ಧ್ಯಾನದ ಹಿಂದಿರುವ ನಿಜಾರ್ಥವಾದರೂ ಏನು?


Team Udayavani, Jan 26, 2019, 12:55 AM IST

16.jpg

ಧ್ಯಾನ ಮಾಡುವುದರಿಂದ ದೇವರು ಒಲಿಯುತ್ತಾನೆಯೇ? ಎಂದು ಈಗಿನ ಕಾಲದಲ್ಲಿ ಕೇಳಿದರೆ ಈ ಕಲಿಯುಗದಲ್ಲಿ ಸಾಧ್ಯವೇ ಇಲ್ಲ ಎಂಬ ಸರಳವಾದ ಉತ್ತರ ಕೂಡಲೇ ದೊರೆಯುತ್ತದೆ. ಆದರೆ ಧ್ಯಾನವೆಂಬುದು ಕೇವಲ ದೇವರನ್ನು ಒಲಿಸಿಕೊಳ್ಳುವ ಮಾರ್ಗವಲ್ಲ; ಅದು, ನಮ್ಮ ಮನಸ್ಸನ್ನು ನಿಯಂತ್ರಿಸುವ ಮಾರ್ಗ. ಯಾವುದೇ ಶ್ಲೋಕವನ್ನು ಪಠಿಸುವಾಗ ಅಥವಾ ಧ್ಯಾನ ಮಾಡುವಾಗ ಏಕಾಗ್ರತೆಯಿಂದ ಮಾಡಿದರೆ ನಮ್ಮ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ. 

ಹಿಂದೂಗಳಲ್ಲಿ ದೇವರನ್ನು ಹಲವಾರು ರೂಪಗಳಲ್ಲಿ ಪೂಜಿಸಲಾಗುತ್ತದೆ. ಗಣಪತಿ, ವಿಷ್ಣು, ಶಿವ, ಕೃಷ್ಣ, ರಾಮ, ಹನುಮಂತ, ದೇವಿಯರು ಹೀಗೆ ಹಲವಾರು ರೂಪಗಳು ನಮ್ಮಲ್ಲಿವೆ. ಪ್ರತಿಯೊಂದು ದೇವರಿಗೂ ಒಂದೊಂದು ವಿಶೇಷವಾದ ಶ್ಲೋಕಗಳಿರುತ್ತವೆ. ಅಂಥ ಶ್ಲೋಕಗಳನ್ನು ಪಠಿಸುವುದರಿಂದ ಅಥವಾ ಧ್ಯಾನ ಮಾಡುವುದರಿಂದ ದೇವರು ಸಂಪ್ರೀತನಾಗುತ್ತಾನೆ ಮತ್ತು ನಮ್ಮೆಲ್ಲ ಸಂಕಷ್ಟಗಳನ್ನು ಪರಿಹರಿಸುತ್ತಾನೆ ಎಂಬ ನಂಬಿಕೆ ಇದೆ. ಇದು ದೇವರನ್ನು ಮನಸ್ಸಿನಲ್ಲಿ ತುಂಬಿಕೊಳ್ಳುವ ರೀತಿಯೂ ಹೌದು.

ಧ್ಯಾನ ಎಂಬುದು ಸಾಧಾರಣ ಸಂಗತಿಯಲ್ಲ. ನಮಗೆ ಗೊತ್ತಿರುವ ಶ್ಲೋಕವನ್ನು ದೇವರಮುಂದೆ ನಿಂತುಕೊಂಡೋ, ಕುಳಿತುಕೊಂಡೋ ಕೆಲವು ಅಥವಾ ಹಲವು ಬಾರಿ ಪಠಿಸಿದ ಮಾತ್ರಕ್ಕೆ ಅದು ಧ್ಯಾನ ಎನಿಸಿಕೊಳ್ಳುವುದಿಲ್ಲ. ಅಲ್ಲಿ ಏಕಾಗ್ರತೆ ಬಲವಾಗಿರಬೇಕು. ಆ ಶ್ಲೋಕದಲ್ಲಿಯೇ ಚಿತ್ತವನ್ನು ನೆಟ್ಟಿರಬೇಕು. ಬಾಯಿಯಲ್ಲಿ ಶ್ಲೋಕ ಪಠಿಸುತ್ತ ಮನಸ್ಸು ಇನ್ನೆÇÉೋ ತಿರುಗಾಡುತ್ತ ಇದ್ದರೆ ಅದರಿಂದ ಪ್ರಯೋಜನ ಇಲ್ಲವೇ ಇಲ್ಲ. ಚಿತ್ತವನ್ನು ಕೇಂದ್ರೀಕರಿಸುವುದೇ ಧ್ಯಾನದ ಮೂಲತಣ್ತೀ. ಹಾಗಾಗಿ, ಧ್ಯಾನ ಮಾಡುವಾಗ ನಿರ್ಧಿಷ್ಟ ಭಂಗಿಯಲ್ಲಿ ಅಲುಗಾಡದೆ ಕುಳಿತುಕೊಂಡು, ಹೊರಗಿನ ದೃಶ್ಯಗಳು ಕಣ್ಣಿಗೆ ಬಿದ್ದರೆ  ಮನಸ್ಸು ಚಂಚಲವಾಗುವುದೆಂಬ ಕಾರಣಕ್ಕೆ ಕಣ್ಣುಮುಚ್ಚಿಕೊಂಡು, ಆದಷ್ಟು ಮೌನವಾದ ಸ್ಥಳ ಮತ್ತು ಸಮಯದಲ್ಲಿ ಧ್ಯಾನವನ್ನು ಮಾಡುವುದು ಸರಿಯಾದ ಕ್ರಮ.

ಧ್ಯಾನ ಮಾಡುವುದರಿಂದ ದೇವರು ಒಲಿಯುತ್ತಾನೆಯೇ? ಎಂದು ಈಗಿನ ಕಾಲದಲ್ಲಿ ಕೇಳಿದರೆ ಈ ಕಲಿಯುಗದಲ್ಲಿ ಸಾಧ್ಯವೇ ಇಲ್ಲ ಎಂಬ ಸರಳವಾದ ಉತ್ತರ ಕೂಡಲೇ ದೊರೆಯುತ್ತದೆ. ಆದರೆ ಧ್ಯಾನವೆಂಬುದು ಕೇವಲ ದೇವರನ್ನು ಒಲಿಸಿಕೊಳ್ಳುವ ಮಾರ್ಗವಲ್ಲ; ಅದು, ನಮ್ಮ ಮನಸ್ಸನ್ನು ನಿಯಂತ್ರಿಸುವ ಮಾರ್ಗ. ಯಾವುದೇ ಶ್ಲೋಕವನ್ನು ಪಠಿಸುವಾಗ ಅಥವಾ ಧ್ಯಾನ ಮಾಡುವಾಗ ಏಕಾಗ್ರತೆಯಿಂದ ಮಾಡಿದರೆ ನಮ್ಮ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ. ನಮ್ಮ ಜೀವನದ ಎÇÉಾ ಆಗುಹೋಗುಗಳಿಗೆ ಮನಸ್ಸೇ ಮುಖ್ಯಕಾರಣವಾಗಿರುವುದರಿಂದ ಈ ಮನಸ್ಸು ನಮ್ಮ ನಿಯಂತ್ರಣದಲ್ಲಿದ್ದರೆ ಆಗ ಜೀವನದಲ್ಲಿ ನೆಮ್ಮದಿಯನ್ನು ಕಾಣಬಹುದು. ಧ್ಯಾನವೇ ಇದಕ್ಕೆ ಮೂಲಮಾರ್ಗವೂ ಹೌದು; ಸರಿಯಾದ ಕ್ರಮವೂ ಹೌದು.

ಧ್ಯಾನದ ಮೂಲವೇ ಏಕಾಗ್ರತೆ. ಏಕಾಗ್ರತೆಯನ್ನು ಸಾಧಿಸುವುದಕ್ಕಾಗಿಯೇ ಧ್ಯಾನದ ಮಾರ್ಗವನ್ನು ಹೇಳಲಾಗಿದೆ ಧ್ಯಾನದ ಮೂಲಕ ಏಕಾಗ್ರತೆಯನ್ನೂ ಆ ಮೂಲಕ ಸಾಧಿಸಿದವರೂ ಇ¨ªಾರೆ. ಪ್ರತಿನಿತ್ಯವೂ ನಾವೂ ಒಂದೈದು ನಿಮಿಷವಾದರೂ ಏಕಾಗ್ರಚಿತ್ತರಾಗಿ ಮನಸ್ಸನ್ನು ಹಿಡಿದಿಟ್ಟುಕೊಂಡರೆ ನಮ್ಮಲ್ಲಿನ ಯೋಚನಾಶಕ್ತಿ ಹೆಚ್ಚುತ್ತದಲ್ಲದೆ ಯೋಚನಾರೀತಿಯೂ ಉತ್ತಮದಾರಿಯಲ್ಲಿಯೇ ಸಾಗುತ್ತದೆ. ಆದರೆ ನಾವು ಕೇವಲ ಮೌನದಿಂದ ಏಕಾಗ್ರತೆಯನ್ನು ಸಾಧಿಸಲಾಗದು. ಅದನ್ನು ಧ್ಯಾನದ ಮೂಲಕ ಸಾಧಿಸಬೇಕಾಗುತ್ತದೆ. ಯಾವುದೋ ಒಂದು ಧ್ಯಾನದಲ್ಲಿ ಮನಸ್ಸು ಕೇಂದ್ರೀಕೃತವಾದಾಗ ನಮ್ಮಲ್ಲಿರುವ ಅನಾವಶ್ಯಕ ಚಿಂತೆಯೋಚನೆಗಳೆಲ್ಲ ದೂರವಾಗುತ್ತವೆ. ಆಗ ನಮ್ಮ ಮನಸ್ಸು ನಿಧಾನವಾಗಿ ಪ್ರಬುದ್ಧವಾಗುತ್ತ ಹೋಗುತ್ತದೆ. ಹಾಗಾಗಿ, ನಾವು ಯಾವುದೇ ಕೆಲಸದಲ್ಲೂ ಸರಿಯಾದ ಹಾಗೂ ಸ್ಪಷ್ಟವಾದ ನಿರ್ಣಯವನ್ನು ತೆಗೆದುಕೊಳ್ಳಲು ಸಾಧ್ಯ. ಇದರಿಂದ ಉತ್ತಮ ಯೋಚನೆಗಳಷ್ಟೇ ನಮ್ಮ ಮನಸ್ಸನ್ನು ಆವರಿಸುವುದರಿಂದ ಮತ್ತು ಚಂಚಲತೆ ದೂರವಾಗುವುದರಿಂದ ಸಂದಭೋìಚಿತ ನಿರ್ಣಯಗಳನ್ನು ತೆಗೆದುಕೊಳ್ಳಲು ಮನಸ್ಸನ್ನು ಸದೃಢವಾಗುತ್ತದೆ. ಮತ್ತು ತಿಳಿಯಾಗರುವ ಮನಸ್ಸಿನಿಂದಾಗಿ ಜೀವನದಲಾಗುವ ತಪ್ಪುಗಳಿಂದ ದೂರವುಳಿಯಬಹುದು. ಹೀಗೆ ಮಾಡಿದಾಗ ಸುಖಕರವಾದ ಜೀವನವೂ ನಮ್ಮದಾಗುತ್ತದೆ. ಆದರೆ ಈ ಧ್ಯಾನದ ಸಾಧನೆ ಬಹುಮುಖ್ಯ. ಪ್ರತಿನಿತ್ಯ ಏಕಾಗ್ರತೆಯಿಂದ ಧ್ಯಾನ ಮಾಡಿದರೆ ಪಕ್ವ ಮತ್ತು ಪರಿಶುದ್ಧ ಮನಸ್ಸು ನಮ್ಮದಾಗುತ್ತದೆ. ಇದುವೇ ಧ್ಯಾನದ ಒಳಹೂರಣ;ನಿಜಾರ್ಥ.

ಧ್ಯಾನದ ಶಕ್ತಿ: ಧ್ಯಾನವೆಂಬುದು ಜ್ಞಾನ ಮನದ ಪರಿಶುದ್ಧತೆ ಜೀವನದ ಶಕ್ತಿ.

ವಿಷ್ಣು ಭಟ್ಟ ಹೊಸ್ಮನೆ

ಟಾಪ್ ನ್ಯೂಸ್

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.