ಹಾಳು, ಪಾಳು ಜಾಗದಲ್ಲಿ ಪಾಳು ಅಂಬರಗುಬ್ಬಿ


Team Udayavani, Sep 2, 2017, 12:36 PM IST

14.jpg

 ಮರಿಮಾಡುವ ಸಮಯದಲ್ಲಿ ತನ್ನ ಸಂಗಾತಿಯನ್ನು ಕರೆಯಲು ಇದು ಚೀ ಕಾರದಲ್ಲಿ ಕೂಗುವುದು. ಮಣ್ಣಿನ ಅರ್ಧವರ್ತುಲಾಕಾರದ ಗೂಡು ಕಟ್ಟಿ ಅದರ ಮೇಲೆ ಹಕ್ಕಿಗಳ ಪುಕ್ಕ ಮತ್ತು ಒಣ ಹುಲ್ಲಿನ ಹಾಸಿಗೆ ಮಾಡಿ ಅಲ್ಲಿ 2-4 ಬಿಳಿಬಣ್ಣದ ಮೊಟ್ಟೆ ಇಡುತ್ತದೆ.  

ಇದು ಗುಬ್ಬಚ್ಚಿ ಗಾತ್ರದ ಚಿಕ್ಕ ಹಕ್ಕಿ.DUSKY CRAG MARMARTIN  (Hirundo concolor )  R -Sparrow +  ಕೋಟೆ ಕೊತ್ತಲು, ಹಾಳುಬಿದ್ದ ಕಟ್ಟಡ, ಕಲ್ಲು ಬಂಡೆಗಳ ಬಿರುಕು,  ಪಾಳು ದೇವಾಲಯ, ಚರ್ಚುಗಳ ಗೋಡೆ ಸಂದಿನಲ್ಲಿಯೇ ಹೆಚ್ಚಾಗಿ ವಾಸಿಸುವುದರಿಂದ ಇದರ ವಾಸಸ್ಥಾನ ಇರುನೆಲೆ ಗಮನಿಸಿ ಇದಕ್ಕೆ ಪಾಳು ಅಂಬರಗುಬ್ಬಿ ಎಂದು ಕರೆಯಲಾಗಿದೆ. ಇದರ ದೇಹದ ಬಣ್ಣ  ಕಪ್ಪು.  

ಆಕಾಶ ಮಧ್ಯದಲ್ಲಿ ಹಾರುವ ಚಿಕ್ಕ ಕ್ರಿಮಿ, ನುಸಿ ಹಾಗೂ ಮಳೆ ಹುಳ, ರೆಕ್ಕೆ ಹುಳಗಳನ್ನು ಮಾರ್ಗ ಮಧ್ಯದಲ್ಲೇ ಹಿಡಿದು ತಿನ್ನುವ ಚಾಕಚಕ್ಯತೆ  ಇದಕ್ಕಿದೆ.  ಅತಿ ವೇಗವಾಗಿ ಮೇಲೆ, ಕೆಳಗೆ , ತಿರುಗಿ, ಇಲ್ಲವೇ ಛ‌ಕ್ಕನೆ ದಿಕ್ಕು ಬದಲಿಸಿ, ವೇಗ ನಿಯಂತ್ರಿಸಿ ಹಾರುತ್ತದೆ.  ಸಾಮಾನ್ಯವಾಗಿ ಈ ಹಕ್ಕಿ ಭಾರತದ ತುಂಬೆಲ್ಲಾ ಇದೆ. ಆದರೆ ಈ ಎಲ್ಲಾ ಉಪಜಾತಿಯ ಹಾರುವ ವಿಧಾನ, ಗೂಡು ಕಟ್ಟುವ ಪರಿ, ಗೂಡಿಗೆ ಸ್ಥಳಗಳ ಆಯ್ಕೆ, ಕೂಗಿನ ವೈವಿಧ್ಯತೆಗಳಿವೆ.  ಗೂಡನ್ನು ಕಟ್ಟಲು ಕೆಲವು ತಳಿಗಳು ಮಣ್ಣನ್ನು ಬಳ‌ಸುತ್ತವೆ.

ಗೂಡಿನ ಮೇಲೆ ದೊಡ್ಡ ಇರುವೆಗಳೂ ವಾಸಿಸುವುದುಂಟು.
 ಗುಬ್ಬಚ್ಚಿ ಗಾತ್ರದ ಈ ಚಿಕ್ಕ ಹಕ್ಕಿ 13 ಸೆಂ.ಮೀ ದಪ್ಪ ಇದೆ. ಇದಕ್ಕೆ ಮೀನಿನ ಬಾಲದಂತೆ ತ್ರಿಕೋನಾಕೃತಿಯ ಬಾಲ ಇದೆ.  ಬಾಲದ ಬದಿಯಗರಿ ಮತ್ತು ಮಧ್ಯದ ಗರಿಗಳ ಮೇಲೆ ಬಿಳಿ ಚುಕ್ಕೆ ಇಲ್ಲ. ತ್ರಿಕೋನಾಕಾರದ ಬಾಲದ ಇತರ ಗರಿಗಳ ಮೇಲೆ ವೃತ್ತಾಕಾರದ ಬಿಳಿ ಚುಕ್ಕೆ ಇದನ್ನು ಗುರುತಿಸಲು ಸಹಾಯಕವಾಗಿದೆ. 

ಪುಟ್ಟಕಾಲು ಇದ್ದು ಆಸರೆಗಾಗಿ ಹಿಡಿಯಲು ಮಾತ್ರ ಸಹಾಯಕವಾಗಿದೆ. ಈ ಹಕ್ಕಿಯ ಹೊಟ್ಟೆಯ ಭಾಗ ತಿಳಿ ಕಂದು ಮಿಶ್ರಿತ ಮಾಸಲು ಬಿಳಿ ಬಣ್ಣ. 

ಸುಮಾರು 1850ರಿಂದಲೇ ಈ ಹಕ್ಕಿಯ ಕುರಿತು ಅಧ್ಯಯನ ಆರಂಭವಾಗಿದೆ.  ಇದರ ಗೂಡು ಹೊರಗಡೆ ಮಣ್ಣಿನ ಮುತ್ತನ್ನು -ಒಂದರ ಪಕ್ಕ ಒಂದು ಅಂಟಿಸಿದಂತೆ ಕಾಣುತ್ತದೆ. ಇದರ ಗೂಡು ತಾರಸಿಗೆ ಮುಖವಾಗಿ ಪಕ್ಕದ ಜಂತಿಯ ಹತ್ತಿರ ಒಂದು ಅಥವಾ 2 ಇಂಚು ಕೆಳಗಿರುತ್ತದೆ. 

ಇಂಥದ್ದನ್ನೇ ಹೋಲುವ ಇನ್ನೊಂದು ತಳಿ ಭಾರತಕ್ಕೆ ಚಳಿಗಾಲದಲ್ಲಿ ವಲಸೆಬರುತ್ತದೆ. 
ಭಾರತದ ತಳಿ ಚೀ, ಚೀ, ಚಿರಮ್‌ ಎಂದು ಚೀರಿದಂತೆ ಮೆಲುದನಿಯಲ್ಲಿ ಕೂಗುತ್ತದೆ. ಮರಿಮಾಡುವ ಸಮಯದಲ್ಲಿ ತನ್ನ ಸಂಗಾತಿಯನ್ನು ಕರೆಯಲು ಇದು ಚೀ ಕಾರದಲ್ಲಿ ಕೂಗುವುದು. ಮಣ್ಣಿನ ಅರ್ಧವರ್ತುಲಾಕಾರದ ಗೂಡು ಕಟ್ಟಿ ಅದರ ಮೇಲೆ ಹಕ್ಕಿಗಳ ಪುಕ್ಕ ಮತ್ತು ಒಣ ಹುಲ್ಲಿನ ಹಾಸಿಗೆ ಮಾಡಿ ಅಲ್ಲಿ 2-4 ಬಿಳಿಬಣ್ಣದ ಮೊಟ್ಟೆ ಇಡುತ್ತದೆ.  ನೆಲದಿಂದ ಸುಮಾರು 30 ಅಡಿ ಎತ್ತರದಲ್ಲಿ ಇದು ಗೂಡನ್ನು ಕಟ್ಟುತ್ತದೆ. ಇದರ ಗೂಡಿನ ಬಾಯಿ 13 ಎಂ.ಎಂ ಅಗಲ ಇರುತ್ತದೆ.  ಇದರ ಮೊಟ್ಟೆ 1.57ಗ್ರಾಂ. ಗಂಡು -ಹೆಣ್ಣು ಆಕಾರ ಮತ್ತು ಬಣ್ಣದಲ್ಲಿ ಒಂದೇರೀತಿಯಾಗಿರುತ್ತದೆ. ಗೂಡು ಕಟ್ಟುವುದು ಮರಿಗಳಿಗೆ ಗುಟುಕು ನೀಡುವುದು ಮುಂತಾದ ಕಾರ್ಯದಲ್ಲಿ ಗಂಡು-ಹೆಣ್ಣು ಭಾಗಿಯಾಗುತ್ತವೆ.   ಒಂದು ಅಧ್ಯಯನದ ಪ್ರಕಾರ 60 ಸಾವಿರ ಕಿ,ಮೀ ದೂರವನ್ನು ಇದು ನಿಲ್ಲದೇ ಹಾರುವ ಸಾಮರ್ಥಯಹೊಂದಿದೆಯಂತೆ. ಕರ್ನಾಟಕವಷ್ಟೇ ಅಲ್ಲ,  ತಮಿಳು ನಾಡಿನಲ್ಲೂ ಈ ಹಕ್ಕಿ ಇದೆ. 

ಟಾಪ್ ನ್ಯೂಸ್

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shivanna cinema in Vallarasu director’s film

N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

FIR 6 to 6 Kannada movie

FIR 6to6 movie: ಆ್ಯಕ್ಷನ್‌ ಚಿತ್ರದಲ್ಲಿ ವಿಜಯ ರಾಘವೇಂದ್ರ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.