ದಣಿವರಿಯದ ಧರ್ಮಾಧಿಕಾರಿ:ಹೆಗ್ಗಡೆಯವರ ಜೊತೆಗೆ ಒಂದು ದಿನ 


Team Udayavani, Oct 21, 2017, 3:55 AM IST

3-aaa.jpg

ಹತ್ತಾರು ಸಂಸ್ಥೆಗಳನ್ನು, ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ವೀರೇಂದ್ರ ಹೆಗ್ಗಡೆಯವರನ್ನು ತಮ್ಮ ಅಹವಾಲು, ದುಃಖ ದುಮ್ಮಾನ ಹೇಳಿಕೊಳ್ಳಲು ಸಂತಸ, ಬೇಡಿಕೆ ಈಡೇರಿಕೆಗೆ ಒತ್ತಾಯಿಸಲು,  ಭೇಟಿಯಾಗಲು ಬರುವ ಜನರ ಸಂಖ್ಯೆಯೇ ಸಾವಿರಾರು. ಅವರಿಗೆ ಇದಕ್ಕೆಲ್ಲಾ ಸಮಯವೇ ಸಿಗದು ಎನ್ನುವವರಿದ್ದರೆ, ಅವರು ಸಮಯವನ್ನು ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂದು ಕೇಳುವವರು ಇನ್ನು ಕೆಲವರು. ಅಕ್ಟೋಬರ್‌ 24ರಂದು ಹೆಗ್ಗಡೆಯವರು ಪಟ್ಟಕ್ಕೆ ಏರಿ ಭರ್ತಿ 50 ವರ್ಷಗಳು. ಈ ನೆಪದಲ್ಲಿ ಇವೆಲ್ಲದಕ್ಕೂ ಉತ್ತರ ಎಂಬಂತೆ ಹೆಗ್ಗಡೆ ಅವರೊಂದಿಗೆ ಒಂದು ದಿನ ಕಳೆದು, ಅದನ್ನು ಓದುಗರ ಮುಂದಿಡುವ ವಿಶಿಷ್ಟ ಪ್ರಯತ್ನವಿದು. 

6 ಗಂಟೆಗೆ ಆರಂಭ
ಮುಂಜಾನೆ 6 ಗಂಟೆಗೆ ಆರಂಭವಾಗುವ ವೀರೇಂದ್ರ ಹೆಗ್ಗಡೆಯವರ ದಿನಚರಿ ವ್ಯಾಯಾಮ, ನಿತ್ಯಕರ್ಮ, ಪತ್ರಿಕೆಗಳ ಓದು, ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ಮರಳಿದಲ್ಲಿಂದ ಸಾರ್ವಜನಿಕ ದರ್ಶನ ಆರಂಭ. ತಿಂಡಿಗಾಗಿ ವಿನಿಯೋಗಿಸುವುದು ಕೇವಲ ಎಂಟತ್ತು ನಿಮಿಷ. ಹೆಚ್ಚೆಂದರೆ ಎರಡು ಇಡ್ಲಿ, ದೋಸೆಯಾದರೆ ಅದೂ ಎರಡೇ. ಜತೆಗೊಂದು ಲೋಟ ಬಿಸಿಬಿಸಿ ಕಾಫಿ. ಇಷ್ಟಾಗಿ ಅವಸರವಸರದಲ್ಲಿ ಅಭಯದಾನಕ್ಕೆ ಕುಳಿತರೆ ಸಮಯದ ಪರಿವೆಯೇ ಇಲ್ಲದಂತೆ ಜನ ಸಾಲುಗಟ್ಟಿ ಬರುತ್ತಿರುತ್ತಾರೆ. ಕರ್ನಾಟಕದ ನಾನಾ ಮೂಲೆಯಷ್ಟೇ ಅಲ್ಲ, ಆಂಧ್ರಪ್ರದೇಶ, ಕೇರಳ, ಹರಿಯಾಣ, ದಿಲ್ಲಿ… ಹೀಗೆ,  ಬೇರೆ ಬೇರೆ ರಾಜ್ಯಗಳಿಂದ ಕೂಡಾ ಆಗಮಿಸುತ್ತಾರೆ. 

ಆಣೆ, ಪ್ರಮಾಣ, ಹುಯಿಲು
ಒಬ್ಬರೇ ಹೇಳುವುದು ಆಣೆ, ಇಬ್ಬರೂ ಜತೆಯಾಗಿ ಬಂದು ಮಾಡುವುದು ಪ್ರಮಾಣ. ಬರೆದು ವ್ಯಾಜ್ಯ ಹೂಡುವುದು ಹುಯಿಲು. ಇದು ಧರ್ಮಸ್ಥಳ ಕ್ಷೇತ್ರದ ಸಂಪ್ರದಾಯ. ಇನ್ನು ಮುಂದೆ ಇಂತಹ ಕೆಲಸ ಮಾಡುವುದಿಲ್ಲ, ಮಾಡಿದರೆ ಮಂಜುನಾಥ ಸ್ವಾಮಿ ಮೇಲೆ ಆಣೆ, ಅವನು ನನಗೆ ಕೆಡುಕುಂಟು ಮಾಡಿದ, ಅವನನ್ನು ಮಂಜುನಾಥ ಸ್ವಾಮಿ ನೋಡಿಕೊಳ್ಳಲಿ, ನಾನು ಅವನಿಗೆ ಅನ್ಯಾಯ ಮಾಡಿಲ್ಲ, ಅವನು ನನ್ನ ಮೇಲೆ ವೃಥಾ ಆರೋಪ ಹಾಕಿದ್ದಾನೆ, ಅವನಿಗೆ ದೇವರು ಶಿಕ್ಷೆ ನೀಡಲಿ ಹೀಗೆ ಹೇಳುವುದು ಆಣೆಯಾಗಿ ಪರಿಣಮಿಸುತ್ತದೆ. ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮೊದಲಾದವು ಅನ್ಯಾಯದ ವಿರುದ್ಧ  ಭಕ್ತರಿಗಿರುವ ಹೋರಾಟದ ಅಸ್ತ್ರವಾಗಿದೆ. ಕಾಸು ಬಿಡ ತಿಮ್ಮಪ್ಪ, ಮಾತು ಬಿಡ ಮಂಜುನಾಥ ಎಂಬಂತೆ ತಿರುಪತಿಯಲ್ಲಿ ನನಗೆ ಇಷ್ಟು ವ್ಯಾಪಾರ ಆದರೆ ಅದರಲ್ಲಿ ಪ್ರತಿಶತ (ಶೇ.) ಇಷ್ಟನ್ನು ನಿನಗೆ ಕೊಡುತ್ತೇನೆ ಎಂದು ಹರಕೆ ಹೇಳುವ ಕ್ರಮ ಇದೆ.  

ಪರಿಹಾರ
ನೇತ್ರಾವತಿ ನದಿಯಲ್ಲಿ ತೀರ್ಥ ಸ್ನಾನ ಮಾಡಿ, 11 ರೂ. ಕಾಣಿಕೆ ಹಾಕಿ ಇಬ್ಬರೂ ದೇವರ ಎದುರು ನಡೆಯಲ್ಲಿ ನಿಂತು ಹೇಳಿಕೊಳ್ಳುವುದು ಪ್ರಮಾಣ. ಹೀಗೆ ಮಾಡಿದರೆ ಅದರಲ್ಲಿ ಸುಳ್ಳು ಇದ್ದರೆ ಅದರಿಂದ ದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ನಂಬಿಕೆ ಇದೆ. ಅದು ಅದೇ ವ್ಯಕ್ತಿಗೆ ಫಟಾಫಟ್‌ ಪ್ರತಿಫಲ ದೊರೆಯುತ್ತದೆ ಎಂಬ ತೀವ್ರಗಾಮಿ ಚಿಂತನೆಯೇ ಆಗಬೇಕಿಲ್ಲ. ಆತನ ಕುಟುಂಬದಲ್ಲೂ, ಮುಂದಿನ ಪೀಳಿಗೆಗೂ ಕಾಣಿಸಿಕೊಳ್ಳಬಹುದು. ಇಬ್ಬರೂ ಬರದಿದ್ದರೆ ಅದು ಆಣೆಯಾಗುತ್ತದೆ. ಹೀಗೆ ಆಣೆಯ ದೋಷ ಕೂಡಾ ಕ್ರಮಶಃ ಕುಟುಂಬದಲ್ಲಿ ಯಾರಿಗೇ ಆದರೂ ಕಾಣಿಸಿಕೊಳ್ಳಬಹುದು ಎಂಬ ನಂಬಿಕೆಯಿದೆ. 

 ಎರಡೂ ಕಡೆಯವರು ಒಪ್ಪಿದರೆ ಮಾತ್ರ ಪ್ರಮಾಣ ನಡೆಯುತ್ತದೆ, ಇಲ್ಲದಿದ್ದರೆ ಅದು ಆಣೆ ಮಾತಾಗಿ ಬದಲಾಗುತ್ತದೆ. ದೇವರ ಎದುರು ನಿಂತು ಪ್ರಮಾಣ ಮಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಅಪಚಾರವಾದರೆ ದೇವರ ಕೋಪಕ್ಕೆ ಕಾರಣರಾಗುತ್ತಾರೆ ಎಂಬ ಭಾವನೆೆ ಇದೆ. 
 ಅನೇಕ ವರ್ಷಗಳ ಬಳಿಕ ಆಣೆ ಮಾತಿನ ವಾಗೊªàಷ ಕಾಣಿಸಿ ಕಡೆಗೆ ಇಲ್ಲಿಗೇ ಬಂದು ಪರಿಹಾರ ಮಾಡಿಸಿಕೊಂಡದ್ದೂ  ಇದೆ. ಜ್ಯೋತಿಷಿಗಳ ಮೂಲಕ ಪೂರ್ವಜರ ಆಣೆ ಮಾತಿನ ಪ್ರಭಾವ ಕಾಣಿಸಿಕೊಂಡ ಸ್ಪಷ್ಟ ಉದಾಹರಣೆಗಳೂ ಹಲವಾರಿವೆ. ಹಾಗೆ ಆಣೆ ಮಾತಿನ ದೋಷ ಕಾಣಿಸಿಕೊಂಡಾಗ ಅದಕ್ಕೆ ದೇವರ ಎದುರು ಪ್ರಾರ್ಥನೆ ಸಲ್ಲಿಸಿ ಸೇವೆ ಮಾಡಿದಲ್ಲಿಗೆ ದೋಷ ಪರಿಹಾರವಾಯಿತು ಎಂದು ಹೆಗ್ಗಡೆಯವರು ಅಭಯ ನೀಡುವ ಕ್ರಮ ಇದೆ. ಹೀಗೆ ಅಭಯವಾದಲ್ಲಿಗೆ ದೋಷ ಪರಿಹಾರ ಎಂದು ಅರ್ಥ. 

ಅಭಯದಾನ
ಚತುರ್ದಾನಗಳಿಗೆ ಖ್ಯಾತವಾದ ಧರ್ಮಸ್ಥಳದಲ್ಲಿ ಅಭಯದಾನ ಪ್ರಮುಖವಾದುದು. ಪೀಠಸ್ಥರಾಗಿ ಕುಳಿತ ಹೆಗ್ಗಡೆಯವರ ಬಳಿ ಸಾವಿರಾರು ಮಂದಿ ತಮ್ಮ ಸಂಕಷ್ಟವನ್ನು ಹೇಳಿಕೊಂಡು ಅಭಯ ಪಡೆಯುತ್ತಾರೆ. ಪ್ರತಿನಿತ್ಯ ಸಾವಿರ , ಸಾವಿರ ಮಂದಿಗೆ ಹೆಗ್ಗಡೆಯವರು ಸಾಂತ್ವನ ಹೇಳುತ್ತಾರೆ. ಶ್ರೀ ಮಂಜುನಾಥ ಸ್ವಾಮಿಯ ರಕ್ಷೆ ನಿಮಗಿದೆ ಎಂಬ ಅಭಯ ನೀಡುತ್ತಾರೆ. ಸಲಹೆಗಳನ್ನು ಕೊಡುತ್ತಾರೆ.
ಬದುಕಿನಲ್ಲಿ ಧೆ„ರ್ಯದಷ್ಟು ದೊಡ್ಡ ಆಸರೆ ಬೇರಿಲ್ಲ. ನಾನು ಸತ್ತೆ, ಸೋತೆ, ನನ್ನ ಕತƒìತ್ವ ಶಕ್ತಿ ಉಡುಗಿಹೋಯಿತು ಎಂದು ಹೆದರಬಾರದು. ನಾಟಕದ ಅಂಕದ ಪರದೆ ಸರಿದಂತೆ ಜೀವನದಲ್ಲಿಯೂ ಸೋಲಿನ ಬಳಿಕ ಗೆಲುವು ಬರುತ್ತದೆ. ಹೆಗ್ಗಡೆಯವರು ಪ್ರತಿನಿತ್ಯ ಸಾಂತ್ವನದ ಬಯಕೆ ಹೊತ್ತು ಬರುವ ಸಹಸ್ರ ಸಹಸ್ರ  ಮಂದಿಗೆ ಹೇಳುವ  ಅಭಯದಾನ . ಡಿವಿಜಿಯವರು ಕಗ್ಗದಲ್ಲಿ ಹೇಳಿರುವುದನ್ನೇ  ಹೆಗ್ಗಡೆಯವರು ನಿತ್ಯದಲ್ಲಿ ಹೇಳುತ್ತಿದ್ದಾರೆ.  

ಸಹಾಯ, ಮಾರ್ಗದರ್ಶನ, ಅನುದಾನ
 ಭಕ್ತರು ಭೇಟಿಗೆ ಬರುವಾಗ ಅವರಿಗೆ ಕ್ಷೇತ್ರದಿಂದ ಸಹಾಯ ಮಾಡುತ್ತಾರೆ. ಮಾರ್ಗದರ್ಶನ ಮಾಡುತ್ತಾರೆ, ಅನುದಾನ ನೀಡುತ್ತಾರೆ, ಸಮಸ್ಯೆಗೆ ಪರಿಹಾರ ಸೂಚಿಸುತ್ತಾರೆ, ಸಾಂತ್ವನ ಹೇಳುತ್ತಾರೆ, ಕೌನ್ಸಿಲಿಂಗ್‌ ನಡೆಸುತ್ತಾರೆ. ಸಮಸ್ಯೆಗೆ ಕಿವಿಯಾಗುವ ಭಾವವೇ ಬಂದವರ ನೋವು ಆರಿಸುತ್ತದೆ. ಸ್ಪಂದಿಸುವ ಪರಿಯೇ ಅವರ ಆರಿದ ಬಾಳನ್ನು ಬೆಳಗುತ್ತದೆ. ಸಹಾಯ ಮಾಡುವ ರೀತಿಯೇ ಅವರಿಗೆ ಬದುಕುವ ಭರವಸೆಯನ್ನು ತುಂಬಿಸುತ್ತದೆ. ಮಕ್ಕಳ ಜತೆ ಮಗುವಾಗಿ, ವೃದ್ಧರ ಜತೆ ಹಿರಿಯನಾಗಿ, ಯುವಕರ ಜತೆ ಯೌವನ ತುಂಬಿ, ಉದ್ಯಮಿಗಳ ಜತೆ ಉದ್ಯಮಪತಿಯಾಗಿ, ಶೈಕ್ಷಣಿಕ ತಜ್ಞರ ಜತೆ ಶ್ರೇಷ್ಠ ಶಿಕ್ಷಣತಜ್ಞನಾಗಿ, ಧರ್ಮಭೀರುಗಳ ಜತೆ ದಾರ್ಶನಿಕನಾಗಿ, ಖನ್ನತೆ ಇರುವವರ ಜತೆ ವೈದ್ಯರಾಗಿ ವ್ಯವಹರಿಸುತ್ತಾರೆ. ಇಷ್ಟೆಲ್ಲಾ ಬಗೆಯಲ್ಲಿ ವ್ಯವಹರಿಸಲು ನಿಮಗೆ ಹೇಗೆ ಸಾಧ್ಯ ಎಂದರೆ ಹೆಗ್ಗಡೆ ಪೀಠದ ಗುಣ ಎನ್ನುತ್ತಾರೆ ನಿಷ್ಕಲ್ಮಷವಾಗಿ.

ಧರ್ಮೋತ್ಥಾನ
ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯ ಮೂಲಕ ಭಾರತೀಯ ಸಂಸ್ಕೃತಿಯನ್ನು ಉಜ್ವಲಗೊಳಿಸುವ ಧರ್ಮೋತ್ಥಾನ ಟ್ರಸ್ಟ್‌ನ ಸ್ಥಾಪನೆ ಡಾ| ವೀರೇಂದ್ರ ಹೆಗ್ಗಡೆಯವರ ಧಾರ್ಮಿಕ ಕಳಕಳಿಯ ಪ್ರತೀಕ. ಹಾಸನ ಜಿಲ್ಲೆಯ ಕಟ್ಟಾಯ ಎಂಬಲ್ಲಿ ಅಭಿವೃದ್ಧಿ ಮಾಡಿದ ದೇವಸ್ಥಾನದ ಸಮಿತಿಯವರು ಬಂದು ಕೃತಜ್ಞತೆ ಹೇಳಿದರು. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ವರದರಾಜ ಸ್ವಾಮಿ ದೇವಾಲಯದ ಅಭಿವೃದ್ಧಿಗೆ ಅನುದಾನ ಕೇಳಿದರು. ಆನಂತರದಲ್ಲೂ ಅನೇಕ ದೇವಾಲಯದವರು ಬಂದು ಅನುದಾನ ಕೇಳಿದರು.ಹೆಚ್ಚಿನವರಿಗೆ ಅನುದಾನ ಭಾಗ್ಯ ದೊರೆಯಿತು. ಉಳಿದವರಿಗೆ ಕೆಲಸ ಆರಂಭಿಸಿ ಮುಕ್ಕಾಲಂಶ ದೇವಾಲಯದ ಕೆಲಸ ಆದ ನಂತರ ಬನ್ನಿ ಎಂಬ ಸಹಾಯ ಮಾಡುವ ಭರವಸೆ ದೊರೆಯಿತು. 

ಪ್ರಾರ್ಥನೆ
ವಾಗೊªàಷ, ಜಾಗದ ಕಲಹ ಇತ್ಯಾದಿಗಳಿಗೆ ಸಾಂತ್ವನ, ಪರಿಹಾರ , ಅಭಯ ನೀಡಿದರು. ಉದ್ಯೋಗಾಕಾಂಕ್ಷಿಗಳಿಗೆ ರುಡ್‌ಸೆಟ್‌ ಮೂಲಕ ಸ್ವ ಉದ್ಯೋಗ ತರಬೇತಿಯ ಮಾಹಿತಿ ನೀಡಿದರು.  ಹರಿಯಾಣ ಮೂಲದ ವ್ಯಕ್ತಿಯೊಬ್ಬರು ಪಡುಬಿದ್ರಿಯಲ್ಲಿ  ಕಾರ್ಖಾನೆ ಮಾಡುತ್ತಿದ್ದು ನೀರು ಸಿಕ್ಕಿಲ್ಲ ಎಂದು ಹೇಳಿದರು. ಆಗ ಹೆಗ್ಗಡೆಯವರು ದೇವರಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಹೇಳಿದರು. ವಿವಾಹವಾಗಿ 7 ವರ್ಷವಾದರೂ ಮಕ್ಕಳಾಗದ ದಂಪತಿಗೂ ಪ್ರಾರ್ಥನೆ ಮಾಡಿ ಎಂಬುದೇ ಸಮಾಧಾನದ ಉತ್ತರ. ಕಳೆದ 19 ವರ್ಷಗಳಿಂದ ಧರ್ಮಸ್ಥಳಕ್ಕೆ ತುಮಕೂರಿನಿಂದ ಆಗಮಿಸಿ ಫಿನಾಯಿಲ್‌ ಮಿಶ್ರ ಮಾಡಿಕೊಡುತ್ತಿರುವ ಸೋಮಣ್ಣ ಅವರು ಧರ್ಮಸ್ಥಳದಲ್ಲಿ  ವಿವಾಹವಾದ ನೂತನ ವಧು ವರ ಬಂಧುಗಳನ್ನು ಕರೆತಂದು ಆಶೀರ್ವಾದ ಮಾಡಿ ಎಂದರು. ಸೋಮಣ್ಣ ಅವರು ತಿಂಗಳಿಗೆ ಎರಡು ಬಾರಿ ಆಗಮಿಸಿ 880 ಲೀ. ಫಿನಾಯಿಲ್‌ನ್ನು ಉಚಿತವಾಗಿ ಮಿಶ್ರ ಮಾಡಿಕೊಡುತ್ತಿದ್ದಾರೆ.

ಬೆಳೆಕಾಣಿಕೆ
ದೇವರ ಪ್ರಾರ್ಥನೆಯಿಂದ ಉತ್ತಮವಾಗಿ ಬೆಳೆಯಾಗಿದೆ ಎಂದು ಅನೇಕರು ಹೊಸ ಬೆಳೆಯನ್ನು ಕಾಣಿಕೆಯಾಗಿ ತಂದಿತ್ತರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘದ ಪ್ರತಿನಿಧಿಗಳು ಆಗಮಿಸಿದರು. ತರಬೇತಿ ಪಡೆದ ಸೇವಾಪ್ರತಿನಿಧಿಗಳು ಆಗಮಿಸಿದರು. ಅವರ ಜತೆ ಯೋಜನೆ ಕುರಿತು ಸಂವಹನ ನಡೆಸಿದರು. ಪ್ರೇರಣಾ ನುಡಿಗಳನ್ನು ಹೇಳಿದರು. 
ಭೇಟಿ

ಬೆಳಗಾವಿಯ ರಾಯಭಾಗದ ಮುಗಳಕೋಡು ಶ್ರೀ ಷಡಕ್ಷರಿ ಶಿವಯೋಗಿ ಡಾ| ಮುರುಘರಾಜೇಂದ್ರ ಸ್ವಾಮೀಜಿ ಅವರು ಭೇಟಿ ಮಾಡಿ ಅನುಭವ ಮಂಟಪ ಉದ್ಘಾಟನೆಗೆ ಆಹ್ವಾನಿಸಿದರು. ದಿಲ್ಲಿಯಲ್ಲಿರುವ ಅಂತಾರಾಷ್ಟ್ರೀಯ ಮ್ಯಾನೇಜ್‌ಮೆಂಟ್‌ ಕನ್ಸಲ್ಟೆಂಟ್‌ ರಜತ್‌ಪಾಲ್‌ಸಿಂಗ್‌ ಅವರು ಶಾಂತಿವನದಲ್ಲಿ 10 ದಿನ ಚಿಕಿತ್ಸೆ ಪಡೆದ ಅನುಭವವನ್ನು ಬಣ್ಣಿಸಿ ಚಿಕಿತ್ಸೆಯ ಹಾಗೂ ಆಸ್ಪತ್ರೆಯ ಸಾರ್ಥಕತೆಯನ್ನು ಕೊಂಡಾಡಿದರು. ಎಸ್‌ಡಿಎಂ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳು, ಭದ್ರಾವತಿಯ ಎಸ್‌ಡಿಎಂ ಕಲ್ಯಾಣ ಮಂಟಪದ ಮೆನೇಜರ್‌, ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ , ಲೆಕ್ಕಪತ್ರ ವಿಭಾಗದ ಸಿಬ್ಬಂದಿಗಳು, ತೋಟಗಾರಿಕೆ, ಕೃಷಿ ವಿಭಾಗದ ಸಿಬ್ಬಂದಿಗಳು ಹೀಗೆ ಧರ್ಮಸ್ಥಳದ ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಕೂಡಾ ಭೇಟಿ ಮಾಡಿ ಆಡಳಿತಾತ್ಮಕ ವಿಷಯದಲ್ಲಿ ಸಲಹೆ, ಮಾರ್ಗದರ್ಶನ ಪಡೆಯುತ್ತಿದ್ದರು. ಉತ್ತರಕನ್ನಡ ಸಿದ್ಧಾಪುರ ಬೇಡ್ಕಣಿಯ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿ ಅವರ ವೇಷಭೂಷಣ ಅಗ್ನಿ ಆಕಸ್ಮಿಕದಿಂದ ಸುಟ್ಟು ಹೋದುದಕ್ಕೆ ಪರಿಹಾರಧನವನ್ನೂ ನೀಡಿದರು.ಮಗಳ ಮದುವೆ ಎಂದು ಆಗಮಿಸಿದವರಿಗೆ ಮದುವೆಗೆ ಸಹಾಯ ಮಾಡಿದರು. ಕ್ಯಾನ್ಸರ್‌ ಮೊದಲಾದ ರೋಗಿಗಳಿಗೆ ಚಿಕಿತ್ಸೆಗೆ ಸಹಾಯ ಮಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳವು ಭಕ್ತ ಜನರ ಪಾಲಿಗೆ ಭೂಮಿಗಿಳಿದ ಕೈಲಾಸ.  ಭಕ್ತ ಜನರ ಪಾಲಿಗೆ ಸಾûಾತ್‌ ಶಿವ ಸಾನ್ನಿಧ್ಯ ಇರುವ ಕ್ಷೇತ್ರ.  ಮಾತು ಬಿಡ ಮಂಜುನಾಥ  ಎಂಬುದು ಇಲ್ಲಿಗೆ ಅನ್ವರ್ಥ ನಾಮ. ಅಂತರಂಗ ಪರಿಶುದ್ಧಿ, ಲೌಕಿಕ ಬದುಕಿನಲ್ಲಿ ಸನ್ಮಾರ್ಗಗಳನ್ನು ಕರುಣಿಸುವಂತೆ ಪ್ರಾರ್ಥಿಸಲು ನಾಡಿನ ನಾನಾ ಮೂಲೆಯಿಂದ ಭಕ್ತಜನರು ಬರುವ ಪಾವನ ನೇತ್ರಾವತಿ ನದೀ ತಟಾಕ ಇದು. ಕಲೆ, ಸಾಹಿತ್ಯ, ಸಂಸ್ಕೃತಿ, ದಾನ, ಧರ್ಮಗಳೆಂಬ ಅಖಂಡ ಸತ್ಕಾರ್ಯಗಳ ನೀಲಗಗನದಲ್ಲಿ ಧರ್ಮಸ್ಥಳ ಎಂಬ ಧ್ರುವ ನಕ್ಷತ್ರ ಜಾಜ್ವಲ್ಯಮಾನವಾಗಿ ಬೆಳಗಿದೆ. 

800 ವರ್ಷಗಳ ಇತಿಹಾಸ
ಎಂಟು ಶತಮಾನಗಳ ಹಿಂದೆ ಈ ಊರಿನ ಹೆಸರು ಮಲ್ಲರ ಮಾಡಿ ಎಂದಿತ್ತು. ಕುಡುಮ ಎಂಬಲ್ಲಿದ್ದ  ನೆಲ್ಯಾಡಿ ಬೀಡು  ಜೈನ ಧರ್ಮೀಯರಾದ ಬಿರಮಣ್ಣ ಪೆರ್ಗಡೆ, ಅಮ್ಮು ಬಲ್ಲಾಳ್ತಿ ದಂಪತಿಯ ಒಡೆತನದಲ್ಲಿ ದಾನ ಧರ್ಮಗಳಿಗೆ ಪ್ರಸಿದ್ಧವಾಗಿತ್ತು. ಧರ್ಮದೇವತೆಗಳ ಆಶಯದಂತೆ ಪೆರ್ಗಡೆಯವರು ಇಲ್ಲಿ ದೇವಾಲಯವನ್ನು ನಿರ್ಮಿಸಿದರು. ಮನೆಯ ಬಂಧುವಾಗಿದ್ದ ಪರಶಿವನ ಸೇವಕ ಅಣ್ಣಪ್ಪ ಕದ್ರಿಯಿಂದ ತಂದ ಶಿವಲಿಂಗವನ್ನು ಇಲ್ಲಿ ಪ್ರತಿಷ್ಠಾಪಿಸಿ, ದೇಗುಲವೊಂದನ್ನು ನಿರ್ಮಿಸಿ, ಪೂಜೆಯ ವ್ಯವಸ್ಥೆಯನ್ನೂ ಕೈಗೊಂಡಿದ್ದರು. ಮಂಜಯ್ಯ ಹೆಗ್ಗಡೆಯವರು ಧರ್ಮಾಧಿಕಾರಿಗಳಾದ ಬಳಿಕ ಕ್ಷೇತ್ರದ ವ್ಯಾಪ್ತಿ ವಿಸ್ತಾರವಾಗುತ್ತಾ ಹೋಯಿತು. ರತ್ನವರ್ಮ ಹೆಗ್ಗಡೆಯವರ ಕಾಲದಲ್ಲಿ ಸಾಮಾಜಿಕ ಹಾಗೂ ಶೆ„ಕ್ಷಣಿಕ ಕ್ಷೇತ್ರಗಳ ಅಭಿವೃದ್ಧಿಯತ್ತ ದಾನ ಪರಂಪರೆ ಮುಂದುವರಿಯಿತು. ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೆÒàತ್ರದ ಧರ್ಮಾಧಿಕಾರಿಗಳಾದ ಮೇಲೆ ಕ್ಷೇತ್ರದ ಹೆಸರು ಜಗತ್ತಿನ ಭೂಪಟದಲ್ಲಿ ಮಿಂಚುವ  ಮಿನುಗುತಾರೆ ಯಾಗಿದೆ. ಧರ್ಮಸ್ಥಳದ ಖ್ಯಾತಿಯನ್ನು ಅನ್ವರ್ಥಗೊಳಿಸಿದ ಅವರು ಬಹುಜನರ ಪಾಲಿಗೆ ಆರಾಧ್ಯ ಸ್ವರೂಪಿ.  ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ತಳಮಟ್ಟದಲ್ಲಿದ್ದ ಜನರ ಜೀವನವನ್ನು ಉದ್ಧಾರದ ಆಕಾಶಕ್ಕೇರಿಸಿದ್ದಾರೆ. ಪ್ರಗತಿಬಂಧು ತಂಡ ಎಂಬ ಸ್ವ ಸಹಾಯ ಸಂಘಗಳ ಕಲ್ಪನೆಗೆ ಮೂರ್ತ ರೂಪ ನೀಡಿ ನಿರಂತರ ಪ್ರಗತಿಯ ಜ್ಯೋತಿ ಬೆಳಗಿದ್ದಾರೆ. ಜ್ಞಾನವಿಕಾಸ ಯೋಜನೆಯ ಮೂಲಕ ಎಲ್ಲಿ ಸ್ತ್ರೀಯರ ಪೂಜೆ ನಡೆಯುತ್ತದೋ ಅಲ್ಲಿ ದೇವತೆಗಳಿರುತ್ತಾರೆ ಎಂಬ ಆರ್ಯೋಕ್ತಿಗೆ ಚಿನ್ನದ ಮೆರುಗು ಲೇಪಿಸಿದ್ದಾರೆ. ಜನಜಾಗೃತಿ ಯೋಜನೆಯ ಅನುಷ್ಠಾನದಿಂದ ಪಾನಭಕ್ತರ ಮನಸ್ಸು ಪಾನಮುಕ್ತಿಯೆಡೆಗೆ ತಿರುಗುವಲ್ಲಿ ಪವಾಡಸದೃಶ ಕೆಲಸವನ್ನೇ ಮಾಡಿದ್ದಾರೆ. 

ಸರ್ವ ಧರ್ಮ ಕ್ಷೇತ್ರ
ಧರ್ಮಸ್ಥಳವು ಸರ್ವ ಧರ್ಮ ಸಮನ್ವಯ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಧಾರ್ಮಿಕ ಸಾಮರಸ್ಯಕ್ಕೆ ಶ್ರೇಷ್ಠ ಕೊಡುಗೆಯಾಗಿ ಧರ್ಮಸ್ಥಳ ಕಣ್ಣ ಮುಂದೆ ನಿಂತಿದೆ. ಕ್ಷೇತ್ರದ ಆಡಳಿತ ಜೈನ ಧರ್ಮೀಯರಾದ ಹೆಗ್ಗಡೆ ಮನೆತನದವರದ್ದು. ಕ್ಷೇತ್ರದ ಆರಾಧ್ಯ ದೆ„ವ ಶ್ರೀ ಮಂಜುನಾಥ ಸ್ವಾಮಿ ಶೆ„ವ (ಶಿವ). ಶಿವನ ಆರಾಧನೆಗೆ ನೇಮಿಸಲ್ಪಡುವ ಅರ್ಚಕರು ವೈಷ್ಣವರುದೀ ತ್ರಿವಳಿ ಸಂಗಮ ಧರ್ಮಸ್ಥಳದ ವೈಶಿಷ್ಟ್ಯ. 

ದಿನಚರಿ
ಮುಂಜಾನೆ 6 ಗಂಟೆಗೆ ಉತ್ತಿಷ್ಠ
ನಿತ್ಯ ವಿಧಿ, ವ್ಯಾಯಾಮ
6.30 ಪತ್ರಿಕೆಗಳ ಅವಲೋಕನ
7.00 ಸ್ನಾನ, ಜಪ
7.30 ದೇವಸ್ಥಾನಕ್ಕೆ . ಪೂಜೆ, ತುಲಾಭಾರ, ವಾಗೊªàಷ ತೀರ್ಮಾನ
8.45ಕ್ಕೆ ದೇವಸ್ಥಾನದಿಂದ ಮರಳುವಿಕೆ
8.50 ತಿಂಡಿ 
9.00 ಅಭಯದಾನ ಆರಂಭ. ಭಕ್ತ¤ರ ಭೇಟಿ
11.05 ಕಾಫಿ ಸೇವನೆಗೆ ವಿರಾಮ
11.15 ಭಕ್ತರ ಭೇಟಿ ಆರಂಭ
11.20 ಮಠಾಧೀಶರ ಭೇಟಿ
11.25 ಆಡಳಿತಾತ್ಮಕ (ಧರ್ಮಸ್ಥಳದ ವಿವಿಧ ಇಲಾಖೆಗಳ ಸಿಬಂದಿಗಳಿಗೆ ಭೇಟಿಗೆ ಅವಕಾಶ)
11.32 ಲೆಕ್ಕ ಪತ್ರ ಸಿಬಂದಿಗೆ ಭೇಟಿಗೆ ಅವಕಾಶ
12.00 ತೋಟದ ಕೃಷಿ ಸಿಬಂದಿ ಜತೆಗೆ ಮಾತುಕತೆ
12.04 ಭಕ್ತರ ಭೇಟಿ
12.20 ಗಣ್ಯರ ಜತೆ ಮಾತುಕತೆ
12.24 ಉದಯವಾಣಿಗಾಗಿ ಮಾತುಕತೆ
12.55 ಆಡಳಿತಾತ್ಮಕ ಅಧಿಕಾರಿಗಳ ಜತೆ ಮಾತುಕತೆ
1.10 ಭಕ್ತರ ಭೇಟಿ
1.25 ಸ್ನಾನ
1.38 ದೇವಸ್ಥಾನಕ್ಕೆ, ತುಲಾಭಾರ, ಪೂಜೆ
2.15ಕ್ಕೆ ದೇವಸ್ಥಾನದಿಂದ ನಿರ್ಗಮನ
2.20 ಊಟ
2.30 ವಿಶ್ರಾಂತಿ
4.00 ಭಕ್ತರ ಭೇಟಿ
4.15 ಗ್ರಾಮಾಭಿವೃದ್ಧಿ ಯೋಜನೆ ಸಿಬಂದಿಗಳಿಗೆ ಪ್ರೇರಣಾ ನುಡಿಗಳು
4.42 ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಭೇಟಿ
4.50 ಉದಯವಾಣಿಗೆ ಚಿಟ್‌ ಚಾಟ್‌ ಸಂದರ್ಶನ
5.03 ಭಕ್ತರ ಭೇಟಿ
5.07 ಎಸ್‌ಡಿಎಂ ಮಲ್ಟಿಮೀಡಿಯಾ ಸ್ಟುಡಿಯೊ ಸಿಬಂದಿಗಳಿಗೆ ವಿಡಿಯೋ ಶೂಟಿಂಗ್‌
5.25 ಭಕ್ತರ ಭೇಟಿ
5.45 ಕಾರ್‌ ಮ್ಯೂಸಿಯಂಗೆ ಭೇಟಿ
6.15 ವಾಕಿಂಗ್‌
6.50 ಫಲಾಹಾರ
7.05 ಭಕ್ತರ ಭೇಟಿ
8.15 ವಿವಿಧ ಇಲಾಖೆಗಳ ಅ—ಕಾರಿಗಳ ಜತೆ ಮಾತುಕತೆ
9.15 ಮನೆ ಮಂದಿ ಜತೆ
10.00 ವಿಶ್ರಾಂತಿ 

ಚಿಟ್‌ ಚಾಟ್‌
ನಿಮಗೆ ಇಷ್ಟದ ತಿಂಡಿಯಾವುದು?
 ಯಾವುದೇ ರೂಪದ ಅವಲಕ್ಕಿ

ವಿರಾಮದ ಅವಧಿಯನ್ನು ಹೇಗೆ ಕಳೆಯುತ್ತೀರಿ?
ಓದು, ಮನೆ ಮಕ್ಕಳ ಜತೆ, ಸಂಸ್ಥೆಗಳಿಗೆ ದಿಢೀರ್‌ ಭೇಟಿ

ಯಾವ ನಟ/ ಸಿನಿಮಾ ನಿಮಗೆ ಇಷ್ಟ?
ರಾಜ್‌ ಕುಮಾರ್‌. ಹಿಂದಿಯ ಗೋಲ್‌ ಮಾಲ್‌ ಚಿತ್ರ

ಯಾವುದರ ಕುರಿತು ಭಯವಾಗುತ್ತೆ?
ಕಾರಣವಿಲ್ಲದ ಆರೋಪದ ಭಯ

ನಿಮ್ಮ ಶಕ್ತಿ ಏನು?
ಸ್ವಾಮಿ ಮಂಜುನಾಥ

ಯಾವ ಪ್ರಾಣಿ ಇಷ್ಟವಾಗುತ್ತೆ?
ಗೋವು

ಯಾವ ಕಾರು ಇಷ್ಟ?
ಡಾರ್ಜ್‌ ಕಿಂಗ್ಸ್‌ ವೇ

ಮೊದಲನೆ ಕಾರು ಕೊಂಡದ್ದು ಯಾವಾಗ? ಅದು ಯಾವ ಕಾರು?
ಸ್ಟಾಂಡರ್ಡ್‌ ಹೆರಾಲ್ಡ್‌ 1964ನೆ ಮಾಡೆಲ್‌. 1966ರಲ್ಲಿ ಅಪ್ಪ ಕೊಡಿಸಿದ ಕಾರು

ನಿಮ್ಮ ಸ್ಫೂರ್ತಿ ಯಾರು?
ಧರ್ಮಸ್ಥಳ ಹಾಗೂ ತಂದೆ 

ನಿಮ್ಮ ಇಷ್ಟದ ಹಾಡು ಯಾವುದು?
ಶಾಸ್ತ್ರೀಯ ಸಂಗೀತದ ಹಾಡುಗಳು/ ಜೇಸುದಾಸ್‌ ಹಾಡುಗಳು/ ಪ್ರವೀಣ್‌ ಗೋಡಿVಂಡಿ ಕೊಳಲು

ನೀವು ಹಾಡ್ತೀರಾ?
ಮೊದಲು ಹಾಡ್ತಿದ್ದೆ

ನಿಮ್ಮ ಕನಸು ಏನು?
ಕ್ಷೇತ್ರದ ವಿವಿಧ ಕಾರ್ಯಕ್ರಮಗಳ ಬೆಳವಣಿಗೆ

ಬಾಕಿ ಇರುವ ಕನಸುಗಳು?
ತುಂಬಾ ಇದೆ. ವಯಸ್ಸಾಗುತ್ತಿದ್ದಂತೆ ಅನುಭವ ಹೆಚ್ಚಾಗಿ ಕನಸುಗಳು ಹೆಚ್ಚಾಗಲಾರಂಭಿಸಿವೆ.

ಪ್ಯಾಂಟ್‌-ಶರ್ಟ್‌ ಹಾಕಬೇಕೆಂದು ಅನಿಸಿಲೇ ಇಲ್ವಾ?
ಪಟ್ಟಾಭಿಷೇಕವಾಗಿ ಮೊದಲ ಎರಡು ವರ್ಷ ಹಾಕ್ತಿದ್ದೆ. ವಿದೇಶಕ್ಕೆ ಹೋದಾಗಲೂ ಹಾಕ್ತಿದ್ದೆ. ನಂತರ ಕಚ್ಚೆ ಪಂಚೆ ರೂಢಿಯಾಗಿ ಲಕ್ಷದಲ್ಲಿ ಒಬ್ಬನಾಗದೇ ಲಕ್ಷ್ಯ ವಹಿಸುವಂತಾಗಿದ್ದೇನೆ.ಈ ಕಚ್ಚೆ-ಪಂಚೆಯಿಂದಲೇ ವಿದೇಶದಲ್ಲೂ ಆಕರ್ಷಣೆಗೆ ಕಾರಣವಾಗಿದ್ದಿದೆ.

ಬೋರ್‌ ಅನಿಸೋದು ಯಾವಾಗ ?
ಬಹಳ ಅಪರೂಪ. ಒತ್ತಡದ ಇಷ್ಟವಿಲ್ಲದ ಕಾರ್ಯಕ್ರಮ, ಒತ್ತಡದ ಪ್ರಯಾಣದ ಸಂದರ್ಭ 

ಶಾಲೆಯಲ್ಲಿ ಇಷ್ಟವಾದ ಪಾಠ/ ಕಷ್ಟವಾದ ಪಾಠ?
ಕನ್ನಡ/ಗಣಿತ

ಬದುಕಿನಲ್ಲಿ ಮರೆಯಲಾರದ ಕ್ಷಣ ಯಾವುದು?
ಧರ್ಮಸ್ಥಳ ಮಂಜುನಾಥ ಸ್ವಾಮಿಯ ಗರ್ಭಗೃಹ ನಿರ್ಮಾಣ

ಮುಂದಿನ ದಿನಗಳಲ್ಲಿ ಪ್ರಪಂಚದ/ದೇಶದ ಯಾವುದಾದರೂ ವ್ಯಕ್ತಿಯನ್ನು ಭೇಟಿಯಾಗಲೇಬೇಕೆಂಬ ಆಸೆ ಇದೆಯೇ?
ಇಲ್ಲ

ದೇವರು ಮೂರು ವರ ಕೊಟ್ಟರೆ ಏನು ಕೇಳುತ್ತೀರಿ?
ಆರೋಗ್ಯ. ನೆನೆಸಿದ ಕನಸು ಪೂರ್ತಿಯಾಗಲಿ. ಕ್ಷೇತ್ರದ ಕಾರ್ಯಕ್ರಮನ್ನು ಎಲ್ಲ ವಿಧದಲ್ಲಿ ಬೆಳೆಸುವ ಸಿಬ್ಬಂದಿಗಳ ಒಳ್ಳೆಯ ಸೇವೆ ಇನ್ನೂ ಮುಂದುವರಿಯಲಿ.

*ಲಕ್ಷ್ಮೀ  ಮಚ್ಚಿನ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

sringeri-new

Sringeri: ಇಂದು ಸುವರ್ಣ ಭಾರತೀ ಮಹೋತ್ಸವ “ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.