ತನ್ನದೇ ನೆಲದಲ್ಲಿ ಶಾಪವಿಮೋಚನೆ ಪಡೆಯುತ್ತಾ ಇಂಗ್ಲೆಂಡ್?
40ಕ್ಕೂ ಅಧಿಕ ವರ್ಷಗಳ ಬರದಿಂದಹೊರಬರುತ್ತಾ ಕ್ರಿಕೆಟ್ ತವರು ರಾಷ್ಟ್ರ?
Team Udayavani, May 11, 2019, 6:00 AM IST
ಮೇ 30ರಿಂದ ಇಂಗ್ಲೆಂಡ್‌ನಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಶುರುವಾಗಲಿದೆ. ಈ ಬಾರಿ ವಿಶ್ವಕಪ್‌ನ 4, 5 ತಿಂಗಳ ಹಿಂದೆ ಇದ್ದ ಸ್ವರೂಪವೇ ಬೇರೆ.
ಈಗ ಅದು ಪಡೆದುಕೊಂಡಿರುವ ರೂಪವೇ ಬೇರೆ.ನಾಲ್ಕೈದು ತಿಂಗಳ ಹಿಂದೆ ಭಾರತ ತಂಡ ಅತ್ಯಂತಪ್ರಬಲವಾಗಿ ಗೋಚರಿಸಿತ್ತು. ವಿಶ್ವಕಪ್ ಗೆಲ್ಲಬಲ್ಲ ತಂಡಗಳ ಪಟ್ಟಿ ತೆಗೆದು ನೋಡಿದಾಗ ಭಾರತಕ್ಕೆ ಮೆಚ್ಚಿನ ತಂಡವೆಂಬ ಗೌರವ ಲಭಿಸಿತ್ತು. ಈಗ 3 ತಿಂಗಳ ಹಿಂದೆ ಆ ಅಭಿಪ್ರಾಯ ಬದಲಾಯಿತು. ಈಗ ಮೆಚ್ಚಿನ ತಂಡಗಳ ಪಟ್ಟಿಯಲ್ಲಿ
ಭಾರತಕ್ಕೆ ಎರಡೋ, ಮೂರನೆಯಧ್ದೋ ಸ್ಥಾನ. ಅಗ್ರಸ್ಥಾನ ಆತಿಥೇಯ ಇಂಗ್ಲೆಂಡ್‌ಗೆ ಸಿಕ್ಕಿದೆ. ಇದುವರೆಗೆ ಒಮ್ಮೆಯೂ ಏಕದಿನ ವಿಶ್ವಕಪ್ ಗೆಲ್ಲದ ಇಂಗ್ಲೆಂಡ್‌ಗೆ ಇದು ಅತ್ಯಂತ
ಮಹತ್ವದ ಅವಕಾಶ.
ಕೆಲವು ತಿಂಗಳ ಹಿಂದೆ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದ ಆಸ್ಟ್ರೇಲಿಯ, ಭಾರತ ಪ್ರವಾಸಕ್ಕೆ ಆಗಮಿಸಿದ ನಂತರ ದಿಢೀರನೆ ಚೇತರಿಸಿಕೊಂಡಿದೆ. ಒಮ್ಮೆಲೆ ಟಿ20, ಏಕದಿನ ಸರಣಿ ಗೆದ್ದು, ನಂತರ ಪಾಕಿಸ್ತಾನವನ್ನು ಏಕದಿನ ಸರಣಿಯಲ್ಲಿ ಸುಲಭವಾಗಿ ಸೋಲಿಸಿದ ಪರಿಣಾಮ ಅದರ ಆತ್ಮವಿಶ್ವಾಸ ದುಪ್ಪಟ್ಟಾಗಿದೆ. ಅದರ ಜೊತೆಗೆ ನಿಷೇಧಕ್ಕೊಳಗಾಗಿದ್ದ ಮಾಜಿ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ತಂಡಕ್ಕೆ ಮರಳಿದ್ದಾರೆ.
ಇಬ್ಬರೂ ಭರ್ಜರಿ ಲಯದಲ್ಲಿದ್ದಾರೆ. ಇದು ಆ ತಂಡದ ಮನೋಬಲವನ್ನು ಏಕಾಏಕಿ ಗಗನಗಾಮಿಯನ್ನಾಗಿಸಿದೆ. ಮತ್ತೂಂದು ಕಡೆ ದ.ಆಫ್ರಿಕಾ, ಹಿಂದಿನ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿದ್ದ ನ್ಯೂಜಿಲೆಂಡ್ ಕೂಡ ಪ್ರಬಲವಾಗಿವೆ. ಆದ್ದರಿಂದ ವಿಶ್ವಕಪ್ ಮೆಚ್ಚಿನ ತಂಡಗಳ ಪಟ್ಟಿ ತೆಗೆದು ನೋಡಿದಾಗ ಇಂಗ್ಲೆಂಡ್, ಭಾರತ, ಆಸ್ಟ್ರೇಲಿಯ, ದ.ಆಫ್ರಿಕಾ,ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿ ನಿಲ್ಲುತ್ತವೆ. ಇನ್ನು ಮಾಜಿ ಚಾಂಪಿಯನ್ ಶ್ರೀಲಂಕಾ, ಪಾಕಿಸ್ತಾನ, ವೆಸ್ಟ್ ಇಂಡೀಸ್ ತಂಡಗಳ ಬಗ್ಗೆ ಯಾರಿಗೂ ಭರವಸೆಯಿಲ್ಲ. ಈ ಬಾರಿ ರೌಂಡ್ ರಾಬಿನ್ ಮಾದರಿಯಲ್ಲಿ ಕೂಟ ನಡೆಯುತ್ತಿರುವುದರಿಂದ ಈ ತಂಡಗಳು ಲೀಗ್ ಹಂತವನ್ನು ಮೀರುವುದೇ ಅನುಮಾನ. ಇನ್ನು ಬಾಂಗ್ಲಾದೇಶ, ಆಫ್ಘಾನಿಸ್ತಾನ ಒಂದೆರಡು ಅಚ್ಚರಿಯ ಪ್ರದರ್ಶನ ನೀಡಿದರೆ ಅದೇ ಅದ್ಭುತ.
1975ರಿಂದ ಒಮ್ಮೆಯೂ ಗೆದ್ದಿಲ್ಲ ಇಂಗ್ಲೆಂಡ್
ಇಂತಹ ಸಂದರ್ಭದಲ್ಲಿ ಇಂಗ್ಲೆಂಡ್‌ಗೆ ಆಶೆಯೊಂದು ಚಿಗುರಿಕೊಂಡಿದೆ. 1975ರಿಂದ ಇದುವರೆಗೆ 11 ವಿಶ್ವಕಪ್‌ಗ್ಳು ನಡೆದಿವೆ.ಇಂಗ್ಲೆಂಡ್ ಮೂರು ಬಾರಿ ಫೈನಲ್ ಪ್ರವೇಶಿಸಿದೆ. ಆದರೆ ಒಮ್ಮೆಯೂ ಗೆಲ್ಲಲು ಸಾಧ್ಯವಾಗಿಲ್ಲ. ಆರಂಭದಲ್ಲಿ ಪ್ರಬಲ ತಂಡವಾಗಿದ್ದ ಅದು ನಂತರ ಲಯ ಕಳೆದುಕೊಂಡು ದುರ್ಬಲವಾಗಿ ಬದಲಾಯಿತು. ಕಳೆದ ವಿಶ್ವಕಪ್‌ನಿಂದ ಮತ್ತೆ ಪ್ರಬಲವಾಗಿ ಬದಲಾಗಿದೆ. ಈ ಬಾರಿಯಂತೂ ಆಲ್‌ರೌಂಡರ್‌ಗಳು, ಬ್ಯಾಟ್ಸ್‌ಮನ್‌ಗಳು, ವೇಗಿಗಳನ್ನು ಪರಿಗಣಿಸಿದರೆ ಇಂಗ್ಲೆಂಡ್ ಅತ್ಯಂತ ಬಲಿಷ್ಠ ತಂಡ. ಜೋ ರೂಟ್, ಜೋಸ್‌ಬಟ್ಲರ್, ಜೇಸನ್ ರಾಯ್ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಬೆನ್‌ಸ್ಟೋಕ್ಸ್, ಕ್ರಿಸ್ ವೋಕ್ಸ್, ಮೋಯಿನ್ ಅಲಿ ಅತ್ಯುತ್ತಮ ಆಲ್‌ರೌಂಡರ್‌ಗಳು. ತಂಡದ ಪ್ರಮುಖ ಬೌಲರ್‌ಗಳೆಲ್ಲ ಆಲ್‌ರೌಂಡರ್ ಪಟ್ಟಿಯಲ್ಲೇ ಇದ್ದಾರೆ. ಇದು ಇಂಗ್ಲೆಂಡ್ ಪಾಲಿನ ಗಮನಾರ್ಹ ಸಂಗತಿ.
ಬಹುತೇಕ ಆಟಗಾರರು ಆಲ್‌ರೌಂಡರ್‌ಗಳಾಗಿರುವುದರಿಂದ, ತಂಡ ಸಂಪೂರ್ಣ ಬಲಿಷ್ಠವಾಗಿರುತ್ತದೆ. ಹೆಚ್ಚುವರಿ ಆಟಗಾರರನ್ನು ತೆಗೆದುಕೊಳ್ಳಬೇಕಾದ ಅಗತ್ಯವೇ ಇರುವುದಿಲ್ಲ. ಉದಾಹರಣೆಗೆ, ಈಗ ಇಂಗ್ಲೆಂಡ್ ತಂಡದಲ್ಲಿರುವ ಆಲ್ ರೌಂಡರ್‌ಗಳಾದ ಬೆನ್‌ಸ್ಟೋಕ್ಸ್, ಕ್ರಿಸ್‌ವೋಕ್ಸ್ ಮುಖ್ಯವೇಗಿಗಳ ಪಾತ್ರ ನಿರ್ವಹಿಸುತ್ತಾರೆ. ಮೋಯಿನ್ ಅಲಿ ಬ್ಯಾಟಿಂಗ್ ಜೊತೆಗೆ ಮುಖ್ಯ ಸ್ಪಿನ್ನರ್ ಪಾತ್ರ ನಿರ್ವಹಿಸುತ್ತಾರೆ. ಇದರ ಪರಿಣಾಮ ತಂಡದ 8ನೇ ಕ್ರಮಾಂಕದವರೆಗೆ ಬ್ಯಾಟಿಂಗ್ ಬಲಿಷ್ಠವಾಗಿದೆ. ಆಗ ಯಾರೋ ಒಬ್ಬರು ಆಡಿ ತಂಡವನ್ನು ಗೆಲ್ಲಿಸುವ ವಿಶ್ವಾಸವಿರುತ್ತದೆ.
ಈ ಎಲ್ಲ ಲೆಕ್ಕಾಚಾರಗಳನ್ನು ನೋಡಿದರೆ, ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ನತದೃಷ್ಟ ತಂಡವೆಂಬ ಹಣೆಪಟ್ಟಿ ಕಳಚಿಕೊಳ್ಳಲು ಇದು ಸಕಾಲ. 40ಕ್ಕೂ ಅಧಿಕ ವರ್ಷಗಳ ವಿಶ್ವಕಪ್ ಗೆಲ್ಲದೇ ಬರ ಅನುಭವಿಸಿರುವ ಇಂಗ್ಲೆಂಡ್, ಈ ಬಾರಿ ತನ್ನ ಕೊರತೆಯನ್ನು ನೀಗಿಸಿಕೊಳ್ಳಲು ಕಾತುರದಿಂದ ಕಾದು ನಿಂತಿದೆ. ಅದಕ್ಕೆ ಪೂರಕವಾಗಿ ತಂಡವನ್ನು ರಚಿಸಿಕೊಂಡಿದೆ. ಅದು ಉಪಾಂತ್ಯ ಮತ್ತು ಫೈನಲ್‌ನಲ್ಲಿ ಭಾರತ, ಆಸ್ಟ್ರೇಲಿಯ
ತಂಡಗಳು ಒಡ್ಡುವ ಸವಾಲನ್ನು ಮೀರಿ ನಿಂತರೆ ವಿಶ್ವಕಪ್ ಗೆಲ್ಲುವುದು ಖಾತ್ರಿ.
ರೌಂಡ್ ರಾಬಿನ್
ಮಾದರಿ ಹೇಗಿರುತ್ತದೆ?
ಒಂದು ಗುಂಪಿನಲ್ಲಿರುವ ಒಂದು ತಂಡ ಉಳಿದೆಲ್ಲ ತಂಡಗಳ ವಿರುದಟಛಿ ಸೆಣಸುವುದನ್ನು ರೌಂಡ್ ರಾಬಿನ್ ಲೀಗ್ ಎನ್ನುತ್ತಾರೆ. ಈ ಬಾರಿ ವಿಶ್ವಕಪ್‌ನಲ್ಲಿ ಒಂದೇ ಗುಂಪು ಮಾಡಲಾಗಿದೆ. ಪಾಲ್ಗೊಳ್ಳುವ ಹತ್ತೂ ತಂಡಗಳು, ಮತ್ತೂಂದು ತಂಡದ ವಿರುದ್ಧ ಸೆಣಸುತ್ತವೆ. ಅಗ್ರಸ್ಥಾನ ಪಡೆದ ನಂತರ 4 ತಂಡಗಳು ಸೆಮಿಫೈನಲ್‌ಗೆ ಸ್ಥಾನ ಪಡೆಯುತ್ತವೆ. ಅಲ್ಲಿ ಗೆದ್ದ ಎರಡು ತಂಡಗಳು ಫೈನಲ್‌ಗೇರುತ್ತವೆ. ಅಲ್ಲಿ ಗೆದ್ದ ತಂಡಕ್ಕೆ ಟ್ರೋಫಿ.ಈ ಬಾರಿ ವಿಶ್ವಕಪ್‌ನಲ್ಲಿ ಇದೇ ಮಾದರಿಯನ್ನು ಅಳವಡಿಸಲಾಗಿದೆ. ವಿಶ್ವಕಪ್‌ನ ಆರಂಭದ ಕಾಲದಲ್ಲಿ ಈ ಮಾದರಿಯನ್ನು ಬಳಸಿಕೊಳ್ಳಲಾಗಿತ್ತು. ಅದಾದ ನಂತರ ಅಪರೂಪಕ್ಕೆ ಇಂತಹ ಪ್ರಯೋಗ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.