ದತ್ತಾತ್ರೇಯ ಆರಾಧನೆ ಏಕೆ ಮಾಡುತ್ತಾರೆ ಗೊತ್ತಾ?
Team Udayavani, Aug 5, 2017, 3:42 PM IST
ಬ್ರಹ್ಮಜ್ಞಾನವನ್ನು ತರ್ಕದಿಂದಾಗಲೀ, ಚರ್ಚೆಯ ನೆಲೆಯಲ್ಲಾಗಲೀ ಪೂರ್ತಿ ತಿಳಿದುಕೊಂಡೆ ಎಂದು ಹೇಳಲಾಗದು. ಬ್ರಹ್ಮನನ್ನು ತಿಳಿದುಕೊಳ್ಳುವ ಮುನ್ನ ನಮ್ಮ,ನಮ್ಮ ಮಿತಿ ನಮಗೆ ಮೊತ್ತ ಮೊದಲಿನ ಗೋಡೆಯೊಂದನ್ನು ನಿರ್ಮಿಸುತ್ತದೆ.ಹಾಗಾದರೆ ಈ ಮಿತಿಗಳೇನು? ಅವು ನಮ್ಮ ಪಂಚೇಂದ್ರಿಯಗಳು. ಪಂಚೇಂದ್ರಿಯಗಳು ಧರ್ಮ, ಅರ್ಥ,ಕಾಮ ಮೋಕ್ಷಗಳನ್ನು ಸಂಪನ್ನ ಗೊಳಿಸಿಕೊಳ್ಳಲು ವಜ್ರಾಯುಧಗಳೇ ಆದರೂ ಕಣ್ಣು, ಮೂಗು, ನಾಲಿಗೆ, ಚರ್ಮಗಳು ಬ್ರಹ್ಮನನ್ನು ಹುಡುಕಿ ಹಿಡಿಯಲು ಹೊರಟಾಗ ತಂತಮ್ಮ ಕೆಲಸಗಳಲ್ಲಿ ಸೋಲುತ್ತವೆ. ಪಂಚೇದ್ರಿಯಗಳು ಪಂಚಭೂತಗಳನ್ನು ಸಮನಾಗಿ ಗುರುತಿಸಲಾರವು. ಮಣ್ಣನ್ನು ಗುರುತಿಸಬಹುದು. ಬೆಂಕಿಯನ್ನು ಗುರುತಿಸಬಹುದು. ನೀರನ್ನು ಗುರುತಿಸಬಹುದು. ಆದರೆ ಗಾಳಿಯನ್ನು ಕೇವಲ ಚರ್ಮ ಮಾತ್ರ ಗ್ರಹಿಸಬಲ್ಲದು. ಕಣ್ಣಿನ ಸೋಲು ಗಾಳಿಯನ್ನು ಗುರುತಿಸುವಾಗ ಅನಿವಾರ್ಯ.
ಗಾಳಿಯನ್ನು ಅದು ನೋಡಲಾರದು. ನಾಲಿಗೆ, ಕಿವಿ, ಮೂಗುಗಳ ಸೋಲು ಕಣ್ಣಿನ ಸೋಲಿಗಿಂತ ಜಾಸ್ತಿ. ಮಣ್ಣನ್ನು ನಾಲಿಗೆ ಗುರುತಿಸಲಾರದು. ಕಿವಿಯಾಗಿ ಗುರುತಿಸದು. ಹೀಗೆ ನಮ್ಮ ವಾದಸರಣಿ ನಮ್ಮ ಬಗ್ಗೆ ಪಂಚೇಂದ್ರಿಯಗಳ ಮೂಲಕ ಪಂಚಭೂತಗಳನ್ನು ಬಯಸುತ್ತದೆ. ಪಂಚಭೂತಗಳಿಗೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುವುದರತ್ತ ಪ್ರಯತ್ನ ಇದ್ದಂತಿದೆ. ಹೀಗಾಗಿ ಇಲ್ಲಿ ಎಲ್ಲವೂ ಒಂದು ನಾಣ್ಯದಂತೆ ವರ್ತಿಸುತ್ತ ಹೋಗುತ್ತದೆ. ದೇವರನ್ನು ತಿಳಿಯುವಾಗ ಒಂದು ಬಿಂದುವಿನ ಮೂಲಕವೇ ಅನಂತ ವ್ಯಾಪ್ತಿಯ ಬ್ರಹ್ಮನನ್ನು ಅರಿಯಬೇಕು. ಉದ್ದ ಅಗಲ ದಪ್ಪಗಳಿಲ್ಲದ ಸೂಕ್ಷ್ಮವೇ ಬಿಂದು ಎಂಬುದನ್ನು ನಾವು ಜಾnನದ ಪಾಠದಲ್ಲಿ ಬಾಯಿಪಾಠ ಮಾಡುತ್ತ ಬಂದಿದ್ದೇವೆ. ಹಾಗಾದರೆ ಬಿಂದು ಎಂದರೆ ಏನು? ಒಂದು ಕಲ್ಪನಾ ಅಸ್ತಿತ್ವ. ಆದರೆ ಕಲ್ಪನೆಯ ಆಸ್ತಿತ್ವದಲ್ಲಿ ಸಮಾವೇಶಗೊಳ್ಳುವ ಬಿಂದುವಿನ ಚಲನೆ ರೇಖೆಯಾಗುತ್ತದೆ. ಇದು ಕಣ್ಣಿಗೆ ಕ್ಷೀಣವಾಗಿ ಕಾಣಿಸುತ್ತದೆ.
ದತ್ತಾತ್ರೇಯನು ಶಕ್ತಿ ಕೊಡುವ ಬಗೆ
ಒಂದು ಕತೆ ಇದೆ. ಮಾಹಿಷ್ಮತಿಯ ಅರಸು ಕೃತವೀರ್ಯನ ಮಗ ಕಾರ್ತವೀರ್ಯಾರ್ಜುನ. ಹೈಹಯಸ ರಾಜ್ಯದ ಅಧಿಪತಿ. ಮಧ್ಯ ಪ್ರದೇಶದಲ್ಲಿ ಹೈಹಯಸ ರಾಜವಂಶ ನರ್ಮದಾ ನದಿ ತೀರೆದ ಗುಂಟ ತಮ್ಮ ರಾಜ್ಯದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಕೃತಯುಗದ ಕಾಲಘಟ್ಟದಲ್ಲಿ ಪರಾಕ್ರಮದಿಂದಲೂ ಜನರಿಗೆ ಪ್ರಿಯರಾದವರಾಗಿಯೂ ಆಡಳಿತ ನಡೆಸಿಕೊಂಡು ಬಂದಿದ್ದರು. ಕೃತವೀರ್ಯನಿಗೆ ಮಕ್ಕಳಿರದೆ ಚಿಂತೆಯಾದಾಗ ಸುಕೃತ ಫಲವಾಗಿ ಎಂಬಂತೆ ಕಾರ್ತವೀರ್ಯಾರ್ಜುನನ ಜನನವಾಯಿತು. ದುರ್ದೈವವಶಾತ್ ವಿಳಂಬದಿಂದ ಮಗುವಿಗೆ ಅಂಗ ಊನವಾಗಿತ್ತು. ಕೈಗಳೆ ಇದ್ದಿರದ ಮಗುವನ್ನು ಕಂಡು ಕೃತವರ್ಮ ದಂಪತಿಗೆ ಅಪಾರವಾದ ಬೇಸರ, ಜುಗುಪ್ಸೆಗಳು ಮೂಡಿ ಇನ್ನು ಈ ವಿಪ್ಲವಕ್ಕೆ ಪರಿಹಾರವೆಂದರೆ ದತ್ತಾತ್ರೇಯ ಮುನಿಗಳೆ ಪರಿಹಾರ ಮಾಡಿಸಿ ಕೊರತೆಯನ್ನು ದೂರಮಾಡುವ ಅನುಪಮವಾದ ತಂತ್ರಶಕ್ತಿ ಪಡೆದ ಮಹಾದೈವ ಎಂಬುದನ್ನು ಮನಗಂಡು ದತ್ತಾತ್ರೇಯ ಮುನಿಗಳ ಬಳಿ ಮಗುವನ್ನು ಎತ್ತೋಯ್ದರು. ಅವರ ಪಾದಕಮಲದ ಬಳಿ ಇಡುತ್ತಾರೆ.
ದತ್ತ ಗುರುಗಳಿಗೆ ದಂಪತಿಯ ದುಃಖವು ಅರ್ಥವಾಗುತ್ತದೆ. ಸಾಧಕರಾದ ಮುನಿಗಳಿಗೆ ಪಂಚಭೂತಗಳನ್ನು ನಿಯಂತ್ರಿಸುವ ಮಹಾನ್ ವಿದ್ಯೆ ಗೊತ್ತು. ಏಕೆಂದರೆ ಅವರು ಲೀಲಾ ಚರಿತನಾದ ದೇವರು. ಬ್ರಹ್ಮ ಜಿಜಾnಸೆಯನ್ನು ಅರಿತವರು. ಸೃಷ್ಟಿ, ಸ್ಥಿತಿ, ಲಯಗಳನ್ನು ಪ್ರತ್ಯೇಕವಾಗಿ ನಡೆಸಿ ನಿಯಂತ್ರಿಸುತ್ತಾರೆ.
ದತ್ತಾತ್ರೇಯ ಮುನಿಗಳು ಬ್ರಹ್ಮ,ವಿಷ್ಣು ಮಹೇಶ್ವರರು ಒಗ್ಗೂಡಿದಾಗ ಒಡಮೂಡಿದ ರೂಪ. ತ್ರಿಮೂರ್ತಿಗಳು ಒಂದೇ ದೇಹವಾಗಿ ಶಿರೋಭಾಗದಲ್ಲಿ ಮೂರು ಪ್ರತ್ಯೇಕ ಸ್ವರೂಪಗಳನ್ನು ತಳೆದಿದ್ದಾರೆ. ಈ ಸ್ವರೂಪವೇ ದತ್ತಾತ್ರೇಯ ಸ್ವರೂಪ. ಈ ಸ್ವರೂಪವನ್ನು ಪಡೆಯುವುದು ಅವರ ಶಕ್ತಿಯ ಫಲವಾಗಿ ಅಲ್ಲ.
ಅತ್ರಿ ಮುನಿಯ ಪತ್ನಿ ಅನಸೂಯಾ ಎಂಬ ಪತಿವ್ರತಾ ಶಿರೋಮಣೀಯ ಸಂಕಲ್ಪ ಶಕ್ತಿಯ ಬಲದಿಂದಾಗಿ. ತ್ರಿಮೂರ್ತಿಗಳನ್ನು ಎಳೆಯ ಕಂದಮ್ಮಗಳ ಸ್ವರೂಪದಲ್ಲಿ ಪರಿವರ್ತನೆಗೊಳ್ಳುವ ಸ್ಥಿತಿ ಕೂಡಿ ಬರುತ್ತದೆ. ತ್ರಿಮೂರ್ತಿಯರ ಪತ್ನಿಯರು ಕಂಗಾಲಾಗಿ ತಂತಮ್ಮ ಗಂಡಂದಿರನ್ನು ಅನಸೂಯಾಳಿಂದ ಬಿಡಿಸಿಕೊಳ್ಳಬೇಕೆಂದು ಚಡಪಡಿಸಿ ತಮ್ಮ ವಿನಯನಯ ಪೂರ್ವಕ ನಡೆಯಿಂದ ಅನಸೂಯೆಗೆ ಶರಣಾಗಿ, ತಮ್ಮ ಗಂಡಂದಿರನ್ನು ವಾಪಸ್ಸು ಪಡೆಯುತ್ತಾರೆ.
ಆದರೆ ತ್ರಿಮೂರ್ತಿ ಅಂಶಗಳು ಸೇರಿ ದತ್ತಾತ್ರೇಯ ರೂಪುಗೊಳ್ಳುತ್ತಾನೆ. ಕಷ್ಟದಲ್ಲಿರುವವರಿಗೆ ವರ ಕೊಡುವವನೆ ದತ್ತಾತ್ರೇಯ.ಮಾಹಿಷ್ಮತಿಯ ಅರಸ ಕೃತವೀರ್ಯ ದತ್ತಮುನಿಗಳನ್ನು ಆರಾಧಿಸಿ, ಪ್ರಸನ್ನಗೊಳಿಸಿ, ಅವರಿಂದ ತನ್ನ ಕೈಗಳೇ ಇರದ ಮಗನಿಗೆ ಸಾವಿರ ಬಾಹುಗಳನ್ನು ಅನುಗ್ರಹಿಸಿಕೊಳ್ಳುತ್ತಾನೆ . ರಾವಣನನ್ನೂ ಮೀರಿದ ಶಕ್ತಿ ಕಾರ್ತಿವೀರ್ಯಾರ್ಜುನನಿಗೆ ಬರುತ್ತದೆ. ಸೊಕ್ಕು ಪ್ರದರ್ಶಿಸಿದ ರಾವಣನನ್ನೇ ಕಾರ್ತಿವೀರ್ಯಾರ್ಜುನ ಸೆರೆಡಿಯುತ್ತಾನೆ.
ಅನುಪಮವಾದ ಪವಾಡ ಸದೃಶ ಪರಿಹಾರ ದತ್ತಾತ್ರೇಯನಿಂದ ಲಭ್ಯ
ವಾಮಾಚಾರ, ಯಕ್ಷಿಣಿ, ಕ್ಷುದ್ರ ದೇವತೆಗಳ ವಶೀಕರಣ ಒಂದು ರೀತಿಯ ಶಕ್ತಿ ಒದಗಿಸಬಹುದು. ಆದರೂ ಇವುಗಳಿಗೆ ಇವುಗಳದ್ದೇ ಆದ ಒಂದು ಮಿತಿ ಇರಲು ಸಾಧ್ಯ. ಆದರೆ ದತ್ತಾತ್ರೇಯನ ಆರಾಧನೆ ತಂತ್ರ ಸಿದ್ಧಿ, ಧ್ಯಾನ ಏಕಾಗ್ರತೆಗಳು ಒಂದು ನಿರ್ದಿಷ್ಟ ಬಗೆಯಲ್ಲಿ ಸಾಧ್ಯವಾದಾಗ ಮನುಷ್ಯನಲ್ಲಿ ಅಂತರ್ಗತವಾದ ಷಟcಕ್ರಗಳನ್ನು ಜಾಗ್ರತಗೊಳಿಸುವ ಯೋಗ ಸಿದ್ಧಿಗೆ ರೂಪಾಂತರಗೊಳ್ಳುತ್ತದೆ. ಬದುಕಿನ ಸಂದರ್ಭದ ಪೀಡೆಗಳಿಂದ ನಮಗೆ ನಾವೇ ರಕ್ಷಣೆ ಪಡೆದು ಹೊರಬರಲು ಚೈತನ್ಯ ಒದಗುತ್ತದೆ.
ಕುಂಡಲಿನಿ ಶಕ್ತಿ ಸಂಪ್ರಾಪ್ತಿಯಾದಾಗ ದೇಹ ಮತ್ತು ಆತ್ಮಗಳ ನಡುವಣ ಅಂತರ ಸಮತೋಲನ ತಪ್ಪದ ರೀತಿಯಲ್ಲಿ ಘನೀಕರಿಸಿ ದಿವ್ಯವಾದ ಅನುಭವಕ್ಕೆ ಇಚ್ಛಾಶಕ್ತಿಯ ಮೂಲಕ ಪಡೆಯಬೇಕಾದ್ದನ್ನು ಪಡೆಯಲು ಸಾಧ್ಯ. ಹಾಗಂದ ಮಾತ್ರಕ್ಕೆ ನ್ಯಾಯದ ಹಳಿಗಳನ್ನು ಮೀರುವ ಕುಹಕತನಗಳು ಶಕ್ತಿ ಒದಗಿಸಲಾರವು. ಮೂಲಾಧಾರ ಚಕ್ರ, ಸ್ವಾಧಿಷ್ಠಾನ ಚಕ್ರ, ಅನಾಹತ ಚಕ್ರ, ಮಣಿಪುರ ಚಕ್ರ ಶುದ್ಧ ಛಕ್ರ, ಆಜಾn ಚಕ್ರ, ಸಹಸ್ರಾರ ಚಕ್ರಗಳೇ ಈ ಷಟcಕ್ರಗಳು. ಇವನ್ನು ನಿಯಂತ್ರಿಸುವುದು ಧ್ಯಾನದ ಮೂಲಕ ಸಾಧ್ಯ. ದತ್ತಾತ್ರೇಯನ ಬಗೆಗಿನ ಧ್ಯಾನ ಇಂಥ ಬಗೆಗಾಗಿನ ಅವಧೂತಶಕ್ತಿಯನ್ನು ಪ್ರಾಪ್ತಿಗೊಳಿಸುತ್ತದೆ. ದತ್ತನ ಬಗೆಗಿನ ಹುಡುಕಾಟ ಜಾnನ
ಭವದ ಜಂಜಡಗಳನ್ನು ನೀಗಿಕೊಳ್ಳಲು ದತ್ತೋಪಾಸನೆ ಉತ್ತಮವಾದ ಕಲ್ಪವನ್ನು ಒದಗಿಸುತ್ತದೆ.
ಮಾಯೆಯ ಫಲವಾದ ಜಗತ್ತು ಮತ್ತು ಆನಂದದಾಯಕವಾದ ಪರಾತ್ಪರ ಶಕ್ತಿ
ಮೂಲ ಬೀಜಾಕ್ಷರ ಮಂತ್ರಗಳು ನಮಗೆ ಪುಟ್ಟದಾದ ಶಕ್ತಿಕೋಶಗಳನ್ನು ಒದಗಿಸುತ್ತದೆ. ಇಡಿಯಾದ ದೇಹದ ಮೂಲದ ಬಿಂದು ಸ್ವರೂಪ ಪುಟ್ಟ ಜೀವಕೋಶ. ಪ್ರತಿ ಜೀವಕೋಶಗಳು ಬಲಗೊಂಡಾಗ ಶಕ್ತಿ ಸಂಗ್ರಸಿಕೊಂಡಾಗ ದೇಹದಲ್ಲಿ ಹುರುಪು ಉತ್ಸಾಹ ಹಾಗೂ ಚೈತನ್ಯಗಳು ವೃದ್ಧಿಗೊಳ್ಳುತ್ತವೆ. ಆಸೆಗಳು, ಕಾಮನೆಗಳು ಆತ್ಮವನ್ನು ನೀಚತನಕ್ಕೆ ಒಯ್ಯುತ್ತದೆ. ಆತ್ಮ ಶುದ್ಧ ವಸ್ತುವಾದಾಗ ಪರಮಾತ್ಮ ನೆಲೆಸುತ್ತಾನೆ. ಆತೀಂದ್ರಿಯ ಶಕ್ತಿಯಿಂದಾಗಿ ದೇಹ ಸೊರಗಲಾರದು. ಧರ್ಮಾರ್ಥ ಕಾಮ ಮೋಕ್ಷಗಳು ಜೀವನವನ್ನು ಅರ್ಥಪೂರ್ಣವಾಗಿಸುತ್ತದೆ.
ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳು ನಮ್ಮನ್ನು ಪಾಶಕ್ಕೆ ತಳ್ಳುತ್ತದೆ. ಜಗದಲ್ಲಿನ ಪುರುಷಾರ್ಥಗಳನ್ನು ಸಾಧಿಸಲು ಹಿಂಜರಿಯದೆ ಜಿತೇಂದ್ರಿಯನಾದಾಗ ಓಂ ತತ್ ಸತ್ ಗಳ ಮೂಲಕ ಈ ಮೂರೂ ಅವಿಚ್ಚಿನ್ನವಾದಾಗ ಅದೇ ಪರಬ್ರಹ್ಮ. ಬೇರೆ ಬೇರೆಯಾದಾಗ ಬ್ರಹ್ಮ, ವಿಷ್ಣು, ಮಹೇಶ್ವರ. ಅತುಲ ಬಲ ಪಡೆಯುವಾಗ ಪರಬ್ರಹ್ಮನನ್ನು ಛೇದಿಸುವ ಒಗ್ಗೂಡಿಸುವ ಕೆಲಸವನ್ನು ಧ್ಯಾನದಿಂದ ಮಾಡಬೇಕು. ಇದು ಸಾಧ್ಯವಾದಾಗ ಬದುಕಿನ ಜಂಜಡ ಖನ್ನತೆ ಸೋಲು ನಿರಾಸೆಗಳಿಂದ ಹೊರಬರಲು ಸಾಧ್ಯ. ನಾಶಕ್ಕೆ ಕಾರಣವಾಗುವ ಮಹಾರೋಗಗಳನ್ನು ನಿಯಂತ್ರಿಸಬಹುದು. ಜೀವನದ ಸಾರ್ಥಕತೆಗಳನ್ನು ಗೆಲುವುಗಳನ್ನು ಸಂಪಾದಿಸಿಕೊಳ್ಳಬಹುದು. ಗ್ರಹನಕ್ಷತ್ರಗಳ ದೋಷ ನಿವಾರಿಸಿಕೊಳ್ಳಬಹುದು. ಮುಂದಿನ ವಾರ ಇನ್ನಷ್ಟು ಚರ್ಚಿಸೋಣ.
ಅನಂತಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Astrology 2024: 2024ರಲ್ಲಿ ಮಿಶ್ರ ಫಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?
ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?
ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…
ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?
ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.