ಕೆಂಪು ಕಾಲಿನ ಗೊರವ
Team Udayavani, Jan 14, 2017, 2:51 PM IST
ಉದ್ದುದ್ದ ಕೆಂಪು ಕಾಲು ಇದೆ.Common Redshank -Tringatotanus RM + ಕೊಕ್ಕಿನ ಬುಡದಲ್ಲಿ ಕೆಂಪು ಬಣ್ಣಇರುವುದು. ಹಾರುವಾಗ ಹೊಟ್ಟೆ ಹಾಗೂ ಕೆಂಪು ಬೆನ್ನಿನ ಮಧ್ಯ ಬಿಳಿಬಣ್ಣ ಗುರುತಿಸಲು ಸಹಕಾರಿ. ಸುಮಾರು 28 ಸೆಂ.ಮೀ ದೊಡ್ಡ ಹಕ್ಕಿ. ಇದರಲ್ಲಿ ಇದನ್ನೆ ಹೋಲುವ ಹಸಿರು ಪಾದ ಗೊರವ ಇದೆ. ಇದರ ಕಾಲು ಹಳದಿ ಮಿಶ್ರಿತ ಹಸಿರು ಬಣ್ಣ ಇದೆ. ಚುಂಚು ಬುಡದಲ್ಲಿ ಹಸಿರಿದೆ. ನೀರಿನ ಹಕ್ಕಿ ಆದರೆ ಇತರ ನೀರಿನ ಹಕ್ಕಿಗಳಾದ ಗದ್ದೆಗೊರವ, ಬೀಳಿ ಕುತ್ತಿಗೆ ಪಟ್ಟಿ ಇರುವ ಚಿಕ್ಕಗೊರವಗಳಂತೆ ಇವು ಕೇವಲ ನದಿ ಜಾಗಗಳಲ್ಲಿ ಆಹಾರ ಸಂಗ್ರಹ ಮಾಡುವುದಿಲ್ಲ. ಕಡಿಮೆ ನೀರಿರುವ ಜಾಗದಲ್ಲಿ ನೀರಿನಲ್ಲಿಯೇ ನಿಂತು ತನ್ನಕೊಕ್ಕನ್ನು ನೀರಿನಲ್ಲಿ ಮುಳುಗಿಸಿ, ಅಲ್ಲಿ ಕೆಸರಿನಲ್ಲಿರುವ ಹುಳ ಮತ್ತು ಚಿಕ್ಕ ಕ್ರಿಮಿಗಳನ್ನು ಹಿಡಿದುತಿನ್ನುತ್ತಿರುತ್ತವೆ. ಇದರಲ್ಲಿ ಕೆಂಪು ಕಾಲಿರುವ ಮೈಮೇಲೆ ಚಿತ್ತಾರ ಇರುವ ಕೆಂಪು ಕಾಲಿನ ಚುಕ್ಕೆ ಗೊರವ ಎಂಬ ಇನ್ನಂದು ಉಪಜಾತಿ ಇದೆ. ಕೆಂಪು ಕಾಲಿನ ಗೊರವ ಆಳ ವಿಲ್ಲದ ನೀರಿರುವ ಜಾಗದಲ್ಲಿ ಒಂಟಿಯಾಗಿ ಇಲ್ಲವೇ ಚಿಕ್ಕ ಗುಂಪಿನಲ್ಲಿ ಕಾಣುತ್ತವೆ. ಹೊಟ್ಟೆ, ಪುಕ್ಕದ ಅಡಿಭಾಗ ಬಿಳಿ ಇದೆ. ಬಾಲದ ಹೊರಮೈಯಲ್ಲಿ ಬಿಳಿ ಗೆರೆಇದೆ. ಬಾಲದಲ್ಲಿ ಕೆಲವು ಕಪ್ಪು ಗರಿಗಳಿರುವುದನ್ನು ಕಾಣಬಹುದು.
ಉದ್ದ ಕೆಂಪು ಕಾಲಿರುವುದರಿಂದ ಇದನ್ನು ಕೆಂಪು ಕಾಲಿನ ಗೊರವ ಎಂದು ಅನ್ವರ್ಥಕವಾಗಿ ಕರೆಯುವರು. ಇವು ಕಾಶ್ಮೀರ ಮತ್ತು ಲಡಾಕ್‌ಗಳಲ್ಲಿ ಮರಿಮಾಡುವುವು. ಚಳಿಗಾಲದಲ್ಲಿ ಅಲ್ಲಿಂದ ಕರ್ನಾಟಕ , ಬಯಲುಸೀಮೆ, ಸಮುದ್ರತೀರದ ಬಳಿ ವಲಸೆ ಬರುತ್ತವೆ.
ನನಗೆ ಸಿಕ್ಕ ಹಕ್ಕಿ ಉತ್ತರಕನ್ನಡದ ಕುಮಟಾ ಮೂರೂರಿನ ಭತ್ತದಗದ್ದೆಯ ಸಮೀಪ ಸಿಕ್ಕಿದೆ. ಅನಂತರ ಮಾಸೂರು, ಹೊನ್ನಾವರದ ಅಳವೆಕೋಡಿ, ಸಿರಸಿ ಬಾಗದಲ್ಲೂ ಸಿಕ್ಕಿವೆ. ಉತ್ತರಕರ್ನಾಟದ ಕೆರೆಗಳಿಗೂ ಬೇಟಿ ನೀಡಿಅಲ್ಲೆ ಬೇಸಿಗೆ ಕಳೆದ ದಾಖಲೆಗಳಿವೆ. ಕೆಂಪು ಕಾಲಿನ ಗೊರವಗಳಲ್ಲಿ ಬಾಲದ ಮೇಲ್ಭಾದಲ್ಲಿ ಕೆಲವು ಕಂದುಕಪ್ಪು ಬಣ್ಣದ ಗರಿ ಇದೆ. ಹೊಟ್ಟೆಎದೆ ಭಾಗ ಬಿಳಿ ಇದ್ದರೂ ಕುತ್ತಿಗೆ ಹಾಗೂ ಎದೆ ಭಾಗದಲ್ಲಿ ವ್ಯವಸ್ಥಿತವಾಗಿ
ತಿಳಿ ಕಂದು ಬಣ್ಣದಗೆರೆಇದೆ. ವಲಸೆ ಬರುವಾಗ ಗುಂಪಾಗಿ ಬಂದರೂ ತಮ್ಮ
ಆಹಾರ ಹುಡುಕಲು ಬೇರೆ , ಬೇರೆಯಾಗಿ ದೂರ ಹೋದಾಗ ಟಿವ್, ಟಿವ್,
ಟಿವ್Ø, ಎಂದು ಕೂಗಿ ಸಂಭಾಷಿಸುತ್ತವೆ. ಪುನಃ ಕೆಲವೊಮ್ಮೆ ಒಂದೆಡೆ ಗುಂಪು ಸೇರುವವು.
ಮೇ ಮತ್ತುಜುಲೈ ತಿಂಗಳಲ್ಲಿ ಲಡಾಕ್, ಅಥವಾ ಕಾಶ್ಮೀರ ಭಾಗದಲ್ಲಿ ಮರಿಮಾಡಿ ಚಳಿಗಾಲದಲ್ಲಿ ಭಾರತದಇತರ ಭಾಗಗಳಾದ ಕರ್ನಾಟಕ ಹಾಗೂ ಇತರ ಸಮುದ್ರತೀರ, ಬಯಲು ಸೀಮೆಯ ಕಡೆ ವಲಸೆ ಬಂದುಅಲ್ಲಿ ಕೆಲ ಸಮಯ ಉಳಿದು, ಪುನಃ ಉತ್ತರ ಭಾರತಕ್ಕೆ ಹೋಗುವವು. ಭಾರತದ ಕಾಶ್ಮೀರ, ಲಡಾಕ್‌ಜೌಗು ಪ್ರದೇಶದಗದ್ದೆ, ಮತ್ತುಜೌಗು ಪ್ರದೇಶದಲ್ಲೂಇದರಗೂಡು ಸಿಕ್ಕಿವೆ. ಇವು 3-4 ಹಳದಿ ಛಾಯೆಯ ಮೊಟ್ಟೆಇಡುತ್ತವೆ. ಈ ಮೊಟ್ಟೆಯ ಮೇಲೆ ಕೆನ್ನೀಲಿ ಬಣ್ಣದ ಕೆಲವು ಮಚ್ಚೆ ಇರುತ್ತದೆ. ಬಹುಶಃ ಈ ಕೆಂಪು ಛಾಯೆ ಹಕ್ಕಿಯ ಕಾಲು, ಚುಂಚಿನ ಬಣ್ಣವಾಗಿ ಮಾರ್ಪಟ್ಟಿರಬಹುದು. ಮತ್ತುಇದರ ರೆಕ್ಕೆಯ ಕೆಂಪು ಛಾಯೆಗೆಕಾರಣವಾಗಿರಬಹುದು. ಈ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ. ಉಪ್ಪು ನೀರಿರುವ ಸಮುದ್ರತೀರಕ್ಕೆ ಮೊದಲು ಬಂದು ಆಮೇಲೆ ಸಿ ನೀರಿರುವಜಾಗದತ್ತ ವಲಸೆ ಹೋಗುವವು. ಇವು ಮರಿಗಳಾಗಿ ಎಷ್ಟು ಸಮಯದ ನಂತರ ವಲಸೆ ಬರುತ್ತವೆ. ಚಿಕ್ಕ ಮರಿಗಳು ಉತತರದಿಂದದಕ್ಷಿಣದ ವರೆಗೆ ನೇರವಾಗಿ ವಲಸೆ ಬರುತ್ತವೆಯೋ? ಅಥವಾ ಮಧ್ಯ ಅಲ್ಲಲ್ಲಿ ಇದ್ದು , ಕೆಲವು ಸಮಯ ಕಳೆದು ದಕ್ಷಿಣ ಭಾರತದತ್ತ ಬರುತ್ತವೆಯೋ? ಇಲ್ಲಿಗೆ ಬಂದ ಕೆಲವು ಗುಂಪು ಇಲ್ಲೆ ವಾಸ್ತವ್ಯ ಹೂಡಿವೆಯೋ? ಈ ಕುರಿತು ಅಧ್ಯಯನದಿಂದ ಹೆಚ್ಚಿನ ಮಾತಿ ಸಂಗ್ರಹಿಸಬೇಕಾಗಿದೆ. ಕೆಸರಿನಕ್ರಿಮಿ, ಕೀಟಕ ನಿಯಂತ್ರಣದಲ್ಲಿ ಇವುಗಳ ಪಾತ್ರ ರಿದು. ಇಂದು ನೀರುಕಲುತವಾಗುತ್ತಿದೆ. ಇದರಿಂದ ಈ ಹಕ್ಕಿಗಳ ಮೇಲೆ ಏನು ಪರಿಣಾಮ ಆಗಿದೆ ಎಂಬುದು ಅಧ್ಯಯನ ನಡೆಯಬೇಕಿದೆ. ನೀರು ಮಲಿನವಾಗುತ್ತಿರುವುದರಿಂದ ಪಕ್ಷಿ, ಮಾನವನ ಮೇಲಾಗುವ ಕೆಟ್ಟ ಪರಿಣಾಮಕಡಿಮೆ ಮಾಡಲುಇದರಿಂದ ಸಹಾಯವಾದೀತು.
ಪಿ.ವಿ.ಭಟ್ ಮೂರೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.