ಈ ಕಷ್ಟಕಾಲದಲ್ಲಿ ಮಿತವ್ಯಯ ಸಾಧಿಸುವುದು ಹೇಗೆ?
Team Udayavani, May 15, 2021, 1:14 PM IST
ನಾಳೆ ಎಂದೂ ನಾವು ಎಣಿಸಿದಂತೆ ಇರುವುದಿಲ್ಲ. ನಾಳೆ ಚೆನ್ನಾಗಿರುತ್ತದೆ ಮತ್ತು ಅಚ್ಚೇ ದಿನ ಬರಬಹುದು ಎನ್ನುವ ಆಶಾಭಾವನೆ ಇದ್ದರೂ, ಬಹುತೇಕ ಸಂದರ್ಭದಲ್ಲಿ ನಮ್ಮ ಲೆಕ್ಕಾಚಾರ ಸುಳ್ಳಾಗುವುದುಂಟು.
ಹಣದುಬ್ಬರ, ಧುತ್ತೆಂದು ಎರಗಿಬರುವ ಅನಿರೀಕ್ಷಿತ ಖರ್ಚುಗಳು, ಇದ್ದಕ್ಕಿದ್ದಂತೆ ಜೊತೆಯಾಗುವ ರೋಗ ರುಜಿನಗಳು, ಕೋವಿಡ್‌ನಂತಹ ಪರಿಸ್ಥಿತಿ, ಎಂಥ ಸಂದರ್ಭದಲ್ಲೂ ಅತ್ಯಗತ್ಯ ಅನ್ನಿಸುವ ಮಕ್ಕಳ ವಿದ್ಯಾಭ್ಯಾಸ, ವಾಹನ ಖರೀದಿ, ಮಕ್ಕಳ ಮದುವೆ ಮತ್ತು ತಲೆಯ ಮೇಲೊಂದು ಸೂರು… ಇವೆಲ್ಲಾ ಜವಾಬ್ದಾರಿಯನ್ನು ನಿಭಾಯಿಸಲು ಮಿತವ್ಯಯ ಸಾಧಿಸಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.
ಲಾಕ್‌ಡೌನ್ ಕಾರಣದಿಂದ ಸಂಪಾದನೆಗೈ ಕಲ್ಲು ಬಿದ್ದಿರುವ ಈ ಕಷ್ಟಕಾಲದಲ್ಲಿ ಆದಷ್ಟೂ ಕಡಿಮೆ ಖರ್ಚಿನಲ್ಲಿ ಬದುಕು ಸಾಗಿಸಬೇಕು. ಜೊತೆಗೆ,ದಿನನಿತ್ಯದ ಬದುಕಿನಲ್ಲಿ ಮಿತವ್ಯಯವನ್ನೂ ಸಾಧಿಸ ಬೇಕು. ಅದು ಹೇಗೆ ಹೇಗೆ ಎಂಬುದಕ್ಕೆ ಇಲ್ಲಿವೆ ನೋಡಿ ಮಾರ್ಗದರ್ಷಿ ಸೂತ್ರಗಳು…
- ಅಗತ್ಯವಿರುವ ವಸ್ತುಗಳನ್ನಷ್ಟೇ ಖರೀದಿಸುವುದು. ಉತ್ತಮ ಗುಣಮಟ್ಟದ ವಸ್ತುಗಳು ಕೆಲವೊಮ್ಮೆ ರಿಯಾ ಯಿತಿ ದರದಲ್ಲಿ ಸಿಗುತ್ತವೆ ಅಂಥ ಸಂದರ್ಭದಲ್ಲಿಯೇ ವಸ್ತುಗಳನ್ನು ಖರೀದಿಸಿ ಹಣ ಉಳಿಸುವುದು.
- ಕ್ರೆಡಿಟ್ ಕಾರ್ಡ್‌ನಲ್ಲಿ ವ್ಯವಹಾರ ಮಾಡುವಾಗ ಬಿಲ್ಲಿಂಗ್ ದಿನಾಂಕದ ನಂತರ ಮಾಡಿದರೆ, ಮುಂದಿನ ಬಿಲ್ಲಿಂಗ್ ತಾರೀಖೀನವರೆಗೆ ಸಾಲ ದೊರಕುತ್ತದೆ. ಈ ಸೌಲಭ್ಯವನ್ನು ಚಾಣಾಕ್ಷತನದಿಂದ ಬಳಸಿಕೊಂಡು ಹಣ ಉಳಿಸುವುದು.
- ಇಡೀ ಕುಟುಂಬಕ್ಕೆ ಅರೋಗ್ಯವಿಮೆ ಮಾಡಿಸುವುದು. ಆ ಮೂಲಕ ಮೆಡಿಕಲ್ ಚಿಕಿತ್ಸಾ ವೆಚ್ಚವನ್ನು ಉಳಿಸುವುದು.
- ಐದಕ್ಕಿಂತ ಹೆಚ್ಚು ಬಾರಿ ಎಟಿಎಂನಲ್ಲಿ ಹಣ ಪಡದರೆ ಶುಲ್ಕ ವಿಧಿಸುವುದರಿಂದ, ಎಟಿಎಂ ಬಳಕೆಯನ್ನು ಐದಕ್ಕೆ ಸೀಮಿತಗೊಳಿಸಿಕೊಳ್ಳುವುದು.
- ಯುಟಿಲಿಟಿ ಸೇವೆಗಳಿಗೆ ಬಿಲ್ ಪಾವತಿಸುವಾಗ ಬ್ಯಾಂಕು ಗಳಉಇಖ ಅಥವಾ ಪೇಮೆಂಟ್ ಬ್ಯಾಂಕುಗಳ ನಸೇವೆ ಪಡೆಯುವ ಮೂಲಕ ಹಣ ಉಳಿಸುವುದು.
- ಸಾಲ ಪಡೆಯಬೇಕಾಗಿ ಬಂದಾಗ ಕಡಿಮೆ ಬಡ್ಡಿ ಇರುವ ಸಾಲವನ್ನೇ ಪಡೆಯುವುದು. ಲೇವಾದೇವಿ ಮಾಡುವ ವರಿಂದ ದೂರ ಉಳಿಯುವುದು. ಹಾಗೆಯೇ, ಹೂಡಿಕೆ ಮಾಡುವಾಗ ದೀರ್ಘಾವಧಿಗೆ ಹೂಡಿಕೆ ಮಾಡಿ ಹೆಚ್ಚಿನ ಬಡ್ಡಿ ಪಡೆಯುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.