ದೊಡ್ಡ ಕೊಕ್ಕಿನ ಎದೆಚೀಲದ ಕೊಕ್ಕರೆ
Team Udayavani, Feb 11, 2017, 12:25 PM IST
ದೊಡ್ಡ, ಉದ್ದ ಕಾಲಿನ ದೊಡ್ಡ ಚುಂಚಿನ ಕೊಕ್ಕರೆ. ಬರ್ಜಿಯಂತಹ ದೊಡ್ಡ ಬಲವಾದ ಚೂಪಾದ ಚುಂಚಿರುವ ಕೊಕ್ಕರೆ. ಕೊಕ್ಕರೆಗಳಲ್ಲಿ ಅತಿದೊಡ್ಡದಾದ ಹಕ್ಕಿ ಇದು. ಬಣ್ಣದಕೊಕ್ಕರೆ. ಏಯನ್‌ಓಪನ್ ಬಿಲ್ ಸ್ಟೋರ್ಕ್ ಅಂದರೆ ಬಾಯ್ಕಳಕ ಕೊಕ್ಕರೆ, ಯುರೇಯನ್ ಬಿಳಿ ಕೊಕ್ಕರೆ, ಬಿಳಿ ಕುತ್ತಿಗೆಕೊಕ್ಕರೆ, ಕಪ್ಪುಕೊಕ್ಕರೆ, ಕಪ್ಪುಕುತ್ತಿಗೆಕೊಕ್ಕರೆ ಸಣ್ಣ ಎಡೊjಟೆಂಟ್ ಸ್ಟೊರ್ಕ್ ಈ ಗುಂಪಿನ ಸಹವರ್ತಿ ಹಕ್ಕಿಗಳು. ಲೆಪ್ಟೊಪ್ಟಿಲಾಸ್ ಡೊಬಿಯಸ್ ಇದರ ವೈಜಾnನಿಕ ಹೆಸರು. ಈ ಗುಂಪಿನ ಇತರ ಹಕ್ಕಿಗಳಿಗಿಂತ ಇದು ದೊಡ್ಡದು. ದಪ್ಪಗಾತ್ರ, ಹೆಚ್ಚು ದಪ್ಪ ಬಾರದ ದೇಹದಕೊಕ್ಕರೆ ಎಂದರೆ ತಪ್ಪಾಗಲಾರದು. ದಪ್ಪ ಗಾತ್ರದ ಎಡೊjಟೆಂಟ ಹಕ್ಕಿ ಮಾಸಲು ಬಿಳಿ, ಕಪ್ಪುಕಂದು ಬಣ್ಣ ಮಿಶ್ರವಾಗಿಕಾಣುತ್ತದೆ. ಉದ್ದುದ್ದ ಕಾಲು, ಆಹಾರ ಹುಡುಕುವಾಗ ಹಿಂದೆ ಮುಂದೆ ನಡೆದು ಊರು ಮತ್ತು ಪಟ್ಟಣದ ಹೊರವಲಯದ, ಕಸ, ತಿಪ್ಪೆಗಳಲ್ಲಿ ಇರುತ್ತವೆ. ದೊಡ್ಡ ಪ್ರಮಾಣದಲ್ಲಿ ಪರಿಸರದಲ್ಲಿರುವ ಹೊಲಸು ಕಸ ತಿಪ್ಪೆಗಳನ್ನು ತನ್ನಆಹಾರ ದೊರಕಿಸಲು ಉಪಯೋಗಿಸುತ್ತಾರೆ. ಇದು ಪ್ರಕೃತಿ ಶುಚಿಕಾರ್ಯದಲ್ಲಿ ದೊಡ್ಡ ಜವಾಬ್ದಾರಿ ನಿರ್ವಹಿಸುತ್ತದೆ. ದೊಡ್ಡ ಭಾರವಾದ ದೇಹ, ಭಾರವಾದ ದೊಡ್ಡ ಕೊಕ್ಕು ಇರುವುದರಿಂದ ಓಡುತ್ತಾ ರೆಕ್ಕೆ ಬಿಚ್ಚಿ ಸ್ವಲ್ಪದೂರ ಓಡಿ ಹಾರಲು ಆರಂಭಿಸುತ್ತದೆ. ಇದರ ಹಾರುವ ಪರಿ.
ಪ್ರಕೃತಿಯನ್ನು ಶುಚಿ ಗೊಳಿಸಲು ಪ್ರಕೃತಿಯೇ ನೀಡಿದ ಜಾಡಮಾಲಿ ಹಕ್ಕಿ ಎಂದರೂ ತಪ್ಪಾಗಲಾರದು. ರಣ ಹದ್ದು ಅಂದರೆ ಭಾರತೀಯ ರಣ ಹದ್ದು ಮತ್ತು ಇದಕ್ಕೆ ತುಂಬಾ ಸಾಮ್ಯತೆಇದೆ. ಇವೆರಡೂ ಪ್ರಕೃತಿ ಶುಚಿ ಕಾರ್ಯದಲಿ Éಅಗ್ರಸ್ಥಾನ ವಹಿಸುತ್ತವೆ. ಅಂತೆ ಇವೆರಡೂ ಹಕ್ಕಿ ಪರಿಸರ ಶುಚಿಕಾರ್ಯ ನಿರ್ವಸುತ್ತಿದ್ದರೂ ಅಳಿವಿನ ಅಪಾಯದಲ್ಲಿರುವುದು ದುರ್ದೈವ. ದನಗಳ ಮಾಂಸ, ಕೊಳೆತ ತಿಪ್ಪೆಯ ಆಹಾರ ತಿನ್ನುತ್ತ ಇರುವ ಇವೆರಡೂ ದೇಹದ ಗಾತ್ರ, ರೆಕ್ಕೆ ವಿನ್ಯಾಸ, ಹಾರುವುದು, ಹಾರುತ್ತಾ ತೇಲುವುದು ಮೊದಲಾದ ಸ್ವಭಾವದಲ್ಲಿ ಸಾಮ್ಯತೆ ಇದೆ. ಹದ್ದಿನ ಕುತ್ತಿಗೆ ಮೇಲ್ಭಾಗದಲ್ಲಿ ಕಾಲರಿನಂತೆ ಬಿಳಿ ಗರಿಗಳಿವೆ. ಅಂತೆ ಎಡೊjಟೆನrಕೊಕ್ಕರೆಯ ಕುತ್ತಿಗೆ ಹಿಂಭಾಗದಲ್ಲಿ ಮೇಲೆ ಕೇಸರಿ ಬಣ್ಣದ ಮುತ್ತು ಪೋಣಿಸಿದಂತಿರುವ ಎದ್ದುಕಾಣುವ ಭಾಗಇದೆ. ಅದರಂತೆ ಕುತ್ತಿಗೆ ಬುಡದಲ್ಲಿ ಎದೆಯ ಕೆಳಗಡೆ ತೂಗುವ ಚೀಲದಂತಿರುವ ಜೋಳಿಗೆ ಇದೆ. ಇದರಿಂದ ಈ ಹಕ್ಕಿಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಕುತ್ತಿಗೆಯ ಕೆಳಗೆ ನೇತಾಡುವ ಕೆಂಪನೆಯ ಚೀಲ 30 ಸೆಂ.ಮೀ. ದೊಡ್ಡದಿದೆ. ಇದರ ರೆಕ್ಕೆ ರಣ ಹದ್ದಿನ ರೆಕ್ಕೆಯನ್ನು ತುಂಬಾ ಹೋಲುತ್ತದೆ. ರೆಕ್ಕೆ ಮೇಲ್ಭಾಗ ನೀಲಿಗಪ್ಪು ಬಣ್ಣದಿಂದ ಕೂಡಿರುತ್ತದೆ. ತುದಿಯಲ್ಲಿ ಬೂದುಬಣ್ಣ, ಹೊಟ್ಟೆ ಭಾಗ ಮಾಸಲು ಬಿಳಿ ಬಣ್ಣ. ಕುತ್ತಿಗೆ, ತಲೆಕೇಸರಿ ಬಣ್ಣದ್ದಾಗಿರುತ್ತದೆ. ಈ ಹಕ್ಕಿ ಸರಾಸರಿ 135 ಸೆಂ.ಮೀ ಇರುತ್ತದೆ. ರೆಕ್ಕೆಯ ಅಗಲ 250 ಸೆಂ.ಮೀ. ಸುಮಾರು 43 ವರ್ಷ ದೀರ್ಘಾಯುಷ್ಯ ಇರುವ ಕೊಕ್ಕರೆ. ಕೊಕ್ಕರೆಗಳಲ್ಲಿಯೇ ಹೆಚ್ಚು ವರ್ಷ ಬದುಕುವ ಹಕ್ಕಿ ಎಂಬ ಹೆಗ್ಗಳಿಕೆ ಇದಕ್ಕಿದೆ. ಸ್ಥೂಲ ಕಾಯದ ಈ ಕೊಕ್ಕರೆ ಸುಮಾರು 8 ರಿಂದ 11 ಕೆ.ಜಿ ಭಾರವಿರುತ್ತದೆ. ಇದೇ ಗುಂಪಿಗೆ ಸೇರಿದ ಆಫ್ರಿಕಾದ ನಿವಾಸಿ ಮೆರಂಬು ಸ್ಟಾರ್ಕ್ 8.9 ಕೆಜಿ ಭಾರದಿಂದ ಕೂಡಿರುತ್ತದೆ. ಇದಕ್ಕಿಂತ ಹೆಚು ಸ್ಥೂಲ ದೇಹದ ಹಕ್ಕಿ ಗ್ರೇಟರ್ ಎಟೂj ಟೆಂಟ್‌ಕೊಕ್ಕರೆ. ಇದರ ಒಂದು ರೆಕ್ಕೆಯ ಅಳತೆ 80.5 ಸೆಂ. ಮೀ. ಇದರ ಬಾಲ 31.8 ಸೆಂ.ಮೀ ಇದೆ. ಕುತ್ತಿಗೆ ಕೆಳಗಿನ ಚೀಲ ದೊಡ್ಡದಾದಾಗ ಸುಮಾರು 32.4 ಸೆಂ.ಮೀ ಅಗಲವಾಗುತ್ತದೆ. ಅನ್ನ ನಾಳಕ್ಕೆ ಮತ್ತು ಈ ಚೀಲಕ್ಕೆ ಸಂಬಂಧವಿರುವುದಿಲ್ಲ. ಇದು ಶ್ವಾಸ ನಾಳಕ್ಕೆ ಸೇರಿದೆ. ಇದು ಗಾಳಿ ತುಂಬಿಸಿಡಲು ಸಹಕರಿಸುತ್ತವೆ.ಇದರಿಂದ ಕೊಕ್ಕರೆಗೆ ಏನು ಉಪಯೋಗ? ಈ ವಿಚಾರವಾಗಿ ಸಂಶೋಧನೆ ನಡೆಯಬೇಕಿದೆ.
ಈ ಹಕ್ಕಿಯ ಮಾಂಸ ಕುಷ್ಠ ರೋಗಕ್ಕೆಔಷಧ. ಇದರಿಂದ ಈ ಮಹಾ ರೋಗ ವಾಸಿಯಾಗುವುದು ಎಂಬುದು ದಾಖಲಾದ ವಿಚಾರವಾಗಿದೆ. ಮರಿ ಮಾಡುವ ಸಮಯದಲ್ಲಿ ಕುತ್ತಿಗೆ ಎದೆ, ಬೂದು ಬಣ್ಣದ ಕಾಲು ಸಹ ಕೆಂಪು ಬಣ್ಣ ತಳೆಯುತ್ತದೆ. ಪ್ರಬುದ್ಧಾವಸ್ಥೆ ತಲುಪಿದ ಹಕ್ಕಿಯ ರೆಕ್ಕೆಯ ಮಧ್ಯದ ಗರಿಗಳು ಹೆಚ್ಚು ದಟ್ಟ ವರ್ಣದಿಂದ ಕೂಡಿರುತ್ತದೆ. ಇದರ ಭರ್ಜಿಯಂತಿರುವ ದೊಡ್ಡ ಕೊಕ್ಕು 32.2 ಸೆಂ. ಮೀ.ನಷ್ಟಿದೆ.
ಮಾನವನ ಉಳಿವಿಗಾಗಿ ಇವುಗಳನ್ನು ರಕ್ಷಿಸಲೇ ಬೇಕಾದ ಪರಿಸ್ಥಿತಿ ಇದೆ. ಆಸ್ಸಾಂನಲ್ಲಿ ಈ ಸಂತತಿ ಉಳಿಸಲು ಅವುಗಳಿಗೆ ಪ್ರತ್ಯೇಕ ಸ್ಥಳ ಇರಿಸಿರುವುದರಿಂದ ಅಲ್ಲಿ ಇವು ಸಂತಾನಾಭಿವೃದ್ಧಿಯಾಗಿದೆ.
ಪಿ.ವಿ.ಭಟ್ ಮೂರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.