ಹಾರಿ ಹೋಗದ ಪ್ಯಾಪಿಲಾನ್‌!


Team Udayavani, Oct 20, 2018, 3:47 PM IST

2554.jpg

ಮೈಸೂರಿನ ರಂಗಕರ್ಮಿ ಹುಲುಗಪ್ಪ ಕಟ್ಟಿಮನಿ ಅವರ “ಸಂಕಲ್ಪ’ ಸಂಸ್ಥೆಯ “ಜೈಲಿನಿಂದ ಬಯಲಿಗೆ ರಂಗಯಾತ್ರೆ’ಯ ಸಾಹಸಕ್ಕೆ ಈಗ ಭರ್ತಿ 20 ವರ್ಷ. 500- 600 ಕೈದಿಗಳು ಇವರಲ್ಲಿ ರಂಗಶಿಕ್ಷಣ ಪಡೆದು, ಸನ್ನಡತೆ ರೂಢಿಸಿಕೊಂಡಿದ್ದಾರೆ. ಜೈಲಿನ ಕಲಾವಿದರೇ ಇದ್ದ ಇವರ ನಾಟಕದ ತಂಡದ 15 ಸದಸ್ಯರಿಗೆ ಕಳೆದವರ್ಷ ಬಿಡುಗಡೆ ಭಾಗ್ಯ ಸಿಕ್ಕಿತು. ಈಗ ಮತ್ತೆ ಹೊಸ ಕೈದಿ ಕಲಾವಿದರ ಪರ್ವ. ಅವರಿಗೆ ನಿತ್ಯವೂ ರಂಗದ ತಾಲೀಮು. ಈ ಬಾರಿ ಚಂದ್ರಶೇಖರ ಕಂಬಾರರ “ಸಂಗ್ಯಾಬಾಳ್ಯ’ವನ್ನು ಪ್ರದರ್ಶನಕ್ಕೆ ಆರಿಸಿಕೊಂಡಿರುವ “ಸಂಕಲ್ಪ’ ತಂಡವು, 2019ರ ಜನವರಿಯಿಂದ 10 ಜಿಲ್ಲೆಗಳಲ್ಲಿ ನಾಟಕೋತ್ಸವ ಯಾತ್ರೆ ಹಮ್ಮಿಕೊಳ್ಳುತ್ತಿದೆ…

ಅವತ್ತು ಬಾಹುಬಲಿಗೆ ಮಹಾಮಜ್ಜನದ ಕೊನೇ ದಿನ. ಶ್ರವಣಬೆಳಗೊಳದ ಗೊಮ್ಮಟನ ಬೆಟ್ಟದ ಬುಡದಲ್ಲಿ ಕೈಕಟ್ಟಿ ನಿಂತಿದ್ದ 30 ಕೈದಿಗಳಿಗೆ ಆ ಮುಗಿಲ ಮೂರ್ತಿಯನ್ನು ನೋಡುವ ಆಸೆ ಉಕ್ಕಿತ್ತು. ಆದರೆ, ಅವರಿಗೆ ಕಾವಲಿದ್ದ ಪೊಲೀಸರಿಂದ ಅನುಮತಿ ಸಿಕ್ಕೇ ಇರಲಿಲ್ಲ. ಮೈಮೇಲೆ ಖಾದಿಬಟ್ಟೆ; ಅಂಗಿಯ ಎದೆ ಮೇಲೆ ಅಚ್ಚಾದ ಜೈಲಿನ ಅಂಕಿ; ದೊಗಲೆ ಚಡ್ಡಿ; ಜೈಲು ಟೋಪಿ… ಲಕ್ಷಾಂತರ ಜನರ ನಡುವೆ ಇವರೇ ಕೈದಿಗಳು ಎಂದು ಸಲೀಸಾಗಿ ಪತ್ತೆ ಹಚ್ಚಬಹುದಾದರೂ, ಬಾಹುಬಲಿಯ ಮುಂದೆಯೇ ಚಳ್ಳೇಹಣ್ಣು ತಿನ್ನಿಸಿಬಿಟ್ಟರೇನು ಗತಿ? ಇದು ಪೊಲೀಸರಲ್ಲಿದ್ದ ಆತಂಕ. ಆ ಕೈದಿಗಳೆಲ್ಲ ರಂಗಮೇಷ್ಟ್ರು ಹುಲುಗಪ್ಪ ಕಟ್ಟಿಮನಿ ಅವರ ಕಾಲಿಗೆ ಬಿದ್ದು, “ನಮ್ಮನ್ನು ನಂಬಿ ಸಾರ್‌, ನಾವು ಖಂಡಿತಾ ಇಲ್ಲಿಗೇ ವಾಪಸು ಬರ್ತೀವಿ, ಒಮ್ಮೆ ಗೊಮ್ಮಟನನ್ನು ನೋಡಿ ಬರ್ತೀವಿ ‘ ಅಂತ ಅಂಗಲಾಚಿದರು. ಮೇಷ್ಟ್ರ ಮನಸ್ಸು ಕರಗಿತು. ಕೊನೆಗೂ ಬೆಟ್ಟದ ಮೇಲೆ ಹೊರಟಿತು ಕೈದಿಪಡೆ. ಮುಗಿಲವೀರನಂತೆ ನಾವೂ ಸಕಲ ಬಂಧನಗಳಿಂದ ಮುಕ್ತರಾದರೆಷ್ಟು ಚೆಂದ ಎನ್ನುವ ಆಸೆ ಅವರೆಲ್ಲರ ಕಣ್ಣಲ್ಲಿತ್ತು. ಮೂರೂವರೆ ತಾಸಿನ ಮಹಾಮಜ್ಜನ ಕಳೆದಿದ್ದೇ ಗೊತ್ತಾಗಲಿಲ್ಲ.

  ಅದಾಗಿ ಇಪ್ಪತ್ತೇ ನಿಮಿಷದಲ್ಲಿ ಅಷ್ಟೂ ಕೈದಿಗಳು, ಬೆಟ್ಟದ ಬುಡದಲ್ಲಿ, ನಿಗದಿತ ಜಾಗದಲ್ಲಿ ನಿಂತಿದ್ದರು. “ಬನ್ನಿ ಸ್ವಾಮಿ, ತಗೊಳ್ಳಿ ನಮ್ಮ ಲೆಕ್ಕ… ಎಲ್ಲರೂ ಇದ್ದೀವಲ್ಲಾ?’ ಎನ್ನುತ್ತಾ ಪೊಲೀಸರಿಗೆ ಪ್ರೀತಿಯ ಸವಾಲೆಸೆದಿದ್ದರು. ಇದನ್ನೆಲ್ಲ ನೋಡುತ್ತಿದ್ದ ಅಲ್ಲೊಬ್ಬರು ಪಕ್ಕದಲ್ಲಿದ್ದ ಕೈದಿಯನ್ನು “ಎಂಥ ಅವಕಾಶವಿತ್ತಲ್ಲ ನಿಂಗೆ? ಲಕ್ಷಾಂತರ ಜನರಿದ್ದರು, ಎಲ್ಲಾದರೂ ಸಣ್ಣ ಕಿಂಡಿ ಹುಡುಕಿಕೊಂಡು, ಎಸ್ಕೇಪ್‌ ಆಗಬಹುದಿತ್ತಲ್ಲಾ? ಯಾಕೆ ಇಂಥ ಚಾನ್ಸ್‌ ಮಿಸ್‌ ಮಾಡ್ಕೊಂಡೆ?’ ಅಂತ ಕೇಳಿದರು. ಅದಕ್ಕೆ ಆತ, “ಎಂಥ ಮಾತನ್ನು ಹೇಳಿºಟ್ರಿ ನೀವು… ಒಂದು ವೇಳೆ ನಾನು ಓಡಿಹೋಗಿದ್ರೆ, ರಾತ್ರಿ ತಲೆದಂಡ ನಾಟಕದಲ್ಲಿ ನನ್ನ ಪಾತ್ರವನ್ನು ಯಾರು ಮಾಡ್ತಿದ್ರು!?’ ಅಂದಿದ್ದ! ಆ ಮಾತು ಕೇಳಿತೇನೋ, ಬಾಹುಬಲಿ ನಕ್ಕಿದ್ದ!

ಅಂದು ಫ್ರಾನ್ಸಿನ ತುತ್ತ ತುದಿಯ ದ್ವೀಪದಲ್ಲಿ ನಿರಪರಾಧಿ ಜೈಲು ಪಾಲಾಗಿದ್ದ ಪ್ಯಾಪಿಲಾನ್‌ ಮಹಾ ಪಲಾಯನಕ್ಕೆ ಕಿಂಡಿಗಳನ್ನು ಹುಡುಕಿ ಹೊರಟಿದ್ದ. ಕಡಲು- ಕತ್ತಲುಗಳನ್ನು ಸೀಳಿ, ದ್ವೀಪ ದ್ವೀಪಗಳನ್ನು ಜಿಗಿದು ತಪ್ಪಿಸಿಕೊಂಡೂಬಿಟ್ಟ. ಆದರೆ, ಈ ನೆಲದ ಪ್ಯಾಪಿಲಾನ್‌ಗಳಿಗೆ ಬಯಲು, ಬೆಟ್ಟವೇ ಅವಕಾಶವಾಗಿ ಸಿಕ್ಕರೂ, ಹಾರಲು ಮನಸ್ಸು ಬರಲಿಲ್ಲ; ಕಡೇಪಕ್ಷ ಚಳ್ಳೇಹಣ್ಣು ತಿನ್ನಿಸಿ, ಒಂದಷ್ಟು ದೂರ ಓಡಿಹೋಗಲೂ ಇಲ್ಲ. ಇದು ರಂಗಸಂಸ್ಕಾರದ ಫ‌ಲ! ಕೈದಿಗಳಿಗೆ 20 ವರ್ಷಗಳಿಂದ “ಸಂಕಲ್ಪ’ ಸಂಸ್ಥೆಯ ಮೂಲಕ ರಂಗಸಂಸ್ಕಾರ ನೀಡಿ, ಮತ್ತೆ ಮಾನವರನ್ನಾಗಿ ರೂಪಿಸುತ್ತಿರುವ ಮೈಸೂರಿನ ಹುಲುಗಪ್ಪ ಕಟ್ಟಿಮನಿ, ಎಂದೂ ಕೈಯಲ್ಲಿ ಬೇಡಿ ಹಿಡಿದವರಲ್ಲ. ಒಂದು ನಂಬಿಕೆಯ ಬಂಧನದಲ್ಲಿಯೇ ಕಟ್ಟಿಮನಿ ಮತ್ತು ಕೈದಿಗಳ ಸಂಬಂಧ ಈಗಲೂ ಅನೇಕ ಕತೆಗಳಿಗೆ ಕಣಜ ಕಟ್ಟುತ್ತಿ¤ದೆ. ಅಲ್ಲಿನ ಕೈದಿಗಳ ನೋವುಗಳಿಗೆ ನಾಟಕ ಪ್ರೀತಿಯೇ ಮದ್ದಾಗಿದೆ.

ಅದು ಎಚ್‌.ಎಸ್‌. ಶಿವಪ್ರಕಾಶರ “ಮಾರನಾಯಕ’ ನಾಟಕದ ತಾಲೀಮು. ಅಲ್ಲೊಬ್ಬ ಪೀಟರ್‌ ಎಂಬ ಕೈದಿ ಪಿಳಿಪಿಳಿ ಕಣಿºಟ್ಟು, ಕಟ್ಟಿಮನಿ ಅವರನ್ನೇ ದಿಟ್ಟಿಸುತ್ತಿದ್ದ. ಇವರು ಕರೆದರು. “ನೀನೂ ನಾಟಕ ಆಡು’ ಅಂದ್ರು. ಕೂಡಲೇ ಸುತ್ತಲಿದ್ದವರೆಲ್ಲ ಒಬ್ಬೊಬ್ಬರಾಗಿಯೇ ಇವರ ಕಿವಿಗೂಡಿಗೆ ಕಂಪ್ಲೇಂಟು ಮುಟ್ಟಿಸಿದರು. “ಅವನನ್ನು ಯಾಕೆ ಸೇರಿಸಿಕೊಂಡ್ರಿ ಸರ್‌? ಅವನು ಮೆಂಟಲ್ಲು’ ಅಂದ್ರು. “ಅದ್ಹೇಗೆ ಗೊತ್ತು?’- ಮೇಷ್ಟ್ರ ಪ್ರಶ್ನೆ. “ಅವನು ಗೋಡೆ ನೋಡ್ಕೊಂಡು, ಏನೇನೋ ಚಿತ್ರವಿಚಿತ್ರವಾಗಿ ಮಾತಾಡ್ತಾನೆ. ಗೋಡೆ ನೋಡ್ಕೊಂಡೇ ನಗುತ್ತಾ ಇರ್ತಾನೆ , ಗೋಡೆಗೇ ಊಟ ಮಾಡಿಸ್ತಾನೆ’ ಅಂದ್ರು ಅವರೆಲ್ಲ. ಇವರು ನಗುತ್ತಾ, “ನಾಟಕಕ್ಕೆ ಇಂಥ ಕಲಾವಿದರೇ ಬೇಕು’ ಎಂದು, ಆ ಪೀಟರ್‌ನ ಕೈಗೆ ಕೋಲು ಕೊಟ್ಟು, ಸೈನಿಕನ ಪಾತ್ರ ಮಾಡುವಂತೆ ಸೂಚಿಸಿದರು. ನಿರಂತರ ಆ ಎರಡು ತಿಂಗಳ ತಾಲೀಮಿನಲ್ಲಿ “ಪೀಟರ್‌ ಅದನ್ನು ತಗೊಂಡು ಬಾ, ಇದನ್ನು ತಗೊಂಡು ಬಾ, ಅಲ್ಲಿ ನಿಂತ್ಕೊà, ಇದನ್ನು ಸರಿಮಾಡು’ ಎನ್ನುತ್ತಾ ರಂಗಸಜ್ಜಿಕೆ ವ್ಯವಸ್ಥೆಗೂ ದುಡಿಸಿಕೊಂಡರು. “ಸರ್‌, ಈ ಮೊದಲು ಇವರೆಲ್ಲ ನನ್ನನ್ನು ಮೆಂಟಲ್‌ ಅಂತಿದ್ರು. ಈಗ ಯಾರೂ ಹಾಗೆ ಹೇಳ್ಳೋಲ್ಲ. ನಾನೂ ಅವರೊಂದಿಗೆ ನಗುತ್ತಾ ಇರಿ¤àನಿ’ ಅಂದಾಗ, ರಂಗಚಿಕಿತ್ಸೆಯ ಮೊದಲ ಯಶಸ್ಸು ಅವರಿಗೆ ಸಿಕ್ಕಂತಾಗಿತ್ತು. ಪೀಟರ್‌ ತುಂಬಾ ಭಾವುಕ ಸ್ವಭಾವದನು. ಭಾವಜೀವಿಗಳಿಗೆ ಜೈಲಿನ ಗೋಡೆಗಳು ಬೆಲೆಕೊಡುವುದೇ ಇಲ್ಲ. ಮುಗ್ಧರ ಸಹವಾಸ ಅಲ್ಲಿ ಯಾರಿಗೂ ಬೇಕಿಲ್ಲ. ಇನ್ನು ಊರಿಂದ ಯಾರೂ ನೋಡಲು ಬರದೇ ಇದ್ದರಂತೂ ಮುಗಿದೇ ಹೋಯ್ತು.

  ಇನ್ನೊಬ್ಬ ಕಾಶಿ ಎನ್ನುವವ. ಧಾರವಾಡದ ಜೈಲಿನಲ್ಲಿದ್ದ. ಮಾನಸಿಕ ಕಾಯಿಲೆ ಅಂತ ನಿತ್ಯವೂ ಮಾತ್ರೆ ತೆಗೆದುಕೊಳ್ಳುತ್ತಿದ್ದ. ಜೈಲಿಗೆ ಬರುವ ಮುನ್ನ ಅವನು ಗಿಟಾರ್‌ ಬಾರಿಸುತ್ತಿದ್ದನಂತೆ. ಕಟ್ಟಿಮನಿ ಅವರು ಸ್ವಂತ ಖರ್ಚಿನಲ್ಲಿ ಅವನಿಗೊಂದು ಗಿಟಾರ್‌ ಕೊಡಿಸಿದರು. ಚಂಪಾ ಅವರ “ಗೋಕರ್ಣದ ಗೌಡಸಾನಿ’ ನಾಟಕದಲ್ಲಿ ಅವನಿಗೊಂದು ಪಾತ್ರ ಕೊಟ್ಟರು. ಕೆಲವೇ ದಿನಗಳಲ್ಲಿ ಆತ ಮಾತ್ರೆ ತೆಗೆದುಕೊಳ್ಳುವುದನ್ನೇ ಬಿಟ್ಟುಬಿಟ್ಟ. ರಂಗಚಿಕಿತ್ಸೆಯಿಂದ ಚೇತರಿಕೆ ಕಂಡ ಜಗತ್ತಿನ ಮೊದಲ ಮಾನಸಿಕ ರೋಗಿ ಆತನೇ!

ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಕೈದಿ ಎಸ್‌.ವಿ. ರಮೇಶ್‌ ಕಳೆದ ವರ್ಷ ಬಿಡುಗಡೆ ಕಂಡರು. “ಜೂಲಿಯಸ್‌ ಸೀಸರ್‌’ನಲ್ಲಿ ಮಾರ್ಕ್‌ ಆ್ಯಂಟನಿ ಆಗಿ, “ತಲೆದಂಡ’ದಲ್ಲಿ ಬಸವಣ್ಣನಾಗಿ, “ಕಸ್ತೂರ ಬಾ’ದಲ್ಲಿ ಗಾಂಧಿಯಾಗಿ, “ಜತೆಗಿರುವನು ಚಂದಿರ’ದಲ್ಲಿ ಬಡೇಮಿಯಾನಾಗಿ ಬಣ್ಣ ಹಚ್ಚಿದವರು. ಚೆಂದ ಮಾತಾಡ್ತೀನಿ ಅಂತ ಕೊಂಚ ಅಹಂಕಾರ ಆತನಲ್ಲಿತ್ತು. ಒಮ್ಮೆ ಕಟ್ಟಿಮನಿ ಹೇಳಿದರು: “ನೀನು ಒಳ್ಳೇ ನಟ ಆಗ್ತಿàಯ ನಿಜ. ಆದರೆ, ಅದಕ್ಕೂ ಮೊದಲು ನೀನು ಒಳ್ಳೇ ಮನುಷ್ಯನಾಗ್ಬೇಕು ಮಾರಾಯ’. ಸಾಲದ್ದಕ್ಕೆ ಸಹಕೈದಿಗಳೂ ಹಾಗೆಯೇ ಹೇಳುತ್ತಿದ್ದರು. ಅವನು ಏನಾದರೂ ಬಯ್ದರೆ, “ಗಾಂಧಿ ಪಾತ್ರ ಮಾಡೋನು ಹಿಂಗಾ ಆಡೋದು?’ ಅನ್ನೋರು. “ಬಸವಣ್ಣನ ಪಾತ್ರ ಮಾಡ್ತೀಯ, ಹಿಂಗೆಲ್ಲ ಮಾತಾಡ್ತೀಯ…’ ಎಂದು ಛೇಡಿಸುತ್ತಿದ್ದರು. ಅವನ ಒಳಗಿನ ಸ್ವಭಾವಕ್ಕೂ, ಪಾತ್ರದ ಭಾವಕ್ಕೂ ತದ್ವಿರುದ್ಧವಾದ ಮನಃಸ್ಥಿತಿ. ಆತ ಮೇಷ್ಟ್ರ ಬಳಿ ಬಂದು, “ಸರ್‌… ನಾನು ಈ ಪಾತ್ರಗಳಿಗೋಸ್ಕರ  ಬದಲಾಗೋಕ್ಕೆ ಆಗೋಲ್ಲ. ನನಗೆ ನಾಟಕವೇ ಬೇಡ’ ಎಂದಿದ್ದ. ಪಾತ್ರದ ಸ್ವಭಾವಕ್ಕೂ, ನಟನ ಒಳಗಿನ ಸ್ವಭಾವಕ್ಕೂ ಒಂದು ಸಂಘರ್ಷ ಪ್ರತಿ ಕಲಾವಿದನಿಗೂ ಕಾಡುವಂಥದ್ದೇ. ತನ್ನನ್ನು ಪ್ರಯೋಗಕ್ಕೆ ಇಟಗೆ ಆಗಿತ್ತು ಅವನಿಗೆ. “ಆ ಪಾತ್ರವೇ ನೀನಾಗು, ಮುಂದೇನಾಗುತ್ತೆ ನೋಡು…’ ಎಂದರು ಮೇಷ್ಟ್ರು. ಗಾಂಧಿ, ಬಸವಣ್ಣ ಪಾತ್ರ ಮಾಡುವ ಆತ ಮಾಂಸ ಸೇವನೆಯನ್ನೇ ಕೈಬಿಟ್ಟ. ಬರಿಗಾಲಿನಲ್ಲಿ ನಡೆದಾಡಲು ಶುರುಮಾಡಿದ. ಕಾಯ್ಕಿಣಿ ಅವರ “ಜತೆಗಿರುವನು ಚಂದಿರ’ದ ಬಡೇಮಿಯಾ, ಬಡವನ ಪಾತ್ರವಾದರೂ, ಅದಕ್ಕೆ ಹೃದಯ ಶ್ರೀಮಂತಿಕೆಯಿದೆ. ಜೈಲಿಂದ ಬಿಡುಗಡೆಯಾಗಿ, ಊರಿಗೆ ಹೋಗಿ, ಅಂಥ ಹೃದಯ ಶ್ರೀಮಂತಿಕೆಯಿಂದಲೇ ರಮೇಶ್‌ ಬದುಕುತ್ತಿದ್ದಾರೆ.

ಕನ್ನಡದ “ರಕ್ತಾಕ್ಷಿ’, “ಶಿವರಾತ್ರಿ’, “ಜತೆಗಿರುವನ ಚಂದಿರ’ದಂಥ ನಾಟಕಗಳನ್ನು ಈ ಕೈದಿಗಳು ಆಡಿದ್ದಾರೆ. ಇವೆಲ್ಲಕ್ಕೂ ಮಿಗಿಲಾಗಿ ಕೈದಿಗಳ ಮಾನಸಿಕ ಚಿಕಿತ್ಸೆಗೆ ನೆರವಾಗುವುದು ಷೇಕ್ಸ್‌ಪಿಯರ್‌ನ ನಾಟಕಗಳು ಎನ್ನುವುದು ಕಟ್ಟಿಮನಿ ಅವರ ನಂಬಿಕೆ. ಇದಕ್ಕೆ ಅವರು ಕೊಡುವ ಕಾರಣ: “ಷೇಕ್ಸ್‌ಪಿಯರ್‌ನ ನಾಟಕಗಳಲ್ಲಿ ಪಶ್ಚಾತ್ತಾಪ, ಪಾಪಪ್ರಜ್ಞೆಯ ಪ್ರಸಂಗಗಳೇ ಹೆಚ್ಚು. ನೋಡಿ… ಮ್ಯಾಕ್‌ಬೆತ್‌ ಒಳ್ಳೆಯ ಸಂಭಾವಿತ, ಪ್ರಾಮಾಣಿಕನೇ ಆದರೂ ಹೆಂಡ್ತಿಯ ಪ್ರೇರಣೆಯಿಂದ ಡಂಕನ್‌ ಚಕ್ರವರ್ತಿಯನ್ನು ಸಾಯಿಸಿಬಿಟ್ಟ. ಅದನ್ನು ಮುಚ್ಚಿಡಲು ಮತ್ತೂಂದು ಕೊಲೆ. ಇನ್ನೊಂದು ಹತ್ಯೆ. ಅವನ ಪಾಪಕೃತ್ಯಗಳು ಮುಗಿಯುವುದೇ ಇಲ್ಲ. ಕೊನೆಗೆ ಅವನು ಪಶ್ಚಾತ್ತಾಪ ಪಟ್ಟು ಕೇಳ್ತಾನೆ, “ನೆಫ‌ೂcನನ ಸಮುದ್ರಗಳು ತೊಳೆಯಬಲ್ಲವೇ ನನ್ನ ಈ ಕೈಗಳನ್ನ?’. ಪಾಪಪ್ರಜ್ಞೆ ಕಾಡಿ ಕಾಡಿ, ಹೊರಗೆ ಬರುವಂಥ ಇಂಥ ಹಲವು ಪ್ರಸಂಗಗಳು ಅವನ ನಾಟಕಗಳಲ್ಲಿವೆ. ಕೈದಿಗಳ ಬದುಕಿಗೆ ಅಲ್ಲಿನ ಪಾತ್ರಗಳ ಸಂಭಾಷಣೆ, ಸನ್ನಿವೇಶ ಬೇಗನೆ ಹತ್ತಿರವಾಗುತ್ತವೆ’.

  ಷೇಕ್ಸ್‌ಪಿಯರ್‌ ಮಾತ್ರವೇ ಅಲ್ಲ, ಸಂಸ್ಕೃತದ “ಭಗವತ್‌ ಅಜ್ಜುಕಿಯಂ’, ಕಂಬಾರರ “ಶಿವರಾತ್ರಿ’ ನಾಟಕಗಳಲ್ಲೂ ಪಶ್ಚಾತ್ತಾಪದ ಪ್ರತಿಬಿಂಬಗಳನ್ನು ಕಾಣಬಹುದು.  

“ದೈಹಿಕ ಬಿಡುಗಡೆಗಿಂತ ಮಾನಸಿಕ ಬಿಡುಗಡೆ ದೊಡ್ಡದು’ ಎನ್ನುವ ತತ್ವ ಕಟ್ಟಿಮನಿ ಅವರದು. ಅದಕ್ಕಾಗಿ ಅವರು ಜೈಲಿನಲ್ಲಿ ಕೈದಿಗಳಿಗೆ ನಟನೆ ಹೇಳಿಕೊಡುವುದಿಲ್ಲ; ಹೀಗೆ ಮಾತಾಡು, ಹಾಗೆ ನಿಂತ್ಕೊà ಎನ್ನುವ ಕಟುಶಿಸ್ತನ್ನು ಕಲಿಸುವುದಿಲ್ಲ. ಸಂಭಾಷಣೆಗಳನ್ನು ಬಾಯಿಪಾಠ ಮಾಡಿಸುವುದೂ ಇಲ್ಲ. ಗಾಂಧಿಯ ಪಾತ್ರ ಮಾಡಬೇಕು ಅಂತಂದ್ರೆ, ಇಡೀ ತಂಡಕ್ಕೆ ಗಾಂಧಿಯ ಆತ್ಮಚರಿತ್ರೆ ಓದಿಸುತ್ತಾರೆ. ಗಾಂಧಿ ಕಲಿಸಿಹೋದ ಜೀವನತತ್ವ ಬೋಧಿಸುತ್ತಾರೆ. ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಬದುಕು ಎನ್ನುವುದು ಇರುತ್ತೆ. ಆ ಬದುಕನ್ನು ಸ್ಪರ್ಶಿಸುವ ಕೆಲಸವನ್ನಷ್ಟೇ ಇವರು ಮಾಡುತ್ತಾರೆ.

 ಆ ರಂಗಸ್ಪರ್ಶವೇ ಚಿಕಿತ್ಸೆಯಾಗಿ ಮಾರ್ಪಾಡಾಗುತ್ತದೆ. ಹಾಗಾಗಿ, ಇಲ್ಲಿನ ಪ್ಯಾಪಿಲಾನ್‌ಗಳು ಜಿಗಿಯುವುದಿಲ್ಲ, ಹಾರುವುದಿಲ್ಲ. ಸನ್ನಡತೆ ಕಂಡು ನೀವೇ ಅವರನ್ನು ಬಿಟ್ಟುಬಿಡಬೇಕಷ್ಟೇ!

ಕೈದಿಯ ಮಾನವೀಯತೆ
2005ರ ಮಹಾ ಮಸ್ತಕಾಭಿಷೇಕದಲ್ಲಿ ಕಂಡಿದ್ದು. ಅಂದು ತುಂಬಾ ರಶ್‌ ಇತ್ತು. ಕೈಗೆ ಕೋಳ ತೊಡಿಸದೇ, ಕೈದಿಗಳನ್ನು ಮೇಲಕ್ಕೆ ಕರೆದೊಯ್ಯಲು ತೀರ್ಮಾನಿಸಲಾಗಿತ್ತು. ಪ್ರತಿಯೊಬ್ಬರ ಹಿಂದೆಯೂ ಪೊಲೀಸರಿದ್ದರು. ಅಲ್ಲೊಬ್ಬ ಕೈದಿ, ಯಾರಧ್ದೋ ಮಗುವನ್ನು ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಏರುತ್ತಿದ್ದ. ಆ ಮಗುವಿನ ತಾಯಿಗೆ ನಡೆಯಲಾಗುತ್ತಿರಲಿಲ್ಲ.

“ಸಂಕಲ್ಪ’ ಹುಟ್ಟಿದ ಕತೆ
ಕಟ್ಟಿಮನಿ ಅವರ ಗುರು, ರಂಗಕರ್ಮಿ ಬಿ.ವಿ. ಕಾರಂತರು, ಭೋಪಾಲ್‌ ಜೈಲಿನಲ್ಲಿದ್ದಾಗ, “ನನಗೊಂದು ಹಾರ್ಮೋನಿಯಂ ಕೊಡಿ. ಇವರನ್ನು ಮನುಷ್ಯರನ್ನಾಗಿ ಮಾಡುತ್ತೇನೆ’ ಎಂದು ಜೈಲಿನ ಅಧಿಕಾರಿಗಳಿಗೆ ಹೇಳಿದ ವಾಕ್ಯವೇ “ಸಂಕಲ್ಪ’ ಹುಟ್ಟಲು ಪ್ರೇರಣೆ. ಜನರ ಬದುಕನ್ನು ನೋಡಿದರಷ್ಟೇ ನಟನೆ ಕಲಿಯಲು ಸಾಧ್ಯ ಎಂದು ನಂಬಿದವರು ಕಾರಂತರು. ಅದರಂತೆ ಕಟ್ಟಿಮನಿ ಅವರು, ಕೈದಿಗಳ ಬದುಕನ್ನು ನೋಡಲು, ಬಳ್ಳಾರಿಯ ಸೆಂಟ್ರಲ್‌ ಜೈಲ್‌ಗೆ ಹೋದಾಗ, “ಸಂಕಲ್ಪ’ದ ಪರಿಕಲ್ಪನೆ ಹುಟ್ಟಿತಂತೆ. 1997ರಿಂದ ಶುರುವಾದ ಈ ಪಯಣ ಇನ್ನೂ ನಿಂತಿಲ್ಲ.

ಸೆಕ್ಯೂರಿಟಿ ಕಮ್ಮಿ ಆಗಿದೆ…
ಜಗ ತ್ತಿನ ಯಾವ ನಾಟಕಗಳಿಗೂ ಪೊಲೀ ಸಿ ನ ವರ ಕಾವಲು ಇರು ವು ದಿಲ್ಲ. ಆದರೆ, “ಸಂಕಲ್ಪ’ ಏರ್ಪಡಿಸುವ ಕೈದಿಗಳ ನಾಟಕಕ್ಕೆ ಖಾಕಿ ಕಾವಲು ಇದ್ದೇ ಇರುತ್ತೆ. ಈಗೀಗ ಪೊಲೀಸರು ಕಡಿಮೆ ಸಂಖ್ಯೆಯಲ್ಲಿ ನಿಯೋಜನೆ ಆಗುತ್ತಿದ್ದಾರೆ ಎನ್ನುವುದು “ಸಂಕಲ್ಪ’ದ ಯಶಸ್ಸು. ಮೊದ ಲಿಗೆ ಮೈಸೂ ರಿ ನ ಕಲಾಮಂದಿ ರ ದಲ್ಲಿ ನಾಟಕ ಆದಾಗ 30 ಕೈದಿಗಳಿಗೆ 90 ಪೊಲೀ ಸರು ಕಾವಲು ಇದ್ದರು. ಕಲಾ ಮಂದಿ ರದ ಸುತ್ತ ಇದ್ದರು. ಸೈಡ್‌ ವಿಂಗ್‌ ನಲ್ಲೂ ಪೊಲೀ ಸರೇ. ಆದರೆ, ಮುಂಬೈಗೆ “ಸಂಗ್ಯಾ ಬಾಳ್ಯ’ ನಾಟಕದ ಡೆಮೋ ನೀಡಲು ಹೋದಾಗ, 20 ಕೈದಿಗಳಿಗೆ, 10 ಪೊಲೀಸರಷ್ಟೇ ಹೋಗಿದ್ದರು!

ಕೀರ್ತಿ ಕೋಲ್ಗಾರ್‌

ಟಾಪ್ ನ್ಯೂಸ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

2(1)

Puttur: ವಿದ್ಯುತ್‌ ಕಂಬ ಏರುವ ತರಬೇತಿ!; ಪವರ್‌ಮನ್‌ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ

1(1)

Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.