ಕ್ರೌಂಚ ಪಕ್ಷಿ ಯ ಕ್ಷೇಮ ಸಮಾಚಾರ


Team Udayavani, May 27, 2017, 12:37 PM IST

1111.jpg

 ಇದೊಂದು ವಲಸೆ ಹಕ್ಕಿ. ಸರಸ್‌ಕ್ರೌಂಚ ಪಕ್ಷಿಗಿಂತ ಚಿಕ್ಕದು. COMMON  CRANE ( Graus Grus) M Valture + ಊರ ಕೋಳಿ ಹುಂಚದಂತೆ ಇದರ ಹಿಂದಿನ ಪುಕ್ಕ ಅರ್ಧ ವರ್ತುಲಾಕಾರದಲ್ಲಿ ಕೆಳಮುಖವಾಗಿ ಬಾಗಿದೆ. ವರ್ತುಲ ಪುಕ್ಕ ಕ್ರೌಂಚಪಕ್ಷಿಯ ಚೆಲುವನ್ನು ಹೆಚ್ಚಿಸಿದೆ. ಪ್ರಣಯ ಸಂದರ್ಭದಲ್ಲಿ ಈ ಪುಕ್ಕ ಮೇಲೆತ್ತಿ ನರ್ತಿಸಿ, ತನ್ನ ಪ್ರಿಯತಮೆಯನ್ನು ಆಕರ್ಷಿಸುತ್ತದೆ. ಇದು ಭಾರತದ ರಣ ಹದ್ದಿನಷ್ಟು ಎತ್ತರವಾಗಿದೆ. ಪ್ರೌಢಾವಸ್ಥೆಗೆ ಬಂದ ಹಕ್ಕಿ 3 ರಿಂದ 6 ಕೆಜಿ ತೂಕವಿರುತ್ತದೆ. ಅಗಲಿಸಿದಾಗ ರೆಕ್ಕೆಯ ಅಗಲ 1.8 ರಿಂದ 2.4 ಮೀ. ದೊಡ್ಡದಾಗಿರುತ್ತದೆ. ಡೊಮೆಸೆಲ್‌ಕ್ರೇನ್‌ ಬಿಟ್ಟರೆ ಯುರೋಪಿನಲ್ಲಿ ಇದು ಹೆಚ್ಚಾಗಿ ಕಾಣಸಿಗುತ್ತದೆ. 

 ಉದ್ದುದ್ದ ಕಾಲು, ಕುತ್ತಿಗೆ, ಕೊಕ್ಕು, ಬೂದು ಬಣ್ಣದ ಕಾಲು ಇದಕ್ಕಿದೆ. ದೂರದಿಂದ ನೋಡಿದರೆ ಕೊಕ್ಕರೆಯಂತೆ ಕಾಣುತ್ತದೆ.  ಆದರೆ, ಬಿಳಿ ಛಾಯೆಯ ಕಂದುಬಣ್ಣ, ಕಣ್ಣಿನ ಹಿಂಭಾಗದಿಂದ ಆರಂಭವಾಗಿ ಕುತ್ತಿಗೆಯ ಬುಡದ ತನಕ ಬಿಳಿ ಪಟ್ಟಿ ಇರುತ್ತದೆ.  ನೆತ್ತಿ, ಕೆಂಪು ಬಣ್ಣದಿಂದ ಕೂಡಿರುತ್ತದೆ. ಇದರಿಂದಾಗಿ ಕೊಕ್ಕರೆಗಳಿಗಿಂತ ಇದು ಭಿನ್ನ ಎಂದು ಸುಲಭವಾಗಿ ಗುರುತಿಸಬಹುದು. 

ಹಕ್ಕಿಯ ಬಾಲದ ಪುಕ್ಕ ಉಂಗುರಾಕಾರದಲ್ಲಿದೆ. ಆದರೆ ಕೊಕ್ಕರೆಗಳ ಪುಕ್ಕ ನೇರವಾಗಿರುತ್ತದೆ. ಕೊಕ್ಕರೆ ಮತ್ತು ಸಾಮಾನ್ಯ ಕ್ರೌಂಚಗಳಿಗಿರುವ ಭಿನ್ನತೆ ಇರುತ್ತದೆ.   ಕುತ್ತಿಗೆ  ಮುಕ್ಕಾಲು ಭಾಗ ಕಪ್ಪು ಬಣ್ಣದಿಂದ ಕೂಡಿದೆ.  ಸೈಬೀರಿಯನ್‌ ಕ್ರೌಂಚ ಹಕ್ಕಿ, ಸರಸಕ್ರೇನ್‌, ಚಿಕ್ಕಕ್ರೌಂಚ ಪಕ್ಷಗಳಿಗಿಂತ ಇದು ಬೇರೆ ಎಂದು ಸುಲಭವಾಗಿ ಕಂಡು ಹಿಡಿಯ ಬಹುದಾಗಿದೆ. ಮಾರ್ಚ್‌ ದಿಂದ ಏಪ್ರಿಲ್‌ ತಿಂಗಳಲ್ಲಿ ಗುಂಪು, ಗುಂಪಾಗಿ ವಲಸೆ ಬರುತ್ತವೆ. ಈ ಸಂದರ್ಭದಲ್ಲಿ ಇದರ ಹಾರಿಕೆ ಸ್ಲಂಗ್‌ ಬಾತು ಕೋಳಿಯ ಹಾರಿಕೆಯನ್ನು ನೆನಪಿಗೆ ತರುತ್ತದೆ. ಇದು ಕುತ್ತಿಗೆಯನ್ನು ಮುಂದೆ ಚಾಚಿ, ಕಾಲುಗಳೆರಡನ್ನು ಮುಮ್ಮುಖವಾಗಿ ಮಾಡಿ ಹಾರುತ್ತದೆ.  
ಪ್ರೌಢಾವಸ್ಥೆಗೆ ಬಂದ ಮರಿಗಳು ಕೆಂಪು ಮಿಶ್ರಿತ ಬೂದು ಬಣ್ಣದಿಂದ ಕೂಡಿರುತ್ತವೆ. ಮರಿಗಳು ದೊಡ್ಡದಾದ ಮೇಲೆ ವಲಸೆ ಹೋಗುತ್ತವೆ.  ಅದಕ್ಕೂ ಮುನ್ನ ದೇಹದ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳುತ್ತವೆ. ಪ್ರತಿ ದಿನ ಎಷ್ಟು ದೂರ ಪ್ರಯಾಣಿಸುತ್ತವೆ, ಮಧ್ಯ ನಿಲ್ಲದೇ ಒಂದೇರೀತಿ ಹಾರುತ್ತದೆಯೋ- ಈ ವಿಚಾರವಾಗಿ ಹೆಚ್ಚಿನ ಅಧ್ಯಯನ ನಡೆಯಬೇಕಿದೆ.  ಇವು ವಲಸೆ ಬರುವಾಗ ಜೊತೆಯಲ್ಲಿ ಇತರ ಪಕ್ಷಿಗಳ ಜೊತೆ ಬರುವವೋ? ಇಲ್ಲವೇ ಪ್ರತ್ಯೇಕವಾಗಿ ಬರುವವೋ? ಎಂಬ ವಿಷಯದಲ್ಲೂ ಹೆಚ್ಚಿನ ಅಧ್ಯಯನ ನಡೆಯಬೇಕಿದೆ. 

ಈ ಪಕ್ಷಿ ಏರು ಸ್ವರದಲ್ಲಿ ಕ್ರೋಕ್‌, ಕ್ರೋಕ್‌ ಎಂದು ಮರಿಮಾಡುವ ಸಮಯದಲ್ಲಿ ಕೂಗುತ್ತದೆ.  ಸಾಮಾನ್ಯವಾಗಿ ಕ್ರೌಂಚ ಪಕ್ಷಿಯ ಜೊಡಿಯನ್ನು ಹೊಳೆ ದಂಡೆಯಲ್ಲಿ ಕಾಣಬಹುದು. ಮುಂಜಾನೆ ಮತ್ತು ಸಾಯಂಕಾಲ ಹಾರಿಕೊಂಡೇ ಇದ್ದು, ಬೇಸಾಯ ಮಾಡಿದ ಹೊಲಗಳಲ್ಲಿ ಆಹಾರ ಸಂಗ್ರಹಿಸಲು ಹೋಗುತ್ತದೆ. ಮರಿ ಮಾಡುವಾಗಲೂ ಸಸ್ಯಗಳ ಗುಚ್ಚ ಇರುವಲ್ಲಿ ಅದರ ನಡುವೆ ಹುಲ್ಲು ಸೇರಿಸಿ ತೇಲು ಗೂಡು ನಿರ್ಮಿಸುತ್ತದೆ. ಅದರಲ್ಲಿ ತಿಳಿ ಕಂದು ಬಣ್ಣದ ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ಇದರ ತಿಳಿ ಕಂದು ಬಣ್ಣದ ಮೊಟ್ಟೆಯ ಮೇಲೆ , ದಟ್ಟಕಂದು ಬಣ್ಣದ ಚುಕ್ಕೆ ಮತ್ತು ಮಚ್ಚೆ ಇರುತ್ತದೆ. ಹೊಳೆ ದಂಡೆಯಲ್ಲಿರುವ ಹೊಲಗಳಲ್ಲಿ ಕಲ್ಲಂಗಡಿ ಸಸ್ಯ ಬೆಳೆದಾಗ ಅದರದಂಟು , ಚಿಗುರುಗಳನ್ನು ತಿಂದು ರೈತರ ಕೆಂಗಣ್ಣಿಗೆ ಇವು ಗುರಿಯಾಗುವುದೂ ಉಂಟು. ಆದರೂ ಕಲ್ಲಂಗಡಿಗೆ ಬೀಳು ಹುಳುಗಳ ನಿಯಂತ್ರಣದಲ್ಲಿ ಇವುಗಳ ಪಾತ್ರ ಕಡಿಮೆ ಏನಿಲ್ಲ. 

 ಹೆಣ್ಣು ಸಾಮಾನ್ಯವಾಗಿ ಕಾವು ಕೊಡುತ್ತದೆ. ಮರಿಯಾದ ಕೆಲವು ದಿನಗಳಲ್ಲೆ ತಂದೆ ತಾಯಿಯನ್ನು ಅನುಸರಿಸಿ ತನ್ನ ಆಹಾರ ತಾನೇ ದೊರಕಿಸಿಕೊಳ್ಳುವ ನೈಪುಣ್ಯತೆಯನ್ನು ಕ್ರೌಂಚಪಕ್ಷಿ ಕಲಿಯುತ್ತದೆ.  ಪ್ರೌಢಾವಸ್ಥೆಗೆ ಬಂದಾಗ ವಲಸೆಗಾಗಿ ಈ ಮರಿಗಳಿಗೆ ತಂದೆ ತಾಯಿ ಯಾವರೀತಿ ಮಾರ್ಗದರ್ಶನ ಮಾಡುವುದು ಎಂಬುದು ತಿಳಿದಿಲ್ಲ. ಬೇಟೆಯಿಂದಾಗಿ ಈ ಪಕ್ಷಿಯ ಸಂತತಿ ಕಡಿಮೆಯಾಗುತ್ತಿದೆ. ಈ ಅಪರೂಪದ ಪಕ್ಷಿ ಸಂಕುಲವನ್ನು ಉಳಿಸುವ ಜವಾಬ್ದಾರಿ ಎಲ್ಲರದ್ದು ಆಗಬೇಕಾಗಿದೆ. 

ಪಿ. ವಿ. ಭಟ್‌ ಮೂರೂರು 

ಟಾಪ್ ನ್ಯೂಸ್

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Devadurga

Karkala: ಅಕ್ರಮ ಮದ್ಯ ದಾಸ್ತಾನು; ಆರೋಪಿ ಸೆರೆ

Brahmavar

Malpe: ಅಸ್ವಾಭಾವಿಕ ಸಾವು; ಪ್ರಕರಣ ದಾಖಲು

WhatsApp Image 2024-11-17 at 21.09.50

Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ

ssa

Malpe: ನಿಲ್ಲಿಸಲಾಗಿದ್ದ ಬುಲೆಟ್‌ ಕಳವು

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.