ಕಸ ಗುಡಿಸೋ ಸತ್ಯಕ್ಕನ ಕಾವ್ಯ ಪವಾಡ
Team Udayavani, Jul 13, 2019, 2:40 PM IST
ಚಿತ್ರದುರ್ಗದ ತ.ರಾ.ಸು.ರಂಗಮಂದಿರದಲ್ಲಿ ಇತ್ತೀ ಚೆಗೆ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪಲ್ಲಿ ಸಾಹಿತಿ, ಚಿಂತಕ ಡಾ. ರಂಜಾನ್ ದರ್ಗಾ ಅವರು ಮಾಡಿದ ಭಾಷಣದ ಆಯ್ದ ಭಾಗ…
ಇಡೀ ಭಾರತದ ಚರಿತ್ರೆಯಲ್ಲಿ ಹೆಂಡತಿ, ಗಂಡನನ್ನು ಪ್ರಶ್ನಿಸುವ ಲಿಖೀತ ರೂಪದ ದಾಖಲೆ ಎಲ್ಲಿಯಾದರೂ ಇದ್ದರೆ, ಅದು ವಚನ ಸಾಹಿತ್ಯದಲ್ಲಿ ಎನ್ನುವುದು ಅಷ್ಟೇ ಸತ್ಯ. ಗಂಡಂದಿರು ತಪ್ಪು ಮಾಡಿದಾಗ ಹೆಣ್ಮಕ್ಕಳು ಪ್ರಶ್ನೆ ಮಾಡುವುದು, ಭಾರತೀಯ ಸಾಹಿತ್ಯದಲ್ಲಾ ಗಲಿ, ಸಂಸ್ಕೃ ತಿ ಯ ಲ್ಲಾ ಗ ಲೀ, ಎಲ್ಲೂ ಸಿಗುವುದಿಲ್ಲ. ಶ್ರೀಮಂತರಿಗೆ ಆಸೆ ಇರುತ್ತದೆ. ಶಿವ ಭಕ್ತರಿಗೆ ಆಸೆ ಇರಬಾರದು. ಇಂದು ದುಡಿದು, ಇಂದೇ ತಿನ್ನುತ್ತೇವೆ. ನಾಳೆ ದುಡಿದು, ನಾಳೆ ತಿನ್ನುತ್ತೇವೆ. ಸಂಗ್ರಹಕ್ಕೆ ವಚನ ಸಾಹಿತ್ಯದಲ್ಲಿ ಸ್ಥಳವಿಲ್ಲ. ದುಡಿತೀವಿ, ತಿನ್ನುತ್ತೀವಿ. ಪರ ಸ್ತ್ರೀಯರನ್ನು ಮುಟ್ಟುವುದಿಲ್ಲ, ನೋಡುವುದಿಲ್ಲ. ಯಾರು ಪವಿತ್ರರು ಎಂದರೆ, ತಮ್ಮ ಅಂಗಾಂಗಗಳ ಮೇಲೆ ಯಾರು ನಿಯಂತ್ರಣ ಸಾಧಿಸಿ ವಿಜಯಿಗಳಾಗಿರುತ್ತಾರೋ ಅವರೇ ಸರ್ವಾಂಗ ಕಲಿಗಳು… ಅವ ರು ಶರಣರು. ಕೆಟ್ಟದ್ದನ್ನು ನೋಡದೆ, ಕಣ್ಣಿನ ಮೇಲೆ ವಿಜಯ ಸಾಧಿಸಿದ್ದಾರೆ. ಕೆಟ್ಟದನ್ನು ಕೇಳದೆ, ಕಿವಿಯ ಮೇಲೆ ವಿಜಯ ಸಾಧಿಸಿದ್ದಾರೆ. ಕೆಟ್ಟದ್ದನ್ನು ಮಾತನಾಡದೆ, ನಾಲಿಗೆಯ ಮೇಲೆ ಗೆಲುವು ಸಾಧಿಸಿದ್ದಾರೆ. ಕೆಟ್ಟ ಮಾರ್ಗದ ಕಡೆ ಹೋಗದೆ, ಕಾಲಿನ ಮೇಲೆ ವಿಜಯ ಸಾಧಿಸಿದ್ದಾರೆ. ಕೆಟ್ಟದ್ದನ್ನು ಮುಟ್ಟದೆ, ಕೈ ಮೇಲೆ ಜಯ ಸಾಧಿಸಿದ್ದಾರೆ. ಹೀಗೆ ಎಲ್ಲ ಅಂಗಾಂಗಗಳನ್ನೂ ಗೆದ್ದಿ ದ್ದಾರೆ. ಅದಕ್ಕಾಗಿಯೇ ಕೂಡಲ ಸಂಗನ ಶರಣರು ಸ್ವತಂತ್ರ ಧೀರರು, ಕಲಿಗಳಾಗಿದ್ದಾರೆ.
ಬಸವಣ್ಣನವರ ಪ್ರಕಾರ “ಸ್ವಾತಂತ್ರ್ಯ’ ಎಂದರೆ, ಯಾವುದೋ ಒಂದು ರಾಜ್ಯ ಗೆದ್ದು ಅಲ್ಲಿನ ರಾಜರನ್ನು ಸೋಲಿಸಿ, ಸ್ವತಂತ್ರ ಆಗುವುದಲ್ಲ. ನಮ್ಮನ್ನು ನಾವು ಹೇಗೆ ಗೆಲ್ಲಬೇಕು ಎನ್ನುವುದು ಮತ್ತು ಪಂಚೇಂದ್ರಿಯಗಳ ಮೇಲೆ ವಿಜಯ ಸಾಧಿಸುವವನೇ ಸ್ವತಂತ್ರ ಮನುಷ್ಯ. ಇಂ ಥ ವಚನಗಳೇ ಕನ್ನಡದ ಕಾವ್ಯ ಜಗ ತ್ತಿನ ಶಕ್ತಿ. ಆದರೆ, ಈ ಅಮೂಲ್ಯ ರಚನೆಗಳನ್ನು ನಾವು ಜಗತ್ತಿಗೆ ಮುಟ್ಟಿಸಲು ಆಗಲಿಲ್ಲ. ಜಗತ್ತಿಗೆ ಬೇಡ, ಕನಿಷ್ಠಪಕ್ಷ, ಕರ್ನಾಟಕದ ಹೊರ ರಾಜ್ಯಗಳಿಗೆ ಮುಟ್ಟಿಸಲು ಆಗಲಿಲ್ಲ. ಅದೂ ಹೋಗಲಿ, ನಮ್ಮ ನೆರೆಮನೆಯವರಿಗೂ ವಚನ ಸಾಹಿತ್ಯವನ್ನು ಮುಟ್ಟಿಸಲು ಆಗಲಿಲ್ಲ. ಅದೂ ಹೋಗಲಿ, ನಮ್ಮ ಮನೆಯವರಿಗೇ ನಾವು ಅದ ನ್ನು ಮುಟ್ಟಿಸಲು ಸಾಧ್ಯವಾಗಲಿಲ್ಲ. ಇನ್ನೂ ಬೇಸರದ ಸಂಗತಿಯೆಂದರೆ, ನಾವೇ ಅದನ್ನು ಸರಿ ಯಾಗಿ ಅರಿಯಲು ಹೋಗಲಿಲ್ಲ.
ಅನುಭವ ಮಂಟಪದ ಪರಿಕಲ್ಪನೆಯೇ ಅತ್ಯಂತ ಶಕ್ತಿ ಶಾಲಿ. ವಚನ ಸಾಹಿತ್ಯದ ಮಹತ್ವ ಇರುವುದೇ ದುಡಿಯುವ ಜನರ ಮಧ್ಯ. 770 ಅಮರ ಗಣಂಗಳು ದುಡಿಯುವ ಜನರಿದ್ದರು. ಕಸ ಗುಡಿಸೋ ಸತ್ಯಕ್ಕ, ದಲಿತ ಮಹಿಳೆ ಕಾಳವ್ವೆ, ಅಂಬಿಗರ ಚೌಡಯ್ಯ, ಮಡಿವಾಳ ಮಾಚೀದೇವ, ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಹರಳಯ್ಯ, ಹಡಪದ ಅಪ್ಪಣ್ಣ, ನಾಗಿದೇವರು- ಇಂಥ ಜನರಿಂದ ಕೂಡಿದಂಥ ಅನುಭವ ಮಂಟಪ ಜಗತ್ತಿನಲ್ಲೇ ವಿಶಿಷ್ಟವಾದ ಪಾರ್ಲಿಮೆಂಟ್. ಆ ಪಾರ್ಲಿಮೆಂಟಿನಲ್ಲಿ 770 ಸಂಸದರಿದ್ದರು. ಇಷ್ಟು ದೊಡ್ಡ ಸಂಖ್ಯೆಯ ಪಾರ್ಲಿಮೆಂಟ್ ಜಗತ್ತಿನಲ್ಲಿ ಇವತ್ತಿಗೂ ಹುಟ್ಟಿಲ್ಲ. ಭಾರತದ ಸಂಸ ತ್ತಿ ನಲ್ಲೂ ಇಷ್ಟೊಂದು ಸಂಖ್ಯೆಯ ಎಂಪಿಗಳಿಲ್ಲ. ಅಷ್ಟೊಂದು ಜನರ ಮಧ್ಯ ಮಹಿಳೆಯರು, ಚರ್ಚೆಯಲ್ಲಿ ಭಾಗವಹಿಸುತ್ತಿದ್ದರು. 33 ವಚನಕಾರ್ತಿಯರು ರಚಿಸಿದ ವಚನಗಳು ಸಿಕ್ಕಿವೆ. ಕಸ ಗುಡಿಸೋ ಸತ್ಯಕ್ಕ, ವಚನ ಬರೆದಾಗ ಇಂಗ್ಲಿಷಿನಲ್ಲಿ ಒಂದು ಸಾಲಿನ ಸಾಹಿತ್ಯವೂ ಬಂದಿರಲಿಲ್ಲ. ಬಸವಣ್ಣನವರು ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರಸ್ಥರನ್ನಾಗಿ ಮಾಡಿಸಿದ್ದರು. ಇದು ಕನ್ನಡ ಸಾಹಿತ್ಯ ಹೊರತುಪಡಿಸಿ, ಬೇರೆಲ್ಲೂ ಕಾಣಲಾಗದ ಪವಾಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Abhimanyu Kashinath; ಸೂರಿ ಲವ್ ಗೆ ಉಪ್ಪಿ ಮೆಚ್ಚುಗೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.