ಜುಟ್ಟು ಹಾವು ಗಿಡುಗ


Team Udayavani, Jan 6, 2018, 2:14 PM IST

6.jpg

ತಲೆ ಮೇಲೆ ಜುಟ್ಟಿರುವ ಈ ಗಿಡುಗ, ಹಾವುಗಳನ್ನು ಎತ್ತರದ ಮರಗಳಿಂದಲೇ ಗುರುತಿಸಿ, ಅವುಗಳನ್ನು ಬೆನ್ನಟ್ಟಿ, ಇಲ್ಲವೇ ಕೆಲವೊಮ್ಮೆ ನೆಲದ ಮೇಲೆ ಅಟ್ಟಿಸಿಕೊಂಡು ಹೋಗಿ ಬೇಟೆಯಾಡುತ್ತದೆ. Crested serpent Eagle-(Spilornis cheels) ಜುಟ್ಟು ಹಾವು ಗಿಡುಗ, ಮಧ್ಯಮ ಎತ್ತರದ ದಪ್ಪ ತಲೆಯ ಹಕ್ಕಿ. ಇದು ನೆಟ್ಟಗೆ ಕುಳಿತುಕೊಳ್ಳಬಲ್ಲದು. ಎಸಿಪಿóಡಿಯಾ ಕುಟುಂಬಕ್ಕೆ ಸೇರಿದ ಇದು, 55ರಿಂದ 75 ಸೆಂ.ಮೀ ಎತ್ತರ ಇರುತ್ತದೆ. ರೆಕ್ಕೆ ಬಿಚ್ಚಿ ಕುಳಿತಾಗ, ರೆಕ್ಕೆಗಳು ಇಂಗ್ಲಿಷ್‌ನ “ವಿ’ ಆಕಾರದಲ್ಲಿ ಕಾಣಿಸುತ್ತದೆ. ದಪ್ಪ ತಲೆಯ ಈ ಪಕ್ಷಿಯ ತಲೆಯ ಮೇಲೆ ಚಿಕ್ಕ ಚಿಕ್ಕ ಅಚ್ಚ ಕಂದು ಬಣ್ಣದ ಚುಕ್ಕೆ ಇರುತ್ತದೆ. ತಲೆ, ಮೈ ಮಾಸಲು ಬಿಳಿ ಬಣ್ಣ ಇದ್ದು, ಅದರ ಮೇಲೆ ಚಿಕ್ಕ, ಕಂದುಗಪ್ಪು ಬಣ್ಣದ ಚುಕ್ಕೆ ಇದೆ. ಬೆನ್ನಿನ ಮೇಲೆ ಅರ್ಧ ಚಂದ್ರಾಕಾರದಲ್ಲಿ ಕಂದುಗಪ್ಪು ಬಣ್ಣದ ಗುರುತಿದೆ. ಇದು ಮಚ್ಚೆ ಯಂತೆ ಕಾಣಿಸುತ್ತದೆ. ರೆಕ್ಕೆಯ ಅಡಿಭಾಗ ತಿಳಿ ಕಂದುಗೆಂಪು ಬಣ್ಣದಲ್ಲಿದೆ. 

ಹೆಸರಿನಲ್ಲಿ ಹಾವೇಕೆ?
ಈ ಪಕ್ಷಿಯು ಹೆಚ್ಚಾಗಿ ಹಾವು ಮತ್ತು ಸರೀಸೃಪ ವರ್ಗದ ಪ್ರಾಣಿಗಳನ್ನೇ ಹೆಚ್ಚಾಗಿ ತಿನ್ನುವುದರಿಂದ ಇದಕ್ಕೆ ” ಜುಟ್ಟು ಹಾವು ಗಿಡುಗ’ ಎಂಬ ಹೆಸರು ಬಂದಿದೆ. ಹಸಿರು ಹಾವು, ಓತಿಕ್ಯಾತ, ನಾಗರಹಾವು, ಹರಣೆ, ಲಾರ್ವಾ ಇದರ ಮುಖ್ಯ ಆಹಾರ. ಕೈಟ್‌ ಮತ್ತು ಈಗಲ್‌ ಎಂಬ ಎರಡು ಪ್ರಭೇದದ ಹಕ್ಕಿಗಳಿಗೂ “ಹದ್ದು’ ಎನ್ನುತ್ತಾರೆ. “ಕೈಟ್‌’ಗಳನ್ನು ಹದ್ದು ಎಂದೂ, “ಈಗಲ್‌’ಗಳನ್ನು ಗಿಡುಗ ಎಂದೂ ಬರೆದರೆ ಅವುಗಳ ನಿಖರತೆ ತಿಳಿಯುವುದರಿಂದ ಈಗಲ್‌ಗ‌ಳನ್ನು “ಗಿಡುಗ’ ಎಂದೇ ಬರೆಯಲಾಗಿದೆ. 

ದೇಹ ರಚನೆ
ಈ ಪಕ್ಷಿಗೆ ತುದಿಯಲ್ಲಿ ಕೊಕ್ಕೆಯಂತೆ ಬಗ್ಗಿರುವ, ದಪ್ಪ ಬೂದುಬಣ್ಣದ ಚುಂಚು (ಕೊಕ್ಕು)ಇದೆ. ಚುಂಚಿನ ಈ ರಚನೆ ಪ್ರಾಣಿಗಳನ್ನು ಬೇಟೆಯಾಡಿ, ಹರಿದು ತಿನ್ನಲು ಸಹಾಯಕ. ಹಾವುಗಳನ್ನು ಎತ್ತರದ ಮರಗಳಿಂದಲೇ ಗುರುತಿಸಿ, ಅವುಗಳನ್ನು ಬೆನ್ನಟ್ಟಿ, ಇಲ್ಲವೇ ಕೆಲವೊಮ್ಮೆ ನೆಲದಮೇಲೆ ಅಟ್ಟಿಸಿಕೊಂಡು ಹೋಗಿ ಬೇಟೆಯಾಡುತ್ತದೆ. ಹಳದಿಬಣ್ಣದ ಕಣ್ಣಿನ ಮಧ್ಯ ಇರುವ ಕಪ್ಪು ಚುಕ್ಕೆಯಂಥ ಪಾಪೆ ನೋಟದ ತೀಕ್ಷ್ಣತೆಯನ್ನು  ಹೆಚ್ಚಿಸಿದೆ. ಕುತ್ತಿಗೆಯ ಮೇಲ್ಭಾಗದಲ್ಲಿ ಗರಿಗಳ ಜುಟ್ಟು ಇದೆ. ಹಾವುಗಳನ್ನು ತಿನ್ನುವ ಜುಟ್ಟಿನ ಗಿಡುಗ ಎನ್ನಲು ಇದೇ ಕಾರಣ. ಇದರ ಜುಟ್ಟು ಕೂಗುವಾಗ ನೆಟ್ಟಗೆ ನಿಲ್ಲುತ್ತದೆ. 

 ಹಳದಿ ಬಣ್ಣದ ಬಲವಾದ ಕಾಲುಗಳಲ್ಲಿ ಮೂರು ಬೆರಳುಗಳಿದ್ದು, ಅದರ ತುದಿಯಲ್ಲಿ ಚೂಪಾದ ಉಗುರುಗಳಿವೆ. ಇದು ಹಾರುತ್ತಾ ಎರಗಿ ಬೇಟೆಯನ್ನು ಕಾಲಲ್ಲಿ ಹಿಡಿದು, ನಂತರ ಎತ್ತರದ ಮರದಮೇಲೆ ಕುಳಿತು, ಚುಂಚಿನಿಂದ ಚುಚ್ಚಿ ಬೇಟೆಯನ್ನು ತಿನ್ನುತ್ತದೆ. ವಿಷದ ಹಾವುಗಳನ್ನೂ ಇದು ಬೇಟೆಯಾಡಿ ತಿನ್ನುತ್ತದೆ. ಹಾವಿನ ವಿಷ ಈ ಪಕ್ಷಿಗೆ ಹಾನಿಕಾರಕವೇ, ಅಲ್ಲವೇ ? ವಿಷದ ಹಾವನ್ನು ತಿಂದರೂ ಇದಕ್ಕೆ ಸಣ್ಣದೊಂದು ತೊಂದರೆಯೂ ಆಗುವುದಿಲ್ಲವೇ? ಎಂಬುದನ್ನು ಸಂಶೋಧನೆಗಳಿಂದ ತಿಳಿಯಬೇಕಿದೆ.

ಜುಟ್ಟು ಹಾವು ಗಿಡುಗ ಪಕ್ಷಿಗಳಲ್ಲಿ ಗಂಡು- ಹೆಣ್ಣು ನೋಡಲು ಒಂದೇ ರೀತಿ ಇರುತ್ತದೆ. ಮರಿಗಳು ಬಿಳಿಯಾಗಿರುತ್ತವೆ. ಪ್ರೌಢಾವಸ್ಥೆ ತಲುಪಿದ ಮೇಲೆ ತಲೆ, ಮೈ, ಗರಿಗಳ ಮೇಲೆ ಕಂದುಗಪ್ಪು ಬಣ್ಣದ ಚುಕ್ಕೆ ಮತ್ತು ಗೆರೆಗಳು ಮೂಡುತ್ತವೆ. ಗಂಡು ಹೆಣ್ಣು ಎರಡೂ ಸಾಮಾನ್ಯವಾಗಿ ಒಂದೇ ರೀತಿ ಕೂಗುತ್ತವೆ. ಈ ಪ್ರಭೇದದಲ್ಲಿ 60 ಕ್ಕಿಂತ ಹೆಚು ಉಪಜಾತಿಗಳಿವೆ. 

ಹಿಮಾಲಯ ಪ್ರದೇಶ, ನೇಪಾಳ, ಕರ್ನಾಟಕ, ತಮಿಳುನಾಡು, ಅಂಡಮಾನ್‌- ನಿಕೋಬಾರ್‌, ಶ್ರೀಲಂಕಾ, ಕಬಿನಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಈ ಪಕ್ಷಿಗಳು ಕಂಡು ಬರುತ್ತವೆ. 

 ಬೇಸಿಗೆ ಆರಂಭವಾಗುತ್ತಿದ್ದಂತೆ ಇವು ಮರಿ ಮಾಡಲು ಸ್ಥಳದ ಆಯ್ಕೆ ಮಾಡುತ್ತವೆ. ನೀರಿನ ಸಮೀಪ ಎತ್ತರದ ಮರಗಳಲ್ಲಿ ಕಟ್ಟಿಗೆ ತುಂಡು ಸೇರಿಸಿ, ಗೂಡು ಕಟ್ಟುತ್ತವೆ. ಅದರ ಮೇಲೆ ಹಸಿರೆಲೆ ಹರಡಿ ಒಂದು ಅಥವಾ ಎರಡು ಮೊಟ್ಟೆ ಇಡುತ್ತವೆ. ಮೊಟ್ಟೆ ಕಾರಣಾಂತರಗಳಿಂದ ಮರಿಯಾಗದಿದ್ದಾಗ 2 ಅಥವಾ 7 ವಾರದಲ್ಲಿ ಪುನಃ ಮೊಟ್ಟೆ ಇಡುತ್ತವೆ. ಗಂಡು ಹೆಣ್ಣು ಸೇರಿ ಗೂಡು ಕಟ್ಟುತ್ತವೆ. ಮೊಟ್ಟೆ ಮರಿಯಾಗಲು 41 ದಿನ ಬೇಕು. 

ಪಿ. ವಿ. ಭಟ್‌ ಮೂರೂರು

ಟಾಪ್ ನ್ಯೂಸ್

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Kundapura: ಬಟ್ಟೆ ವ್ಯಾಪಾರಿ ನಾಪತ್ತೆ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

1-y-1

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.