ಸಾಕು ಬಾತುಕೋಳಿ


Team Udayavani, Sep 16, 2017, 11:55 AM IST

2114.jpg

ಸಾಕು ಬಾತುಕೋಳಿಯ ಮೈಕಟ್ಟು ದಪ್ಪ.ಚಿಕ್ಕ ಪುಕ್ಕದ ಬಾಲ. ಬಲವಾದ, ಉದ್ದದ ರೆಕ್ಕೆ, ದಟ್ಟ ಬಿಳಿ ಬಣ್ಣದ ಹೊಳಪಿನ ಗರಿ,ತಿಳಿ ಕಿತ್ತಳೆ ಬಣ್ಣದ ಚುಂಚು, ಚಿಕ್ಕ ಚಿಕ್ಕ ಜಾಲಪಾದವಿರುವ ತಿಳಿ ಕಿತ್ತಳೆ ಬಣ್ಣದ ಕಾಲು ಈ ಹಕ್ಕಿಗೆ ಇದೆ. 

ಚಿತ್ರದಲ್ಲಿರುವುದು ಸಾಕು ಬಾತುಕೋಳಿ. ಉತ್ತರ ಸಮುದ್ರದ ಹಕ್ಕಿ. ನೆದರ್ಲೆಂಡ್‌, ಜರ್ಮನಿಯ ಮೂಲ ನಿವಾಸಿ. ಅಂಡಮಾನ್‌ ಪ್ರದೇಶದ ಪಕ್ಷಿಯಾದುದರಿಂದ ಇದಕ್ಕೆ  (lews) ಎನ್ನುವ ಹೆಸರು ಬಂದಿದೆ. ಇದು ಜರ್ಮನ್‌ ವೈಟ್‌ ಮತ್ತು ಅಮೇರಿಕನ್‌ ವೈಟ್‌ಗಳ ಮಿಶ್ರತಳಿಯಾಗಿದೆ. ಇದು ಬಿಳಿದಾದ ಚಿಕ್ಕ ಬಾತುಕೋಳಿ.  ತಿಳಿ ಕಿತ್ತಳೆ ಬಣ್ಣದ ಚುಂಚು, ಚಿಕ್ಕ ಚಿಕ್ಕ ಜಾಲಪಾದವಿರುವ ತಿಳಿ ಕಿತ್ತಳೆ ಬಣ್ಣದ ಕಾಲು ಇದೆ. ಇದು ತುಂಬಾ ವೇಗವಾಗಿ  ಬೆಳೆಯುತ್ತದೆ. ಸುಮಾರು 9 ಕಿಲೋ ತೂಕ ಇರುತ್ತದೆ.  ಇದರ ಕಾಲು ಚಿಕ್ಕದು. ಆಯತವರ್ತುಲಾಕರದ ತಲೆ, ಉದ್ದವಾದ ಕುತ್ತಿಗೆ, ಸಮುದ್ರ ನೀಲಿ ಬಣ್ಣದ ಕಣ್ಣು, ದೇಹವು ವರ್ತುಲಾಕಾರವಾಗಿ ದುಂಡಗಿದೆ. 

ದಪ್ಪವಾದ ಮೈಕಟ್ಟು, ಚಿಕ್ಕ ಪುಕ್ಕದ ಬಾಲ ಇದೆ. ಇದರ ರೆಕ್ಕೆ ತುಂಬಾ ಬಲವಾಗಿದೆ ಮತ್ತು ಉದ್ದದ ರಕ್ಕೆಗಳಿವೆ. ಇದರ ಗರಿ ತುಂಬಾ ದಟ್ಟವಾಗಿದ್ದು ಬಿಳಿ ಬಣ್ಣದ ಹೊಳಪಿನ ಗರಿಗಳಿವೆ.  ಹುಲ್ಲು ಮತ್ತು ನೀರಿರುವ ಜಾಗದಲ್ಲಿ ಸಂತಾನಾಭಿವೃದ್ಧಿ ಮಾಡುತ್ತದೆ. ಇದು ಶೀತ ಪ್ರದೇಶದಲ್ಲೂ ಮತ್ತು ಸಮಶೀತೋಷ್ಣ ಪ್ರದೇಶದಲ್ಲು ಮರಿ ಮಾಡುತ್ತದೆ. ಗಂಡು ಹಕ್ಕಿ ಹೆಣ್ಣು ಹಕ್ಕಿಗಿಂತ ಸ್ವಲ್ಪ ದೊಡ್ಡದಾಗಿದ್ದು ಸ್ವಲ್ಪ ದೊಡ್ಡ ಧ್ವನಿಯನ್ನು ಹೊರಡಿಸುತ್ತದೆ. ಗಂಡು ಹೆಣ್ಣು ಎರಡೂ ಹಿಸ್ಸೀಸ್‌ ಎಂದು ಧ್ವನಿ ಹೊರಡಿಸುತ್ತಾ ಮೊಟ್ಟೆ ಮತ್ತು ಮರಿಗಳನ್ನು ಕಾಪಾಡುತ್ತವೆ.  ಕೆಲವೊಮ್ಮೆ ಇತರ ಬಾತುಗಳಂತಯೇ ಕೊಕ್‌ ಕೊಕ್‌ ಎಂದು ಧ್ವನಿ ಹೊರಡಿಸುತ್ತದೆ.  ಕೆಲವೊಮ್ಮೆ ವೈರಿಗಳಿಂದ ಮರಿಗಳನ್ನು ಕಾಪಾಡಲು ರೆಕ್ಕೆ ಬಿಚ್ಚಿ ಕುಪ್ಪಳಿಸುತ್ತಾ ಒಂದು ಪ್ರಕಾರದ ಗಡಸು ಧ್ವನಿಯನ್ನು ಹೊರಡಿಸಿ ವೈರಿಗಳನ್ನು ಹಿಮ್ಮೆಟ್ಟಿಸುತ್ತವೆ. ಗುಡವಿ ಪಕ್ಷಿಧಾಮದ ದಾರಿಯಲ್ಲಿ ಬನವಾಸಿಗೆ ಸಮೀಪದ ನೀರಿನ ಹೊಂಡಗಳಲ್ಲಿ ಈ ಹಕ್ಕಿ ಕಾಣಿಸಿದೆ. ಬೆಂಗಳೂರಿನ ದೊರೆ ಕೆರೆಯಲ್ಲಿ ಸ್ಪಾಟ್‌ಬಿಲ್‌, ಫೆಲಿಕನ್‌, ನೀರು ಕಾಗೆ, ಕಪ್ಪುರೆಕ್ಕೆ ಮೆಟ್‌ ಗೋಲ್‌ ಹಕ್ಕಿ ಇವುಗಳ ಜೊತೆಯಲ್ಲೂ ಕಾಣಿಸಿದೆ. ಮರಿಗಳನ್ನು ವೈರಿಗಳಿಂದ ಕಾಪಾಡಲು ತಮ್ಮ ರೆಕ್ಕೆಯನ್ನು ಆಯುಧದಂತೆ ಉಪಯೋಗಿಸಿ ಪ್ರತಿರೋಧ ವ್ಯಕ್ತ ಪಡಿಸುತ್ತದೆ. ಇವು ಬಹಳ ದೂರ ವಲಸೆ ಹೋಗುವುದಿಲ್ಲ. ಇದು ಮರಿಯಾಗಿ 2-3 ವರ್ಷಗಳಲ್ಲಿ  ಪ್ರೌಢಾವಸ್ಥೆಗೆ  ಬರುತ್ತದೆ. ಆಗ ಮಿಲನಕ್ಕೆ ಸಿದ್ಧವಾಗುವುದು. ವರ್ಷದ ಆರಂಭದಿಂದಲೇ ಮೊಟ್ಟೆ ಇಡಲು ಪ್ರಾರಂಭಿಸುವುದು ಇದರ ವಿಶೇಷ.  ಫೆಬ್ರವರಿಯಿಂದ ಮೊಟ್ಟೆ ಇಡಲು ಆರಂಭಿಸಿ 30 ರಿಂದ 40 ಮೊಟ್ಟೆ ಇಡುತ್ತದೆ. ವಸಂತಕಾಲ ಆರಂಭವಾದಂತೆಯೇ ಕಾವು ಕೊಟ್ಟು 28 ರಿಂದ 34 ದಿನಗಳವರೆಗೆ ಕಾವು ಕೊಟ್ಟಾಗ ಮರಿಯಾಗುತ್ತದೆ. ಗಂಡು ಹೆಣ್ಣು ಎರಡೂ ಸರತಿಯಂತೆ ಕಾವು ಕೊಟ್ಟು ಮರಿ ಮಾಡಿ,  ಮರಿಗಳ ಪೋಷಣೆ ಮಾಡುತ್ತ‌ವೆ. ಮರಿ 4 ರಿಂದ 4.5 ಕೆ. ಜಿ. ಭಾರ ಇರುತ್ತದೆ. ಇದರಲ್ಲಿ ಅನೇಕ ಮಿಶ್ರ ತಳಿಗಳಿವೆ.

ಪಿ. ವಿ. ಭಟ್‌ ಮೂರೂರು 

ಟಾಪ್ ನ್ಯೂಸ್

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?

1-russia

Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

1-INS

Indian Navy; ಪಾಕ್,ಚೀನಾದ ಮೂಲೆ ಮೂಲೆಗೂ ತಲುಪುವ ಕ್ಷಿಪಣಿ ಪರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

10

Sabarimala: ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

courts

Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.