ಪುಷ್ಪೋದ್ಯಾನವನ
Team Udayavani, Mar 23, 2019, 12:30 AM IST
ಕೊಲ್ಲಾಪುರದ ಕನೇರಿಯ ಶ್ರೀ ಕಾಡಸಿದ್ದೇಶ್ವರ ಮಠದ ಆವರಣದಲ್ಲಿ ದಿವ್ಯ ಪುಷ್ಪೋದ್ಯಾನ(ಸಿದ್ಧಗಿರಿ ಡಿವೈನ್ ಗಾರ್ಡನ್) ಅರಳಿ ನಿಂತಿದೆ. ಒಂದೇ ಮಾತಲ್ಲಿ ಹೇಳುವುದಾದರೆ ಇದು ಹೂಗಳ ಕಾಡು ! ದೇಶದ ಮೊತ್ತ ಮೊದಲ ಬೃಹತ್ ಗಾರ್ಡನ್ ಎಂಬ ಖ್ಯಾತಿ ಪಡೆದಿರುವ ಈ ಉದ್ಯಾನವನ ಶೀಘ್ರದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ.
ಎತ್ತ ನೋಡಿದರತ್ತ ಹೂಗಳ ಸಾಮ್ರಾಜ್ಯ. ಕಣ್ಣು ಕೊರೈಸುವ, ಇದು ಬಣ್ಣ ಬಣ್ಣದ ಹೂಗಳ ಕಾಡೋ ಹೇಗೆ ಎಂದು ಅನುಮಾನ ಬರುವಂತೆ ಹೂಗಳು ಲೋಕ ಅರಳಿನಿಂತಿದೆ. ಇದನ್ನು ನೋಡುವಾಗ ವಿಶ್ವ ವಿಖ್ಯಾತ ದುಬೈನ ಮಿರಾಕಲ್ ಗಾರ್ಡನ್ ಕಣ್ಣ ಮುಂದೆ ಬಂದರೂ ಆಶ್ಚರ್ಯ ಪಡಬೇಕಿಲ್ಲ. ಅದನ್ನೇ ಹೋಲುವ ಸಿದ್ಧಗಿರಿಯ ದಿವ್ಯಪುಷೊ³àದ್ಯಾನ ಮಹಾರಾಷ್ಟ್ರದ ಕನೇರಿಯ ಶ್ರೀ ಕಾಡಸಿದ್ದೇಶ್ವರ ಮಠದ ಆವರಣದಲ್ಲಿ ಎದ್ದು ನಿಂತಿದೆ.
ಗಾರ್ಡನ್‌ನಲ್ಲಿ ಏನೇನಿದೆ?
ಪ್ರವೇಶ ದ್ವಾರದ ಮೇಲೆ 50 ಅಡಿ ಎತ್ತರ, 60 ಅಡಿ ಅಗಲದಲ್ಲಿ ಗೋಮಾತೆ ಹೂಗಳಿಂದಲೇ ಕಂಗೊಳಿಸುತ್ತಿದ್ದಾಳೆ. ಗಾರ್ಡನ್ ಒಳ ಪ್ರವೇಶಿಸಿದರೆ ಬ್ರಹ್ಮ, ವಿಷ್ಣು, ಮಹೇಶ್ವರ, ಋಷಿ ಪರಂಪರೆಯ ವಿವಿಧ ಋಷಿ-ಮುನಿಗಳ ಗೋಪುರ, ಅದರ ತುದಿಯಲ್ಲಿ ಕರುವಿಗೆ ಹಾಲುಣಿಸುವ ಗೋಮಾತೆ ಸ್ವಾಗತಿಸುತ್ತಾಳೆ. ಮುಂದೆ ಸಾಗಿದರೆ ಋಷಿ, ವನ, ನವಿಲು, ವಿಠuಲ, ರುಕ್ಮಿಣಿ, ಬಸವೇಶ್ವರ, ಅಕ್ಕಮಹಾದೇವಿ ಇನ್ನಿತರೆ ಮೂರ್ತಿಗಳು ಸಾಲುಗಟ್ಟಿವೆ; ಅವೂ ಕೂಡ ಹೂಗಳಿಂದಲೇ “ಸೃಷ್ಟಿ’ಯಾಗಿವೆ.
ಐತಿಹಾಸಿಕ ಭವಾನಿ ಮಂಟಪದ ಮಾದರಿಯ ಕಟ್ಟಡವನ್ನೂ ಹೂಗಳಿಂದಲೇ ಪ್ರತಿ ಬಿಂಬಿಸಲಾಗಿದೆ. ಕೊಲ್ಲಾಪುರ ಚಪ್ಪಲಿ, ಜ್ಯಾಮಿಟ್ರಿ, ಭಾರತ ನಕ್ಷೆ, ರಾಷ್ಟ್ರಧ್ವಜ ಪ್ರತಿ ರಾಜ್ಯದ ಸಾಂಪ್ರದಾಯಿಕ ಉಡುಪಿನೊಂದಿಗೆ ಇಬ್ಬರು ಪ್ರತಿನಿಧಿಗಳಾಗಿ ನಿಲ್ಲಿಸಿದ್ದಾರೆ. ಆಕಾಶ ದರ್ಶನ, ಗ್ರಹಣ, ತರಕಾರಿಗಳು, ಎಳೆ ನೀರು, ಸೇಬು, ಬಾಳೆ, ಸೀತಾಫಲ, ಮಾವು, ಆನಾನಸ್ ಇನ್ನಿತರ ಹಣ್ಣುಗಳು, ಬಸನವನ ಹುಳು, ದೊಡ್ಡ ಜಮಖಾನ, ಗಡಿಯಾರ, ತೂಗು ಸೇತುವೆ, ಬುದ್ಧ9ವನ, ಪಂಚಕರ್ಮದ ವಿವಿಧ ಮಾದರಿಗಳು, ಲಕ್ಷ್ಮೀ, ಸರಸ್ವತಿ ಹಾಗೂ ಪಾರ್ವತಿ ವನಗಳು… ಅಬ್ಟಾ, ಹೂವಿನಲ್ಲಿ ಏನೇನೆಲ್ಲಾ ಅರಳಿಸಬಹುದು ಅನ್ನೋದಕ್ಕೆ ಇವೆಲ್ಲಾ ಸಾಕ್ಷಿಗಳು.
ಇಷ್ಟೇ ಅಲ್ಲ, ಹಳೇ ಟೈರ್‌ಗಳೂ ಇಲ್ಲಿ ಹೂಕುಂಡವಾಗಿವೆ, ಮೀನು, ಡೈನೋಸಾರ್ ರೂಪ ಪಡೆದಿವೆ. ಐದು ಹಂತದ ಮೆಟ್ಟಿಲುಗಳ ಬಾವಿ, ಹೂಗಳಿಂದಲೇ ಕಂಗೊಳಿಸುತ್ತಿದೆ.
7 ಎಕರೆಯಲ್ಲಿ ಅದ್ಬುತ ದ್ವೀಪ
ಸುಮಾರು 7 ಎಕರೆಯಲ್ಲಿ ಹರಡಿ ಕೊಂಡಿರುವ ಈ ಗಾರ್ಡನ್‌ನಲ್ಲಿ ಕಾಲಿಟ್ಟರೆ ಹೂಗಳಲ್ಲಿ ಅರಳಿ ನಿಂತಿರುವ ಸಾಧಕರು, ಪ್ರಾಣಿಗಳನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು. ಸರಿ ಸುಮಾರು 2 ಸಾವಿರ ಪ್ರಕಾರದ ಗುಲಾಬಿ, 140 ಪ್ರಬೇಧದ ದಾಸವಾಳ, ಜಾಜಿಮಲ್ಲಿಗೆ, ಮಲ್ಲಿಗೆ, ಸೇವಂತಿಗೆ ಇನ್ನಿತರ ದೇಶ-ವಿದೇಶಿ ತಳಿಗಳ ಹೂಗಳು ಇಲ್ಲಿವೆ. ನೂರಾರು ಜಾತಿಯ ದೇಶ-ವಿದೇಶಿ ಹೂಗಳನ್ನು ಬೆಳೆಸಿ ಗಾರ್ಡನ್ ರೂಪಿಸಲಾಗಿದೆ. 13 ತಿಂಗಳಿನಿಂದ ನೂರಾರು ಕೆಲಸಗಾರರು, ಕಲಾವಿದರು, ಸ್ವಯಂ ಸೇವಕರು, ಭಕ್ತರು ಹಗಲು ರಾತ್ರಿ ಎನ್ನದೆ ಗಾರ್ಡನ್ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.
ಗಾರ್ಡನ್‌ನ ಅನೇಕ ಕಡೆ ವರ್ಟಿಕಲ್ ರೂಪದಲ್ಲಿದೆ. ವಿವಿಧ ಮೂರ್ತಿ, ಗೊಂಬೆಗಳು, ನವಿಲು, ಗೋಪುರ ಇನ್ನಿತರ ಕಡೆಯ ಬಳಸಿದ ಹೂಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಬದಲಿಸಬೇಕಾಗುತ್ತದೆ. ಒಮ್ಮೆ ಹೂಗಳನ್ನು ಬದಲಾಯಿಸಿದರೆ, 30-40 ಲಕ್ಷ ರೂ. ಖರ್ಚು ಬರಬಹುದು ಎಂದು ಅಂದಾಜಿಸಲಾಗಿದೆ.
ಜಂಗಲ್ ಸಫಾರಿ..
ಸಿದ್ಧಗಿರಿ ಡಿವೈನ್ ಗಾರ್ಡನ್‌ಗೆ ಹೋದರೆ ಜಂಗಲ್ ಸಫಾರಿಗೆ ಕೂಡ ಹೋಗಬಹುದು. ಗವಿಯೊಳಗೆ ರೈಲಿನಲ್ಲಿ ಪಯಣಿಸುವಾಗ ನೋಡುಗರಿಗೆ ಅರಣ್ಯದ ಚಿತ್ರಣ ಗೋಚರವಾಗಲಿದೆ.
ಇಲ್ಲಿ ಬೇಸಿಗೆ, ಮಳೆಗಾಲ, ಚಳಿಗಾಲದ ಪರಿಚಯವೂ ಆಗುತ್ತದೆ. ಅರಣ್ಯದಲ್ಲಿನ ಪ್ರಾಣಿ, ಪಕ್ಷಗಳ ಧ್ವನಿ ಮೊಳಗುವಂತೆ ಪಂಚಭೂತಗಳು ಪ್ರತ್ಯಕ್ಷವಾಗಿ ತಮ್ಮ ಪರಿಚಯ, ತಮ್ಮಿಂದ ಆಗುತ್ತಿರುವ ಪ್ರಯೋಜನವನ್ನು ತಾವೇ ನಿರೂಪಿಸುವಂತೆ ಮಾಡಿದ್ದಾರೆ.
ನಾವೇಕೆ ಮಾಡಬಾರದು?
2018ರಲ್ಲಿ ದುಬೈನ ಮಿರಾಕಲ್ ಗಾರ್ಡನ್‌ಗೆ ಹೋಗಿದ್ದೆ. ಅಲ್ಲಿಗೆ ಬಂದ್ದಿದ್ದ ಭಾರತೀಯರು- ನೀರಿಲ್ಲ, ಮಣ್ಣಿಲ್ಲ ಆದರೂ ಇಂತಹ ಸುಂದರ ಗಾರ್ಡನ್ ರೂಪಿಸಿದ್ದಾರೆ. ಆದರೆ ನಮ್ಮಲ್ಲಿ ಏಕೆ ಹೀಗೆಲ್ಲ ಮಾಡೋಲ್ಲ ಅಂತ ಬೇಸರಿಸಿಕೊಂಡಿದ್ದು ನನ್ನ ಕಿವಿಗೆ ಬಿತ್ತು. ಆಗ ಶುರುವಾಗಿದ್ದೇ ಈ ಗಾರ್ಡನ್ ಯೋಚನೆ. ಮಾಡುವುದಾದರೆ ಮಿರಾಕಲ್ ಗಾರ್ಡನ್ ಮಾದರಿ ಇರಬೇಕು. ಆದರೆ, ಅದರೊಳಗೆ ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆ ಬಿಂಬಿಸುವಂತಾಬೇಕು ಎಂಬ ಚಿಂತನೆಯೊಂದಿಗೆ ಸಿದ್ದಗಿರಿ ಡಿವೈನ್ ಗಾರ್ಡನ್ ಆರಂಭಗೊಂಡಿತು. ಭಕ್ತರ ಸಹಕಾರ, ಸ್ವಯಂ ಸೇವಕರು, ಕೆಲಸದವರ ಶ್ರಮದೊಂದಿಗೆ ದೇಶದಲ್ಲೇ ಮೊದಲ ದಿವ್ಯ ಪುಷೊ³àದ್ಯಾನ ರೂಪುಗೊಂಡಿದೆ.
-ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಸಿದ್ದಗಿರಿ(ಕನೇರಿ)
ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.