ಡಂಬಳದ ದೊಡ್ಡಬಸಪ್ಪ 


Team Udayavani, Apr 1, 2017, 4:00 AM IST

6.jpg

ಕರ್ನಾಟಕದ ಗದಗದ ಮುಂಡರಗಿ ತಾಲೂಕಿನ ಒಂದು ಪಾವನ ಕ್ಷೇತ್ರವೇ ಡಂಬಳ  ಗ್ರಾಮ.  ಇಲ್ಲಿ  ಪ್ರಾಚೀನ ದೊಡ್ಡಬಸಪ್ಪ   ಹಾಗೂ ಸೋಮೇಶ್ವರ ದೇವಾಲಯಗಳು ಪ್ರವಾಸಿಗರ ಗಮನಸೆಳೆಯುತ್ತಿವೆ.  ಇಲ್ಲಿ ಬಂದು ನಿಂತವರು ಇದರ ಸೌಂದರ್ಯಕ್ಕೆ ಮರುಳಾಗಿ ಮೆಚ್ಚುಗೆಯಿಂದ ತಲೆ ಆಡಿಸಲೇಬೇಕು. ಇದರ ಒಂದೊಂದು ಸೂಕ್ಷ್ಮತೆಗಳನ್ನು ನೋಡಿ ಹೊಗಳಲೇಬೇಕು. ದೇವಾಲಯದ ವಿನ್ಯಾಸ ಹಾಗೂ ನಿರ್ಮಾಣದ ಕುರಿತು ಕೊಂಡಾಡಲೇಬೇಕು. ಈ ದೊಡ್ಡಬಸಪ್ಪ ದೇವಾಲಯವೇ ಹಾಗಿದೆ. 

ಈ ಐತಿಹಾಸಿಕ ದೇವಾಲಯವನ್ನು ಕಣ್ಣಾರೆ ಕಾಣುವವರು ಇದರ ಅಂದ ಚೆಂದಕ್ಕೆ ಮಾರು ಹೋಗದೆ ಇರಲಾರರು. ಇದರ ಪ್ರಾಚೀನತೆಗೆ ಮನಸೋಲಲೇಬೇಕು. ಹನ್ನೆರಡನೆಯ ಶತಮಾನದಲ್ಲಿ ಚಾಲುಕ್ಯ ವಾಸ್ತು ಶೈಲಿಯಲ್ಲಿ ನಿರ್ಮಾಣವಾದ ದೇವಾಲಯ ಇದಾಗಿದ್ದು, ದೊಡ್ಡಬಸಪ್ಪ ದೇವಾಲಯ ಎಂದೇ  ಪ್ರಸಿದ್ಧಿಗಳಿಸಿದೆ.   ಸಂಪೂರ್ಣವಾಗಿ  ಕಲ್ಲಿನಿಂದಲೇ ನಿರ್ಮಾಣ ಮಾಡಲಾದ ಈ ದೇವಸ್ಥಾನದ ಮುಖ್ಯ ದೇವರು ಶಿವ.  ಇಲ್ಲಿ  ಶಿವಲಿಂಗದ ರೂಪದಲ್ಲಿ ಗರ್ಭಗುಡಿಯಲ್ಲಿ ನೆಲೆಸಿ¨ªಾನೆ. ಇನ್ನು  ಈ ದೇವಾಲಯ ರಚನೆಯನ್ನು ನೋಡಿದಾಗ ಒಂದು ಕ್ಷಣ ರೋಮಾಂಚನ ಉಂಟಾಗುತ್ತದೆ. ಏಕೆಂದರೆ 24 ಕೋನಗಳುಳ್ಳ ನಕ್ಷತ್ರಾಕಾರದಲ್ಲಿ ಕರಾರುವಕ್ಕಾಗಿ ಈ ದೇವಾಲಯ ನಿರ್ಮಾಣ ಮಾಡಿರುವುದನ್ನು ನೋಡಿದಾಗ ಅಂದಿನ ಪ್ರಾಚೀನ ವಿನ್ಯಾಸಗಾರರ  ಕಲಾ ಕೌಶಲ್ಯವನ್ನು ಮೆಚ್ಚಲೇಬೇಕು. ಈ ದೇವಸ್ಥಾನದಲ್ಲಿ ಅಂತರಾಳ, ಮುಖಮಂಟಪ ಹಾಗೂ ಗರ್ಭಗುಡಿಗಳಿರುವುದನ್ನು ಕಾಣಬಹುದಾಗಿದೆ. ಇದರ ವಿಶೇಷತೆ ಎಂದರೆ ದೇವಾಲಯ ಗೋಪುರವು ನಕ್ಷತ್ರಾಕಾರದಲ್ಲಿದ್ದರೂ, ವೃತ್ತಾಕಾರದಲ್ಲಿ ರಚಿತವಾಗಿರುವುದು ಹಾಗೂ 24 ಕೋನಗಳುಳ್ಳ ಶಿಖರವು ಮೇಲೇರುತ್ತ ವ್ಯಾಸದಲ್ಲಿ ಕಡಿಮೆಯಾಗುತ್ತಾ, ಆದರೆ 24 ಕೋನಗಳನ್ನೇ ಹೊಂದಿರುವ ತುದಿಯಲ್ಲಿ ಮೊನಚಾಗದೆ ಇರುವುದು. ಇದು ಚಾಲುಕ್ಯರ ವಾಸ್ತುಶಿಲ್ಪಕ್ಕೆ  ಕೈಗನ್ನಡಿ ಎಂತಲೇ ಹೇಳಬಹುದು.

ದೊಡ್ಡಬಸಪ್ಪನ ದೇವಾಲಯ ಒಂದೆಡೆಯಾದರೆ ಅದರ ಎದುರಿಗೆ ಸಾವಿರ ವರ್ಷಗಳ ಪ್ರಾಚೀನತೆಯನ್ನು ಹೊಂದಿರುವ ಸೋಮೇಶ್ವರನ ದೇವಾಲಯವು ಕಂಡುಬರುತ್ತದೆ. ಇಂದಿಗೂ ಕಾಲದ ಹೊಡೆತಕ್ಕೆ  ಸೆಟೆದು ಗಟ್ಟಿಯಾಗಿ ನೆಲೆಯೂರಿ ನಿಂತಿರುವುದನ್ನು ನೋಡಿದಾಗ ಮೈಮನದÇÉೆಲ್ಲ ಪುಳಕದ ಅನುಭವವಾಗುತ್ತದೆ. ಸೋಮೇಶ್ವರ ದೇವಸ್ಥಾನವು ದೊಡ್ಡಬಸಪ್ಪನ ದೇವಸ್ಥಾನಕ್ಕಿಂತ ಪುರಾತನವಾಗಿದೆಯಾದರೂ, ದೊಡ್ಡಬಸಪ್ಪನ ದೇವಸ್ಥಾನವು ಅತ್ಯಂತ ಆಕರ್ಷಕವಾದ ಕೆತ್ತನೆಗಳಿಂದ ಕೂಡಿದೆ. ಈ ದೇವಾಲಯದ ಮುಂದೆ ಕೆತ್ತಲಾಗಿರುವ ನಂದಿಯು ದೊಡ್ಡದಾಗಿರುವ ಕಾರಣ ಮೊದಲಿನಿಂದಲೂ ಇದನ್ನು ದೊಡ್ಡಬಸಪ್ಪ ದೇವಾಲಯ ಎಂದೆ ಕರೆಯುತ್ತಾರೆ. ಸ್ಥಳೀಯವಾಗಿ ನಂದಿಯನ್ನು ಬಸವಣ್ಣ, ಬಸಪ್ಪ ಮುಂತಾದ ಹೆಸರುಗಳಿಂದ ಕರೆಯುವುದು ಸಾಮಾನ್ಯ. ಅಲ್ಲದೆ ಈ ಪ್ರದೇಶದಲ್ಲಿ ಆಗಿನ ಸಮಯದಲ್ಲಿ ನಂದಿಯೇ ದೊಡ್ಡ ಆಕಾರ ಹೊಂದಿದ್ದರಿಂದ ಇದಕ್ಕೆ ದೊಡ್ಡಬಸಪ್ಪ ದೇವಾಲಯ ಎಂಬ ಹೆಸರು ಬಂದಿದೆ. ಇದು ಉತ್ತರ ಕರ್ನಾಟಕದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಅದ್ಭುತ ದೇವಾಲಯ.  ಇನ್ನು ಶಿವರಾತ್ರಿಯ ಸಮಯದಲ್ಲಿ ಈ ಎರಡೂ ದೇವಸ್ಥಾನಗಳಿಗೆ 

ಭಕ್ತ ಸಾಗರವೇ ಹರಿದು ಬಂದು ಶಿವನ ದರ್ಶನ ಪಡೆದು ಪುನೀತರಾಗುತ್ತಾರೆ.   ಡಂಬಳವು ಗದಗ ನಗರ ಕೆಂದ್ರದಿಂದ 20 ಕಿ.ಮೀಗಳಷ್ಟು ದೂರವಿದ್ದು, ತೆರಳಲು ಅನೇಕ ಬಸ್ಸುಗಳಿವೆ. 

ಆಶಾ. ಎಸ್‌. ಕುಲಕರ್ಣಿ

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.