ಬುಗುಟ ಬಾತು
Team Udayavani, Apr 15, 2017, 12:13 PM IST
ಚುಂಚಿನ ಬುಡದಲ್ಲಿ ಚಿಕ್ಕ ಉಬ್ಬುಗಂಡು ಬಾತುಗಿದೆ. ಅದರಿಂದ ಇದಕ್ಕೆಗುಮ್ಮಟ ಕೊಕ್ಕಿನ ಬಾತು ಎಂಬ ಹೆಸರು ಅನ್ವರ್ಥಕವಾಗಿ ಬಂದಿದೆ.Comb Duck (Skrkidiormnismelanotos) R Duck + 70 ಸೆಂಮೀ. ಇರುವ ಬಾತುಕೋಳಿ. ಸಾಕು ಬಾತನ್ನು ಹೋಲುತ್ತದೆ. ಇದು ಭಾರತದ ಅದರಲ್ಲೂ ಕರ್ನಾಟಕದ ಹಕ್ಕಿ. ಇದನ್ನು ಶಲ್‌ಡಕ್ ಎಂದು ತಪ್ಪಾಗಿ ತಿಳಿದಿದ್ದರು. ಅದರ ಸೂಕ್ಷ್ಮಅಧ್ಯಯನದ ನಂತರ ಇದು ತಡೋರ್ನಿನಾ ಅಥವಾ ಅನಟನಿಯಾ ಉಪ ಜಾತಿಗೆ ಸೇರಿದ್ದೆಂದು ಇದರ ಲಕ್ಷಣದಿಂದ ತಿಳಿದು ಬಂದಿದೆ.
ಮಿರ ಮಿರ ಮಿನುಗುವ ಹೊಳಪಿರುವ ಬಣ್ಣ ಇದಕ್ಕಿದೆ. ತಿಳಿ ನೀಲಿ ಮತ್ತು ಹಸಿರು ಹೊಳಪಿರುವ ಗರಿ ಇದ್ದು, ಹೊಟ್ಟೆ ಭಾಗ ಬಿಳಿ ಬಣ್ಣದಿಂದ ಕೂಡಿದೆ. ತಲೆ, ಕುತ್ತಿಗೆ ಸುತ್ತ ಬಿಳಿಬಣ್ಣವಿದೆ. ಅದರ ಮೇಲೆ ಚಿಕ್ಕಕಪ್ಪು ಚುಕ್ಕೆ ಇದೆ. ತಲೆ ಅಂದರೆ ನೇಪ್ ಭಾಗದಲ್ಲಿ ತಿಳಿಕಂದು ಇರುವುದು ಸೂಕ್ಷ್ಮಮವಾಗಿ ನೋಡಿದರೆ ತಿಳಿಯುವುದು. ಹೆಣ್ಣಿಗೆ ಚುಂಚಿನ ಬುಡದಲ್ಲಿ ಗುಮ್ಮಟ ಅಥವಾ ಉಬ್ಬಿದ ಭಾಗ ಇಲ್ಲ. ಉಳಿದ ಬಣ್ಣ ರೆಕ್ಕೆಗಂಡಿನಂತೆ ಇದೆ. ಗಂಡಿಗೆ ಈ ಗುಮ್ಮಟದಿಂದ ಏನು ಪ್ರಯೋಜನ, ಇದು ಕೇವಲ ಸೌಂದರ್ಯಕ್ಕಾಗಿಯೋ ಅಥವಾ ಇದರಿಂದ ಏನಾದರೂ ಪ್ರಯೋಜನ ಇದೆಯೋ ಎಂಬುದು ಸಂಶೋಧನೆಯಿಂದ ತಿಳಿಯಬೇಕಾಗಿದೆ. ಈ ಗುಮ್ಮುಟ ಮರಿಮಾಡುವ ಸಮಯದಲ್ಲಿ ದೊಡ್ಡದಾಗುವುದು ವಿಶೇಷ. ಇದರ ದೇಹದಲ್ಲಿ ಮರಿ ಮಾಡುವ ಸಮಯದಲ್ಲಿ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಕನ್ನಡದಲ್ಲಿ ಸರಳೆ ಹಕ್ಕಿ ಅಂದರೆ ಬಾತು ಎಂದೂ ಕರೆಯುತ್ತಾರೆ. ಹಿಂದಿಯಲ್ಲಿ ಇದನ್ನು ನಾಕ್ಟ ಎಂದು ಕರೆಯುತ್ತಾರೆ. ಇದರಚುಂಚಿನ ಮೇಲಿರುವ ಉಬ್ಬಿನಿಂದ ಸುಲಭವಾಗಿ ಗುರುತಿಸಬಹುದು.
ಇದು ಆಹಾರಕ್ಕಾಗಿ ಕೆರೆ ಅಥವಾ ನೀರಿನ ಹೊಂಡದಿಂದ ಇನ್ನೊಂದು ಕೆರೆಗೆ ಹೋಗುತ್ತಿರುತ್ತವೆ. ಚುಂಚಿನ ಬುಡದಲ್ಲಿರುವ ಬುಗುಟದಿಂದ ಗಂಡೋ – ಹೆಣ್ಣೋ ಎನ್ನುವುದನ್ನು ಗುರುತಿಸಬಹದು. ಇದು ನೀರಿನ ಮಧ್ಯದಲ್ಲಿಯೇ ಹೆಚ್ಚು ಸಮಯ ಕಳೆಯುತ್ತದೆ. ನೀರಿನ ಮೇಲೆ ತೇಲುವ ಸಸ್ಯ, ಅದರ ಚಿಗುರು, ದೇಟು, ಚಿಕ್ಕ ಬೀಜಗಳನ್ನು ಇದು ತಿನ್ನುತ್ತದೆ.
ನೀರಿನ ಮೇಲೆ ತೇಲುವ ಹಸಿರು ಪಾಚಿ ಸಹ ತಿನ್ನುವುದು. ಹೀಗೆ ನೀರಿನ ಶುದ್ದೀಕರಣದಲ್ಲೂ ಇದರ ಪಾತ್ರ ಹಿರಿದು. ನೀರಿನಲ್ಲಿರುವ ಅನೇಕ ಚಿಕ್ಕ ಕ್ರಿಮಿಗಳನ್ನು ಇದು ತಿನ್ನುವುದರಿಂದ ನೀರಿನಿಂದ ಬರುವ ಕಾಯಿಲೆ ನಿಯಂತ್ರಿಸಿ ಬಹು ಉಪಕಾರ ಮಾಡುತ್ತದೆ.
ಜೋಡಿಯಾಗಿ ಅಥವಾ ಚಿಕ್ಕ ಗುಂಪಿನಲ್ಲಿ ಸರೋವರ, ಕೆಸರಿನಗದ್ದೆ, ಕಾಲುವೆ ಸಮೀಪ ಮೇಯುತ್ತವೆ. 56 ರಿಂದ 76 ಸೆಂ.ಮೀ ದೊಡ್ಡ ಬಾತು ಅನೇಕ ಕಡೆ ಸಿಕ್ಕಿದೆ. ಇದರರೆಕ್ಕೆ ಅಗಲ 116 ರಿಂದ 145 ಸೆಂಮೀ ನಷ್ಟು ದೊಡ್ಡದಿದೆ. 1.03 ಕೆ.ಜಿ ಯಿಂದ ಸುಮಾರು 2.9 ಕೆಜಿ
ಭಾರ ಇರುತ್ತದೆ. ಚಿಕ್ಕ ಮರಿ ತಿಳಿ ಕಂದು ಬಣ್ಣದಿಂದ ಕೂಡಿದ್ದು , ಕುತ್ತಿಗೆತಲೆ ಸಹ ತಿಳಿ ಕಂದು ಬಣ್ಣದಿಂದಿರುತ್ತದೆ. ಪ್ರೌಢಾವಸ್ಥೆಗೆ ಬಂದಂತೆ ತಲೆಕುತ್ತಿಗೆಯಲ್ಲಿರುವ ಚುಕ್ಕೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ರೆಕ್ಕೆಗಳಲ್ಲಿ ಹೊಳೆವ ನೀಲಿ, ಹಸಿರು ಬಣ್ಣ ತಳೆಯುತ್ತದೆ. ಗಂಡು ಹಕ್ಕಿ ಹೆಣ್ಣಿಗಿಂತ ಹೆಚ್ಚು ದಟ್ಟ ಬಣ್ಣದಿಂದ ಕೂಡಿರುತ್ತದೆ. ಜುಲೈ -ಸೆಪ್ಟೆಂಬರ್ ಮರಿಮಾಡುವ ಸಮಯ. ನೀರಿನ ಸಮೀಪದ ಮರದ ಡೊಂಗರಗಳಲ್ಲಿ ಗೂಡು ಮಾಡುತ್ತದೆ. ಒಂದೇಗೂಡಿನಲ್ಲಿ ಅನೇಕ ಹೆಣ್ಣು ಹಕ್ಕಿ ಮೊಟ್ಟಇಡುತ್ತದೆ. ಇದರ ಪ್ರಣಯದಲ್ಲಿ ಗೆದ್ದದ್ದು ವರಿಸುತ್ತದೆ. ಸೋತಗಂಡು ಮರದತುದಿಯಲ್ಲಿ ಕುಳಿತು ತನ್ನ ಗೆಳತಿಗಾಗಿ ಕಾಯುತ್ತದೆ. ಇಂತಹ ಸೂಕ್ಷ್ಮ ವಿಷಯದ
ಅಧ್ಯಯನ ನಡೆಯಬೇಕಿದೆ. ಒಂದೇ ಗೂಡಿನಲ್ಲಿ ಬೇರೆ ಬೇರೆ ಹೆಣ್ಣು ಮೊಟ್ಟೆ ಇಡುವುದರಿಂದ ಎಲ್ಲ ಹೆಣ್ಣು ಬಂದು ಕಾವು ಕೊಡುವುದೋ? ಅಥವಾ ಒಂದೇ ಹೆಣ್ಣುಕಾವುಕೊಟ್ಟು ಮರಿ ಮಾಡುವುದೋ? ಎಂಬುದೂ ತಿಳಿಯಬೇಕಿದೆ.
ಇದು 7 ರಿಂದ 14 ಬಿಳಿಬಣ್ಣದ ತತ್ತಿ ಇಡುತ್ತದೆ. ಇತರ ಹೆಣ್ಣು ಹಕ್ಕಿ ಒಂದೇಗೂಡಿನಲ್ಲಿ ಇಟ್ಟತತ್ತಿಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ 47-50ಕ್ಕಿಂತ ಹೆಚ್ಚು ತತ್ತಿ ಒಂದೇಗೂಡಿನಲ್ಲಿ
ಸಿಕ್ಕ ಉದಾಹರಣೆ ಇದೆ. ಇದರ ಕಾಲು ಸೀಸದ ಹೊಳಪಿನಿಂದ ಕೂಡಿದ್ದು ಜಾಲಪಾದ ಹೊಂದಿದೆ. ಇದು ಬೇರು, ನಾರು, ಹುಲ್ಲು , ಹಕ್ಕಿ ಗರಿ ಉಪಯೋಗಿಸಿ ಗೂಡನ್ನು ಮಾಡುತ್ತದೆ. ತನ್ನ ಸಂಗಾತಿಯನ್ನು ಆರಿಸಿಕೊಂಡ ನಂತರ ಅವೆರಡೂ ಸೇರಿಗೂಡು ಕಟ್ಟುವುದೋ ಅಥವಾ ಗೂಡುಗಂಡುಕಟ್ಟದ ಮೇಲೆ ಅದನ್ನು ತನ್ನ ಸಂಗಾತಿಯಾಗಿ ಹೆಣ್ಣು ಸ್ವೀಕರಿಸುವುದೋ ಎಂಬುದೂ ಸಹ ತಿಳಿದಿಲ್ಲ. 28 ರಿಂದ 30 ದಿನ ಕಾವು ಕೊಡುತ್ತದೆ. ಕಾವುಕೊಡುವಲ್ಲಿ ಹೆಣ್ಣಿನ ಪಾತ್ರ ಹೆಚ್ಚು. 28 ದಿನ ಕಾವುಕೊಟ್ಟ ನಂತರ – ಒಂದು ಅಥವಾ ಎರಡು ದಿನಗಳಲ್ಲಿ ಮೊಟ್ಟೆ ಒಡೆದು ಮರಿಯಾಗುತ್ತದೆ. ಇದರಗೂಡು 12ಮೀ ಎತ್ತರದಲ್ಲಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.