ದೆಹಲಿ ಟಿ20 ಪಂದ್ಯವೂ, ಗಂಗೂಲಿಯ ಆತಂಕವೂ
Team Udayavani, Nov 9, 2019, 5:02 AM IST
ಇತ್ತೀಚೆಗಿನ ವರ್ಷಗಳಲ್ಲಿ ಬಿಸಿಸಿಐ ನೆಮ್ಮದಿಯಲ್ಲಿ ಇಲ್ಲ ಅರ್ಥಾತ್ ಅದರ ಉಸ್ತುವಾರಿ ಹೊತ್ತವರು ನೆಮ್ಮದಿಯಲ್ಲಿಲ್ಲ. ಏನಾದರೂ ಒಂದು ಕಿರಿಕಿರಿ ಶುರುವಾಗಿ, ಅದು ವಿಕೋಪಕ್ಕೆ ಹೋಗುತ್ತದೆ. ಇದರ ಪರಿಣಾಮ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಇಡೀ ಬಿಸಿಸಿಐ ಸ್ವರೂಪವನ್ನೇ ಬದಲಾಯಿಸಲಾಗಿದೆ.
ಇತ್ತೀಚೆಗೆ ಬಿಸಿಸಿಐ ಎದುರಿಸಿ ಬಚಾವಾಗಿರುವ ವಿವಾದವೆಂದರೆ ದೆಹಲಿ ಟಿ20 ಪಂದ್ಯ. ನ.3ಕ್ಕೆ ದೆಹಲಿಯಲ್ಲಿ ಭಾರತ-ಬಾಂಗ್ಲಾ ನಡುವೆ ಟಿ20 ಪಂದ್ಯ ನಡೆಯಿತು. ದೆಹಲಿಯಲ್ಲೋ ಯಾವಾಗ ನೋಡಿದರೂ, ಹೊಗೆ, ಉಸಿರಾಟದ ತೊಂದರೆ. ಮೊನ್ನೆ ದೀಪಾವಳಿ ಹೊತ್ತಿಗಂತೂ ವಿಪರೀತವಾಗಿ, ದೆಹಲಿಯಲ್ಲಿ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಲಾಯಿತು.
ಅಂತಹ ಕಡೆ ನ್ಯಾಯಪೀಠ ನಿಯೋಜಿತ ಬಿಸಿಸಿಐ ಆಡಳಿತಾಧಿಕಾರಿಗಳು ಬಹಳ ಮುಂಚೆಯೇ ಟಿ20 ಪಂದ್ಯ ಆಯೋಜಿಸಿದ್ದರು. ಪಂದ್ಯಕ್ಕೂ ಕೆಲದಿನಗಳ ಮೊದಲು, ಬಿಸಿಸಿಐ ಅಧಿಕಾರವನ್ನು ಸೌರವ್ ಗಂಗೂಲಿ ನೇತೃತ್ವದ ಸ್ವತಂತ್ರ ತಂಡಕ್ಕೆ ಹಸ್ತಾಂತರಿಸಿ ಹೊರನಡೆದರು.
ಇತ್ತ ಗಂಗೂಲಿ ಮೇಲೆ ದೆಹಲಿ ಟಿ20 ರದ್ದುಗೊಳಿಸಿ ಎಂಬ ಒತ್ತಡ ತೀವ್ರವಾಯಿತು. ಪಂದ್ಯ ನಡೆಯಲು ಇನ್ನೇನು ವಾರವಿದೆಯೆನ್ನುವಾಗ ರದ್ದು ಮಾಡುವುದಾದರೂ ಹೇಗೆ? ಈ ಕಡೆ ಗಂಗೂಲಿ ರದ್ದುಗೊಳಿಸಲೂ ಆಗದೆ, ನಡೆಸಲು ಆಗದೆ ಪರದಾಡಿದರು. ಕಡೆಗೂ ಹೊಗೆಯ ನಡುವೆ, ಪಂದ್ಯ ನಡೆದು ಗಂಗೂಲಿ ನಿಟ್ಟುಸಿರುಬಿಟ್ಟರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.