ಚಿತ್ರಾವತಿಯ ಚಕ್ರಕೊಳ


Team Udayavani, Aug 18, 2018, 2:39 PM IST

1-gdg.jpg

 ಬಯಲುಸೀಮೆಯಲ್ಲಿ ನೀರಿನ ಸಮಸ್ಯೆ ತಲೆದೋರುವಾಗ ಶತಮಾನಗಳ ಹಿಂದಿನ ನೀರಿನ ನಿರ್ವಹಣೆಯ ಇತಿಹಾಸದ ಪಾಠಗಳನ್ನು ತಿರುವಿ ಹಾಕಿ ನೀರಿನ ನಿರ್ವಹಣೆಯನ್ನು ಕಲಿಯಬೇಕಿದೆ. ಭೂಮಿಯಿಂದ ನೀರನ್ನು ಬಸಿದುಕೊಳ್ಳಲು ಅವರು ಅನುಸರಿಸಿದ್ದ ವಿಧಾನಗಳು ಈಗ ಅವಲೋಕಿಸುವಂತಿದೆ ಈ ಚಕ್ರಕೊಳ. 

 ನೀರಿನ ಸಮರ್ಪಕ ನಿರ್ವಹಣೆ ಹೇಗಿರಬೇಕು? ಇದಕ್ಕೆ ಮಾದರಿ  ಚಿಕ್ಕಬಳ್ಳಾಪುರದಿಂದ ನಾಲ್ಕು ಕಿ.ಮೀ ದೂರದ ಚಿತ್ರಾವತಿಯ ಚಕ್ರಕೊಳ. ಇದರಲ್ಲಿ ನೀರು ತುಂಬಿದರೆ ನೂರಾರು ಎಕರೆ ಜಮೀನು ಹಸಿರಾಯಿತು, ಸಾವಿರಾರು ಬೋರ್‌ವೆಲ್‌ ಬದುಕಿಕೊಂಡವು.  ನೂರಾರು ವರ್ಷಗಳ ಹಿಂದೆ ಈ ರೀತಿಯ ಪುಷ್ಕರಣಿಗಳೇ ಜೀವಸೆಲೆಗಳು. ಪುಷ್ಕರಣಿಗಳು ಧಾರ್ಮಿಕ ಕಾರಣಗಳಿಗೆ ಮಾತ್ರವಲ್ಲ, ನೀರು ಸಂಗ್ರಹಣೆಯ ವಿಷಯದಲ್ಲೂ ಪ್ರಮುಖ ಪಾತ್ರವಹಿಸುತ್ತಿದ್ದವು. 

 ಚಿತ್ರಾವತಿಯಲ್ಲಿ ಸುಬ್ರಮಣ್ಯ ದೇವಾಲಯವಿದೆ. ಅದರ ಪಕ್ಕದಲ್ಲಿ ಇರುವುದು ಈ ಆಕರ್ಷಕವಾದ ಚಕ್ರಾಕಾರದ ಕಲ್ಯಾಣಿ. ಇದರ ಸುತ್ತಲ ಹಂತಗಳನ್ನು ದಿವಾನ್‌ ಪೂರ್ಣಯ್ಯನವರು ಕಟ್ಟಿಸಿದರಂತೆ. ಇದರ ಹತ್ತಿರ ಮಲ್ಲಿಕಾರ್ಜುನ ಚಿನ್ನಪ್ಪನ ಗದ್ದುಗೆಯಿದೆ. ಸಾಮಾನ್ಯವಾಗಿ ಕಲ್ಯಾಣಿಗಳು ಚೌಕಾಕಾರದಲ್ಲಿರುತ್ತವೆ.  ಆದರೆ ಈ ಕಲ್ಯಾಣಿಯನ್ನು ಚಕ್ರಾಕಾರದಲ್ಲಿ ನಿರ್ಮಿಸಿರುವುದು ವಿಶೇಷವಾಗಿದೆ.

 ಚಿತ್ರಾವತಿ ಕೊಳಕ್ಕೆ ಸುತ್ತಲೂ ಪಾವಟಿಗೆಗಳಿವೆ. ಇದರ ಹೊರ ಸುತ್ತಳತೆ ಸುಮಾರು 158 ಅಡಿಗಳಷ್ಟು ಇದೆ. ಒಳಭಾಗದ ಸುತ್ತಳತೆ ಸುಮಾರು 91 ಅಡಿಗಳಷ್ಟು ಇದ್ದು, ಮಧ್ಯದಲ್ಲಿರುವ ಬಾವಿಯ ಸುತ್ತಳತೆ ಸುಮಾರು 43 ಅಡಿಗಳಷ್ಟು ಇದೆ. ಹೀಗಾಗಿ ಮೇಲಿಂದ ಒಳಗಡೆಗೆ ಇಳಿದಂತೆ ಕಿರಿದಾಗುತ್ತಾ ಸಾಗುವ ಈ ಕೊಳದ ಪಾವಟಿಗೆಗಳ ನೋಟ ವರ್ಣನಾತೀತ. ಬಹಳ ನುಣುಪಾಗಿ ತಿದ್ದಿತೀಡಿದ ಶಿಲಾ ಬಿಲ್ಲೆಗಳನ್ನು ಬಳಸಿ, ಅತ್ಯಂತ ನಾಜೂಕಾಗಿ ವೃತ್ತಾಕಾರದಲ್ಲಿ ಈ ಪಾವಟಿಗೆಗಳನ್ನು ಜೋಡಿಸಲಾಗಿದೆ. ಈ ಪಾವಟಿಗೆಗಳ ಮೇಲೆ ವಿವಿಧೆಡೆ ಕಡೆದು ರೂಪಿಸಿರುವ ಮತ್ಸಾ$Âಕೃತಿಗಳ ಉಬ್ಬುಶಿಲ್ಪಗಳು ಮನಸೆಳೆಯುತ್ತವೆ. ಅಲ್ಲದೆ, ಈ ಕಲ್ಯಾಣಿಯ ತಡೆಗೋಡೆಯ ಒಳಭಾಗದ ಶಿಲಾಫ‌ಲಕದ ಸುತ್ತಲೂ ಅಲ್ಲಲ್ಲಿ ಕಡೆದು ಚಿತ್ತಾರಗೊಳಿಸಿರುವ ಕೋದಂಡರಾಮ, ಗೋಪಿಕೆಯರಿಂದ ಸುತ್ತುವರಿದ ಕೃಷ್ಣ, ಗೋವುಗಳ ಮಧ್ಯೆ ಹಲಾಯುಧಧಾರಿ ಬಲರಾಮ, ಹನುಮ, ಸರಸ ನಿರತ ಸರ್ಪಗಳು ಮುಂತಾದ ಉಬ್ಬು ಶಿಲ್ಪಗಳು ಈ ಕೊಳದ ಸೊಬಗಿಗೆ ಮತ್ತಷ್ಟು ಮೆರಗು ಉಂಟುಮಾಡಿರುತ್ತವೆ.

ನಮ್ಮ ಹಿರಿಯರು ಜನರ ಅನುಕೂಲಕ್ಕಾಗಿ ಇಷ್ಟು ಸುಂದರವಾದ ನೀರಿನ ಕೊಳವನ್ನು ಕೊಡುಗೆಯಾಗಿ ಕೊಟ್ಟಿ¨ªಾರೆ. ನಿಜ, ಆದರೆ ಅಂತರ್ಜಲ ಕುಸಿದಂತೆ ಈ ಕೊಳವು ಹಾಳು ಬಿದ್ದಿತು. ಜನರು ದೇವಸ್ಥಾನಕ್ಕೆ ಬಂದವರು ಕಲ್ಯಾಣಿ ಬಳಿ ಸುಳಿಯುತ್ತಿರಲಿಲ್ಲ. ಮುಂದೇನಾಯ್ತು ಎಂದು ರೈತ ಮುಖಂಡ ಯಲುವಳ್ಳಿ ಸೊಣ್ಣೇಗೌಡ ಹೇಳ್ತಾರೆ ಕೇಳಿ. 

“ಮೂರು ವರ್ಷಗಳ ಹಿಂದೆ ಹಲವು ಸಂಘಟನೆಗಳನ್ನು ಒಗ್ಗೂಡಿಸಿದೆವು. ವರ್ಷದ ಆರಂಭದ ದಿನ ಸಮಾಜಕ್ಕೆ ಉಪಯೋಗವಾಗುವ ಕೆಲಸಕ್ಕೆ ಮುಂದಾಗೋಣ ಎಂದು ಕಾರ್ಯಪ್ರವೃತ್ತರಾದೆವು. ಕುಮುದೇಂದು ಮಹರ್ಷಿ ಕನ್ನಡ ಸಂಘ, ರೈತ ಸಂಘ, ಸಮಾನ ಮನಸ್ಕರ ವೇದಿಕೆ ಜೊತೆಗೂಡಿ ಸುಮಾರು 50 ಮಂದಿ ಈ ಕಲ್ಯಾಣಿಯ ಸ್ವತ್ಛತೆಯನ್ನು ಮಾಡಿದೆವು. ನಮ್ಮ ಉತ್ಸಾಹವನ್ನು ಕಂಡು ತಾಲ್ಲೂಕು ಪಂಚಾಯಿತಿಯವರೂ ಕೈಜೋಡಿಸಿದರು. ತಾಲ್ಲೂಕು ಪಂಚಾಯಿತಿಯಿಂದ ಕಲ್ಯಾಣಿಯ ದುರಸ್ಥಿ ಕೆಲಸ ನಡೆಯಿತು. ಅಂದಿನಿಂದ ತಾಲ್ಲೂಕು ಪಂಚಾಯಿತಿಯವರೇ ಕಲ್ಯಾಣಿಯನ್ನು ನಿರ್ವಹಣೆ ಮಾಡುತ್ತಾ ಅದಕ್ಕೆ ಕಾಲಕಾಲಕ್ಕೆ ನೀರು ಬಿಡುತ್ತಾ ಪ್ರೇಕ್ಷಣೀಯವಾಗಿರಿಸಿದ್ದಾರೆ’ ಎನ್ನುತ್ತಾರೆ. 

ಈ ಕೊಳವನ್ನು ಹಲಸಮ್ಮನ ಬಾವಿ ಎಂದು ಸಹ ಕರೆಯಲಾಗುತ್ತದೆ. ಇದಕ್ಕೆ ಚಾರಿತ್ರಿಕ ಕಾರಣವೂ ಉಂಟು. ಈ ಕೊಳದ ಮಧ್ಯೆ ಇರುವ ಶಿಲಾವೃತ ಬಾವಿಯನ್ನು ಪಾಳೆಯಗಾರರ ರಾಣಿ ಹಲಸಮ್ಮನು ನಿರ್ಮಿಸಿದಳೆಂಬ ಪ್ರತೀತಿ. ಮುಳುಬಾಗಿಲು ತಾಲ್ಲೂಕಿನ ಆವನಿಬೆಟ್ಟದಲ್ಲಿ ಧನುಷ್ಕೋಟಿ ತೀರ್ಥದ ಉತ್ತರಕಡೆಯ ಹುಟ್ಟುಬಂಡೆಯ ಮೇಲೆ ಇರುವ ಶಾಸನದಲ್ಲಿ ಉಲ್ಲೇಖೀತವಾಗಿರುವ ಸುಗುಟೂರು ಚಿಕ್ಕತಮ್ಮಯಗೌಡನ ಅಕ್ಕ ಹಲಸರಾತಮ್ಮನೇ ಈಕೆ ಇರಬಹುದೆಂದು ಚರಿತ್ರಕಾರರ ಅಭಿಪ್ರಾಯವಾಗಿರುತ್ತದೆ. 

 ಅಲ್ಲದೆ, ಚಿತ್ರಾವತಿ ಕೊಳದ ಪ್ರಾಚೀನತೆಯನ್ನು ಸಾರುವ ಎರಡು ಶಾಸನಗಳು ಇಲ್ಲಿವೆ. ಈ ಕೊಳದ ಈಶಾನ್ಯ ದಿಕ್ಕಿನಲ್ಲಿ ತಳಪಾದಿಯ ಮೇಲಿರುವ ಶಾಸನದ ಪ್ರಕಾರ ಅದೋಬಂಡೆ (ಹಾರೋಬಂಡೆ) ಬಂಚಾಳಪ ಕಲ್ಲಿನ ಮಾಳಿಗೆ ಕಟ್ಟಿಸಿದ್ದುದರಿಂದಾಗಿ ಚಿಕ್ಕಣ್ಣನಿಗೆ ಅನೇಕವಾಗಿ ಇನಾಮುಗಳನ್ನು ಕೊಟ್ಟಿರುವ ಬಗ್ಗೆ ತಿಳಿಸುತ್ತದೆ. ಬಹುಶಃ ಕೊಳದ ಬದಿಯಲ್ಲಿರುವ ಕಲ್ಲಿನ ಮಂಟಪಗಳನ್ನು ಬಂಚಾಳಪ್ಪ ಕಟ್ಟಿಸಿರಬಹುದೆಂಬುದಕ್ಕೆ ಈ ಶಾಸನ ಆಧಾರ ಒದಗಿಸುತ್ತದೆ. ಮತ್ತೂಂದು ಶಾಸನದ ಪ್ರಕಾರ ಮಂಚನಬಲೆ ದೇವಾಂಗದ ದೊಡ್ಡಮುದ್ದಣ್ಣ ಕಲ್ಲಿನ ಬಾವಿ ಕಟ್ಟಿಸಿದ್ದು, ಆ ಕಾರಣ ಚಿಕ್ಕಣ್ಣಗೆ ಬಹಳವಾಗಿ ವುಡುಗರೆ ಮಾಡಿರುವ ಬಗ್ಗೆ ತಿಳಿಸುತ್ತದೆ. ಆದರಿಲ್ಲಿ ಅವರು ಕಟ್ಟಿಸಿದ ಬಾವಿ ಯಾವುದೆಂಬುದನ್ನು ನಿರ್ಧರಿಸುವುದು ಕಷ್ಟ ಎಂದು ಊರಿನ ಗೋಪಾಲಗೌಡ ಕಲ್ವಮಂಜರಿ ಹೇಳುತ್ತಾರೆ. 

ಚಿತ್ರಾವತಿ ನದಿ
    ಚಿತ್ರಾವತಿ ನದಿ ನಂದಿಬೆಟ್ಟದ ಉತ್ತರಕ್ಕಿರುವ ಹರಿಹರೇಶ್ವರ ಬೆಟ್ಟದಲ್ಲಿ ಜನ್ಮತಾಳಿ, ಆನಂತರ ಈಶಾನ್ಯ ದಿಕ್ಕಿನಲ್ಲಿ ವರ್ಲಕೊಂಡ ಮತ್ತು ಬಾಗೇಪಲ್ಲಿಯ ಮಧ್ಯದಲ್ಲಿ ಪಾತ್ರವನ್ನು ನಿರ್ಮಿಸಿಕೊಂಡು ಮುಂದೆ ಸಾಗುತ್ತದೆ. ಬಾಗೇಪಲ್ಲಿ ಪ್ರದೇಶ ಬಿಟ್ಟ ಕೆಲವೇ ಮೈಲಿಗಳ ನಂತರ ಉತ್ತರಾಭಿಮುಖವಾಗಿ ಆಂಧ್ರ ಪ್ರದೇಶವನ್ನು ಸೇರಿಕೊಳ್ಳುತ್ತದೆ. ಅಲ್ಲಿಂದಲೇ ಅನಂತಪುರ ಜಿಲ್ಲೆ ಯನ್ನು ಪ್ರವೇಶಿಸುವ ಈ ನದಿಯು ಕೊಡಿಕೊಂಡ ಸಮೀಪ ಉತ್ತರಾಭಿಮುಖವಾಗಿಯೇ ಮುಂದುವರೆದು ಆನಂತರ ತನ್ನ ಪಾತ್ರವನ್ನು ಮತ್ತೆ ಈಶಾನ್ಯ ದಿಕ್ಕಿನತ್ತ ಬದಲಿಸಿಕೊಂಡು ಬುಕ್ಕಾಪಟ್ಟಣಂ ಮತ್ತು ಧರ್ಮವರಂ ಕೆರೆಗಳಿಗೆ ನೀರುಣಿಸುತ್ತದೆ. ಅಂತಿಮವಾಗಿ ಕಡಪ ಜಿÇÉೆಯ ಗೌಡಲೂರು ಬಳಿ ಉತ್ತರ ಪಿನಾಕಿನಿ ನದಿಯನ್ನು ಸೇರಿ ಮುಂದೆ ಮತ್ತಷ್ಟು ವಿಜೃಂಭಿಸಲು ಕಾರಣವಾಗುತ್ತದೆ. ಇತ್ತೀಚೆಗೆ ಪರಗೋಡು ಬಳಿ ಇದಕ್ಕೆ ಅಣೆಕಟ್ಟೆ ನಿರ್ಮಿಸಲಾಗಿದೆ. ಬಾಗೇಪಲ್ಲಿ ಮತ್ತು ಗುಡಿಬಂಡೆ ಪಟ್ಟಣಗಳೂ ಸೇರಿದಂತೆ ನೂರಾರು ಹಳ್ಳಿಗಳ ದಾಹವನ್ನು ಥಣಿಸುವ ಮೂಲವೂ ಈ ನದಿಯೇ  ಆಗಿರುವುದೊಂದು ವಿಶೇಷ.

ಚಿತ್ರಾವತಿ ಕೊಳ
 ಹರಿ-ಹರ ಸಂಗಮ ಕ್ಷೇತ್ರವೆನ್ನುವ ಹರಿಹರೇಶ್ವರ ಬೆಟ್ಟ(ನಂದಿಬೆಟ್ಟದ ಉತ್ತರದಲ್ಲಿದೆ)ದಲ್ಲಿ ಹುಟ್ಟುವ ಚಿತ್ರಾವತಿ ನದಿ, ಗುಪ್ತಗಾಮಿನಿಯಾಗಿ ಸಾಗಿ ಮೊದಲಬಾರಿಗೆ ಈ ಕೊಳದ ಮಧ್ಯದಲ್ಲಿರುವ ಬಾವಿಯಲ್ಲಿ ಕಾಣಿಸಿಕೊಳ್ಳುತ್ತಾಳೆ ಎಂಬ ಪ್ರತೀತಿಯಿದೆ. ಈ ಕಾರಣದಿಂದಾಗಿಯೇ ಈ ಕಲ್ಯಾಣಿಯನ್ನು ಚಿತ್ರಾವತಿ ಕೊಳ  ಎಂದು ಕರೆಯಲಾಗುತ್ತದೆ. ಈ ಕೊಳಕ್ಕೆ ಹೊಂದಿಕೊಂಡಂತೆ ಆಂಜನೇಯ, ಈಶ್ವರ ಮತ್ತು ಸುಬ್ರಹ್ಮಣ್ಯೇಶ್ವರ ದೇವಾಲಯಗಳಿದ್ದು, ಈ ಕ್ಷೇತ್ರ ದೈವ ಸನ್ನಿಧಿಯಾಗಿಯೂ ಆರಾಧಿಸಲ್ಪಡುತ್ತಿದೆ ಎಂದು ಸ್ಥಳದ ಮಹಿಮೆಯನ್ನು ಸಾಹಿತಿ ಗೋಪಾಲಗೌಡ ಕಲ್ವಮಂಜರಿ ಬಣ್ಣಿಸುತ್ತಾರೆ. 

 ಓಂ ಶಿಡ್ಲಘಟ್ಟ

ಟಾಪ್ ನ್ಯೂಸ್

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

1-NASA

NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!

BUS driver

RTO; ಫಿಟ್‌ನೆಸ್‌ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

1-kkk

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ

1-stamp

Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್‌ ಪಾವತಿ ಪದ್ಧತಿ ಜಾರಿ

1-manmohan

Belagavi; ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ

Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ

Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ

Mangaluru: ವಿರೋಧ ಹಿನ್ನೆಲೆ: ಸಜಂಕಾ ಡಿಜೆ ಪಾರ್ಟಿ ರದ್ದು

Mangaluru: ವಿರೋಧ ಹಿನ್ನೆಲೆ: ಸಜಂಕಾ ಡಿಜೆ ಪಾರ್ಟಿ ರದ್ದು

6

Gurupura: 300 ಕೆ.ಜಿ. ಗೋಮಾಂಸ ಸಾಗಾಟ; ಇಬ್ಬರ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.