ಇಂಗ್ಲೆಂಡ್ ಈಗ ಸಾವಿರ ಟೆಸ್ಟ್ ಸರದಾರ
Team Udayavani, Aug 4, 2018, 1:05 AM IST
ಕ್ರಿಕೆಟ್ ಜನಕರೆಂಬ ಖ್ಯಾತಿಯ ಇಂಗ್ಲೆಂಡ್ ಭಾರತ ವಿರುದ್ಧ ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭವಾದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಆಡುವ ಮೂಲಕ ಇತಿಹಾಸ ನಿರ್ಮಿಸಿದೆ. ಸಾವಿರ ಟೆಸ್ಟ್ ಆಡಲಿರುವ ವಿಶ್ವದ ಪ್ರಪ್ರಥಮ ರಾಷ್ಟ್ರವೆಂಬ ಹಿರಿಮೆಗೆ ಇಂಗ್ಲೆಂಡ್ ಪಾತ್ರವಾಗಿದೆ.
ಐಸಿಸಿ ಅಭಿನಂದನೆ: ಈ ಐತಿಹಾಸಿಕ ಸಂದರ್ಭದಲ್ಲಿ ಕ್ರಿಕೆಟಿನ ಮಾತೃ ಸಂಸ್ಥೆ “ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್’ (ಐಸಿಸಿ) ಇಂಗ್ಲೆಂಡ್ ಕ್ರಿಕೆಟಿಗೆ ಶುಭಾಶಯ ಸಲ್ಲಿಸಿ ಅಭಿನಂದಿಸಿದೆ. “1000ನೇ ಟೆಸ್ಟ್ ಪಂದ್ಯ ಆಡುತ್ತಿರುವ ಇಂಗ್ಲೆಂಡಿಗೆ ವಿಶ್ವ ಕ್ರಿಕೆಟ್ ಕುಟುಂಬದ ಪರವಾಗಿ ಅಭಿನಂದನೆಗಳು. ಇಂಗ್ಲೆಂಡ್ ಜಾಗತಿಕ ಕ್ರಿಕೆಟ್‌ನಲ್ಲಿ ಇಂಥದೊಂದು ಮೈಲುಗಲ್ಲು ನೆಡುತ್ತಿರುವ ಮೊದಲ ದೇಶವೆಂಬುದು ವಿಶೇಷ’ ಎಂದು ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ತಮ್ಮ ಅಭಿನಂದನಾ ಸಂದೇಶದಲ್ಲಿ ತಿಳಿಸಿದ್ದಾರೆ.
“ಈ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳುತ್ತಿರುವ ಇಂಗ್ಲೆಂಡ್ ತಂಡಕ್ಕೆ ಶುಭ ಹಾರೈಕೆಗಳು. ಟೆಸ್ಟ್ ಕ್ರಿಕೆಟ್ ಅತ್ಯಂತ ಪುರಾತನ ಮಾದರಿಯ ಪಂದ್ಯವಾಗಿದೆ. ಇದಕ್ಕೆ ಸ್ಫೂರ್ತಿ ತುಂಬಬಲ್ಲ ಇನ್ನಷ್ಟು ಸಾಧಕರನ್ನು ಇಂಗ್ಲೆಂಡ್ ಕೊಡುಗೆಯಾಗಿ ನೀಡಲಿ ‘ ಎಂದು ಶಶಾಂಕ್ ಹೇಳಿದ್ದಾರೆ.
ಇಸಿಬಿಗೆ ಬೆಳ್ಳಿ ಸ್ಮರಣಿಕೆ
ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ನಡೆದ ಸರಳ ಸಮಾರಂಭವೊಂದರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಕಾಲಿನ್ ಗ್ರೇವ್ಸ್ ಅವರಿಗೆ ಬೆಳ್ಳಿ ಸ್ಮರಣಿಕೆಯಿಂದನ್ನು ಉಡುಗೊರೆಯಾಗಿ ನೀಡಲಾಯಿತು. ಐಸಿಸಿ ಪರವಾಗಿ ಈ ಸ್ಮರಣಿಕೆಯನ್ನು ಮ್ಯಾಚ್ ರೆಫ್ರಿ, ನ್ಯೂಜಿಲ್ಯಾಂಡಿನ ಮಾಜಿ ನಾಯಕ ಜೆಫ್ ಕ್ರೋವ್ ಪ್ರದಾನ ಮಾಡಿದರು.
ಮತ್ತೊಂದು ಐತಿಹಾಸಿಕ ಗಳಿಗೆ
ಇಂಗ್ಲೆಂಡ್ ಟೆಸ್ಟ್ ಕ್ರಿಕೆಟಿನ ಐತಿಹಾಸಿಕ ಗಳಿಗೆಗೆ ಸಾಕ್ಷಿಯಾಗುತ್ತಿರುವುದು ಭಾರತದ ಪಾಲಿನ ಹೆಗ್ಗಳಿಕೆ. 2011ರ ಇಂಗ್ಲೆಂಡ್ ಪ್ರವಾಸದ ವೇಳೆಯೂ ಭಾರತ ಇಂಥದೇ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಅಂದು ಲಾರ್ಡ್ಸ್‌ನಲ್ಲಿ ಟೆಸ್ಟ್ ಇತಿಹಾಸದ 2000ದ ಪಂದ್ಯವನ್ನು ಆಡಲಾಗಿತ್ತು. ಬುಧವಾರ ಭಾರತ-ಇಂಗ್ಲೆಂಡ್ ನಡುವೆ ನಡೆದ ಟೆಸ್ಟ್ ಇತಿಹಾಸದ 2,314ನೇ ಪಂದ್ಯ.
999 ಟೆಸ್ಟ್ ಸಾಧನೆ
1877ರ ಮಾರ್ಚ್ ತಿಂಗಳಲ್ಲಿ ಆತಿಥೇಯ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಇತಿಹಾಸದ ಪ್ರಪ್ರಥಮ ಪಂದ್ಯ ನಡೆದಿತ್ತು. ಈವರೆಗಿನ 999 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ 357 ಪಂದ್ಯಗಳನ್ನು ಜಯಿಸಿದ್ದು, 297ರಲ್ಲಿ ಸೋಲನುಭವಿಸಿದೆ. 345 ಪಂದ್ಯಗಳು ಡ್ರಾಗೊಂಡಿವೆ.
ಐತಿಹಾಸಿಕ ಎಜ್‌ಬಾಸ್ಟನ್ ಅಂಗಳದಲ್ಲಿ ಇಂಗ್ಲೆಂಡ್ ಆಡುತ್ತಿರುವ 51ನೇ ಟೆಸ್ಟ್ ಇದಾಗಿದೆ. ಇಲ್ಲಿ 1902ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಆಡಿದ್ದ ಇಂಗ್ಲೆಂಡ್, 27ರಲ್ಲಿ ಜಯ ಸಾಧಿಸಿದೆ. ಎಂಟರಲ್ಲಿ ಸೋತಿದೆ. ಉಳಿದ 15 ಟೆಸ್ಟ್‌ಗಳು ಡ್ರಾ ಆಗಿವೆ.
ಭಾರತ-ಇಂಗ್ಲೆಂಡ್ ನಂಟು
ಭಾರತ ತನ್ನ ಟೆಸ್ಟ್ ಇತಿಹಾಸದ ಪ್ರಥಮ ಪಂದ್ಯವನ್ನು 1932ರಲ್ಲಿ ಇಂಗ್ಲೆಂಡ್ ವಿರುದ್ಧವೇ ಆಡಿತ್ತು. ಈವರೆಗೆ ಇತ್ತಂಡಗಳ ನಡುವೆ 117 ಟೆಸ್ಟ್ ಪಂದ್ಯಗಳು ನಡೆದಿವೆ. 25ರಲ್ಲಿ ಗೆದ್ದಿರುವ ಭಾರತ, 43ರಲ್ಲಿ ಸೋಲನುಭವಿಸಿದೆ. ಉಳಿದವು ಡ್ರಾಗೊಂಡಿವೆ.
ತವರಿನಂಗಳದಲ್ಲಿ ಭಾರತದ ವಿರುದ್ಧ 30 ಟೆಸ್ಟ್ ಗೆದ್ದಿರುವ ಇಂಗ್ಲೆಂಡ್, ಆರರಲ್ಲಷ್ಟೇ ಸೋತಿದೆ. 21 ಪಂದ್ಯ ಡ್ರಾ ಫಲಿತಾಂಶ ದಾಖಲಿಸಿವೆ. ಎಜ್‌ಬಾಸ್ಟನ್‌ನಲ್ಲಿ ಭಾರತ-ಇಂಗ್ಲೆಂಡ್ ನಡುವೆ 6 ಟೆಸ್ಟ್‌ಗಳನ್ನು ಆಡಲಾಗಿದ್ದು, ಇಂಗ್ಲೆಂಡ್ 5-0 ಗೆಲುವಿನ ದಾಖಲೆ ಹೊಂದಿದೆ.
ಇಂಗ್ಲೆಂಡಿನ -ಟಾಪ್ 5 ಬ್ಯಾಟ್ಸ್‌ಮನ್
ಬ್ಯಾಟ್ಸ್‌ಮನ್ ರನ್
1. ಅಲಸ್ಟೇರ್ ಕುಕ್ 12,145
2. ಗ್ರಹಾಂ ಗೂಚ್ 8,900
3. ಅಲೆಕ್ ಸ್ಟುವರ್ಟ್ 8,463
4. ಡೇವಿಡ್ ಗೋವರ್ 8,231
5. ಕೆವಿನ್ ಪೀಟರ್‌ಸನ್ 8,181
ಇಂಗ್ಲೆಂಡಿನ ಟಾಪ್ 5 ಬೌಲರ್
ಬೌಲರ್ ವಿಕೆಟ್
1. ಜೇಮ್ಸ್ ಆ್ಯಂಡರ್ಸನ್ 540
2. ಸ್ಟುವರ್ಟ್ ಬ್ರಾಡ್ 417
3 ಇಯಾನ್ ಬೋಥಂ 383
4. ಬಾಬ್ ವಿಲ್ಲೀಸ್ 325
5. ಫ್ರೆಡ್ ಟ್ರೂಮನ್ 307
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.