ಅತೃಪ್ತಿಯೇ ಅಶಾಂತಿಯ ಮೂಲ
Team Udayavani, Mar 2, 2019, 9:28 AM IST
ಶ್ರೀ ಮದ್ಭಾಗವತದಲ್ಲಿ ಗ್ರಹಸ್ಥಾಶ್ರಮವು ಹೇಗಿರುತ್ತದೆ ಅತೃಪ್ತಿಯೇ ಅಶಾಂತಿಯ ಮೂಲ? ಮಾನವನು ಕಾಮ, ಕ್ರೋಧ, ಮದಗಳಿಂದ ಹೇಗೆ ಬಂಧಿಯಾಗುತ್ತಾನೆ ಎಂಬುದನ್ನು ಪಾರಿವಾಳದ ಕಥೆಯ ಮೂಲಕ ವಿವರಿಸಲಾಗಿದೆ. ಯಾವುದೇ ವಸ್ತು ಅಥವಾ ಯಾರ ಜೊತೆಯಾದರೂ ಅತಿಯಾದ ಆಸಕ್ತಿಯನ್ನು ಇಟ್ಟುಕೊಂಡಾಗ ನಾವು ಸಹಜವಾಗಿಯೇ ಕ್ಲೇಶವನ್ನು ಅನುಭವಿಸಬೇಕಾಗುತ್ತದೆ. ಅದನ್ನು ಉದಾಹರಿಸುತ್ತ ಪಾರಿವಾಳದ ಕಥೆಯನ್ನು ಹೇಳಲಾಗಿದೆ.
ಸ್ವತ್ಛಂದವಾಗಿ ಹಾರಿಕೊಂಡಿದ್ದ ಒಂದು ಗಂಡು ಪಾರಿವಾಳವು, ತನ್ನಷ್ಟಕ್ಕೆ ಇದ್ದ ಹೆಣ್ಣು ಪಾರಿವಾಳವೊಂದರ ಸೌಂದರ್ಯಕ್ಕೆ ಸೋತು ನಿಧಾನವಾಗಿ ಅದನ್ನು ಮೋಹಿಸಲು ಆರಂಭಿಸುತ್ತದೆ. ಪರಸ್ಪರ ಮೋಹಕ್ಕೆ ಒಳಗಾಗಿ ಒಂದು ಇನ್ನೊಂದನ್ನು ಬಿಟ್ಟಿರಲಾರದ ಹಂತವನ್ನು ತಲುಪಿದಾಗ ಅವೆರಡೂ, ಒಂದಾಗಿ ಬಾಳುವ ನಿರ್ಧಾರಕ್ಕೆ ಬರುತ್ತವೆ. ಆ ಜೋಡಿಗೆ ಮರಿ ಪಾರಿವಾಳಗಳು ಹುಟ್ಟಿ, ಒಂದು ಚಿಕ್ಕ ಸಂಸಾರವಾಗುತ್ತದೆ. ಆಗ ಮಕ್ಕಳಿಗಾಗಿ ಆಹಾರ ತರಲು ಎರಡೂ ಪಾರಿವಾಳಗಳು ಕಾಡನ್ನು ಸುತ್ತುವುದರಲ್ಲೇ ತಮ್ಮ ಸಮಯವನ್ನು ಕಳೆಯಬೇಕಾಗುತ್ತದೆ. ಒಂದು ದಿನ ತಾಯಿ ಪಾರಿವಾಳ ಬಂದು ನೋಡುವಾಗ ಅದರ ಮರಿಗಳು ಬೇಡನ ಬಲೆಯೊಂದರಲ್ಲಿ ಸಿಲುಕಿಕೊಂಡಿರುತ್ತವೆ.
ಇದರಿಂದ ತುಂಬಾ ದುಃಖೀತವಾದ ಆ ಪಾರಿವಾಳ, ತಾನು ಮಕ್ಕಳನ್ನು ಬಿಟ್ಟಿರಲಾರೆ ಎನ್ನುತ್ತ ಮಕ್ಕಳನ್ನು ಹಿಡಿದುಕೊಳ್ಳಲು ಹೋಗಿ ಆ ಬಲೆಯೊಳಗೆ ಸಿಕ್ಕಿಹಾಕಿಕೊಳ್ಳುತ್ತದೆ. ಇದನ್ನು ಕಂಡ ಗಂಡು ಪಾರಿವಾಳ, ಒಮ್ಮೆ ತಾನು ದೂರಹೋಗಿಬಿಡುವ ನಿರ್ಧಾರ ಮಾಡಿತಾದರೂ ಮಡದಿ-ಮಕ್ಕಳ ಮೋಹದಿಂದಾಗಿ ತಾನೂ ಇವರೊಟ್ಟಿಗೆ ಹೋಗುತ್ತೇನೆ ಎಂದು ನಿರ್ಧರಿಸಿ ಆ ಬಲೆಯೊಳಕ್ಕೆ ಹಾರುತ್ತದೆ. ಬೇಟೆಗಾರ ಇಡೀ ಪಾರಿವಾಳದ ಕುಟುಂಬವೇ ದೊರಕಿತು ಎಂಬ ಸಂತಸದಲ್ಲಿ ಹೊತ್ತೂಯ್ಯುತ್ತಾನೆ. ಈ ಬಗೆಯ ಕೊನೆಯನ್ನು ಕಾಣುವುದಕ್ಕೆ ಕಾರಣವಾದದ್ದು ಮೋಹ ಮತ್ತು ಅತಿಯಾದ ವಿಷಯಾಸಕ್ತಿಗಳೇ ಆಗಿವೆ. ಮಧುರ ಎಂದುಕೊಂಡು ಈ ಪಾರಿವಾಳದ ದಂಪತಿ ಬದುಕಿದ ರೀತಿಯು ಇಹ-ಪರಲೋಕಗಳನ್ನು ಅರಿಯದೆ ಅಜ್ಞಾನಕ್ಕೊಳಗಾಗಿ ಅವನತಿ ಹೊಂದಿದವು.
ಈ ಕಥೆಯಲ್ಲಿ ಪಾರಿವಾಳ ಎಂಬುದು ಕೇವಲ ಸೂಚಕ ಮಾತ್ರ. ಮಾನವನು ಕೂಡ ಈ ಪಾರಿವಾಳಗಳಂತೆ ವಿಷಯಾಸಕ್ತಿಗಳಲ್ಲಿ ತೊಡಗಿಕೊಂಡು ತನ್ನ ಜೀವನವನ್ನು ಹಾಳು ಮಾಡಿಕೊಳ್ಳುತ್ತಾನೆ. ಸುಖವನ್ನು ಅರಸುತ್ತ ಚಿತ್ತಚಂಚಲನಾದವನು ಕೇವಲ ತನ್ನ ಪರಿವಾರವನ್ನು ಸಾಕುವುದರಲ್ಲಿಯೇ ತೊಡಗಿಕೊಂಡು ದೀನ ಅವಸ್ಥೆಗೆ ತಳ್ಳಲ್ಪಡುತ್ತಾನೆ. ಈ ಮನುಷ್ಯ ಶರೀರವನ್ನು ಮುಕ್ತಿಯ ದ್ವಾರವೆಂದು ತಿಳಿದುಕೊಂಡು, ಮುಕ್ತಿಯನ್ನು ಹೊಂದಲು ಪ್ರಯತ್ನಿಸಬೇಕು ಎಂಬುದನ್ನು ಇದು ಸಾರುತ್ತದೆ.
ಒಂಬತ್ತನೆಯ ಗುರು ಮನುಷ್ಯನು ಯಾವಾಗಲೂ ಇಂದ್ರಿಯಗಳ ದಾಸನೇ ಆಗಿರುತ್ತಾನೆ. ಒಂದಲ್ಲ ಒಂದು ರೀತಿಯಲ್ಲಿ ಇಂದ್ರಿಯಗಳ ಸೆಳತಕ್ಕೆ ಒಳಗಾಗಿ ತಿಳಿದೋ ತಿಳಿಯದೆಯೋ ಪಾಪಕರ್ಮಗಳಲ್ಲಿ ತೊಡಗಿಕೊಳ್ಳುತ್ತಾನೆ. ನಾವು ಸೇವಿಸುವ ಆಹಾರದಿಂದ ಹಿಡಿದು ಪ್ರಾಪಂಚಿಕವಾಗಿ ಅನುಭವಿಸುವ ಎಲ್ಲ ಸುಖಭೋಗಗಳು ಇಂದ್ರಿಯಗಳಿಂದ ನಿಯಂತ್ರಿಸಲ್ಪಡುತ್ತವೆ. ನಾಲಿಗೆ ರುಚಿಯನ್ನು ಬಯಸುತ್ತದೆ. ಆ ರುಚಿಗಾಗಿ ಬಗೆಬಗೆಯ ತಿನಿಸುಗಳನ್ನು ಹುಡುಕುವುದು ಮನಸ್ಸು. ಇನ್ನು ಎಷ್ಟು ತಿನ್ನಬೇಕು ಎಂಬುದನ್ನೂ ಹಸಿವೆಗಿಂತಲೂ ಹೆಚ್ಚಾಗಿ ರುಚಿರುಚಿ ಖಾದ್ಯಗಳೇ ನಿರ್ಣಯಿಸಿಬಿಡುತ್ತವೆ. ಹಾಗಾಗಿ, ಮನುಷ್ಯನಿಗೆ ಕೆಲವೊಮ್ಮೆ ತಿಂದಷ್ಟೂ ತೃಪ್ತಿಯಿಲ್ಲ. ಹಾಗಾಗಿ ಆಹಾರವೂ ನಮ್ಮ ದುಃಖಕ್ಕೆ ಮೂಲವಾಗುವ ಸಂಗತಿಗಳÇÉೊಂದು. ಆಹಾರ ಸೇವನೆಯೂ ಒಂದು ಬಗೆಯ ಸಂಸ್ಕಾರವೇ. ಈ ಸಂಸ್ಕಾರ ಆರೋಗ್ಯಕ್ಕೂ ಮನಸ್ಸಿನ ನೆಮ್ಮದಿಗೂ ಪರೋಕ್ಷವಾಗಿ ಕಾರಣವಾಗು ವಂತದ್ದು.
ಶ್ರೀಮದ್ಭಾಗವತ, ಹೆಬ್ಟಾವಿನಿಂದಲೂ ನಾವು ಕಲಿಯುವುದಕ್ಕಿದೆ ಎನ್ನುತ್ತದೆ. ಮುಖ್ಯವಾಗಿ ಆಹಾರ ಸೇವನೆಯನ್ನು ಅಂದರೆ ಆಹಾರ ಸೇವಿಸುವಲ್ಲಿನ ನಿಯಂತ್ರಣ ಶಕ್ತಿಯನ್ನು ಹೆಬ್ಟಾವಿನ ಆಹಾರ ಸೇವನಾ ವಿಧಾನವನ್ನು ನೋಡಿ ತಿಳಿದುಕೊಳ್ಳಬೇಕು ಎಂದರ್ಥ. ಹೆಬ್ಟಾವು ತಾನಾಗಿಯೇ ದೊರೆತ ಆಹಾರವನ್ನು ತಿಂದು ಮಲಗುತ್ತದಂತೆ. ಅದು ಸಿಕ್ಕಿದ ಆಹಾರದಲ್ಲಿಯೇ ತೃಪ್ತಿಪಟ್ಟುಕೊಳ್ಳುವದಲ್ಲದೆ, ಆಹಾರವಿಲ್ಲದೆ ಕೆಲವು ದಿನಗಳನ್ನು ಕಳೆಯಬಲ್ಲದು.
ನಾವೂ ಕೂಡ ಅದರಂತೆಯೇ ತಾನಾಗಿ ದೊರೆತ ಆಹಾರವನ್ನು ಮಾತ್ರ ಸೇವಿಸಬೇಕು. ಇದು ಯೋಗಿಯಾದವನು ಮುಖ್ಯವಾಗಿ ಅಳವಡಿಸಿಕೊಳ್ಳಲೇ ಬೇಕಾದ ನಿಯಮ. ಸಾಧಾರಣ ಮಾನವರೂ ಇದನ್ನು ಅನುಸರಿಸಿದರೆ ಮುಕ್ತಿ ಸಾಧನೆ ಸುಲಭ ಸಾಧ್ಯ.
ದೊರಕಿದ ಆಹಾರವು ಮಧುರವಾಗಿರಲೀ, ನೀರಸವಾಗಿರಲೀ, ಹೆಚ್ಚಿರಲೀ ಅಥವಾ ಕಡಿಮೆಯಿರಲಿ, ಅಷ್ಟನ್ನೇ ತೃಪ್ತಿಯಿಂದ ಸೇವಿಸಿ ಬದುಕಬೇಕು. ಆಗ ದೇಹವನ್ನೂ, ಮನಸ್ಸನ್ನೂ ನಿಯಂತ್ರಿಸುವ ಶಕ್ತಿ ಹೆಚ್ಚುತ್ತ ಹೋಗು ತ್ತದೆ. ಅತಿಯಾದ ಆಹಾರ, ರುಚಿಯ ವ್ಯಾಮೋಹಗಳ ಬಗ್ಗೆ ಉದಾಸೀನ ತಾಳುವುದೇ ಒಳ್ಳೆಯದು.ಆಹಾರವು ದೇಹವನ್ನೂ
ಮನಸ್ಸನ್ನೂ ನಿಯಂತ್ರಿಸುವ ಶಕ್ತಿ ಹೊಂದಿದೆ. ಆಹಾರದ ಬಗ್ಗೆ ಆದಷ್ಟು ಜಡತ್ವ ಇದ್ದರೆ ಒಳ್ಳೆಯದು.
ಬದುಕು ಸಾತ್ತಿ$Ìಕವಾಗಿ ಗುಣಾತೀತವಾಗಲು ಯೋಗಿಯಂತೆಯೇ ಕೆಲವಷ್ಟು ನಿಯಮಗಳನ್ನು ಪಾಲಿಸಿಕೊಂಡು ಜೀವಿಸಬೇಕು. ಇಲ್ಲಿ ಮುಖ್ಯವಾಗಿ ಕಲಿಯಬೇಕಾದ ಪಾಠ ವೆಂದರೆ, ಅಗತ್ಯತೆಗಳ ಹೊಂದಾಣಿಕೆ. ಇರುವುದರಲ್ಲೇ ತೃಪ್ತನಾಗುವ ಮನೋಭಾವ ಹುಟ್ಟಬೇಕು. ಇರುವುದನ್ನು ಹೆಚ್ಚುಕಾಲ ಉಪಯೋಗಿಸುವ ಜಾಣ್ಮೆ ಇರಬೇಕು.
ವಿಷ್ಣು ಭಟ್ ಹೊಸಮನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.