾಡುತ್ತಾರೆ. ಕಾಮದಹನ ಬಳಿಕ ಸಿಗುವ ಬೆಂಕಿಯ ಕಿಚ್ಚು ತಂದು ಓಲೆ ಹೂಡಿದ ಬಳಿಕವೇ ಮನೆಯಲ್ಲಿ ಅಡುಗೆ ಮಾಡಲು ಮುಂದಾದರು. 

ಬಸವರಾಜ ಹೊಂಗಲ್‌ 

ಟಾಪ್ ನ್ಯೂಸ್

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯKarnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯKarnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.