ನಿರಂತರ ಆಟ ಹುಡುಗಾಟವಲ್ಲ!


Team Udayavani, Dec 2, 2017, 12:30 PM IST

955.jpg

 ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧ ಏಕದಿನ ಸರಣಿ ಆಡುತ್ತಿದ್ದ ಸಂದರ್ಭದಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಅಭಿನಯದ ಜಾಹೀರಾತು ವಿಡಿಯೋ ಒಂದು ಬಿಡುಗಡೆಯಾಯಿತು. ಇದರಲ್ಲಿ “ಸೆಟ್ಲಿಂಗ್‌ ಡೌನ್‌ ಎಂಬ ಆಂಗ್ಲ ಉಕ್ತಿಯೊಂದೆಡೆ ಬರುತ್ತದೆ. ಹಲವು ವರ್ಷಗಳಿಂದ ರೊಮ್ಯಾನ್ಸ್‌, ಡೇಟಿಂಗ್‌ನಲ್ಲಿರುವ ಜೋಡಿಯ ಸುದ್ದಿ, ಫೋಟೋಗಳು ಸಾಕಷ್ಟು ನ್ಯೂಸ್‌ಪ್ರಿಂಟ್‌ ಹಾಗೂ ಟೆಲಿ ಟೈಮ್‌ನ್ನು ತಿಂದಿದೆ. ಇಂತಹ ಸಂದರ್ಭದಲ್ಲಿ ಸಂಬಂಧ ಅಧಿಕೃತತೆಯ ದಾರಿಯಲ್ಲಿ ಮದುವೆಯ ಹತ್ತಿರದಲ್ಲಿದೆ ಎಂಬ ಅರ್ಥವನ್ನೂ ಈ ಸೆಟ್ಲಿಂಗ್‌  ಡೌನ್‌ ಎಂಬ ಮಾತು ಪ್ರತಿಪಾದಿಸುತ್ತದೆ. ಸರಿಯಾಗಿ ಇದೇ ಸಮಯಕ್ಕೆ ವಿರಾಟ್‌ ಕೊಹ್ಲಿ ಕ್ರಿಕೆಟ್‌ನಿಂದ ಸುಸ್ತಾಗಿರುವ ಮಾತನ್ನು ಮೊತ್ತಮೊದಲ ಬಾರಿಗೆ ಹೇಳಿದ್ದಾರೆ.

ನಾನು ರೋಬೋಟ್‌ ಅಲ್ಲ!
ಶ್ರೀಲಂಕಾ ಎದುರಿನ ಮೂರು ಟೆಸ್ಟ್‌ ಸರಣಿ ಆರಂಭವಾದ ನಂತರದ ದಿನದಲ್ಲಿ ನಾನು ರೋಬೋಟ್‌ ಅಲ್ಲ ಎಂದು ಗಟ್ಟಿಯಾಗಿಯೇ ಹೇಳುವ ಮೂಲಕ ಕೊಹ್ಲಿ ಬಿಸಿಸಿಐಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ನಾನೇನು ರೋಬೋಟ್‌ ಅಲ್ಲ ಎಂಬ ಮಾತಿನ ಅರ್ಥ ಇದೇ, ನನಗೀಗ ಕ್ರಿಕೆಟ್‌ನಿಂದ ವಿಶ್ರಾಂತಿ ಬೇಕಾಗಿದೆ! ಭಾರತ ಕಳೆದ ವರ್ಷದಿಂದ ಆಡಿದ ಕ್ರಿಕೆಟ್‌ ಗಮನಿಸಿದರೆ ಈ ಮಾತಿನಲ್ಲಿರುವ ತಥ್ಯ ಅರಿವಿಗೆ ಬರುತ್ತದೆ. ಕಳೆದ ವರ್ಷದ 3 ಟೆಸ್ಟ್‌ ಹಾಗೂ 5 ಏಕದಿನಗಳ ನ್ಯೂಜಿಲೆಂಡ್‌ ಪ್ರವಾಸದ ನಂತರ ಇಂಗ್ಲೆಂಡ್‌ ವಿರುದ್ಧ ಭಾರತ 5 ಟೆಸ್ಟ್‌ಗಳ ಪರಿಪೂರ್ಣ ಟೆಸ್ಟ್‌ ಸರಣಿಯನ್ನು ಆಡಿತ್ತು. ಕ್ರಿಸ್‌ಮಸ್‌ ರಜೆ ಕಳೆದು ಮತ್ತೆ ಇದೇ ತಂಡದ ಜೊತೆ ಏಕದಿನ ಸರಣಿಗೆ ಮುಂದಾಗಿತ್ತು. ವಿಶ್ರಾಂತಿಗೆ ಅವಕಾಶವಿದ್ದ ಸಂದರ್ಭದಲ್ಲಿ ಬಿಸಿಸಿಐ ಬಾಂಗ್ಲಾ ವಿರುದ್ಧ ಏಕೈಕ ಟೆಸ್ಟ್‌ನ ಸರಣಿಯನ್ನು ದಿಢೀರನೆ ಆಯೋಜಿಸಿಬಿಟ್ಟಿತು. ಹಿಂದೆಯೇ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್‌ಗಳ ಸರಣಿ, ಬೆನ್ನಿಗೆ ಎರಡು ತಿಂಗಳ ಸತತ ಸಂಚಾರದ ಇಂಡಿಯನ್‌ ಪ್ರೀಮಿಯರ್‌ ಲೀಗ್‌, ಅಬ್ಬಬ್ಟಾ!

ಆನಂತರ ವಿರಾಮದ ಪ್ರಶ್ನೆಯೇ ಇಲ್ಲದೆ ತಂಡ ಚಾಂಪಿಯನ್ಸ್‌ ಟ್ರೋಫಿ ಆಡಲು ಇಂಗ್ಲೆಂಡ್‌ಗೆ ತೆರಳಿತು. ಅಲ್ಲಿಂದಲೇ ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಹಾರಿ ಐದು ಏಕದಿನ ಹಾಗೂ ಒಂದು ಟಿ20 ಪಂದ್ಯವಾಡಿದ್ದೂ ಆಯ್ತು. ಮುಂದಿನದ್ದು ಶ್ರೀಲಂಕಾ ಪ್ರವಾಸ, 3 ಟೆಸ್ಟ್‌, 5 ಒನ್‌ಡೇ ಸೀಮಿತ ಓವರ್‌ ಪಂದ್ಯಗಳು ಮತ್ತು ಮೂರು ಟಿ20, ಇಷ್ಟಾದಮೇಲೂ ದಣಿದಿರುವ ಆಟಗಾರರಿಗೆ ವಿಶ್ರಾಂತಿ ನೀಡುವ ಯೋಚನೆಯೇ ಬಿಸಿಸಿಐಗೆ ಬರಲಿಲ್ಲ.  ಮತ್ತೆ ಕಾಂಗರೂಗಳ ಎದುರು 5 ಏಕದಿನ ಮತ್ತು 3 ಟಿ20. ಅಷ್ಟೊತ್ತಿಗೆ ಬಂದ ನ್ಯೂಜಿಲೆಂಡ್‌ ಎದುರು 3 ಏಕದಿನ ಹಾಗೂ 3 ಟಿ20 ಪಂದ್ಯಗಳು ನಡೆದವು. ಇಲ್ಲಿಗೂ ಕೊನೆಯಾಗದೆ ಮತ್ತದೇ ಶ್ರೀಲಂಕಾ ತಂಡದ ಜೊತೆ ಮೂರು ಟೆಸ್ಟ್‌, ಮೂರು ಏಕದಿನ ಹಾಗೂ 3 ಟಿ20ಯನ್ನು ಈ ನವೆಂಬರ್‌ ಡಿಸೆಂಬರ್‌ನಲ್ಲಿ ಆಡಬೇಕಾಗಿದೆ. ಇಷ್ಟೆಲ್ಲ ಕ್ರಿಕೆಟ್‌ ನಂತರ ಸುಸ್ತು ಎನ್ನುವಂತಿಲ್ಲ, ತಂಡ ಅತ್ಯಂತ ಕಠಿಣವಾದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಗಂಟುಮೂಟೆಯನ್ನು ಕಟ್ಟಿಕೊಂಡು ತೆರಳಬೇಕು!

ಈ ಅವಧಿಯ ಎರಡು ಸಂದರ್ಭದಲ್ಲಿ ವಿರಾಟ್‌ ಅತಿಯಾದ ಕ್ರಿಕೆಟ್‌ ಬಗ್ಗೆ ಧ್ವನಿಯೆತ್ತಿದ್ದು. ಎಲ್ಲೋ ಒಂದು ಕಡೆ ನ್ಯೂಜಿಲೆಂಡ್‌ ಜೊತೆ ಆಡುತ್ತಿದ್ದಾಗಲೇ ನಾನು ಡಿಸೆಂಬರ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ಅವರು ಬಿಸಿಸಿಐಗೆ ತಿಳಿಸಿದ್ದರು. ಅಂದರೆ ಶ್ರೀಲಂಕಾ ಎದುರಿನ ಟೆಸ್ಟ್‌ ಸರಣಿಯ ಕಡೆಯ ಪಂದ್ಯ ಹಾಗೂ ಉಳಿದ ಮೂರು ಏಕದಿನ, ಮೂರು ಟಿ20ಯಿಂದ ತಮ್ಮನ್ನು ಕೈಬಿಡಲು ಅವರು ಪರೋಕ್ಷ ವಿನಂತಿ ಸಲ್ಲಿಸಿದ್ದರು. ಕೊಹ್ಲಿ ಭಾರತದ ನಾಯಕ, ಟಾಪ್‌ ಆಟಗಾರ ಮತ್ತು ಬಾಕ್ಸ್‌ ಆಫೀಸ್‌ ಆಕರ್ಷಣೆ. ಅವರಿಲ್ಲ ಎಂದರೆ ಸರಣಿ ನಿರುತ್ತೇಜಕ ಎನ್ನಿಸಿಕೊಳ್ಳುತ್ತದೆ. ಭಾರತದ ಜಯದ ತಕ್ಕಡಿಯ ತೂಕ ಹೆಚ್ಚುವುದು ಕೊಹ್ಲಿ ಇದ್ದರೆ ಆತ್ರ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಕೊಹ್ಲಿಗೆ ವಿರಾಮ ಕೊಡಲು ಹಿಂದೆಮುಂದೆ ನೋಡುತ್ತಿರುವಂತಿದೆ. ಆಟಗಾರರ ರೊಟೇಷನ್‌ ಮಾದರಿಯ ಬಗ್ಗೆ ಪ್ರಶ್ನೆ ನಿಮಗೆ ಅನ್ವಯಿಸುವುದಿಲ್ಲವೇ ಎಂಬ ಪ್ರಶ್ನೆಯೇ ಕೊಹ್ಲಿ, ನಾನೇನು ರೋಬೋಟ್‌ ಅಲ್ಲ ಎಂದು ಗುಡುಗಲು ಕಾರಣವಾಗಿದೆ.

ಎಲ್ಲರಿಗೂ ಸಿಕ್ಕ ವಿಶ್ರಾಂತಿ ಕೊಹ್ಲಿಗಿಲ್ಲ!
ಇಂದು ಭಾರತದ ಮೀಸಲು ಆಟಗಾರರ ಸಾಲು ಉದ್ದವಾಗಿರುವುದರಿಂದ ಆಟಗಾರರಿಗೆ ವಿಶ್ರಾಂತಿಯನ್ನು ಸತತ ಪಂದ್ಯಗಳ ನಡುವೆಯೂ ಕೊಡಬಹುದು. ಟೆಸ್ಟ್‌ ಆಡದ ಧೋನಿ, ಏಕದಿನಕ್ಕೆ ಆಹ್ವಾನ ಪಡೆಯದ ಚೇತೇಶ್ವರ ಪೂಜಾರ ತರಹದ ಆಟಗಾರರಿಗೆ ಅವರಿಗೆ ಬೇಕಾದ ವಿಶ್ರಾಂತಿ ಸಿಗುತ್ತಿದೆ. ಫಾರಂ ಕೈಕೊಟ್ಟಿದ್ದರಿಂದ ಆರ್‌.ಅಶ್ವಿ‌ನ್‌, ರವೀಂದ್ರ ಜಡೇಜಾ ಮಾದರಿಯ ಆಟಗಾರರಿಗೂ ಮನೆಯಲ್ಲಿರುವ ಅವಕಾಶ ಸಿಕ್ಕಿದೆ. ಹಾರ್ದಿಕ ಪಾಂಡ್ಯ, ರೋಹಿತ್‌ ಶರ್ಮ, ಶಿಖರ್‌ ಧವನ್‌, ಭುವನೇಶ್ವರ ಕುಮಾರ್‌ಗೆ ಅಲ್ಲಲ್ಲಿ ಆರಾಮ ಕೊಡಲಾಗಿದೆ. ವಾಸ್ತವವಾಗಿ, ಮೂರು ಮಾದರಿಯ ಕ್ರಿಕೆಟ್‌ ಆಡುವ, ಭಾರತದ ಪ್ರಮುಖ ಆಟಗಾರ ಎನ್ನಿಸಿಕೊಂಡಿರುವ ವಿರಾಟ್‌ಗೆ ಮಾತ್ರ ಬದಲಿ ವ್ಯವಸ್ಥೆ ಸಿಕ್ಕಿಲ್ಲ!

ಈ ವಿಪರೀತ ಕ್ರಿಕೆಟ್‌ನ ಆಕ್ಷೇಪ ಇತ್ತೀಚಿನದಲ್ಲ. ಹಿಂದೆ ಆಟಗಾರರು ತಮ್ಮ ಬದುಕಿನ ಆದಾಯ ಮೂಲ ಕಂಡುಕೊಳ್ಳಲು ರಾಷ್ಟ್ರ ತಂಡದ ಕೆಲಸ ಇಲ್ಲದ ಸಂದರ್ಭದಲ್ಲಿ ಪ್ರದರ್ಶನ ಪಂದ್ಯಗಳು, ಇಂಗ್ಲೆಂಡ್‌ನ‌ ಕೌಂಟಿ ಕ್ರಿಕೆಟ್‌ ಮೊದಲಾದವುಗಳಲ್ಲಿ ಭಾಗವಹಿಸುತ್ತಿದ್ದರು. ಕೆಲವೇ ಕೆಲವು ವರ್ಷಗಳ ಕ್ರಿಕೆಟ್‌ ಕೆರಿಯರ್‌ನಲ್ಲಿ ಭವಿಷ್ಯದ ತುತ್ತಿನ ಚಿಂತೆ ಇರುತ್ತದಾದ್ದರಿಂದ ಇಂತಹ ಒಪ್ಪಂದಗಳು ಅನಿವಾರ್ಯವೂ ಆಗಿರುತ್ತಿತ್ತು. ಆದರೆ ಈ ಒಡಂಬಡಿಕೆಗಳು ಆಟಗಾರರದೇ ಆಯ್ಕೆಯಾಗಿರುತ್ತದಾದ್ದರಿಂದ ಅವರು ಒಪ್ಪುವ, ತಲೆ ಅಡ್ಡಡ್ಡ ಆಡಿಸುವ ಸ್ವಾತಂತ್ರÂವನ್ನೂ ಹೊಂದಿರುತ್ತಿದ್ದರು. ಇಂದಿನ ಬಿಸಿಸಿಐ ಏರ್ಪಡಿಸಿದ ಪಂದ್ಯಗಳು ಮತ್ತು ಐಪಿಎಲ್‌ನಲ್ಲಿ ಅವರ ಆಡುವುದಿಲ್ಲ ಎಂದು ಧ್ವನಿಗೆ ಆಸ್ಪದವಿಲ್ಲ. ವಿನಂತಿ ಮಾಡಿಕೊಳ್ಳಬಹುದು ಮತ್ತು ಅದನ್ನು ಬಿಸಿಸಿಐ ಒಪ್ಪಿದರೆ ಮಾತ್ರ ಜಾರಿ. ಒಂದು, ಎರಡು ಪಂದ್ಯಕ್ಕೆ ಮಾತ್ರ ಕೊಡುವ ವಿಶ್ರಾಂತಿ ಸತತ ಆಟ, ಪ್ರವಾಸ, ಭಿನ್ನ ಟೈಂ ಝೊàನ್‌, ಆಹಾರ, ವಾತಾವರಣಗಳಿಗೆ ಹೊಂದಿಕೊಳ್ಳುವ ತ್ರಾಸಕ್ಕೆ ಸಮಾಧಾನ ನೀಡುವುದಿಲ್ಲ. ಆಟಗಾರರಿಗೆ ಒಂದಿಡೀ ಪ್ರವಾಸದಿಂದ ವಿಶ್ರಾಂತಿ ಕೊಟ್ಟರೆ ಮಾತ್ರ ಒಂಚೂರು ನೆಮ್ಮದಿ. ತಮ್ಮ ಬದಲು ತಂಡದಲ್ಲಿ ಸ್ಥಾನ ಪಡೆದವ ಅತ್ಯುತ್ತಮ ಆಟ ತೋರಿದರೆ ಆ ನೆಮ್ಮದಿಗೂ ಚ್ಯುತಿ ಬಂದೆರಗುತ್ತದೆ!

ಚಾನೆಲ್‌ ರೈಟ್ಸ್‌ ಒತ್ತಡ
ಕೊಹ್ಲಿ ಎಗರಾಡಲಿ, ಆಟಗಾರರು ಗಾಯಾಳು ಸಮಸ್ಯೆಯಿಂದ ಬಳಲಲಿ, ಆ ಕುರಿತು ಕಾಟಾಚಾರಕ್ಕೂ ಬಿಸಿಸಿಐ ಚಿಂತಿಸಿದಂತಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ತಂಡ ಮೂರು ಟೆಸ್ಟ್‌, ಆರು ಏಕದಿನ ಹಾಗೂ ಮೂರು ಟಿ20 ಪಂದ್ಯವನ್ನಾಡಲಿದೆ. ಈ ಪ್ರವಾಸ ಕೊನೆಗೊಳ್ಳುವುದು ಫೆ.24ಕ್ಕೆ. ಮಾರ್ಚ್‌ನಲ್ಲಿ ಆಟಗಾರರಿಗೆ ವಿಶ್ರಾಂತಿ ಸಿಕ್ಕುತ್ತದೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಬಿಸಿಸಿಐ ಚಿಕ್ಕ ಪ್ರವಾಸದ ಅವಕಾಶ ಹುಡುಕುತ್ತಿರಬಹುದು! ಏಪ್ರಿಲ್‌ ಮೇನಲ್ಲಿ ಐಪಿಎಲ್‌ನ ಎರಡು ತಿಂಗಳು, 76 ಪಂದ್ಯಗಳ ಭರಾಟೆ. ಅದರ ನಂತರ ಭಾರತ ಐದು ಟೆಸ್ಟ್‌ಗಳ ಪೂರ್ಣಾವಧಿ ಪ್ರವಾಸಕ್ಕೆ ಇಂಗ್ಲೆಂಡ್‌ಗೆ ತೆರಳಲಿದೆ. ಆ ನಂತರ ಹೊಸ ಭಾರತೀಯ ಕ್ರಿಕೆಟ್‌ ಋತು ಆರಂಭವಾಗುತ್ತದೆ. ಇನ್ನೇನಲ್ಲವಾದರೂ ದುಬಾರಿ ಟಿವಿ ನೇರಪ್ರಸಾರದ ಹಕ್ಕು ಪಡೆದಿರುವ ಕ್ರೀಡಾ ಚಾನೆಲ್‌ಗ‌ಳ ಲೈವ್‌ ಘಂಟೆಗಳ ಷರತ್ತು ಪೂರೈಸಲಾದರೂ ಭಾರತೀಯ ತಂಡ ಅಂಕಣದಲ್ಲಿ ಆಡುತ್ತಿರಲೇಬೇಕು.

1979-80ರಲ್ಲಿ ಇದೇ ರೀತಿಯ ದೀರ್ಘ‌ ಸ್ವದೇಶಿ ಋತುವಿನ ನಂತರ ಭಾರತೀಯ ತಂಡದ ವೆಸ್ಟ್‌ಇಂಡೀಸ್‌ ಪ್ರವಾಸವನ್ನು ಬಿಸಿಸಿಐ ಆಯೋಜಿಸಿತು. ಅವತ್ತಿನ ಭಾರತದ ನಾಯಕ ಸುನಿಲ್‌ ಗವಾಸ್ಕರ್‌ ಕ್ರಿಕೆಟ್‌ ಸುಸ್ತಿನ ಕಾರಣ ಪ್ರವಾಸಕ್ಕೆ ತೆರಳಲು ನಿರಾಕರಿಸಿದರು. ಬಿಸಿಸಿಐ ಒತ್ತಡಕ್ಕೂ ಬಗ್ಗದೆ ಸನ್ನಿ ದೃಢವಾಗಿ ನಿಂತರು. ಅವರಿಲ್ಲದ ಪ್ರವಾಸ ಆಕರ್ಷಕ ಅಲ್ಲ ಎಂಬ ಕಾರಣಕ್ಕೆ ಆತಿಥೇಯರೂ ಆಸಕ್ತಿ ಕಳೆದುಕೊಂಡ ಕಾರಣಕ್ಕೆ ಪ್ರವಾಸವೇ ರದ್ದಾಯಿತು. ಗೊತ್ತಿಲ್ಲ, ಕೊಹ್ಲಿ ಈಗ ಅದೇ ಸ್ಥಿತಿಯಲ್ಲಿದ್ದಾರೆ. ಅವರಿಗೆ ಶ್ರೀಲಂಕಾ ಎದುರಿನ ಟೆಸ್ಟ್‌ ಸರಣಿಯ ನಂತರ ವಿಶ್ರಾಂತಿ ಕೊಡದಿದ್ದರೆ “ಸೆಟ್ಲಿಂಗ್‌  ಡೌನ್‌ ಕಷ್ಟ ಕಷ್ಟ!

ಮಾ.ವೆಂ.ಸ.ಪ್ರಸಾದ್‌

ಟಾಪ್ ನ್ಯೂಸ್

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

shindhe

Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ

IPL 2024: Pant has the ambition to become India’s cricket captain: Parth Jindal

IPL 2025: ಭಾರತ ಕ್ರಿಕೆಟ್‌ ನಾಯಕನಾಗುವ ಉದ್ದೇಶ ಪಂತ್‌ ಗಿದೆ: ಜಿಂದಾಲ್‌

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

8-I-phone

Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

16-cm

Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ

15-ccb

Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್‌ ಸಾಧ್ಯತೆ

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.