ಅಪ್ಪಂದಿರ ಹಾದಿಯಲ್ಲಿ ಸಾಗುತ್ತಿದ್ದಾರೆ ಮಕ್ಕಳು!


Team Udayavani, Jan 20, 2018, 11:29 AM IST

4-a.jpg

ವೈದ್ಯರ ಮಕ್ಕಳು ವೈದ್ಯರು, ಎಂಜಿನಿಯರ್‌ ಮಕ್ಕಳು ಎಂಜಿನಿಯರ್‌, ವಿಜ್ಞಾನಿಗಳ ಮಕ್ಕಳು ವಿಜ್ಞಾನಿಗಳು, ಶಿಕ್ಷಕರ ಮಕ್ಕಳು ಶಿಕ್ಷಕರು, ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳು….ಹೀಗೆಲ್ಲ ಆಗುವುದು ಸಾಮಾನ್ಯ. ಅದೇ ರೀತಿ ಜಂಟಲ್‌ಮೇನ್‌ ಗೇಮ್‌ ಎಂದೇ ಖ್ಯಾತಿ ಪಡೆದ ಕ್ರಿಕೆಟ್‌ನಲ್ಲೂ ಇದು ಮುಂದುವರಿಯುತ್ತಿದೆ.ವಿಶ್ವ ಕ್ರಿಕೆಟ್‌ನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡೂ ದಿಗ್ಗಜರಾಗಿ ಮೆರೆದಾಡಿದ ಆಸ್ಟ್ರೇಲಿಯಾ, ಭಾರತ, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್‌…. ಸೇರಿದಂತೆ ವಿವಿಧ ರಾಷ್ಟ್ರಗಳ ಆಟಗಾರರ ಮಕ್ಕಳು ಈಗ ಕ್ರಿಕೆಟ್‌ ಜಗತ್ತಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಕೆಲವರು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ಕಾಲಿಟ್ಟು ಮಿಂಚು ಹರಿಸುತ್ತಿದ್ದರೆ, ಇನ್ನೂ ಕೆಲವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಡಲು ಸಿದ್ಧರಾಗಿದ್ದಾರೆ.

ತೆಂಡುಲ್ಕರ್‌ ಹೆಸರು ಉಳಿಸುತ್ತಾರಾ ಅರ್ಜುನ್‌?
ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡುಲ್ಕರ್‌ ಪುತ್ರ ಅರ್ಜುನ್‌ ತೆಂಡುಲ್ಕರ್‌ ಇತ್ತೀಚಿಗೆ ಕ್ರಿಕೆಟ್‌ ವಲಯದಲ್ಲಿ ಸದ್ದು ಮಾಡುತ್ತಿದ್ದಾರೆ. ಸಚಿನ್‌, ವಿಶ್ವ ಕ್ರಿಕೆಟ್‌ ಕಂಡ ಅಪ್ರತಿಮ ಆಟಗಾರ. ಕ್ರಿಕೆಟ್‌ ದೇವರೆಂದೇ ಅಭಿಮಾನಿಗಳಿಂದ ಕರೆಸಿಕೊಂಡವರು. ಅಪ್ಪನ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡಿರುವ ಅರ್ಜುನ್‌ ಕೂಡ ಇತ್ತೀಚೆಗೆ ದೇಶಿ ಕ್ರಿಕೆಟ್‌ ಟೂರ್ನಿಗಳಲ್ಲಿ ಮಿಂಚುತ್ತಿದ್ದಾನೆ. ಎಡಗೈ ಬ್ಯಾಟ್ಸ್‌ಮನ್‌ ಹಾಗೂ ಮಧ್ಯಮ ವೇಗಿ ಆಗಿದ್ದು, ಕೂಚ್‌ ಬೆಹರ್‌, ಅಂ-18 ಸೇರಿದಂತೆ ವಿವಿಧ ಟೂರ್ನಿಯಲ್ಲಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಾರಲು ರೆಡಿಯಾಗುತ್ತಿದ್ದಾರೆ. ಆದರೆ, ಈತ ಅಪ್ಪನಂತೆ ಸಕ್ಸಸ್‌ ಕಾಣಾ¤ರಾ ಅನ್ನುವ ಪ್ರಶ್ನೆ ಅಭಿಮಾನಿಗಳಲ್ಲಿದೆ.

ತಂದೆಗೆ ತಕ್ಕ ಮಗನಾಗುತ್ತಾನಾ ಸುಮಿತ್‌?

“ದಿ ವಾಲ್‌’ ಎಂದೇ ಖ್ಯಾತಿ ಪಡೆದ ರಾಹುಲ್‌ ದ್ರಾವಿಡ್‌ ವಿಶ್ವ ಮೆಚ್ಚಿದ ಕಲಾತ್ಮಕ ಹಾಗೂ ಅದ್ಭುತ ಕ್ರಿಕೆಟಿಗ. ಇವರ ಮಗ ಸುಮಿತ್‌ ದ್ರಾವಿಡ್‌ ಕೂಡ ಇತ್ತೀಚೆಗೆ ಮುಗಿದ 14 ವರ್ಷದೊಳಗಿನವರ ಶಾಲಾ ಟೂರ್ನಿಯಲ್ಲಿ 150 ರನ್‌ ಬಾರಿಸುವ ಮೂಲಕ ಸದ್ದು ಮಾಡಿದ್ದಾರೆ. ಇದರಿಂದ ಸುಮಿತ್‌ ಮೇಲೆ ಬಹಳ ನಿರೀಕ್ಷೆಗಳು ಹೆಚ್ಚಿವೆ.

ಸ್ಟೀವ್‌ ವಾ ಪುತ್ರ ಆಸ್ಟೀನ್‌
ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್‌ ವಾ, ಕ್ರಿಕೆಟ್‌ ಲೋಕದಲ್ಲಿ ತನ್ನ ಹೆಸರು ಅಚ್ಚಳಿಯದಂಥ ಸಾಧನೆ ಮಾಡಿದ್ದಾರೆ. ಸ್ಟೀವಾ ಪುತ್ರ ಆಸ್ಟೀನ್‌ ವಾ ಕೂಡ ಕ್ರಿಕೆಟರ್‌. ದೇಶಿ ಟೂರ್ನಿಗಳಲ್ಲಿ ಅದ್ಭುತ ಆಟದ ಮೂಲಕ ನ್ಯೂಜಿಲೆಂಡ್‌ನ‌ಲ್ಲಿ ನಡೆಯುತ್ತಿರುವ ಅಂ-19 ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬ್ಯಾಟ್ಸ್‌ಮನ್‌ ಆಗಿರುವ ಆಸ್ಟೀನ್‌ ಅಪ್ಪನ ಹಾದಿ ತುಳಿಯುತ್ತಿದ್ದಾರೆ.

ಜೋಶಿ ಪುತ್ರ ಬ್ಯಾಟ್ಸ್‌ಮನ್‌
ಭಾರತ ತಂಡದ ಮಾಜಿ ಸ್ಪಿನ್ನರ್‌ ಸುನೀಲ್‌ ಜೋಶಿ ಒಂದು ಸಮಯದಲ್ಲಿ ತಂಡದ ಅವಿಭಾಜ್ಯ ಅಂಗವಾಗಿದ್ದರು.  ಜೋಶಿ ರಣಜಿ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ ಗಳಿಸಿರುವ ಹೆಗ್ಗಳಿಕೆ ಹೊಂದಿದ್ದಾರೆ. ಇಂತಹ ಹಿನ್ನೆಲೆಯ ಜೋಶಿಯವರ ಪುತ್ರ ಆರ್ಯನ್‌ ಜೋಶಿ, ಬ್ಯಾಟ್ಸ್‌ಮನ್‌ ಆಗಿ ಶಾಲಾ ಮತ್ತು ಕ್ಲಬ್‌ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಮುಂದೆ ಭಾರತ ತಂಡದಲ್ಲಿ ಆಡುವ ಭರವಸೆ ಮೂಡಿಸಿದ್ದಾರೆ.

ಚಂದ್ರಪಾಲ್‌ ಮಗ ಬ್ಯಾಟ್ಸ್‌ಮನ್‌
ವೆಸ್ಟ್‌ವಿಂಡೀಸ್‌ನ ಮಾಜಿ ಆಟಗಾರ ಶಿವನಾರಾಯಣ್‌ ಚಂದ್ರಪಾಲ್‌ ಒಂದು ಕಾಲದಲ್ಲಿ ತಂಡಕ್ಕೆ ಆಪತಾºಂಧವನಾಗಿದ್ದರು. ಏಕಾಂಗಿಯಾಗಿ ತಂಡವನ್ನು ಗೆಲುವಿನ ದಡ ಸೇರಿಸಬಲ್ಲ ಆಟಗಾರನಾಗಿದ್ದವರು. ಚಂದ್ರಪಾಲ್‌ ಪುತ್ರ ತರೈನಾರಾಯಣ್‌ ಈಗಾಗಲೇ ವೆಸ್ಟ್‌ ವಿಂಡೀಸ್‌ನ ಸ್ಥಳೀಯ ಕ್ರಿಕೆಟ್‌ ಟೂರ್ನಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಅಂ-19 ವಿಶ್ವಕಪ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಇವರು ಕೂಡ ಅಪ್ಪನಂತೆ ಕ್ರಿಕೆಟ್‌ ಜಗತ್ತಿನಲ್ಲಿ ಬೆಳೆಯುತ್ತಾರಾ ನೋಡಬೇಕಿದೆ.

ಆ್ಯಂಟಿನಿ ಮಗ ಕೂಡ ಕ್ರಿಕೆಟರ್‌
ದಕ್ಷಿಣ ಆಫ್ರಿಕಾ ತಂಡದಲ್ಲಿ ಆಡಿದ ಮೊದಲ ಕರಿಯ ಜನಾಂಗದ ಕ್ರಿಕೆಟಿಗ ಎಂಬ ಖ್ಯಾತಿ ಮಖಾಯಿ ಆ್ಯಂಟಿನಿ ಅವರದು. ಈಗ ಅವರ ಪುತ್ರ ತಂಡೋ ಆ್ಯಂಟನಿ ಕೂಡ ಅಪ್ಪನಂತೆ ಎದುರಾಳಿ ತಂಡದ ಆಟಗಾರರನ್ನು ನಡುಗಿಸಬಲ್ಲ ಮಧ್ಯಮ ವೇಗದ ಬೌಲರ್‌ ಆಗಿದ್ದಾರೆ. ಈತ ಸದ್ಯ ನ್ಯೂಜಿಲೆಂಡಿನಲ್ಲಿ ನಡೆಯುತ್ತಿರುವ ಅಂ-19 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಕಣಕ್ಕಿಳಿದ್ದಾರೆ.

 ದೇವಲಾಪುರ ಮಹದೇವಸ್ವಾಮಿ
 

ಟಾಪ್ ನ್ಯೂಸ್

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.