ಅಂಗವಿಕಲರ ಚೆಸ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಸ್ರೂರು ಪ್ರತಿಭೆ
Team Udayavani, Jun 10, 2017, 3:55 AM IST
ವಿಭಿನ್ನ ಸಾಮರ್ಥ್ಯದ ಚೆಸ್ ಪಟು, ಕುಂದಾಪುರದ ಬಸ್ರೂರು ಮೂಲದ ಸಮರ್ಥ್ ಜೆ.ರಾವ್ ಸ್ಲೊವೇಕಿಯಾದಲ್ಲಿ ನಡೆದ ವಿಶ್ವಮಟ್ಟದ ದೈಹಿಕ ಅಸಮರ್ಥರ ಟೂರ್ನಿಯ ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಮುಕ್ತ ಚೆಸ್‌ನ ಸಾಮಾನ್ಯ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದುಕೊಳ್ಳುವ ಮೂಲಕ ಅಂಗವೈಕಲ್ಯವನ್ನು ಮೆಟ್ಟಿನಿಂತಿದ್ದಾರೆ.
ಮೇ ಮತ್ತು ಜೂನ್‌ನಲ್ಲಿ ಸ್ಲೊವೇಕಿಯಾದಲ್ಲಿ ನಡೆದ ವಿಶ್ವಮಟ್ಟದ ಟೂರ್ನಿಯಲ್ಲಿ ಸ್ಪರ್ಧಿಸಿದ್ದ ಸಮರ್ಥ್ ಎರಡು ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ವೈಯಕ್ತಿಕ 131 ಅಂಕಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಈ ಹಿಂದೆಯೂ 2015ರಲ್ಲಿ ಸ್ಲೊವೇಕಿಯಾದಲ್ಲಿ ನಡೆದ ವಿಶ್ವಮಟ್ಟದ ಅಂಗವಿಕಲರ ಟೂರ್ನಿಯಲ್ಲಿ ಕಂಚಿನ ಪದಕ, ಕಳೆದ ವರ್ಷ ಸರ್ಬಿಯಾದಲ್ಲಿ
ನಡೆದ ಅಂತಾರಾಷ್ಟ್ರೀಯ ಅಂಗವಿಕಲರ ಚೆಸ್ ಪಂದ್ಯಾಟದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಈ ಬಾರಿ ಮತ್ತೆ ಪದಕ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಇತೀಚೆಗೆ ಸ್ಲೊವೇಕಿಯಾದಲ್ಲಿ ನಡೆದ ಟೂರ್ನಿಯಲ್ಲಿ ಒಟ್ಟು 9 ಸುತ್ತುಗಳಿದ್ದು, ಸಮರ್ಥ್ 2 ಜಯ, 2 ಡ್ರಾ ಹಾಗೂ 3 ಸೋಲಿನೊಂದಿಗೆ ಒಟ್ಟು 4 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಕೊನೆಯ ದಿನದವರೆಗೂ ಅಗ್ರಸ್ಥಾನದಲ್ಲಿದ್ದ ಸಮರ್ಥ್ ಕೊನೆಯ 2 ಪಂದ್ಯ ಸೋಲುವುದರೊಂದಿಗೆ ಸ್ವಲ್ಪದರಲ್ಲೇ ಮತ್ತೂಂದು ಚಿನ್ನದ ಪದಕದಿಂದ ವಂಚಿತರಾದರು. ಅದನ್ನು ಲೆಕ್ಕಿಸದೆ ಎದುರಾಳಿ ಚದುರಂಗ ಪಟುಗಳ ಎದುರು ಕೆಚ್ಚೆದೆಯಿಂದ ಆಡಿ ಪ್ರಶಸ್ತಿ ಗೆದ್ದಿದ್ದಾರೆ.
ಅಂಗವೈಕಲ್ಯ ಮೆಟ್ಟಿನಿಂತ ಸಮರ್ಥ್
ಹುಟ್ಟಿನಿಂದಲೇ ಸೆರೆಬ್ರಲ್ ಪಾಲ್ಸಿ ಕಾಯಿಲೆಗೆ ತುತ್ತಾದ ಸಮರ್ಥ್ ಕೈಗಳಿಂದ ಚೆಸ್ ಕಾಯಿ ನಡೆಸಲು, ಕಾಲುಗಳಿಂದ ಸರಿಯಾಗಿ ಕುಳಿತುಕೊಳ್ಳಲು ಆಗದಿದ್ದರೂ, ಅದೊಂದು ಸಮಸ್ಯೆ ಅಲ್ಲ ಎನ್ನುವಂತೆ ಚದುರಂಗದಾಟದಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ. ಈಗಲೂ ಒಂದು ಹೆಜ್ಜೆ ನಡೆಯಲೂ ಆಗದ ಸಮರ್ಥ್ನನ್ನು ತಂದೆ-ತಾಯಿಯೇ ಎತ್ತಿಕೊಂಡು ಓಡಾಡುವ ಮೂಲಕ ನೆರವಾಗುತ್ತಿದ್ದಾರೆ. ವಿಶ್ವ, ರಾಷ್ಟ್ರ, ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಹಲವಾರು ಟೂರ್ನಿಗಳಲ್ಲಿ ಪ್ರಶಸ್ತಿಗಳನ್ನು ಗೆಲ್ಲುವುದರೊಂದಿಗೆ ಮನಸ್ಸಿ ದ್ದರೆ ಏನೂ ಬೇಕಾದರೂ ಸಾಧಿಸಬಹುದು ಎನ್ನುವುದನ್ನು ನಿರೂಪಿಸಿದ್ದಾರೆ. ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಸ್ಪರ್ಧಿಸಿ ಚಿನ್ನ, ಬೆಳ್ಳಿ, ಕಂಚಿನ ಪದಕ ಗೆದ್ದ ಹೆಗ್ಗಳಿಕೆ ಸಮರ್ಥ್ ಅವರದು.
2013ರಿಂದ ಚೆಸ್ ಕ್ರೀಡೆ ಅಭ್ಯಸಿಸುತ್ತಿದ್ದು, 2015ರಿಂದ ಒಂದರ ಮೇಲೊಂದು ಸಾಧನೆಗಳನ್ನು ಮಾಡುತ್ತಿದ್ದಾರೆ. ಚೆನ್ನೈನ ಜ್ಯೋತಿ ಪ್ರಕಾಶ್ ಅವರಿಂದ ತರಬೇತಿ ಹಾಗೂ ಚೆನ್ನೈನವರೇ ಆದ ಶ್ರೀನಿಧಿ ಶ್ರೀಪತಿ ಅವರಿಂದ ಆನ್‌ಲೈನ್ ತರಬೇತಿ ಪಡೆಯುತ್ತಿದ್ದಾರೆ.
ಸಮರ್ಥ್ ಯಾರು?
ಜಗದೀಶ್ ರಾವ್ ಮತ್ತು ವಿನುತಾ ದಂಪತಿ ಪುತ್ರನಾಗಿರುವ ಸಮರ್ಥ್ ಹುಟ್ಟಿದ್ದು ಕುಂದಾಪುರ ತಾಲೂಕಿನ ಬಸೂÅರಿನಲ್ಲಿ. ಸದ್ಯ ತಂದೆ ಜಗದೀಶ್ ಹೊನ್ನಾವರದಲ್ಲಿ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಹೀಗಾಗಿ ಅಲ್ಲಿಯೇ ನೆಲೆಸಿರುವ ಸಮರ್ಥ್ ಹೊನ್ನಾವರದ ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ತಾಯಿ ವಿನುತಾ ಕಾಲೇಜು ಉಪನ್ಯಾಸಕಿ. ತಂಗಿ ಸಾನ್ವಿ ರಾವ್ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.
2017 ಸ್ಲೊವೇಕಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಟೂರ್ನಿಯ ಜ್ಯೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಸೀನಿಯರ್ ವಿಭಾಗದಲ್ಲಿ ಕಂಚಿನ ಪದಕ
2016 ಸೆರ್ಬಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಚೆಸ್ ಪಂದ್ಯದಲ್ಲಿ ಕಂಚಿನ ಪದಕ
2015ಸ್ಲೊವೇಕಿಯಾದಲ್ಲಿ ನಡೆದ ಟೂರ್ನಿಯಲ್ಲಿ ಕಂಚಿನ ಪದಕ
ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.