ಮೆಗನ್ಸರ್‌ ಕಾಡು ಬಾತು


Team Udayavani, Jun 8, 2019, 5:55 AM IST

5

ವೇಗವಾಗಿ ಈಜಬಲ್ಲ ಕಾಡುಬಾತು, ನದೀ ತೀರದ ದೊಡ್ಡ ಬಾತು ಎನಿಸಿಕೊಂಡಿದೆ. ಮರಕುಟಿಕ ಹಕ್ಕಿಯ ಹಳೆಯ ಗೂಡು ಹಾಗೂ ಕಲ್ಲಿನ ಪೊಟರೆಯನ್ನು ವಾಸಸ್ಥಾನವಾಗಿ ಬಳಸುವುದು ಈ ಹಕ್ಕಿಯ ವೈಶಿಷ್ಟé.Common Merganser ( Murgs merganser )MDudk +

ಈ ಹಕ್ಕಿಯ ತಲೆ ಹಸಿರು ಹಿನ್ನೆಲೆಯ ಹೊಳೆವ ಕಪ್ಪು ಬಣ್ಣದಿಂದ ಕೂಡಿರುತ್ತದೆ. ಬಾಲ ಬೂದು ಬಣ್ಣದ್ದು. ರೆಕ್ಕೆ ಒಳಭಾಗದ ಮುಕ್ಕಾಲು ಭಾಗ ಬಿಳಿಯಾಗಿರುತ್ತದೆ. ರೆಕ್ಕೆಯ ಅಂಚು ಯಾವ ಬಣ್ಣದಿಂದ ಕೂಡಿರುತ್ತದೆ ಎಂಬುದು ಹಾರುವಾಗ ಸ್ಪಷ್ಟವಾಗಿ ಕಾಣುತ್ತದೆ. ಬಹುತೇಕ ಕಪ್ಪೇ. ಸಾಮಾನ್ಯವಾಗಿ ಪ್ರಾಯಕ್ಕೆ ಬರುವ ಮುನ್ನ ಗಂಡು-ಹೆಣ್ಣು ಒಂದೇರೀತಿಯ ಬಣ್ಣದಿಂದ ಕಾಣುತ್ತದೆ. ಕಣ್ಣು ಮತ್ತು ಚುಂಚಿನ ನಡುವೆ ಬಿಳಿ ಮತ್ತು ಕಪ್ಪು ಬಣ್ಣದ ರೇಖೆ ಇರುತ್ತದೆ. ಚುಂಚು, ಕಾಲು ಕೆಂಪು ಹಾಗೂ ಕೆಲವೊಮ್ಮೆ ಕಂದುಗೆಂಪು ಬಣ್ಣದಿಂದ ಕೂಡಿರುವುದೂ ಇದೆ.

ಇದರ ಕೊಕ್ಕು ಮಾತ್ರ ಕತ್ತಿಯ ಅಲಗಿನಷ್ಟೇ ಹರಿತ. ತುದಿಯಲ್ಲಿ ಕೊಕ್ಕೆಯಂತಿರುವುದರಿಂದ ಮೀನು ಮತ್ತು ಮೃದ್ವಂಗಿ, ಜಲಸಸ್ಯಗಳನ್ನು ತಿನ್ನಲು ಅನುಕೂಲಕರವಾಗಿದೆ. ಈ ಕಾಡು ಬಾತು ಈಜುವುದರಲ್ಲೂ ಎತ್ತಿದ ಕೈ.

ಈ ಹಕ್ಕಿ ‘ಎನಿrಡಿಯಾ’ ಕುಟುಂಬಕ್ಕೆ ಸೇರಿದ್ದಾಗಿದೆ. ನದೀ ತೀರದ ದೊಡ್ಡ ಬಾತು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಯುರೋಪಿನಲ್ಲಿ, ಕಾಡಿನ ಮಧ್ಯೆ ಇರುವ ದೊಡ್ಡ ಸರೋವರದ ಪ್ರದೇಶದಲ್ಲಿ -ಇದು ತನ್ನ ಇರುನೆಲೆ ಮಾಡಿಕೊಂಡಿದೆ. ಏಷಿಯಾ ಖಂಡ ಮತ್ತು ಅಮೆರಿಕದಲ್ಲೂ ಕಾಣಸಿಗುತ್ತದೆ. 58 ರಿಂದ 72 ಸೆಂ.ಮೀ ದೊಡ್ಡ ಇರುವ ಮೆಗನ್ಸರ್‌ ಬಾತುಗಳೂ ಇವೆ. ಇದರ ರೆಕ್ಕೆಯ ಅಗಲ-78-97 ಸೆಂ.ಮೀ. ಭಾರ-0.9 ರಿಂದ 2.1 ಕೆ.ಜಿ.
ದೊಡ್ಡ ಸರೋವರ, ನೀರಿನ ವೇಗ‌ ಹೆಚ್ಚಿರುವ ನದಿ ಅಂದರೆ ಇದಕ್ಕೆ ಬಲು ಪ್ರಿಯ. ಪಾಕಿಸ್ತಾನ, ಉತ್ತರ ಭಾರತ, ದಕ್ಷಿಣದ ಮುಂಬಯಿವರೆಗೂ ಈ ಹಕ್ಕಿಯನ್ನು ಕಾಣಬಹುದು. ಕರ್ನಾಟಕದ ಕುಮಟಾ, ಹೊನ್ನಾವರ ಭಾಗದ ನದೀ ತೀರ, ಮುಖಜ ಭಾಗದಲ್ಲಿ ಕಾಣಸಿಗುತ್ತದೆ. ಈ ಹಕ್ಕಿ ಲಡಾಕ್‌ ಮತ್ತು ಹಿಮಾಲಯದ ತಪ್ಪಲು ಪ್ರದೇಶದಲ್ಲಿ ಮರಿಮಾಡುತ್ತದೆ. ಜೋಡಿಯಾಗಿ ಇಲ್ಲವೇ ಚಿಕ್ಕಗುಂಪಿನಲ್ಲಿ ಸಾಮಾನ್ಯವಾಗಿ ಈಜುತ್ತಾ ,ಮುಳುಗಿ ನೀರಿನಲ್ಲಿರುವ ಕ್ರಿಮಿ ಮತ್ತು ಚಿಕ್ಕ ಮೀನನ್ನು ಹಿಡಿದು ತಿನ್ನುತ್ತದೆ.

ಒಂದೊಂದು ಗುಂಪಿನಲ್ಲಿ 40-50 ಹಕ್ಕಿಗಳಿರುತ್ತವೆ. ನೀರು ಹಕ್ಕಿಯಂತೆ ಹೆಚ್ಚು ಕಾಲ ಮುಳುಗಿ, ಬೇಟೆಯಾಡುವ ಕೌಶಲ ಹೊಂದಿದೆ. ಆಕಾರದಲ್ಲಿ ಕಾರ್ಮರಂಟ ನೀರುಕೋಳಿಯ ಕೊಕ್ಕನ್ನು ತುಂಬಾ ಹೋಲುವುದು. ಮರಿ 12 ದಿನದಲ್ಲೇ ಮೀನನ್ನು ತಿನ್ನಲು ಪ್ರಾರಂಭಿಸುತ್ತದೆ. ಗೂಡು ಮಾಡುವ ಸ್ಥಳವನ್ನು ಹೆಣ್ಣು ಆಯ್ಕೆಮಾಡುವುದು. ಮರದ ಪೊಟರೆ -ಇಲ್ಲವೇ ಮರಕುಟುಕ ಹಕ್ಕಿಯ ಹಳೆಯ ಗೂಡನ್ನೂ, ಕೆಲವೊಮ್ಮೆ ಕಲ್ಲಿನ ಪೊಟರೆಯನ್ನೂ ತನ್ನ ಗೂಡಿಗಾಗಿ ಬಳಸುವುದುಂಟು. ಒಂದು ಸಲಕ್ಕೆ 6 ರಿಂದ 10 ಮೊಟ್ಟೆ ಇಡುತ್ತದೆ.

ಇದೇ ಗುಂಪಿಗೆ ಸೇರಿದ ಕೆಲವು ಉಪಪ್ರಬೇಧದ ಬಾತು ನೆಲದಲ್ಲೂ ಮೊಟ್ಟೆ ಇಟ್ಟ ಉದಾಹರಣೆಗಳಿವೆ.
ಹೆಣ್ಣು ಹೊಟ್ಟೆಯ ತಳದಲ್ಲಿ ಮರದ ತುಣುಕು, ಹಳೆಯ ಗೂಡಿನ ಅವಶೇಷ, ಹುಲ್ಲು ಹಾಕುವುದು, ಮೊಟ್ಟೆ ಇಟ್ಟ ನಂತರ ತನ್ನ ಎದೆ ಭಾಗದ ಗರಿಗಳಿಂದ ಮೊಟ್ಟೆ ಮುಚ್ಚುತ್ತದೆ. ಇದು 28-35 ದಿನ ಕಾವು ಕೊಡುತ್ತದೆ. ಮರಿಯಾದ ಒಂದರಿಂದ ಎರಡು ದಿನ ಮಾತ್ರ ಗೂಡಲ್ಲಿ ಕಳೆಯುವುದು. ಮೊಟ್ಟೆಯ ಬಣ್ಣ, ಬಿಳಿ, ಕ್ರೀಮ್‌ ವೈಟ್‌, ಐವರೀ ತಿಳಿ ಹಳದಿ ಛಾಯೆಯಿಂದ ಕೂಡಿರುತ್ತದೆ.

ಟಾಪ್ ನ್ಯೂಸ್

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

ICC

Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್‌ ಹಂತಕ್ಕೇರಿದರೆ?

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.